
ಸಂಸ್ಕೃತಿ ಎನ್ನುವುದೇ ನಡವಳಿಕೆ ಡಾ ಬಿ ಟಿ ನೇತ್ರಾವತಿಗೌಡ
ಚನ್ನಪಟ್ಟಣ: ಸಂಸ್ಕೃತಿ ಎಂಬುದೇ ನಡವಳಿಕೆ, ಆ ನಡವಳಿಕೆ ಎಂಬುದು ನಮ್ಮ ಮನೆಯಲ್ಲೇ ಆರಂಭವಾಗಬೇಕು, ನಾವು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಹೇಗೆ ವರ್ತಿಸಬೇಕು, ಯಾರ ಬಳಿ ಹೇಗೆ ಮಾತನಾಡಬೇಕು, ಅಣಕಿಸುವುದು, ಕಟು ನುಡಿಗಳನ್ನಾಡುವುದು, ಕದಿಯುವುದು ಎಂಬುದನ್ನು ತಮಾಷೆಗಾಗಿಯೂ ಹೇಳಿಕೊಡಬಾರದು ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ ಬಿ ಟಿ ನೇತ್ರಾವತಿಗೌಡ ಅಭಿಪ್ರಾಯಪಟ್ಟರು. ಅವರು ನಗರದ ಶತಮಾನೋತ್ಸವ ಭವನದಲ್ಲಿ ಶ್ರ

೨೯ರಂದು ಕರ್ನಾಟಕ ಬಂದ್, ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಒಗ್ಗೂಡಿ ಚನ್ನಪಟ್ಟಣ ಬಂದ್ ಗೆ ಕರೆ
ಚನ್ನಪಟ್ಟಣ: ಮಂಗಳವಾರ ಅಥವಾ ಗುರುವಾರದಂದು ಚನ್ನಪಟ್ಟಣ ಬಂದ್ ಗೆ ಕರೆ ನೀಡಲು ಉದ್ದೇಶಿಸಲಾಗಿದ್ದು, ೨೯ನೇ ತಾರೀಖಿನ ಶುಕ್ರವಾರ ಕರ್ನಾಟಕ ಬಂದ್ ಆಚರಿಸಲು ಒಕ್ಕೊರಲಿನಿಂದ ತೀರ್ಮಾನಿಸಿರುವುದರಿಂದ ನಾವೂ ಸಹ ಅಂದೇ ಚನ್ನಪಟ್ಟಣ ಬಂದ್ ಮಾಡುವ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ನೀಡೋಣಾ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.

ಸೆ.30 ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಉಪನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಣೆ
ಬೆಂಗಳೂರು:ಸೆ.22: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ ( Valuation Committee) 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ, ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳ

ಅಮೇರಿಕಾದ ಖ್ಯಾತ ವೈದ್ಯ ಡಾ ಹೆಚ್ ಕೆ ಮರಿಯಪ್ಪ ರವರಿಗೆ ಗುರುವಾರ ಅಭಿನಂದನೆ
ಚನ್ನಪಟ್ಟಣ: ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಕೆ ವೀರಣ್ಣಗೌಡ ರ ಸಹೋದರ ಡಾ.ಎಚ್.ಕೆ. ಮರಿಯಪ್ಪ ಅಭಿನಂದನಾ ಸಮಿತಿಯಿಂದ ಗುರುವಾರ ತಾಲೂಕಿನ ಶಿಶಿರ ಹೋಂಸ್ಟೇನಲ್ಲಿ \'ಹೊನ್ನಕಳಸ\' ಅಭಿನಂದನಾ ಗ್ರಂಥ ಹಾಗೂ \'ರೆಮಿನಿಸೆನ್ಸಸ್ ಆಫ್ ಲೈಫ್, ಮೆಮೋರಿಸ್ ಆಫ್ ಎಚ್.ಕೆ.ವೀರಣ್ಣಗೌಡ\' ಪುಸ್ತಕಗಳ ಲೋಕಾರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿಯ ಅ

ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಿ:
ರಾಮನಗರ; ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗೆ ಸಂಬಂಧಪಟ್ಟ ಉಪ ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ೫ ವರ್ಷಗಳ ಅವಧಿಯಲ್ಲಿ ಪರಿಷ್ಕರಿಸದೇ ಇರುವುದರಿಂದ ಹಾಗೂ ಸಾಕಷ್ಟು ಭೌತಿಕ ಅಭಿವೃದ್ಧಿ ಹಾಗೂ ಬೆಳವಣಿಗೆಗಳು ಆಗಿರುವುದರಿಂದ ಈ ಎಲ್ಲಾ ನ್ಯೂನ್ಯತೆಗಳನ್ನು ಪ್ರಸ್ತಕ ಸಾಲಿನಲ್ಲಿ ಸರಿಪಡಿಸಿ ಸ್ಥಿರಾಸ್ತಿಗಳ ಅಂದಾಜ

ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ
ಚನ್ನಪಟ್ಟಣ: ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆಯೊಬ್ಬರು ಅವರದೇ ಹೊಲದ ಪೈಪು ಹೂಳಲು ತೆಗೆದಿದ್ದ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿರುವ ಧಾರುಣ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದೆ. ದ್ಯಾವಪಟ್ಟಣ ಗ್ರಾಮದ ಪ

ಆಹಾರ ಇಲ್ಲದೆ ಎರಡು ದಿನ ಬದುಕಬಹುದು, ನೀರಿಲ್ಲದೆ ಬದುಕುವುದು ಕಷ್ಟ, ತಾಪಂ ಇಓ
ಚನ್ನಪಟ್ಟಣ: ಒಂದೆರಡು ದಿನ ಆಹಾರವಿಲ್ಲದಿದ್ದರೂ ಮನುಷ್ಯ ಬದುಕುತ್ತಾನೆ ಆದರೆ, ನೀರಿಲ್ಲದೇ ಬದುಕಲಾರ. ಆದ್ದರಿಂದ ಜನರಿಗೆ ಶುದ್ಧನೀರು ಪೂರೈಕೆ ಮಾಡುವುದು ನಮ್ಮ ಆದ್ಯತೆ ಆಗಿದ್ದು, ನೀರಿನ ಗುಣಮಟ್ಟದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು ನೀರುಗಂಟಿಗಳ ಜವಬ್ದಾರಿಯಾಗಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ಸೂಚನೆ ನೀಡಿದರು.

ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಮಾರಮ್ಮನ ಹಬ್ಬ
ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಮಾರಮ್ಮನ ಹಬ್ಬ ಭಕ್ತಿಭಾವದಿಂದ ನೆರವೇರಿತು.ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಯರು ಮಡಿಯುಟ್ಟು ತಂಬಿಟ್ಟಿನ ಆರತಿಯನ್ನು ಇಟ್ಟು ಪೂಜೆ ಸಲ್ಲಿಸಿದರು. ಗ್ರಾಮದಲ್ಲಿ ಪ್ರತಿವರ್ಷ ಮಾರಮ್ಮನ ಹಬ್ಬ ಆಚರಣೆ ಮಾಡುತ್ತಿದ್ದು, ಈ ವರ್ಷ ಉತ್ತಮವಾಗಿ ಮಳೆ ಬೆಳೆಯಾಗಿ ರೈತನ ಬದುಕು ಹಸನಾಗಲಿ ಎಂದ

ರೋಟರಿ ಕ್ಲಬ್ ವತಿಯಿಂದ ಚಾರಣ
ಚನ್ನಪಟ್ಟಣ : ಜಂಜಾಟದ ಬದುಕಿನಲ್ಲಿ ಮನಷ್ಯರಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡು ಬಹು ಪ್ರಮುಖವಾಗಿದ್ದು ಇವುಗಳನ್ನು ಕಾಪಾಡಿಕೊಳ್ಳುವುದು ಕೋಟಿ ಸಂಪಾದನೆಗಿಂತಲೂ ಮಿಗಿಲೆಂದು ರೋಟರಿ ಟಾಯ್ಸ್ ಸಿಟಿಯ ನಿಕಟಪೂರ್ವ ಅಧ್ಯಕ್ಷ ಬೈ ಶ್ರೀನಿವಾಸ್ ಅಭಿಪ್ರಾಯಪಟ್ಟರು.ರೋಟರಿ ಟಾಯ್ಸ್ ಸಿಟಿ ಕ್ಲಬ್ ವತಿಯಿಂದ ತಾಲೂಕಿನ ಇತಿಹಾಸ ಪ್ರಸಿದ್ದ ಮಾಕಳಿ ಹೊಸಹಳ್ಳಿಯ ಕೃಷ್ಣಗಿರಿ ಬೆಟ್ಟಕ್ಕೆ ಕೈಗೊಂಡಿದ್ದ

ಸೇವೆಯ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಿ ನಿವೃತ್ತ ಶಿಕ್ಷಕ ವಸಂತ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಪ್ರೊ. ಜಯಪ್ರಕಾಶ್ ಗೌಡ ಅಭಿಮತ
ಚನ್ನಪಟ್ಟಣ: ಜನ ಮೆಚ್ಚುವಂತಹ ಹಾಗೂ ಶಾಶ್ವತವಾಗಿ ಉಳಿಯುವಂತಹ ಒಳ್ಳೆಯ ಸೇವಾ ಕೆಲಸಗಳನ್ನು ಮಾಡಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ತಿಳಿಸಿದರು. ಅವರು ಪಟ್ಟಣದ ಶತಮಾನೋತ್ಸವ ಭವನದಲ್ಲಿ ಭಾನುವಾರ ಬೊಂಬೆ ನಗರಿಯ ವಿಶ್ರಾಂತ ಅಧ್ಯಾಪಕ ಸಂಘ ಸಂಸ್ಥೆಗಳ ಸೇವಾಕರ್ತ ವಸಂತ್ ಕುಮಾರ್ 60 ರ ಅಭಿನಂದನೆ ಮತ್ತು ಗ್ರಂಥ ಲೋಕಾರ್ಪಣೆ ಸಮಾರಂಭವ