Tel: 7676775624 | Mail: info@yellowandred.in

Language: EN KAN

    Follow us :


ಇದೇ ತಿಂಗಳು ವಿಜಯಸಂಕಲ್ಪ ಅಭಿಯಾನ: ಜಿಲ್ಲಾ ಸಂಚಾಲಕ ರವೀಶ್

Posted date: 19 Jan, 2023

Powered by:     Yellow and Red

ಇದೇ ತಿಂಗಳು ವಿಜಯಸಂಕಲ್ಪ ಅಭಿಯಾನ: ಜಿಲ್ಲಾ ಸಂಚಾಲಕ ರವೀಶ್

ಚನ್ನಪಟ್ಟಣ,ಜ:19. ಮನೆ-ಮನಗಳಿಗೆ ಬಿಜೆಪಿ ನೇತೃತ್ವದ ಸರ್ಕಾರದ ಜನಪರ ಕೆಲಸಗಳನ್ನು ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಜನಪರ ಆಡಳಿತ ನೀಡುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಪಕ್ಷದ ನೈಜ ಜನಪರ ಸಿದ್ದಾಂತಗಳ ಬಗೆಗಿನ ಮಾಹಿತಿಯನ್ನು ಪ್ರತಿಯೊಂದು ಮನೆ-ಮನಕ್ಕೆ ತಲುಪಿಸುವ ಉದ್ದೇಶವೇ ವಿಜಯ ಸಂಕಲ್ಪ ಅಭಿಯಾನ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ವಿಜಯ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕ ಎಲೇಕೇರಿ ರವೀಶ್ ತಿಳಿಸಿದರು.

ಅವರು ನಗರದ ಹೊರವಲಯದ ಖಾಸಗಿ ಹೋಟೆಲ್‍ನಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.


ವಿಜಯ ಸಂಕಲ್ಪ ಯಾತ್ರೆ ರಾಜ್ಯಾದಾದ್ಯಂತ ನಡೆದು ಈಗಾಗಲೇ ಯಶಸ್ವಿಯಾಗಿದೆ, ಜಿಲ್ಲೆಯಲ್ಲಿ ಜನವರಿ 21 ರಿಂದ ಪ್ರಾರಂಭವಾಗಿ 29 ರವರೆಗೆ ನಡೆಯಲಿದೆ ಎಂದು ತಿಳಿಸಿದರು.


ಬೂತ್‍ ಮಟ್ಟದ ವಿಜಯ ಸಂಕಲ್ಪ ಯಾತ್ರೆಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ  ಹಮ್ಮಿಕೊಂಡಿರುವ ಉದ್ದೇಶ, ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿ ಬೂತ್‍ನಲ್ಲಿನಲ್ಲಿರುವ ಮನೆಗಳಲ್ಲಿನ ಮತದಾರರಿಗೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ  ಜನತಾ ಪಕ್ಷದ ಅದರಲ್ಲೂ ದೇಶದ ಪ್ರಧಾನಿ ನರೇಂದ್ರ ಮೋದಿ ರವರ ಜನಪರ ಆಡಳಿತವನ್ನು ತಿಳಿಯಪಡಿಸುವ ಪ್ರಮುಖ ಉದ್ದೇಶವಾಗಿದೆ ಎಂದರು.


ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿರವರು ದೇಶಕ್ಕೆ ನೀಡಿರುವ ಭರಪೂರ ಕೊಡುಗೆಗಳನ್ನು ಬೂತ್ ಮಟ್ಟದಲ್ಲಿ ಪ್ರಚಾರಪಡಿಸಿ ಬೂತ್ ವಿಜಯ ಸಂಕಲ್ಪ ಯಾತ್ರೆಯನ್ನು ಕೈಗೊಂಡರೆ ಅದರಲ್ಲೂ ಪ್ರತಿ ಮತದಾರರಿಗೆ ಬಿಜೆಪಿಯ ಅಭಿವೃದ್ದಿ ಯೋಜನೆಗಳನ್ನು ಮನನ ಮಾಡಿಸಬೇಕು ಎಂದು ತಿಳಿಸಿದರು.


ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರಮುಖ ಉದ್ದೇಶಗಳಿದ್ದು, ಮೊದಲನೆಯದಾಗಿ ಸರ್ಕಾರದ ಅಭಿವೃದ್ದಿಯ ಬಗೆಗಿನ ಸ್ಟಿಕರ್‍ ಗಳನ್ನು ಅಂಟಿಸುವುದು, ಗೋಡೆಗಳ ಮೇಲೆ ಬರಹ, ಬಿಜೆಪಿ ಸದಸ್ಯತ್ವ ನೊಂದಣಿ, ಪ್ರಧಾನಮಂತ್ರಿ ರವರ ಮನ್ ಕೀ ಬಾತ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.


ವಿಜಯ ಸಂಕಲ್ಪಯಾತ್ರೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆಗಳು ಫಲಪ್ರದವಾಗಿದ್ದು, ಇತಿಹಾಸದಲ್ಲಿ ಯಾವ ಪಕ್ಷಗಳು ನೀಡದಿರುವ ಕೊಡುಗೆಗಳನ್ನು ಬಿಜೆಪಿ ನೀಡಿರುವುದರ ಬಗ್ಗೆ ಸಮಾಜದ ಕಟ್ಟಕಡೆಯ  ವ್ಯಕ್ತಿಗೂ ಮಾಹಿತಿ ನೀಡಿ ಮತ್ತೆ ಬಿಜೆಪಿಯನ್ನು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಸ್ಥಾಪನೆ ಮಾಡುವುದೇ ಈ ಯಾತ್ರೆಯ  ಉದ್ದೇಶವಾಗಿದೆ ಎಂದು ತಿಳಿಸಿದರು.


ವಿಜಯ ಸಂಕಲ್ಪಯಾತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಡಾ|| ಅಶ್ವಥ್‍ನಾರಾಯಣ್, ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹಾಗೂ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದರು.

ಈ ಸಂದರ್ಭದಲ್ಲಿ ಚನ್ನಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಂಪುರ ಮಲವೇಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ.ಜಯರಾಮು, ತಾಲ್ಲೂಕು ಭೂತ್ ವಿಜಯ ಸಂಕಲ್ಪ ಯಾತ್ರೆಯ ಸಂಚಾಲಕ ಕುಳ್ಳಪ್ಪ ( ಶಿವಲಿಂಗಯ್ಯ) ಮಾತನಾಡಿ ಯಾತ್ರೆಯ ರೂಪುರೆಷೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಆನಂದಸ್ವಾಮಿ, ನಗರಸಭೆ ನಾಮಿನಿ ಸದಸ್ಯ ಸಂತೋಷ್, ಕೆ.ಡಿ.ಬಿ.ಸದಸ್ಯ ಶಬೀರ್‍ಉಲ್ಲಾ ಬೇಗ್, ಸೋಮಶೇಖರ್, ಪಾರ್ಥಸಾರಥಿ, ಮಾಕಳಿ ಬೋರೇಗೌಡ ಹಾಗೂ ಹಲವಾರು ಮುಖಂಡರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑