Tel: 7676775624 | Mail: info@yellowandred.in

Language: EN KAN

    Follow us :


ಭಾರತದಲ್ಲಿ ಬೌದ್ಧ ಪೂರ್ಣಿಮೆಯ ವಿಶೇಷತೆಗಳು

Posted date: 18 May, 2019

Powered by:     Yellow and Red

ಭಾರತದಲ್ಲಿ ಬೌದ್ಧ ಪೂರ್ಣಿಮೆಯ ವಿಶೇಷತೆಗಳು

ಬುದ್ಧ ಪೂರ್ಣಿಮೆ ಎಂಬುದು ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾಗಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಶುಕ್ಲ ಪಕ್ಷ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬುದ್ಧ ಪೂರ್ಣಿಮೆ ಬರುತ್ತದೆ. ಈ ವರ್ಷ ಮೇ ೧೮ ರ ಶನಿವಾರ ದಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.


ಗೌತಮ ಬುದ್ಧ (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ. ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವನೇ ಈ ಬುದ್ದ.



ಬುದ್ದ ಸಂದೇಶ: ಸಂಶೋಧನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಮನನ ಮಾಡಿಕೊಳ್ಳುವುದು. ಇದುವೇ ಬುದ್ಧ ಧರ್ಮ.


[ಶುಭಸಂಕಲ್ಪ: ಸುಳ್ಳು ಆಪಾದನೆ ಎಂಬ ಮುಳ್ಳು ಚುಚ್ಚಿದರೆ...]


ನೇಪಾಳದ ಶಾಲೆಗಳಲ್ಲಿ ಗುರು ಪೂರ್ಣಿಮೆಯನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸೋಮವಾರ ಹಲವೆಡೆ ಸಾಂಪ್ರದಾಯಿಕ ದಿರಿಸುಗಳಲ್ಲಿ ಬೌದ್ಧ ಮತ ಅವಲಂಬಿಗಳು ಸಾಂಬ್ರಾಣಿ, ಗಂಧ ಧೂಪಗಳನ್ನು ಹಚ್ಚಿ ಪ್ರಾರ್ಥಿಸುತ್ತಾರೆ. ಗುಡ್ಡಗಾಡು ಪ್ರದೇಶ, ಹಿಮಾಲಯದ ತಪ್ಪಲಿನ ಚೈತಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ವಿವಿಧೆಡೆ ಬುದ್ಧ ಜಯಂತಿ ಆಚರಣೆಯನ್ನು ಅವರದೇ ರೀತಿಯಲ್ಲಿ ಆಚರಿಸುತ್ತಾರೆ.



ಆಲೋಚನಾ ರಹಿತ ಶುದ್ಧ ಜಾಗೃತ ಸ್ಥಿತಿ ಧ್ಯಾನದ ಬಗ್ಗೆ ಬುದ್ಧ: ನಮ್ಮ ಆಲೋಚನೆ ಲಹರಿ ಸದಾ ಎಲ್ಲೆಡೆ ಹರಿಯುತ್ತಿರುತ್ತದೆ. ಮನಸ್ಸು ಚಂಚಲ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ. ಈ ಆಲೋಚನೆಗಳನ್ನು ತಡೆಹಿಡಿಯುವ ಕ್ರಮವೇ ಧ್ಯಾನ. ಸಂಪೂರ್ಣ ತಡೆ ಹಿಡಿಯಲ್ಪಟ್ಟ ಸ್ಥಿತಿಯೇ ಧ್ಯಾನಾವಸ್ಥೆ,  ಬುದ್ಧನ ಪ್ರಕಾರ ಧ್ಯಾನ ಎಂದರೆ 'ಆಲೋಚನಾ ರಹಿತ ಶುದ್ಧ ಜಾಗೃತ ಸ್ಥಿತಿ ಎಂದು ಜಗತ್ತಿಗೆ ತಿಳಿಸಿಕೊಟ್ಟವನು ಈ ಬುದ್ದ.


ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ

ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧ

ಗೌತಮ ಬುದ್ಧನ ಇನ್ನೊಂದು ಹೆಸರು -- ಸಿದ್ಧಾರ್ಥ.


ಬುದ್ದ ಕೇವಲ ಒಂದು ಜಾತಿಯ, ಒಂದು ಧರ್ಮದ, ಒಂದು ದೇಶದ ಕಲ್ಲಿನ ಮೂರ್ತಿಯಾಗದೇ ಇಡೀ‌ ಜಗತ್ತಿನ ಎಲ್ಲರ ಮನ ಮನಸ್ಸನ್ನು ಗೆದ್ದ ಅಪ್ರತಿಮ ಧ್ಯಾನಾಸಕ್ತ ಬುದ್ಧ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑