Tel: 7676775624 | Mail: info@yellowandred.in

Language: EN KAN

    Follow us :


ಚಂದ್ರಗಿರಿದೊಡ್ಡಿ ಗ್ರಾಮದ ಗುಡ್ಡದ ಮೇಲೆ ಒಂದು ಪಾಳು ಬಂಗಲೆ

Posted date: 19 Feb, 2019

Powered by:     Yellow and Red

ಚಂದ್ರಗಿರಿದೊಡ್ಡಿ ಗ್ರಾಮದ ಗುಡ್ಡದ ಮೇಲೆ ಒಂದು ಪಾಳು ಬಂಗಲೆ

ರಾಮನಗರ ಚನ್ನಪಟ್ಟಣ ನಡುವಿನ ಕೆಂಗಲ್ ದೇವಾಲಯದ ಬಳಿ ಚಂದ್ರಗಿರಿದೊಡ್ಡಿ ಗ್ರಾಮದ ಗುಡ್ಡದ ಮೇಲೆ ಒಂದು ಪಾಳು ಬಂಗಲೆ ಇದೆ.

ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಂಗಲ್ ಗೆ ಬಂದಾಗ ವಿಶ್ರಮಿಸಲು ಕಟ್ಟಿದ ಬಂಗಲೆ.


ಈ ಬಂಗಲೆಯಲ್ಲಿ ಹಜಾರ, ಕೊಠಡಿ, ಊಟದ ಹಜಾರ, ಅಡುಗೆ ಮನೆ, ಸ್ನಾನದ ಮನೆ, ಕಕ್ಕಸು ಮನೆ ಮತ್ತು ಚಿಕ್ಕ ವರಾಂಡವನ್ನು ಹೊಂದಿದ್ದು ಈಗ ಸಂಪೂರ್ಣವಾಗಿ ಪಾಳು ಬಿದ್ದಿದೆ ಎನ್ನುವುದಕ್ಕಿಂತ ನಿರ್ಲಕ್ಷ್ಯ ಹಾಗೂ ಸ್ಥಳೀಯ ದುಷ್ಕರ್ಮಿಗಳು ಕಿಟಕಿ, ಬಾಗಿಲು ಹೊಸ್ತಿಲು ಸೇರಿದಂತೆ ಎಲ್ಲವನ್ನೂ ಕಿತ್ತುಕೊಂಡು ಹೋಗಿರುವುದರಿಂದ ಪಾಳು ಬಿದ್ದಿದೆ.


ಅಂದಾಜು ಒಂದು ಎಕರೆ ಹದಿನಾಲ್ಕು ಗುಂಟೆ ವಿಸ್ತೀರ್ಣ ಭೂಮಿ ಇದ್ದು ಕೆಂಗಲ್ ದೇವಸ್ಥಾನಕ್ಕೆ ಕೂಗಳತೆಯಲ್ಲಿದೆ, ಹಾಗೂ ಬೆಂಗಳೂರು ಮೈಸೂರು ಹೆದ್ದಾರಿಗೆ ಕಣ್ಣಳತೆ ದೂರದಲ್ಲಿದ್ದು ಪ್ರಶಾಂತವಾದ ವಾತಾವರಣವಿದೆ, ಕೆಂಪು ಬಣ್ಣದ (ಕೆಂಗಲ್ಲು) ಕಲ್ಲುಗಳಿಂ ಕಟ್ಟಡ ಕಟ್ಟಿದ್ದು ಸುಣ್ಣ ಬಳಿಯಲಾಗಿದೆ, ಬಂಗಲೆಯ ಹಿಂದೆ ಕಟ್ಟಿರುವ ಕೆಂಗಲ್ಲುಗಳ ತಡೆಗೋಡೆ ಕಣ್ಮನ ಸೆಳೆಯುತ್ತದೆ, ಅದರ ಹಿಂದೆಯೇ ಅದಕ್ಕೆ ಸಂಬಂಧಿಸಿದ ಅಥವಾ ಖಾಸಗಿಯವರದೋ ಒಂದು ಹೊಂಡವೂ ಇದೆ.


ಸುತ್ತಲೂ ಮೆಳೆ ಬೆಳೆದುಕೊಂಡಿದ್ದು ಹೋಗಲು ಸರಿಯಾದ ದಾರಿಯೂ ಇಲ್ಲ, ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿದರೆ ಕೆಂಗಲ್ ಹೆಸರಿನಲ್ಲಿ ಮತ್ತೊಂದು ಪ್ರವಾಸಿ ಮಂದಿರ, ಸೂಕ್ತ ಪ್ರವಾಸಿ ತಾಣ ಅಥವಾ ವ್ಯಾಪಾರಿ ದೃಷ್ಟಿಯಿಂದ ಸರ್ಕಾರವೇ ಹೋಟೆಲ್ ನಡೆಸುವುದರ ಮೂಲಕ ಬಂಗಲೆಗೆ ಹೊಸ ರೂಪ ನೀಡಿ ಅಭಿವೃದ್ಧಿಗೊಳಿಸಬಹುದು.


ಉತ್ತರನ ಪೌರುಷ .... ಮುಂದೆ ಎಂಬಂತಾಗದೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಲಿ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑