Tel: 7676775624 | Mail: info@yellowandred.in

Language: EN KAN

    Follow us :


ಮಕ್ಕಳಿಂದ ಮಕ್ಕಳಿಗಾಗಿ ನಡೆದ ಬ್ಲಾಸಮ್ ಸಾಂಸ್ಕೃತಿಕ ಹಬ್ಬ

Posted date: 16 Jan, 2023

Powered by:     Yellow and Red

ಮಕ್ಕಳಿಂದ ಮಕ್ಕಳಿಗಾಗಿ ನಡೆದ ಬ್ಲಾಸಮ್ ಸಾಂಸ್ಕೃತಿಕ ಹಬ್ಬ

ಕನಕಪುರ: ಡಾ ಬಿ.ಶಶಿಧರ್ ರವರ ಬ್ಲಾಸಮ್ ಶಾಲೆಯು ವಿಶಿಷ್ಟವಾದ ಮೂವತ್ತೊಂದನೇ ವರ್ಷದ ಸಾಂಸ್ಕೃತಿಕ ಹಬ್ಬವನ್ನು ಬಹಳ ಸಂಭ್ರಮದಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು ಸಂಪೂರ್ಣ ಕಾರ್ಯಕ್ರಮವನ್ನು ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳೇ ವಿನೂತನವಾಗಿ ನಡೆಸಿಕೊಟ್ಟರು.

ಶ್ರೀ ಸಿದ್ಧಲಿಂಗೇಶ್ವರ ಎಜುಕೇಷನಲ್ ಟ್ರಸ್ಟ್ ನ ಸಂಸ್ಥಾಪಕರಾದ ನಮ್ಮ ತಂದೆ ಡಾ. ಬಿ. ಶಶಿಧರ್ ರವರ ಮಹದಾಸೆಯಂತೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ದೃಷ್ಟಿಯಿಂದ ಮಕ್ಕಳಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ `ಯಂಗ್ ರೀಡರ್ ಅವಾರ್ಡ್'ಗೆ `ಭಾರತದ ರಾಷ್ಟಪತಿಗಳು" ಮತ್ತು "ನನ್ನ ಕನಸಿನ ಭಾರತ" ಎಂಬ ವಿಷಯಗಳ ಬಗ್ಗೆ ನಿಯೋಜಿತ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿ, ಅದರಲ್ಲಿ ವಿಜೇತರಾದವರಿಗೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಲು ಉತ್ತಮ ಪುಸ್ತಕಗಳನ್ನು ಬಹುಮಾನವಾಗಿ ನೀಡುತ್ತಿದ್ದೇವೆಂದು ತಿಳಿಸಿದರು. 


ಶ್ರೀ ಸಿದ್ಧಲಿಂಗೇಶ್ವರ ಎಜುಕೇಷನಲ್ ಟ್ರಸ್ಟ್ ನ ಛೇರ್ಮನ್ ಡಾ|| ಶ್ವೇತಾ ಶಶಿಧರ್ ರವರು ಬಹುಮಾನವನ್ನು ವಿತರಿಸಿದರು. ಹತ್ತನೇ ತರಗತಿಯ ರೋಷಿಣಿ.ಎಸ್‌ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ನಮ್ಮ ಶಾಲೆಯಲ್ಲಿ ನಡೆಯುವ ಶಾಲಾ ವಾರ್ಷಿಕೋತ್ಸವ ಮತ್ತು ಎಲ್ಲಾ ರಾಷ್ಟೀಯ ಹಬ್ಬಗಳಿಗೂ ಮಕ್ಕಳನ್ನೇ ಅತಿಥಿಗಳಾಗಿ ಆಯ್ಕೆ ಮಾಡುತ್ತಿರುವುದು ವಿಶಿಷ್ಟವಾಗಿದೆ. ಮೂಡಬಿದರೆಯಲ್ಲಿ ನಡೆದ ಅಂತರ ರಾಷ್ಟೀಯ ಜಾಂಬೂರಿ, ಅಂತರ್ ಶಾಲಾ ಮಟ್ಟದ ಗಾಯನ ಸ್ಪರ್ಧೆ, ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ವಿಜ್ಞಾನ ವಸ್ತುಪ್ರದರ್ಶನ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆಯಲು ನಮ್ಮ ಶಾಲೆಯ ಪ್ರಾಂಶುಪಾಲರದ ಶ್ರೀಮತಿ ಗಂಗಾಂಬಿಕೆ ಶಶಿಧರ್ ರವರು ಹಾಗೂ ಶಿಕ್ಷಕರ ವೃಂದದ ಸಹಕಾರವೇ ಕಾರಣ ಎಂದು ಹೇಳಿದರು.


9ನೇ ತರಗತಿಯ ಭುವನ್.ಕೆ.ಎ ಮಾತನಾಡುತ್ತಾ ಜ್ಞಾನದ ಪ್ರೋತ್ಸಾಹವನ್ನು ಸ್ಮರಿಸಿದರು.

ಶಾಲೆಯ ವಾರ್ಷಿಕೋತ್ಸವದ ಅತಿಥಿಯಾಗಿದಂತಹ 6 ನೇ ತರಗತಿಯ ಪಾವನ.ಸಿ ರವರು ಮಾತನಾಡಿ ನಮ್ಮ ಶಾಲೆಯಲ್ಲಿ ಉಚಿತವಾಗಿ ನಡೆಸುವಂತಹ ಕಬ್ಸ್, ಬುಲ್ ಬುಲ್ಸ್, ಗೈಡ್ಸ್, ತಬಲ, ಭರತನಾಟ್ಯ, ಸಂಗೀತ ಮತ್ತು ಚಿತ್ರಕಲೆ ತರಗತಿಗಳಿಗೆ ಸೇರಲು ಅವಕಾಶ ಮಾಡಿಕೊಟ್ಟಿರುವ ನಮ್ಮ ಪ್ರಾಂಶುಪಾಲರಾದ ಶ್ರೀಮತಿ ಗಂಗಾಂಬಿಕಾ ರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ಇದನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ಕೇಳಿಕೊಂಡರು.

ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ಅತಿಥಿಯಾಗಿದ್ದ 3ನೇ ತರಗತಿಯ ಚಿನ್ಮಯಿ.ಪಿರವರು ಮಾತನಾಡಿ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ನನಗೆ ಈ ಅವಕಾಶವನ್ನು ಕಲ್ಪಿಸಿಕೊಟ್ಟ ಶಾಲೆಗೆ ನಾನು ಕೃತಜ್ಞನಾಗಿರುತ್ತೇನೆ ಎಂದು ಹೇಳಿದರು.


2020, 2021, 2022 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಕೆ.ಎಸ್.ಇ.ಇ.ಬಿ ನಡೆಸಿದಂತಹ ಡ್ರಾಯಿಂಗ್ ಹೈಯರ್ ಮತ್ತು ಲೋಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು.

ಪಿ.ಕೆ.ಜಿ ಯಿಂದ 10ನೇ ತರಗತಿವರೆಗಿನ ಮಕ್ಕಳು ಹಿಂದೂಸ್ಥಾನಿ ಗಾಯನ, ಭರತನಾಟ್ಯ, ನಾಟಕ, ಯೋಗನೃತ್ಯ ಹಾಗೂ ವಿವಿಧ ನೃತ್ಯಗಳ ಮೂಲಕ ಮನಸೂರೆಗೊಳ್ಳುವ ವರ್ಣರಂಜಿತ ಕಾರ್ಯಕ್ರಮಗಳನ್ನು ನೀಡಿ ಪ್ರೇಕ್ಷಕರಿಂದ ಪ್ರಶಂಸೆ ಪಡೆದರು. 

ಹೇಮಶ್ರೀ.ಆರ್ . ದೀಪ್ತಿ.ಎನ್ ಮತ್ತು ನವ್ಯ.ಕೆ.ಆರ್  ವಿಘ್ನೇಶ್‌ಕುಮಾರ್ ವಂದಿಸಿದರು.


ಕಾರ್ಯಕ್ರಮವನ್ನು ಹರ್ಷಿಣಿ.ಕೆ, ವಿನುತಾ, ಮಾನ್ಯ.ಬಿ.ಎಮ್ ಹಾಗೂ ಅನೂಪ್‌ರವರು ನಿರೂಪಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in kanakapura »

ಕನಕಪುರದ ಮರಳೆಗವಿ ಮಠಕ್ಕೆ ರಾಜ್ಯಪಾಲರ ಭೇಟಿ ಪ್ರತಿಭಾನ್ವಿತ ಪುಟಾಣಿಗಳನ್ನು ಸನ್ಮಾನಿಸಿದ ರಾಜ್ಯಪಾಲರು
ಕನಕಪುರದ ಮರಳೆಗವಿ ಮಠಕ್ಕೆ ರಾಜ್ಯಪಾಲರ ಭೇಟಿ ಪ್ರತಿಭಾನ್ವಿತ ಪುಟಾಣಿಗಳನ್ನು ಸನ್ಮಾನಿಸಿದ ರಾಜ್ಯಪಾಲರು

ಕನಕಪುರ:16.01.2023:

ಭರತ ಖಂಡವು ಇಡೀ ವಿಶ್ವದಲ್ಲೇ ತನ್ನ ಸಂಸ್ಕೃತಿ ಮತ್ತು ಸಂಸ್ಕಾರಗಳಿಂದ ವಿಶಿಷ್ಟ ಸ್ಥಾನವನ್ನು ಗಳಿಸಿದ ಕಾರಣ ಇಲ್ಲಿ ಸಾಧು ಸಂತರು ಸತ್ಪುರುಷರು ಮತ್ತು ಋಷಿಮುನಿಗಳ

ಮಕ್ಕಳಿಂದ ಮಕ್ಕಳಿಗಾಗಿ ನಡೆದ ಬ್ಲಾಸಮ್ ಸಾಂಸ್ಕೃತಿಕ ಹಬ್ಬ
ಮಕ್ಕಳಿಂದ ಮಕ್ಕಳಿಗಾಗಿ ನಡೆದ ಬ್ಲಾಸಮ್ ಸಾಂಸ್ಕೃತಿಕ ಹಬ್ಬ

ಕನಕಪುರ: ಡಾ ಬಿ.ಶಶಿಧರ್ ರವರ ಬ್ಲಾಸಮ್ ಶಾಲೆಯು ವಿಶಿಷ್ಟವಾದ ಮೂವತ್ತೊಂದನೇ ವರ್ಷದ ಸಾಂಸ್ಕೃತಿಕ ಹಬ್ಬವನ್ನು ಬಹಳ ಸಂಭ್ರಮದಿಂದ ನಗರದ ಅಂಬೇಡ್ಕರ್

ಜೂನಿಯರ್ ನೆಟ್ ಬಾಲ್ ತಂಡ ಮುನ್ನಡೆಸುವ ಸಚೇತ್ ಗೆ ಅಭಿನಂದನೆ
ಜೂನಿಯರ್ ನೆಟ್ ಬಾಲ್ ತಂಡ ಮುನ್ನಡೆಸುವ ಸಚೇತ್ ಗೆ ಅಭಿನಂದನೆ

ಕನಕಪುರ: ರಾಮನಗರ ಜಿಲ್ಲೆಯ ಕನಕಪುರದ ಸಚೇತ್ ಎಂಬ ಕ್ರೀಡಾಪಟುವು ಜೂನಿಯರ್ ನೆಟ್ ಬಾಲ್ ನ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷ

ಹಿರಿಯ ವಿದ್ಯಾರ್ಥಿಗಳನ್ನು ಶ್ರೀ ಮಠದಲ್ಲಿ ನೋಡಿ ಸಂತೋಷವಾಗಿದೆ: ಮುಮ್ಮಡಿ ನಿರ್ವಾಣ ಶ್ರೀಗಳು
ಹಿರಿಯ ವಿದ್ಯಾರ್ಥಿಗಳನ್ನು ಶ್ರೀ ಮಠದಲ್ಲಿ ನೋಡಿ ಸಂತೋಷವಾಗಿದೆ: ಮುಮ್ಮಡಿ ನಿರ್ವಾಣ ಶ್ರೀಗಳು

ಕನಕಪುರ: ಶ್ರೀ ದೇಗುಲ ಮಠದ ಹಿರಿಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಸರ್ವ ಸದಸ್ಯರ ಮಹಾಧಿವೇಶ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪ

ಸುತ್ತೂರಿನಲ್ಲಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯಲಿದೆ ಮುಮ್ಮಡಿ ನಿರ್ವಾಣ ಶ್ರೀ
ಸುತ್ತೂರಿನಲ್ಲಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯಲಿದೆ ಮುಮ್ಮಡಿ ನಿರ್ವಾಣ ಶ್ರೀ

ಕನಕಪುರ: ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಮುಮ್ಮಡಿ ನಿರ್ವಾಣ ಶ್ರೀಗಳು ತಿಳಿಸಿದರು. ಅವರು ದೇಗುಲ

ಭಕ್ತರ ಕಣ್ಮನ ಸೆಳೆದ ದೇಗುಲಮಠದ ಲಕ್ಷದೀಪೋತ್ಸವ
ಭಕ್ತರ ಕಣ್ಮನ ಸೆಳೆದ ದೇಗುಲಮಠದ ಲಕ್ಷದೀಪೋತ್ಸವ

ಕನಕಪುರ ): ನಗರದ ಶ್ರೀ ದೇಗುಲಮಠದಲ್ಲಿ ಕಡೆ ಕಾರ್ತಿಕ ಮಾಸ ಅಮಾವಾಸ್ಯೆ ಪ್ರಯುಕ್ತ ಲಕ್ಷದೀಪೋತ್ಸದ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲ

ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ
ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ

ಕನಕಪುರ: ನರೇಗಾ ಯೋಜನೆಯಡಿ ನಿಗದಿಪಡಿಸಿರುವ ಮಾನವ ದಿನಗಳ ಗುರಿ ಸಾದಿಸಿ, \"ನಮ್ಮ ಹೊಲ ನಮ್ಮ ದಾರಿಗೆ\" ಹೆಚ್ಚಿನ ಒತ್ತು ನೀಡಿ, ಹೆಚ್ಚು-ಹೆಚ್ಚು

ಕೇರಳದಲ್ಲಿ ನಡೆಯುವ ಅನುಭಾವ ಸಂಗಮದಲ್ಲಿ ಪ್ರಭುಕಿರೀಟ ಸ್ವಾಮೀಜಿ ಭಾಗಿ
ಕೇರಳದಲ್ಲಿ ನಡೆಯುವ ಅನುಭಾವ ಸಂಗಮದಲ್ಲಿ ಪ್ರಭುಕಿರೀಟ ಸ್ವಾಮೀಜಿ ಭಾಗಿ

ಕನಕಪುರ: ತಾಲೂಕಿನ ದೊಡ್ಡ ಮರಳವಾಡಿ ಶಿವಮಠದ ಕಿರಿಯ  ಪರಮಪೂಜ್ಯ ಶ್ರೀ ಶ್ರೀ ಪ್ರಭು ಕಿರೀಟ ಮಹಾಸ್ವಾಮಿಗಳವರು ಕೇರಳ ರಾಜ್ಯದ ತಿರುವಂತನಪುರದ

ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು
ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು

ಕನಕಪುರ: ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ವಿಜಯ ದಶಮಿಯಂದು ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವಮಹಾಸ್ವಾಮಿಗಳು ಶಮೀವೃಕ

ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ
ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ

ಕನಕಪುರ: ಶ್ರೀ ದೇಗುಲಮಠದ ಶ್ರೀ  ನಿರ್ವಾಣೇಶ್ವರ ಹಿರಿಯ ವಿದ್ಯಾರ್ಥಿಗಳ ಮತ್ತು ನೌಕರರ ಸೌಹಾರ್ದ ಸಹಕಾರಿ ಸಂಘ ನಿಯಮಿತ ದ 16ನೇ ವರ್ಷದ ವಾರ್ಷಿಕ

Top Stories »  


Top ↑