Tel: 7676775624 | Mail: info@yellowandred.in

Language: EN KAN

    Follow us :


5 ಸಾವಿರ ಕಾರು ಕದ್ದ ಕಳ್ಳನ ಹೆಡೆಮುರಿ ಕಟ್ಟಿದ ದೆಹಲಿ ಪೊಲೀಸರು

Posted date: 07 Sep, 2022

Powered by:     Yellow and Red

5 ಸಾವಿರ ಕಾರು ಕದ್ದ ಕಳ್ಳನ ಹೆಡೆಮುರಿ ಕಟ್ಟಿದ ದೆಹಲಿ ಪೊಲೀಸರು

ನ್ಯೂಡೆಲ್ಲಿ: ಭಾರತದ ಅತಿದೊಡ್ಡ ಕಾರು ಕಳ್ಳನೆಂಬ ಕುಖ್ಯಾತಿ ಪಡೆದ ವ್ಯಕ್ತಿ ಅಂದರೆ, ದೇಶಾದ್ಯಂತ 5 ಸಾವಿರ ಕಾರುಗಳನ್ನು ಕದ್ದ ಆರೋಪ ಹೊತ್ತಿರುವಾತನನ್ನು ದೆಹಲಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.


ಅನಿಲ್ ಚೌಹಾಣ್ (52) ಬಂಧಿತ. ಪೊಲೀಸರು ಈತನಿಂದ ಆರು ದೇಶೀಯ ನಿರ್ಮಿತ ಪಿಸ್ತೂಲ್‌ಗಳು ಮತ್ತು ಏಳು ಜೀವಂತ ಮದ್ದುಗುಂಡು, ಒಂದು ಕದ್ದ ಬೈಕನ್ನು ಸಹ ವಶ ಪಡಿಸಿಕೊಂಡಿದ್ದಾರೆ.


ಮೂವರು ಪತ್ನಿಯರು ಮತ್ತು ಏಳು ಮಂದಿ ಮಕ್ಕಳನ್ನು ಹೊಂದಿರುವ ಈತನ ವಿರುದ್ಧ 180 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.


*ಯಾರು ಈ ಅನಿಲ್ ಚೌಹಾಣ್ :*

ಅಸ್ಸಾಂ ರಾಜ್ಯದ ತೇಜ್‌ಪುರ ಮೂಲದ ಖಾನ್‌ಪುರ ಎಕ್ಸ್‌ಟೆನ್ಶನ್‌ನ ನಿವಾಸಿ ಈತ. ದ್ವಿತೀಯ ಪಿಯುಸಿವರೆಗೆ ಓದಿದ್ದ ಅನಿಲ್ ಚೌಹಾಣ್‌ ಓದಿಗೆ ಗುಡ್‌ಬೈ ಹೇಳಿ 1998ರಿಂದಲೇ ವಾಹನಗಳನ್ನು ಕದಿಯಲು ಶುರುಮಾಡಿದ. ಇದು ಒಂದು ರೀತಿ ಚಾಳಿಯಾಗಿ ನಂತರ ಹಣ ಮಾಡುವ ಸುಲಭ ಮಾರ್ಗ ಎಂದು ತಿಳಿದ ಈತ ನಿತ್ಯ ಕಾರುಗಳನ್ನು ಕದಿಯುವ ಅಭ್ಯಾಸವನ್ನು ಕರಗತ ಮಾಡಿಕೊಂಡ ಅಂದಿನಿಂದ ಈವರೆಗೆ 5 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಈತನ ವಿರುದ್ಧ ಈ ಹಿಂದೆಯೂ ಕಳವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಲವು ಬಾರಿ ಜೈಲಿಗೆ ಕಳುಹಿಸಿದ್ದರು. ಶಿಕ್ಷೆ ಅನುಭವಿಸಿ ಹೊರ ಬಂದ ಬಳಿಕ ಮತ್ತೆ ಅದೇ ಚಾಳಿಯನ್ನು ಮುಂದುವರಿಸುತ್ತಿದ್ದ. ಅಲ್ಲದೆ ನಿಜಾಮುದ್ದೀನ್ ಪೊಲೀಸ್ ಠಾಣೆಯ ಕ್ರಿಮಿನಲ್ ಪ್ರಕರಣ ಒಂದರಲ್ಲಿ ಐದು ವರ್ಷ ಶಿಕ್ಷೆ ಅನುಭವಿಸಿದ್ದಾನೆ.


ಇದಕ್ಕೂ ಮೊದಲು ಅಸ್ಸಾಂ ಸರ್ಕಾರದಲ್ಲಿ ವರ್ಗ-1 ಗುತ್ತಿಗೆದಾರರಾಗಿದ್ದ ಈತನ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಆ ವೇಳೆ ಈತನ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ಬ್ಯಾಂಕ್‌ ಸಾಲಕ್ಕಾಗಿ ಆಸ್ತಿಯನ್ನು ಹರಾಜು ಹಾಕಿತ್ತು. ಇದಾದ ಬಳಿಕ ಅನಿಲ್‌ ವಾಹನ ಕಳ್ಳತನಕ್ಕೆ ಇಳಿದಿದ್ದಾನೆ. ಆರೋಪಿ ಅನಿಲ್‌ ಈಶಾನ್ಯ ರಾಜ್ಯದಲ್ಲಿ ಘೇಂಡಾಮೃಗದ ಕೊಂಬಿನ ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


*ಬಂಧನ ಹೇಗಾಯ್ತು?* ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪತ್ತೆ ಹಚ್ಚಲು ಪೊಲೀಸರ ವಿಶೇಷ ತಂಡ ರಚಿಸಿದ್ದಾರೆ. ಆ ವೇಳೆ ಅನಿಲ್ ಚೌಹಾಣ್ ಬಗ್ಗೆ ಮಾಹಿತಿ ಸಿಕ್ಕು, ಆ ಖಚಿತ ಮಾಹಿತಿ ಆಧಾರಿಸಿ ಡಿಬಿಜಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದ ಅನಿಲ್‌ ಚೌಹಾಣ್‌ನನ್ನು ಆಗಸ್ಟ್‌ 23 ರಂದು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕಳವು ವಿಚಾರ ಬಯಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in nation »

ಮಾಹಿತಿ ನೀಡದ ಅಧಿಕಾರಿಗಳಿಗೆ ಒಂದು ಕೋಟಿ ದಂಡ
ಮಾಹಿತಿ ನೀಡದ ಅಧಿಕಾರಿಗಳಿಗೆ ಒಂದು ಕೋಟಿ ದಂಡ

ಸರಿಯಾದ ಸಮಯಕ್ಕೆ ಮಾಹಿತಿ ಕಾರ್ಯಕರ್ತರಿಗೆ ಮಾಹಿತಿ ಒದಗಿಸದ ಕಾರಣ ಒಂದು ಕೋಟಿಗೂ ಹೆಚ್ಚು ಹಣವನ್ನು ದಂಡ ವಿಧಿಸಿದ ರಾಜ್ಯ ಮಾಹಿತಿ ಆಯೋಗ. ನಿಜಕ್ಕೂ ಮಾಹಿತಿ ಹಕ್ಕಿನ ಕಾಯ್ದೆ(RTI) ತನ್ನ ಪವರ್ ನ್ನು ತೋ

ಬ್ರಿಟನ್ ನ ನೂತನ ಪ್ರಧಾನಿ ರಿಷಿ ಸುನಾಕ್ ಬ್ರಿಟನ್ ನಲ್ಲಿ ಅತ್ಯಂತ ಶ್ರೀಮಂತ
ಬ್ರಿಟನ್ ನ ನೂತನ ಪ್ರಧಾನಿ ರಿಷಿ ಸುನಾಕ್ ಬ್ರಿಟನ್ ನಲ್ಲಿ ಅತ್ಯಂತ ಶ್ರೀಮಂತ

ಲಂಡನ್, ಅ.24: ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್ ನಿಂದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್(Boris Johnson) ಹಿಂದೆ ಸರಿದ ಬಳಿಕ ನೂತನ ಪ್ರಧಾನಿಯ

ಆಧಾರ್ ಪಡೆದು 10 ವರ್ಷವಾಗಿದ್ದರೆ ಮಾಹಿತಿ ನವೀಕರಿಸಲು ಯುಐಡಿಎಐ ಮನವಿ:
ಆಧಾರ್ ಪಡೆದು 10 ವರ್ಷವಾಗಿದ್ದರೆ ಮಾಹಿತಿ ನವೀಕರಿಸಲು ಯುಐಡಿಎಐ ಮನವಿ:

ನವದೆಹಲಿ: 10 ವರ್ಷಗಳ ಹಿಂದೆ ಆಧಾರ್ ಪಡೆದು, ಇದುವರೆಗೆ ತಮ್ಮ ಮಾಹಿತಿಯನ್ನು ನವೀಕರಿಸದೇ ಇರುವವರು ಹೊಸದಾಗಿ ತಮ್ಮ ಗುರುತು ಮತ್ತು ಮನೆಯ ವಿಳಾಸದ

ಪಿಎಫ್ಐ ಸಂಃಟನೆ ನಿಷೇಧ ಸ್ವಾಗತಾರ್ಹ: ಅಶ್ವತ್ಥನಾರಾಯಣ
ಪಿಎಫ್ಐ ಸಂಃಟನೆ ನಿಷೇಧ ಸ್ವಾಗತಾರ್ಹ: ಅಶ್ವತ್ಥನಾರಾಯಣ

ರಾಮನಗರ: ಸಮಾಜ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಪಿಎಫ್ಐ ಮತ್ತು ಅದರ 8 ಅಂಗಸಂಸ್ಥೆಗಳನ್ನು 5 ವರ್ಷಗಳ ಮಟ್ಟಿಗೆ ನಿಷೇಧಿಸಿ

ಐದು ವರ್ಷ ಪಿಎಫ್ಐ ಸಂಘಟನೆ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ
ಐದು ವರ್ಷ ಪಿಎಫ್ಐ ಸಂಘಟನೆ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್

ಮಧ್ಯಪ್ರದೇಶದಲ್ಲಿ ಏಳು ರೈತರ ಗುಂಪೊಂದು ಲಾಲ್ಕಿಧೇರಿ ಪ್ರದೇಶದ ವಜ್ರದ ಗಣಿಯಲ್ಲಿ ಉತ್ಖನನ ನಡೆಸಿ 3.21 ಕ್ಯಾರೆಟ್ ವಜ್ರ ಪತ್ತೆ ಹಚ್ಚಿದ್ದಾರೆ.
ಮಧ್ಯಪ್ರದೇಶದಲ್ಲಿ ಏಳು ರೈತರ ಗುಂಪೊಂದು ಲಾಲ್ಕಿಧೇರಿ ಪ್ರದೇಶದ ವಜ್ರದ ಗಣಿಯಲ್ಲಿ ಉತ್ಖನನ ನಡೆಸಿ 3.21 ಕ್ಯಾರೆಟ್ ವಜ್ರ ಪತ್ತೆ ಹಚ್ಚಿದ್ದಾರೆ.

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಬ್ರಿಜ್‌ಪುರ ಮೂಲದ ರೈತರಿಗೆ ಅದೃಷ್ಟ ಖುಲಾಯಿಸಿದೆ. ಸರ್ಕಾರದಿಂದ ಬಾಡಿಗೆ ಮೇಲೆ ಪಡೆದ ಲಾಲ್ಕಿಧೇರಿ ಪ್ರದೇಶದ ವಜ್ರದ ಗಣಿಯಲ್ಲಿ 3.21 ಕ್ಯಾರೆಟ್ ವಜ್ರ ದೊರೆತಿದ

ವಕೀಲರ (ರಕ್ಷಣಾ) ಮಸೂದೆ 2021: ನ್ಯಾಯಾಧೀಶರ ಪೂರ್ವಾನುಮತಿ ಇಲ್ಲದೆ ವಕೀಲರ ಬಂಧನ ಕಾನೂನುಬಾಹಿರ!
ವಕೀಲರ (ರಕ್ಷಣಾ) ಮಸೂದೆ 2021: ನ್ಯಾಯಾಧೀಶರ ಪೂರ್ವಾನುಮತಿ ಇಲ್ಲದೆ ವಕೀಲರ ಬಂಧನ ಕಾನೂನುಬಾಹಿರ!

ವಕೀಲರ ರಕ್ಷಣೆ ಮತ್ತು ವೃತ್ತಿ ನಿರ್ವಹಣೆಗೆ ಅನುಕೂಲವಾಗುವಂತೆ ಮಾಡಲು ದೇಶದಲ್ಲಿ ಪ್ರಬಲ ಕಾನೂನು ರೂಪಿಸುವ ಕಾರ್ಯ ನಡೆದಿದ್ದು, ವಕೀಲರ ರಕ್ಷಣೆ ಮಸೂದೆ 2021 ಬಿಡುಗಡೆಗೊಳಿಸಲಾಗಿದೆ.

ದೇಶಾದ್ಯಂತ ಮಧ್ಯರಾತ್ರಿಯಿಂದಲೇ ಪಿಎಫ್ಐ ಕಚೇರಿಗಳ ಮೇಲೆ ಎನ್​ಐಎ, ಇಡಿ ದಿಢೀರ್‌ ದಾಳಿ
ದೇಶಾದ್ಯಂತ ಮಧ್ಯರಾತ್ರಿಯಿಂದಲೇ ಪಿಎಫ್ಐ ಕಚೇರಿಗಳ ಮೇಲೆ ಎನ್​ಐಎ, ಇಡಿ ದಿಢೀರ್‌ ದಾಳಿ

ಹೈದರಾಬಾದ್​: ಕಳೆದ ಮಧ್ಯರಾತ್ರಿಯಿಂದ ದಿಢೀರ್ ಕಾರ್ಯಾಚರಣೆ ಕೈಗೊಂಡಿರುವ 200ಕ್ಕೂ ಹೆಚ್ಚು ರಾಷ್ಟ್ರೀಯ ತನಿಖಾ ದಳ (ಎನ್​​ಐಎ)ದ ಅಧಿಕಾರಿಗಳು ದೇ

ಅಣ್ಣ ಬ್ಲಡ್ ಕ್ಯಾನ್ಸರ್‌ಗೆ ಬಲಿ, ಅಮ್ಮನಿಗೆ ಬ್ರೆಸ್ಟ್‌ ಕ್ಯಾನ್ಸರ್‌: ಪವರ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದು ಬೂಸ್ಟರ್ ಡೋಸ್ ಕೊಟ್ಟ ಮಗಳು!
ಅಣ್ಣ ಬ್ಲಡ್ ಕ್ಯಾನ್ಸರ್‌ಗೆ ಬಲಿ, ಅಮ್ಮನಿಗೆ ಬ್ರೆಸ್ಟ್‌ ಕ್ಯಾನ್ಸರ್‌: ಪವರ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದು ಬೂಸ್ಟರ್ ಡೋಸ್ ಕೊಟ್ಟ ಮಗಳು!

ಹೈದರಾಬಾದ್: ಬದುಕು ಒಡ್ಡಿದ ಹತ್ತು ಹಲವು ಸಮಸ್ಯೆಗಳನ್ನು ಧೈರ್ಯದಿಂದ ಮೆಟ್ಟಿ ನಿಂತ ಇಲ್ಲೊಬ್ಬ ಹೈದರಾಬಾದ್‌ನ 22 ವರ್ಷದ ಯುವತಿ ಯುವ ಜನತೆಗೆ ಸ್ಫೂರ್ತಿಯ ಸ

ಅಬ್ಬಾ…!,ಎಂಬತ್ತೇಳರ ವೃದ್ದೆಗೆ ಎಂಭತ್ತೊಬ್ಬರ ಗಂಡನಿಂದ ಸೆಕ್ಸ್ ಗೆ ಒತ್ತಾಯ ದೂರು!
ಅಬ್ಬಾ…!,ಎಂಬತ್ತೇಳರ ವೃದ್ದೆಗೆ ಎಂಭತ್ತೊಬ್ಬರ ಗಂಡನಿಂದ ಸೆಕ್ಸ್ ಗೆ ಒತ್ತಾಯ ದೂರು!

ವಡೋದರಾದ 87 ವರ್ಷದ ವೃದ್ಧೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ತನ್ನ ಪತಿಯ ವಿರುದ್ಧ ದೂರು ನೀಡಿದ್ದು, ಕರೆಯನ್ನು ಸ್ವೀಕರಿಸಿದ ಅಭಯಂ ತಂಡ ನಿಜಕ್ಕೂ ದಿಗ್ಭ್ರಮೆಗೊಂಡಿದೆ.

ಹೌದು… ಗುಜರಾತ್

Top Stories »  


Top ↑