Tel: 7676775624 | Mail: info@yellowandred.in

Language: EN KAN

    Follow us :


ಬೈರಮಂಗಲ ನಿರಾಶ್ರಿತ ಕುಟುಂಬಗಳಿಗೆ ಹಕ್ಕು ದಾಖಲೆ ನೀಡಲಾಗುವುದು : ಡಿ.ಕೆ. ಶಿವಕುಮಾರ್

Posted date: 27 Jan, 2018

Powered by:     Yellow and Red

ಬೈರಮಂಗಲ ನಿರಾಶ್ರಿತ ಕುಟುಂಬಗಳಿಗೆ ಹಕ್ಕು ದಾಖಲೆ ನೀಡಲಾಗುವುದು : ಡಿ.ಕೆ. ಶಿವಕುಮಾರ್

ರಾಮನಗರ : ಬೈರಮಂಗಲ ಕೆರೆ ಯೋಜನೆಯ ಮೂಲ 19 ಕುಟುಂಬಗಳ ನಿರಾಶ್ರಿತರಿಗೆ 500 ಎಕರೆ ಜಮೀನು ಅರಣ್ಯ ಇಲಾಖೆಯಿಂದ ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು. 

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ 69ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. 500 ಎಕರೆ ಜಮೀನನ್ನು ಅರ್ಹ ಫಲಾನುಭÀವಿಗಳಿಗೆ ಹಂಚಿಕೆ ಮಾಡಿ ಕಂದಾಯ ದಾಖಲೆಗಳಲ್ಲಿ ಇಂಡೀಕರಿಸಿ ಪೆÇೀಡಿ ಮತ್ತು ಪಹಣಿ ದಾಖಲಾತಿಗಳನ್ನು ವಿತರಿಸಿ ಸುಮಾರು 60 ವರ್ಷಗಳಿಂದ ಬಾಕಿ ಇದ್ದ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದರು. 

ಹಕ್ಕಿ-ಪಿಕ್ಕಿ ಜನಾಂಗದವರಿಗೆ ಪುನರ್ವಸತಿ ಕಲ್ಪಿಸಲು ಬನ್ನೇರುಘಟ್ಟ ರಾಗಿಹಳ್ಳಿ ರಾಜ್ಯ ಅರಣ್ಯ ಪ್ರದೇಶದಲ್ಲಿ ಒಟ್ಟು 350.00 ಎಕರೆ ಅರಣ್ಯ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿದೆ. ಈ ಜನಾಂಗದವರಿಗಾಗಿ ಜಮೀನು ಮಂಜೂರು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹಲವು ದಶಕಗಳಿಂದ ಬಾಕಿ ಉಳಿದಿದ್ದ ಜಿ¯್ಲÉಯ ಪ್ರಮುಖ ಸಮಸ್ಯೆಯೊಂದನ್ನು ಸರ್ಕಾರವು ಬಗೆಹರಿಸಿದೆ ಎಂದರು.

ಜಿ¯್ಲÉಯಲ್ಲಿ ವ್ಯವಸಾಯ ಉz್ದÉೀಶಕ್ಕಾಗಿ ಈ ಹಿಂದೆಯೇ ಅರಣ್ಯ ಇಲಾಖೆಯಿಂದ ಗುಳ್ಳಹಟ್ಟಿ ಕಾವಲ್, ಚುಂಚಿ, ಸಿದ್ದರ ಬೆಟ್ಟ, ಉಯ್ಯಂಬಳ್ಳಿ, ಬೆಟ್ಟಹಳ್ಳಿ ಕಾವಲ್, ದೊಡ್ಡಮಣ್ಣುಗುಡ್ಡೆ, ಚಿಕ್ಕಮಣ್ಣುಗುಡ್ಡೆ, ಮಾಕಳಿ, ತೈಲೂರು, ಇನ್ನು ಮುಂತಾದ ಅರಣ್ಯ ಪ್ರದೇಶಗಳಲ್ಲಿ ಬಿಡುಗಡೆಯಾಗಿದ್ದ ಏಕಸಾಲಿಗೆ ಗುತ್ತಿಗೆ ನೀಡಲಾಗಿದ್ದ ಅರಣ್ಯ ಭೂಮಿಯನ್ನು ಸಾಗುವಳಿದಾರರಿಗೆ ಹಂಚಿಕೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಇದರಿಂದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಂದಾಯ ಮತ್ತು ಅರಣ್ಯ ಇಲಾಖೆಯ ನಡುವಿನ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಶೀಘ್ರದಲ್ಲಿಯೆ ನೀರಿನ ಸಮಸ್ಯೆ ಬಗೆಹರಿಯಲಿದೆ : ಜಿಲ್ಲೆಯ ನೀರಾವರಿ ವಂಚಿತ ಹಳ್ಳಿಗಳಲ್ಲಿ  ನೀರಾವರಿ ಯೋಜನೆಗಳ ಮೂಲಕ ವ್ಯವಸಾಯ ಮಾತ್ರವಲ್ಲದೆ ಕುಡಿಯುವ ನೀರಿಗಾಗಿ ಪರಿತಪ್ಪಿಸುತ್ತಿರುವ ಬವಣೆಯನ್ನು ಶಾಶ್ವತವಾಗಿ ನೀಗುವ ಕಾಲ ಹತ್ತಿರವಾಗುತ್ತಿದೆ. ನೀರಾವರಿ ವಂಚಿತ ಹಳ್ಳಿಗಳಿಗೆ ಏತ ನೀರಾವರಿ ಮೂಲಕ ನೀರುಣಿಸುವ ಭಗೀರಥ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು. 

ಹೇಮಾವತಿ ನದಿಯ ನೀರನ್ನು ಮಾಗಡಿ ತಾಲ್ಲೂಕಿನ ಕೆರೆಗಳಿಗೆ ಪೂರೈಸುವ ಶ್ರೀರಂಗ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ಹಲವಾರು ಕೆರೆಗಳಿಗೆ ನೀರು ತುಂಬಿಸಿ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು. 

ಈ ಯೋಜನೆಗೆ ಸಂಬಂಧಿಸಿದಂತೆ ಪಂಪ್ ಹೌಸ್  ನಿರ್ಮಾಣ ಹಾಗೂ ಪೈಪ್ ಲೈನ್ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. 63 ಕಿ.ಮೀ. ಉದ್ದದ ಕೊಳವೆ ಮಾರ್ಗದಲ್ಲಿ 25 ಕಿ.ಮೀ. ಉದ್ದದ ಕೊಳವೆ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಕನಕಪುರ ವಿಧಾನ ಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ 155 ಕೋಟಿ ರು. ವೆಚ್ಚದಲ್ಲಿ ಕೈಗೊಂಡ ಏತ ನೀರಾವರಿ ಯೋಜನೆಯಿಂದ ಕನಕಪುರ ತಾಲ್ಲೂಕಿನ ಸಾತನೂರು ಮತ್ತು ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ 27 ಕೆರೆಗಳು ತುಂಬಲಿದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ತಿಳಿಸಿದರು.

ಇದರ ಜೊತೆಗೆ ಅರ್ಕಾವತಿ ನದಿ ಹಿನ್ನೀರನ್ನು ಬಳಸಿ ಸುಮಾರು 97 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆಯಲ್ಲಿ ಕನಕಪುರ ತಾಲೂಕಿನ ಗರಳಾಪುರ, ನಾರಾಯಣಪುರ ಇನ್ನಿತರ ಗ್ರಾಮಗಳ 24 ಕೆರೆಗಳು ತುಂಬಲಿವೆ.

 ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 146 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಯೋಜನೆಯಿಂದ ಹಾರೋಹಳ್ಳಿ ಹೋಬಳಿಯ 72 ಮತ್ತು ರಾಮನಗರದ ಬಿಡದಿ ಹೋಬಳಿಯ 75 ಕೆರೆಗಳು ತುಂಬಲಿವೆ ಎಂದು ತಿಳಿಸಿದರು. 

ಚನ್ನಪಟ್ಟಣದ ಇಗ್ಗಲೂರು ಬ್ಯಾರೇಜ್ ನ ಕೆಳಭಾಗದಲ್ಲಿ ಶಿಂಷಾ ನದಿಯಿಂದ ಹಲವಾರು ಕೆರೆಗಳಿಗೆ ಮೂರು ಹಂತಗಳಲ್ಲಿ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಮೊದಲ ಹಾಗೂ ಎರಡನೇ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. 

192 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆಯಿಂದ 20 ಕ್ಕೂ ಹೆಚ್ಚು ಕೆರೆಗಳು ತುಂಬಲಿದೆ. ಸುಮಾರು 115 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕನಕಪುರದ ಆದರ್ಶ ವಿದ್ಯಾಲಯದ ಬಿ.ಕೆ.ನಿವೇದಿತಾ, ಮಾಗಡಿಯ ಸರ್ಕಾರಿ ಪ್ರೌಢಶಾಲೆಯ ಕೆ.ಶೃತಿ , ಕುದೂರಿನ ಸರ್ಕಾರಿ ಜೂನಿಯರ್  ಕಾಲೇಜಿನ ಸಾದಿರ್  ಇರ್ಫಾನ್, ಚನ್ನಪಟ್ಟಣದ ಆದರ್ಶ ವಿದ್ಯಾಲಯದ ಎಂ.ಎಸ್ . ಅನನ್ಯ, ಡಿ.ಕರಣ್, ಎಸ್ . ಪ್ರಜ್ವಲ್ ಗೌಡ, ಚನ್ನಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಜೈನಾಬ್, ಮಾಗಡಿಯ ಸರ್ಕಾರಿ ಪ್ರೌಢ ಶಾಲೆಯ ಬಿ.ಪುನೀತ , ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಡಿ.ಆರ್ . ಸಿಂದೂ ಹಾಗೂ ವಿ. ಜ್ಯೋತಿ ಬಾಯಿ ಅವರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಏಪ್ರಿಲ್-2017ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು 10ನೇ ತರಗತಿಯಲ್ಲಿ 30ಕ್ಕಿಂತ ದಾಖಲಾತಿ ಇದ್ದು ಶೇ. 100 ರಷ್ಟು ಫಲಿತಾಂಶ ಪಡೆದಂತಹ ಅನುದಾನರಹಿತ ಶಾಲೆಗಳಿಗೆ ಅಭಿನಂದನಾ ಸ್ಮರಣಿಕೆಗಳನ್ನು ನೀಡಲಾಯಿತು. 

ಕನಕಪುರದ ಎಸ್.ಬಿ.ಎಂ. ಬ್ಲಾಸಮ್ ಪ್ರೌಢಶಾಲೆ, ರಾಮನಗರದ ವಾಸವಿ ವಿದ್ಯಾನಿಕೇತನ ಪ್ರೌಢ ಶಾಲೆ, ಮಾಗಡಿಯ ಕುದೂರಿನ ಗುರುಕುಲ ವಿದ್ಯಾಮಂದಿರ ಪ್ರೌಢಶಾಲೆ, ಮಾಗಡಿಯ ಮಾಗಡಿ ಕೆಂಪೇಗೌಡ ಪ್ರೌಢಶಾಲೆ, ಶ್ರೀ ಮಹಂತ್ವೇಶ್ವರ ಆಂಗ್ಲ ಪ್ರೌಢಶಾಲೆ, ಗುಡೇಮಾರನಹಳ್ಳಿಯ ಎಸ್.ಬಿ. ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ, ಬಾನಂದೂರಿನ ಬಿ.ಜಿ.ಎಸ್. ಆಂಗ್ಲ ಮಾಧ್ಯಮ ಶಾಲೆ, ಮಾಗಡಿಯ ಶರತ್ ಮೇಮೊರಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಬಿಡದಿಯ e್ಞÁನ ವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳು ಸ್ಮರಣಿಕೆಗಳನ್ನು ಪಡೆದುಕೊಂಡವು.

ಜೀವ ರP್ಷÀಕ ಪ್ರಶಸ್ತಿ : ಮುಖ್ಯ ಮಂತ್ರಿಗಳ ಸಾಂತ್ವಾನ ಹರೀಶ್ ಯೋಜನೆಯಡಿ ವಿ.ಗಿರೀಶ್ ಪ್ರಥಮ, ಸಿ.ನಾಗರಾಜು ದ್ವಿತೀಯ ಹಾಗೂ  ಸಿ.ಶ್ರೀಧರ ತೃತೀಯ ಸ್ಥಾನ ಪಡೆದಿದ್ದು, ಇವರಿಗೆ ಜೀವ ರP್ಷÀಕ ಪ್ರಶಸ್ತಿಯನ್ನು ವಿತರಿಸಲಾಯಿತು. 

ಸರ್ವೋತ್ತಮ ಸೇವಾ ಪ್ರಶಸ್ತಿ : 2017ನೇ ಸಾಲಿಗೆ ಅತ್ಯುನತ್ತ ಸೇವೆ ಸಲ್ಲಿಸಿದ ರಾಜ್ಯ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ನೀಡಲಾಗುವ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಅಪರ ಜಿಲ್ಲಾಧಿಕಾರಿ ಡಾ. ಆರ್ . ಪ್ರಶಾಂತ್, ಇಂಧನ ಇಲಾಖೆಯ ಬೆಸ್ಕಾಂನ ಕಾರ್ಯಪಾಲಯ ಅಭಿಯಂತರ ನರಸಿಂಹ ಮೂರ್ತಿ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ದೀಪಜಾ, ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡಪ್ಪ, ಗ್ರಾಮೀಣಾಭಿವರದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್ .ಮುನಿಮಾರೇಗೌಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಪ್ರಥಮ ದರ್ಜೆ ಸಹಾಯಕರಾದ ಬೈರಪ್ಪ ಹಾಗೂ ನಗರಸಭೆಯ ಪೌರ ಕಾರ್ಮಿಕ ಕಿಟ್ಟಿ ಅವರಿಗೆ ಪ್ರಧಾನ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯರಾದ  ಸಿ.ಎಂ. ಲಿಂಗಪ್ಪ, ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್ , ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್ , ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನಿಯಮಿತ ಅಧ್ಯಕ್ಷ  ಕೆ. ಶೇಷಾದ್ರಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ  ಸಿ.ಎನ್. ವೆಂಕಟೇಶ್, ನಗರಸಭೆ ಉಪಾಧ್ಯಕ್ಷೆ ಸಮೀನಾ ತಾಜ್, ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್ . ಲತಾ ಉಪಸ್ಥಿತರಿದ್ದರು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑