Tel: 7676775624 | Mail: info@yellowandred.in

Language: EN KAN

    Follow us :


ಐಟಿಐ ತರಬೇತಿ ಭವಿಷ್ಯದ ಬೆಳಕು ಜಯಮುದ್ದಪ್ಪ

Posted date: 20 Feb, 2019

Powered by:     Yellow and Red

ಐಟಿಐ ತರಬೇತಿ ಭವಿಷ್ಯದ ಬೆಳಕು ಜಯಮುದ್ದಪ್ಪ

ಕೈಗಾರಿಕಾ ತರಬೇತಿ ಪಡೆದ ಕಾಲೇಜಿನ ಮಕ್ಕಳು ಭವಿಷ್ಯದ ಜ್ಞಾನಿಗಳಾಗುವುದರಲ್ಲಿ ಅನುಮಾನವಿಲ್ಲ ಎಂದು ಒಕ್ಕಲಿಗರ ಸಾರ್ವಜನಿಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಜಯಮುದ್ದಪ್ಪ ತಿಳಿಸಿದರು, ಅವರು ಇಂದು ಶಾಲೆಯ ಆವರಣದಲ್ಲಿ ಐಟಿಐ ಕಾಲೇಜಿನ ಸ್ಕಿಲ್ ಡೇ ಯನ್ನು ಉದ್ಘಾಟಿಸಿ ಮಾತನಾಡಿದರು.


ಎಸ್ ಎಸ್ ಎಲ್ ಸಿ‌ ಯ ನಂತರ ಐಟಿಐ ತರಬೇತಿ ಗೆ ಸೇರಿಕೊಂಡರೆ ಪಠ್ಯ ದ ಜೊತೆಗೆ ಭವಿಷ್ಯವನ್ನು ಕಟ್ಟಿಕೊಳ್ಳಬಹುದು, ಇಂದು ಸಣ್ಣದಾಗಿ ತಯಾರಿಸಿದ ವಸ್ತು ಮುಂದೊಂದು ದಿನ ದೊಡ್ಡ ದೊಡ್ಡ ಉಪಕರಣಗಳನ್ನು ಕಂಡುಹಿಡಿಯಲು ಸಹಕಾರಿಯಾಗುತ್ತದೆ, ಈ ಸಲಕರಣೆಯನ್ನು ಮಾದರಿಯಾಗಿಟ್ಟುಕೊಂಡು ದೇಶದ ಭದ್ರತೆಗಾಗಿ, ರೈತರ ಅನುಕೂಲಕ್ಕಾಗಿ ಉಪಯೋಗವಾಗುವಂತ‌ ಉಪಕರಣಗಳನ್ನು ಕಂಡು ಹಿಡಿದು‌ ಶಾಲೆಗೆ, ಪೋಷಕರಿಗೆ ಮತ್ತು ದೇಶಕ್ಕೆ ಕೀರ್ತಿ ತರುವಂತಹ ಕೆಲಸವನ್ನು ಮಾಡಬೇಕು ಎಂದು ‌ಮಕ್ಕಳಿಗೆ ಉಪದೇಶಿಸಿದರು.


ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷರಾದ ಎನ್ ಎಸ್ ಗೌಡ ಮಾತನಾಡಿ ಈ ಸಂಸ್ಥೆಯಲ್ಲಿ ಓದಿದ ಅನೇಕರು ಇಂದು ದೇಶ ವಿದೇಶಗಳಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ, ಈ ಸಂಸ್ಥೆಯನ್ನು ಒಳ್ಳೆಯ ರೀತಿಯಲ್ಲಿ ಕಟ್ಟಿ ಬೆಳೆಸಿದ ಪರಿಣಾಮ ಇಂದು‌ ಬೃಹದಾಕಾರವಾಗಿ ಬೆಳೆದು‌ ನಿಂತಿದೆ, ಇಂದು‌ ಮಕ್ಕಳು ಅನೇಕ‌ ರೀತಿಯ ಉಪಕರಣಗಳನ್ನು‌ ಕಂಡುಹಿಡಿದು ಪ್ರದರ್ಶನ ಏರ್ಪಡಿಸಿರುವುದು ಸಂತಸವಾಗುತ್ತಿದೆ, ತಮ್ಮ ಪ್ರತಿಭೆಗೆ ನೀರೆರದ ಶಿಕ್ಷಕರು ಮತ್ತು ಪೋಷಕರಿಗೆ ಚಿರ ಋಣಿಯಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.


ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಕಳೆ ಕೀಳುವ‌, ಕಬ್ಬು ಸಿಗಿಯುವ, ಕಾಯಿ ಸುಲಿಯುವ, ವಿದ್ಯುತ್ ಉತ್ಪಾದನೆ, ರಾಕೆಟ್ ಇನ್ನಿತರ  ಉಪಕರಣಗಳನ್ನು ತಯಾರಿಸಿ ಪ್ರದರ್ಶಿಸಿ ಅದರ ಮಾಹಿತಿಯನ್ನು ನೀಡಿದರು.


ವೇದಿಕೆಯಲ್ಲಿ ಪತ್ರಕರ್ತ ಗೋ ರಾ ಶ್ರೀನಿವಾಸ, ಐಟಿಐ ಕಾಲೇಜಿನ ಪ್ರಾಂಶುಪಾಲ ರಮೇಶ್ ಸೇರಿದಂತೆ ಶಿಕ್ಷಕರು ಹಾಜರಿದ್ದರು.


ಸಂಸ್ಥೆಯ ನಿರ್ದೇಶಕ ಯೋಗೇಶ್ (ಪಾಪು) ನಗರಸಭಾ ಸದಸ್ಯ ಉಮಾಶಂಕರ್ ಹಾಗೂ ಅನೇಕ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರದರ್ಶನವನ್ನು ವೀಕ್ಷಿಸಿ ಮಾಹಿತಿ ಪಡೆದರು.



ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑