Tel: 7676775624 | Mail: info@yellowandred.in

Language: EN KAN

    Follow us :


10ರಿಂದ ಪ್ರವಾಸಿ ಜಾನಪದ ಲೋಕೋತ್ಸವ : ಟಿ. ತಿಮ್ಮೇಗೌಡ

Posted date: 07 Feb, 2018

Powered by:     Yellow and Red

10ರಿಂದ ಪ್ರವಾಸಿ ಜಾನಪದ ಲೋಕೋತ್ಸವ : ಟಿ. ತಿಮ್ಮೇಗೌಡ

ರಾಮನಗರ : ಜಾನಪದ ಲೋಕದಲ್ಲಿ ಫೆ. 10 ಮತ್ತು 11 ರಂದು ಪ್ರವಾಸಿ ಜಾನಪದ ಲೋಕೋತ್ಸವ -2018 ಮತು ್ತಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ ಎಂದು ಜಾನಪದ ಲೋಕದ ಅಧ್ಯಕ್ಷರಾದ ಟಿ. ತಿಮ್ಮೆಗೌಡ ಅವರು ತಿಳಿಸಿದರು.
    ಅವರು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದಲ್ಲಿ ಫೆ.7ರ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿ ವರ್ಷವೂ ಜಾನಪದ ಲೋಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಫೆ. 10 ಹಾಗೂ 11 ರಂದು ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆವರೆಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಫೆ.10ರ ಬೆಳಗ್ಗೆ 10.30 ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು, ಅಂದು ಆದಿ ಚುಂಚನಗಿರಿ ಮಠದ ಶಾಖಾ ಮಠಾಧೀಶರಾದ ಅನ್ನದಾನೇಶ್ವರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸುವರು. ನಿವೃತ್ತ ಐ.ಎ.ಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಪಟ್ಟಣ್ಣ, ಸೈಯ್ಯದ್ ಮುದೀರ್ ಆಗಾ, ರಾಮಚಂದ್ರೇಗೌಡ, ಮಾಜಿ ಶಾಸಕರಾದ ಕೆ. ರಾಜು, ಜಿಲ್ಲಾ ಪಂಚಾಯರ್ ಅಧ್ಯಕ್ಷರಾದ ಸಿ.ಪಿ. ರಾಜೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್, ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 
ಅಂದು ಬೆಳಿಗ್ಗೆ 11.30ಕ್ಕೆ ಕರಕುಶಲ ಮೇಳವನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಿ. ಟಾಕಪ್ಪ ಉದ್ಘಾಟಿಸುವರು, ಮಧ್ಯಾಹ್ನ 2.30ಕ್ಕೆ ಆಧುನಿಕತೆಯತ್ತ ಜಾನಪದ ಕಲೆಗಳು ಒಂದು ಮುಕ್ತ ಚರ್ಚೆ ವಿಷಯದ ವಿಚಾರ ಸಂಕಿರಣ ನಡೆಯಲಿದೆ, ಸಂಜೆ 5.30ಕ್ಕೆ ಚಿಟ್ ಮೇಳ, ಲಂಬಾಣಿ ನೃತ್ಯ, ಮಹಿಳಾ ತಮಟೆ, ತತ್ವಪದ, ಪೂಜಾಕುಣಿತ, ಸೋಮನ ಕುಣಿತ, ಕೋಲಾಟ, ಜಾನಪದ ಹಾಡುಗಾರಿಕೆ ಹಾಗೂ ಕಂಸಾಳೆ ಪದಗಳ ಹಾಡುಗಾರಿಕೆ ನಡೆಯಲಿದೆ ಎಂದು ಅವರು ಹೇಳಿದರು. 
    ಫೆ.11ರ ಬೆಳಿಗ್ಗೆ 10.30ಕ್ಕೆ ಜಾನಪದ ಕ್ಷೇತ್ರ ಕಾರ್ಯ ಹಾಗೂ ಸಂಘಟನೆ ಕುರಿತು ಸಂವಾದ, ಸಂಜೆ 4.30ಕ್ಕೆ ಲೋಕಸಿರಿ-ವಸ್ತು ಸಂಗ್ರಹಾಲುಯದ ಲೋಕಾರ್ಪಣೆ ನಡೆಲಿದೆ, ಅಲ್ಲದೆ ವಿಧಾನ ಪರಿಷತ್ ಸದಸ್ಯರಾದ ವಿ. ಸೋಮಣ್ಣ ಅವರಿಂದ ಕುಟೀರದ ಉದ್ಘಾಟನೆ ಕಾರ್ಯ ನಡೆಯಲಿದೆ, ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಎಚ್.ಡಿ. ಕುಮಾರಸ್ವಾಮಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ವಿ. ಸೋಮಣ್ಣ, ಸಿ.ಎಂ. ಲಿಂಗಪ್ಪ ಹಾಗೂ ಇತರೆ ಗಣ್ಯರು ಭಾಗವಹಿಸುವರು ಎಂದು ಅವರು ತಿಳಿಸಿದರು.
     ಪ್ರತಿ ವರ್ಷ ಲೋಕೋತ್ಸವನ್ನು ವೀಕ್ಷಿಸಲು ಕಲಾವಿದರು, ವಿದ್ವಾಂಸರು ಮತು ್ತಕಲಾಸಕ್ತರು ರಾಜ್ಯದ ಬೇರೆ ಬೇರೆ ಭಾಗದಿಂದ ಬರುತ್ತಾರೆ. ಈ ಉತ್ಸವದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳ ಕಲೆಗಳ ಪ್ರದರ್ಶನ ಇರುತ್ತದೆ.  ಹೊರರಾಜ್ಯಗಳ ಜಾನಪದ ಕಲಾವಿದರುಗಳನ್ನೂ ಸಹ ಆಹ್ವಾನಿಸಿ ಅವರ ಕಲಾ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ. ಹಾಗೂ ಜಾನಪದ ಜಗತ್ತಿನ ಉತ್ಕøಷ್ಠ ಹಿರಿಯ ಜಾನಪದ ಕಲಾವಿದರುಗಳನ್ನು ಗುರುತಿಸಿ ಅವರುಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಟಿ. ತಿಮ್ಮೇಗೌಡರು ತಿಳಿಸಿದರು.
    ಕನ್ನಡ ನಾಡಿನ ಜಾನಪದ ಪರಂಪರೆಯ ಸಂವರ್ಧನೆ, ಸಂರಕ್ಷಣೆ, ಪ್ರಸರಣ, ದಾಖಲಾತಿ ಮತ್ತು ಪ್ರಚಾರಗಳನ್ನು ಪ್ರಧಾನ ಆಶಯಗಳನ್ನಾಗಿರಿಸಿಕೊಂಡು ವಿಶ್ರಾಂತ ಐ.ಎ.ಎಸ್ ಅಧಿಕಾರಿ ಮತ್ತು ನಾಡಿನ ಉತ್ಕೃಷ್ಟ ಸೃಜನಶೀಲ ಲೇಖಕರು ಜಾನಪದ ತಜ್ಞರೂ ಆದ ನಾಡೋಜ ಶ್ರೀ ಎಚ್.ಎಲ್. ನಾಗೇಗೌಡರು ಮಾರ್ಚ್ 21, 1979 ರಂದು ಸ್ಥಾಪಿಸಿದ ರಾಜ್ಯ ಜಾನಪದ ಪರಿಷತ್ತು ಕಳೆದ 38 ವರ್ಷಗಳ ಅವಧಿಯಲ್ಲಿ ಹಲವಾರು ಸಾಧನೆಯನ್ನು ಮಾಡಿದೆ.  ಇವರೊಡನೆ ನಾಡೋಜ ಜಿ. ನಾರಾಯಣ, ಶ್ರೀ ಗೊ.ರು. ಚನ್ನಬಸಪ್ಪ ಮುಂತಾದವರು ಕೈ ಜೋಡಿಸಿದ್ದಾರೆ.
    ಕರ್ನಾಟಕ ಜಾನಪದ ಪರಿಷತ್ತು ವರ್ಷ ಪೂರ್ತಿ ಅನೇಕ ಉತ್ಸವ ಮತ್ತು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಜಾನಪದ ಲೋಕದಲ್ಲಿ ಸಂಕ್ರಾಂತಿ ಉತ್ಸವದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ ಹಾಗೂ ರಾಜ್ಯ ಮಟ್ಟದ ಗೀತಗಾಯನ ಸ್ಪರ್ಧೆ, ಗ್ರಾಮೀಣ ಆಟೋಟಗಳ ಉತ್ಸವ, ಗಾಳಿಪಟ ಉತ್ಸವ, ದಸರಾ ಉತ್ಸವಗಳಲ್ಲದೇ, ಪ್ರತಿ ತಿಂಗಳ 2ನೇ ಶನಿವಾರದಂದು ನಾಡಿನ ಹಿರಿಯ ಜಾನಪದ ಕಲಾವಿದರನ್ನು ಆಹ್ವಾನಿಸಿ ಲೋಕಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮವು ಕಳೆದ ಮೂರು ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಿದೆ. ಇದರ ಜೊತೆಗೆ ಪ್ರತಿ ಭಾನುವಾರ ಜಾನಪದ ಲೋಕದಲ್ಲಿ ಜಾನಪದ ಕಲಾಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂದರು.
    ಈ ವರ್ಷವೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಜಾನಪದ ಕಲಾತಂಡಗಳು ಭಾಗವಹಿಸಲಿದ್ದು, ಪಟಾಕುಣಿತ, ಪೂಜಾಕುಣಿತ, ಡೊಳ್ಳು ಕುಣಿತ, ಹಾಡು ಮೇಳ, ಜನಪದ ನೃತ್ಯ, ವೀರಭದ್ರಕುಣಿತ, ಸೋಮನ ಕುಣಿತ, ಲಂಬಾಣಿ ನೃತ್ಯ, ಮಹಿಳಾ ತಮಟೆಕುಣಿತ, ತತ್ವಪದ, ಕಂಸಾಳೆ ಕುಣಿತ, ಚಿಟ್ ಮೇಳ ಕುಣಿತ, ಹೆಜ್ಜೆ ಮೇಳ, ಬುಡಬುಡಕೆ, ಸಿದ್ದಿ ನೃತ್ಯ, ಹಲಗೆ ಮಜಲು, ಮಣಿಪುರ ನೃತ್ಯ, ಗೀತಗಾಯನ ಹಾಗೂ ರಸೋಲ್ಲಾಸ ಯಕ್ಷಗಾನ ನೃತ್ಯರೂಪಕ ಇತ್ಯಾದಿ ಕಲೆಗಳು ಪ್ರದರ್ಶನಗೊಳ್ಳಲಿವೆ.  ಇದರ ಜೊತೆಗೆ ಈ ಎರಡು ದಿನಗಳೂ ಹೊರರಾಜ್ಯಗಳ ಕಲಾವಿದರುಗಳಿಂದ ವೈವಿಧ್ಯಮಯ ಕಲಾಪ್ರದರ್ಶನವಿದೆ. ಸಾರ್ವಜನಿಕರಿಗೆ ಈ ಎರಡು ದಿನಗಳೂ ಜಾನಪದ ಲೋಕಕ್ಕೆ ಉಚಿತ ಪ್ರವೇಶವಿರುತ್ತದೆ ಎಂದವರು ಹೇಳಿದರು.
ಈ ವರ್ಷ ನಾಡಿನ ಹಿರಿಯ ಜಾನಪದ ಕಲಾವಿದರುಗಳಿಗೆ ಕೃಷಿಕ್ ಸರ್ವೋದಯ ಪೌಂಢೇಷನ್ ಅಧ್ಯಕ್ಷರಾದ ಡಾ. ವೈ.ಕೆ. ಪುಟ್ಟಸೋಮೆಗೌಡ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಕಲಾವಿದರಿಗೆ ನೀಡುವ ಪ್ರಶಸ್ತಿ ಮೊತ್ತವು 10,000 ರೂ.ಗಳನ್ನು ಒಳಗೊಂಡಿದ್ದು ಜಾನಪದ ಕ್ಷೇತ್ರಕ್ಕೆ ಒಟ್ಟು 31 ಪ್ರಶಸ್ತಿಗಳನ್ನು ನೀಡಲು ಉದ್ದೇಶಿಸಿದೆ.  ಪ್ರವಾಸಿ ಜಾನಪದ ಲೋಕೋತ್ಸವವನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
    ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಹಾಗೂ ಡಾ. ಕುರುವ ಬಸವರಾಜ್ ಗೋಷ್ಠಿಯಲ್ಲಿದ್ದರು. 
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑