Tel: 7676775624 | Mail: info@yellowandred.in

Language: EN KAN

    Follow us :


ನ್ಯೂ ಎಕ್ಸ್‍ಪರ್ಟ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

Posted date: 28 Jan, 2018

Powered by:     Yellow and Red

ನ್ಯೂ ಎಕ್ಸ್‍ಪರ್ಟ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ರಾಮನಗರ : ಹದಿ ಹರೆಯದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ತೋರುವುದು ಪೋಷಕರು ಮತ್ತು ಶಿಕ್ಷಕರ ಕರ್ತವ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ರತ್ನಮ್ಮ ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನ್ಯೂ ಎಕ್ಸ್‍ಫರ್ಟ್ ಕಾಲೇಜಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಎಕ್ಸಫರ್ಟ್ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೊಸ ಕನಸುಗಳೊಂದಿಗೆ ಕಾಲೇಜು ಮೆಟ್ಟಿಲು ಹತ್ತುವ ವಿದ್ಯಾರ್ಥಿಗಳಿಗೆ ಹೊಸ ಪ್ರಪಂಚಕ್ಕೆ ಬಂದ ಅನುಭವವಿರುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸು ಒಳ್ಳೆಯದು ಕೆಟ್ಟದ್ದು ಎಂಬ ವಿಚಾರಗಳಿಗಿಂತ ಮನಸ್ಸು ಎಳೆದ ಕಡೆ ಹೋಗುತ್ತಾರೆ. ಇಂತಹ ಸಮಯದಲ್ಲಿ ಸರಿಯಾದ ಮಾರ್ಗದರ್ಶನವನ್ನು ಶಿಕ್ಷಕರು ಮತ್ತು ಪೋಷಕರು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳುವಂತೆ ಮಾಡಬೇಕಿದೆ ಎಂದು ಹೇಳಿದರು.

ಯಶಸ್ವಿಗೆ ಯಾವುದೆ ಅಡ್ಡ ದಾರಿಗಳಿಲ್ಲ. ಸತತ ಪ್ರಯತ್ನದಿಂದ ಮಾತ್ರ ಶಾಶ್ವತ ಯಶಸ್ಸು ಪಡೆಯಲು ಸಾಧ್ಯ. ಶೀಘ್ರದಲ್ಲಿಯೆ ಪಿಯು ಪರೀಕ್ಷೆಗಳು ಆರಂಭವಾಗಲಿದ್ದು, ಕನಿಷ್ಠ ಒಂದು ತಿಂಗಳು ವಿದ್ಯಾರ್ಥಿಗಳು, ಟಿವಿ. ಮೊಬೈಲ್‍ನಿಂದ ದೂರಬೇಕು. ಪೋಷಕರು ಪರೀಕ್ಷೆ ಮುಗಿಯುವವರೆಗೆ ಮಕ್ಕಳ ವಿದ್ಯಾಭ್ಯಾಸ ಮತ್ತು ಯೋಗ ಕ್ಷೇಮ ವಿಚಾರದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಪರೀಕ್ಷೆ ಇದೆ ಎಂದು ಆತಂಕಪಡುವ ಅವಶ್ಯಕತೆ ಇಲ್ಲ. ಕಲಿಕೆಯಲ್ಲಿ ಹಿಂದೆ ಉಳಿದಿದ್ದರೆ ಅಂತಹ ವಿಷಯಗಳ ಪರಿಣಿತ ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು. ಪೋಷಕರು ಮಕ್ಕಳ ಅಗತ್ಯಕ್ಕೆ ಬೇಕಾದ ಸಮಯವನ್ನು ಮೀಸಲಿಡಬೇಕು. ಕೇವಲ ಮಕ್ಕಳ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಎಂದರು. 

ಕಾಲೇಜಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯಿದ್ದಲ್ಲಿ ಪರೀಕ್ಷಾ ಪ್ರವೇಶ ಪತ್ರ ನೀಡಲು ಬರುವುದಿಲ್ಲ. ಪೋಷಕರು ವಿದ್ಯಾರ್ಥಿಗಳ ಮೇಲೆ ವಿಶ್ವಾಸವಿಟ್ಟು ಕಾಲೇಜಿಗೆ ಕಳುಹಿಸಿರುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಬರುವುದಿಲ್ಲ. ಅಂತಹವರು ಪರೀಕ್ಷಾ ಸಂದರ್ಭದಲ್ಲಿ ಪ್ರವೇಶ ಪತ್ರ ಲಭಿಸದೆ ಇದ್ದಾಗ ಪೋಷಕರಿಗೆ ತಿಳಿಯುತ್ತದೆ. ಇದಕ್ಕಿಂತ ಮೊದಲೆ ಪೋಷಕರು ನಿಯಮಿತವಾಗಿ ಕಾಲೇಜಿಗೆ ಬಂದು ಪ್ರಾಂಶುಪಾಲರ ಬಳಿ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆಯುತ್ತಿರಬೇಕು ಎಂದು ಕಿವಿ ಮಾತು ಹೇಳಿದರು.

ಪಿಯುಸಿ ಪಾಸಾದರೂ ಸಹ ಶೇ.80 ರಷ್ಟು ಮಕ್ಕಳು ಉನ್ನತ ಶಿಕ್ಷಣ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ಬಗ್ಗೆ ಪೋಷಕರು ಗಮನಹರಿಸಬೇಕು. ಕನಿಷ್ಠ ಪದವಿಯವರೆಗೆ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಬೇಕು ಎಂದರು.

ಪ್ರೊಪೆಸರ್ಸ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಡಾ.ಮಹೇಶ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಡಿಮೆ ಖರ್ಚಿನಲ್ಲಿ ದೊರಕಬೇಕು ಎಂಬ ದೃಷ್ಟಿಯಿಂದಲೆ ರಾಮನಗರದಲ್ಲಿ ಕಾಲೇಜು ಆರಂಭಿಸಲಾಗಿದೆ. ಇದುವರೆಗೆ ಇಲ್ಲಿಯ ಮಕ್ಕಳು ದೂರದ ಊರುಗಳಿಗೆ ಹೋಗುತ್ತಿದ್ದರು. ನುರಿತ ಮತ್ತು ಅನುಭವಿ ಶಿಕ್ಷಕರೆಲ್ಲಾ ಒಂದುಗೂಡಿ ಆರಂಭಿಸಿರುವ ಈ ಶಿಕ್ಷಣ ಸಂಸ್ಥೆ ಉತ್ತಮ ಫಲಿತಾಂಶ ತರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದರು.

ಅರ್ಥಶಾಸ್ತ್ರ ಉಪನ್ಯಾಸಕ ಜಿ.ಶಿವಣ್ಣ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕಾಗುತ್ತದೆ. ಇದಕ್ಕಾಗಿ ಪ್ರತಿದಿನ ದಿನಪತ್ರಿಕೆಗಳ ಕಡೆ ಕಣ್ಣಾಡಿಸಿ ಜಗತ್ತಿನ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದರು. 

ಕಾಲೇಜಿನ ಪ್ರಾಚಾರ್ಯ ಡಾ|| ಡಿ.ಆರ್. ರವಿಕುಮಾರ್, ಜಾತ್ಯಾತೀತ ಜನತಾದಳದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೆಹಬೂಬ್ ಖಾನ್, ನಗರಸಭಾ ಸದಸ್ಯೆ ಅಸೀನಾ ಬಾನು, ಎಸ್.ಟಿ.ಎನ್.ಕಾಂಪ್ಲೆಕ್ಷ್ ಮಾಲೀಕ ಎಸ್.ಟಿ. ನಂದೀಶ್  ಮಾತನಾಡಿದರು.

ರಾಜು ಮತ್ತು ಶಿವವೆಂಕಟಯ್ಯ ತಂಡದವರಿಂದ ಜನಪದ ಗೀತಗಾಯನ ಕಾರ್ಯಕ್ರಮ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. 

ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಕ್ರೀಡೆ, ಸಾಂಸ್ಕøತಿಕ, ಪಠ್ಯ ಕಾರ್ಯಕ್ರಮಗಳ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ಪ್ರಶಸ್ತಿಪತ್ರ ವಿತರಿಸಿದರು.

ಕನ್ನಡ ಪ್ರಾಧ್ಯಾಪಕ ಉಮಾಶಂಕರ್, ಸಂಸ್ಥೆಯ ನಿರ್ದೇಶಕರಾದ ಶಿವಕುಮಾರ್, ಉಪ ಪ್ರಾಚಾರ್ಯ ಕಿರಣ್ ಕುಮಾರ್, ಉಪನ್ಯಾಸಕರಾದ ಚಂದ್ರಶೇಖರ್, ಅರುಣ್‍ಕುಮಾರ್, ಪ್ರಶಾಂತ್, ಚೈತ್ರ, ರವಿಕುಮಾರ್, ವಿಭಾ, ಪವಿತ್ರ, ಹರ್ಷಿಯಾ ಭಾನು, ಸ್ವಾತಿ ಇದ್ದರು. 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑