Tel: 7676775624 | Mail: info@yellowandred.in

Language: EN KAN

    Follow us :


ಸಾವಿತ್ರಿ ಜ್ಯೋತಿ ಬಾಫುಲೆ ಹೆಣ್ಣು ಮಕ್ಕಳ ದನಿಯಾದರೆ ಕುವೆಂಪು ಶೂದ್ರರ ದನಿಯಾಗಿದ್ದರು ಸುತರಾ

Posted date: 04 Jan, 2020

Powered by:     Yellow and Red

ಸಾವಿತ್ರಿ ಜ್ಯೋತಿ ಬಾಫುಲೆ ಹೆಣ್ಣು ಮಕ್ಕಳ ದನಿಯಾದರೆ ಕುವೆಂಪು ಶೂದ್ರರ ದನಿಯಾಗಿದ್ದರು ಸುತರಾ

ಚನ್ನಪಟ್ಟಣ: ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ದಲಿತರ, ದಮನಿತರ ದನಿಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿ ನಿಂತವರು ಸಾವಿತ್ರಿ ಜ್ಯೋತಿ ಬಾಫುಲೆಯವರು, ಅದೇ ರೀತಿ ಶೂದ್ರರು ಅದರಲ್ಲೂ ರೈತನೇ ಜೀವ ರಾಶಿಗಳ ಜೀವನಾಡಿ ಎಂದು ತಮ್ಮ ಸಾಹಿತ್ಯ ಗಳಿಂದ ನಿರೂಪಿಸಿ ಜನಮಾನಸದಲ್ಲಿ ಅಜರಾಮರವಾಗಿ ಉಳಿದರು ಎಂದು ಬಯಲುಸೀಮೆ ಪತ್ರಿಕೆಯ ಸಂಪಾದಕ ಸು ತ ರಾಮೇಗೌಡ ತಿಳಿಸಿದರು.

ಅವರು ನಗರದ ಕೋಟೆ ಯಲ್ಲಿರುವ ರಾಘವೇಂದ್ರ ಐಟಿಐ ಕಾಲೇಜಿನಲ್ಲಿ ಆರ್ಕಿಟೆಕ್ಟ್ ಆಫ್ ಕಾನ್ಸಿಟ್ಯೂಷನ್ ಡಾ ಬಿ ಆರ್ ಅಂಬೇಡ್ಕರ್, ಕಲ್ಚರಲ್ ಸೋಷಿಯಲ್ ಎಜುಕೇಷನ್ ಟ್ರಸ್ಟ್ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಹಾತ್ಮ ಜ್ಯೋತಿ ಬಾಫುಲೆ ಹಾಗೂ ರಾಷ್ಟ್ರಕವಿ ಕುವೆಂಪು ಜನ್ಮದಿನದ ಪ್ರಯುಕ್ತ  ಜಾನಪದ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಹೆಣ್ಣು ಮಕ್ಕಳಿಗೆ ವಿದ್ಯೆಯೆ ಬೇಡ ಎನ್ನುತ್ತಿದ್ದ ಆ ಕಾಲದಲ್ಲಯೇ ಸಾವಿತ್ರಿ ಜ್ಯೋತಿ ಬಾಫುಲೆಯವರು ಶಾಲೆಯ ಮೆಟ್ಟಿಲೇರಿ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಹೆಣ್ಣು ಮಕ್ಕಳಿಗೆ ಮಾದರಿಯಾದರೆ ಶೂದ್ರನಿಗೇನು ಬರುತ್ತದೆ ಎಂದು ಹೀಯಾಳಿಸುತ್ತಿದ್ದ ಮೇಲ್ವರ್ಗದ ಜನರಿಗೆ ತಮ್ಮ ಕಾವ್ಯಗಳ ಮೂಲಕ ಶೂದ್ರ ಮತ್ತು ರೈತನೇ ಎಲ್ಲಾ ವರ್ಗದ ಜನಾಂಗದವರಿಗೆ ಮತ್ತು ಸಕಲ ಜೀವರಾಶಿಗಳಿಗೆ ಅನ್ನದಾತ ಎಂದು ನಿರೂಪಿಸಿಕೊಟ್ಟರು. ಕುವೆಂಪುರವರಿಗೂ ಮತ್ತು ಚನ್ನಪಟ್ಟಣಕ್ಕೂ ಅವಿನಾಭಾವ ಸಂಭಂಧವಿತ್ತು, ಅವರು ವಿದ್ಯಾರ್ಥಿಯಾಗಿದ್ದಾಗಿಂದ ಕುಲಪತಿಗಳಾಗುವ ತನಕವೂ ಆಗಾಗ ಬಂದು ಹೋಗುತ್ತಿದ್ದರು. ಅವರ ಎಲ್ಲಾ ಕೃತಿಗಳನ್ನು ಚನ್ನಪಟ್ಟಣ ತಾಲ್ಲೂಕಿನ ಮಂದಿ ಹೆಚ್ಚು ಹೊತ್ತಿ ಮೆರೆಸಿದ್ದಾರೆ, ಇದೆಲ್ಲವನ್ನೂ ಅವರು ತಮ್ಮ ನೆನಪಿನದೋಣಿ ಯಲ್ಲಿ ಉಲ್ಲೇಖಿಸಿದ್ದಾರೆ ಎಂದು ನೆನಪಿನ ಬುತ್ತಿಯನ್ನು ತೆರೆದಿಟ್ಟರು.


ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಬಿ ಚಲುವರಾಜು ಮಾತನಾಡಿ ಸಾವಿತ್ರಿ ಬಾಫುಲೆಯವರು ಹಾಕಿ ಕೊಟ್ಟ ಬುನಾದಿ ಯಿಂದಲೇ ಇಂದು ಅನೇಕ ಮಹಿಳೆಯರು ಉನ್ನತ ಸ್ಥಾನದಲ್ಲಿರಲು ಸಾಧ್ಯವಾಯಿತು, ಹಾಗೆಯೇ ಉಳುವ ಯೋಗಿಯ ನೋಡಲ್ಲಿ ಎಂಬ ಕುವೆಂಪು ಅವರ ಕವಿವಾಣಿಯೇ ರೈತನ ದನಿಯಾಗಿ ಹೊರಹೊಮ್ಮಿತು ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾನಪದ ಕಲಾವಿದೆ ಲಕ್ಷ್ಮಿ ಗೋ ರಾ ಶ್ರೀನಿವಾಸ ರವರು ಮಾತನಾಡಿ ಹೆಣ್ಣು ತಾಯಿಯಾಗಿ, ಅಕ್ಕತಂಗಿಯರಾಗಿ, ಮಡದಿಯಾಗಿ ಹಾಗೂ ಪ್ರೇಯಸಿಯಾಗಿ ಬೇಕು. ಆದರೆ ಮಗಳಾಗಿ ಬೇಡ ಎಂಬ ಧೋರಣೆ ಇಂದಿನ ಕೆಲವರಲ್ಲಿದೆ. ಇದನ್ನು ತಮ್ಮ ಕೊಳಕು ಮನಸ್ಸಿನಿಂದ ಹೊರ ದಬ್ಬಬೇಕು. ಹಾಗೆ ಇಂದಿನ ಪೀಳಿಗೆಯ ಕೆಲ ಯುವಕರು ಹೆಣ್ಣಿನ ಮೇಲೆ ನಡೆಸುವ ದೌರ್ಜನ್ಯವನ್ನು ಹತ್ತಿಕ್ಕಬೇಕು, ಬೇರೆಯವರ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಮುನ್ನ ತಮ್ಮ ಕುಟುಂಬದ ಹೆಣ್ಣು ಮಕ್ಕಳನ್ನು ನೆನೆದರೆ ಬಹುಶಃ ಇಂತಹ ಕೃತ್ಯಕ್ಕೆ ಅವರು ಕೈ ಹಾಕಲಾರರು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಕಾರ್ಯಕ್ರಮದಲ್ಲಿ ಸಿದ್ದರಾಜು ರಾಂಪುರ, ಮಂಜೇಶಬಾಬು, ಶಿವಣ್ಣ ಮತ್ತಿತರ ಕಲಾವಿದರು ಗೀತಗಾಯನ ನಡೆಸಿಕೊಟ್ಟರು.

ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ, ಕಾಲೇಜಿನ ಪ್ರಾಂಶುಪಾಲ ಸುಜಯಸಿಂಹ‌, ಟ್ರಸ್ಟ್ ನ ಅಧ್ಯಕ್ಷ ಬಸವರಾಜ ಗುರುವಿನಪುರ ಉಪಸ್ಥಿತರಿದ್ದರು. ಮಹೇಶ್ ಮೌರ್ಯ ನಿರೂಪಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in education »

ಎಸ್ ಎಸ್ ಎಲ್ ಸಿ ಯಲ್ಲಿ ರಾಮನಗರ ಎಂಟನೇ ಸ್ಥಾನ, ಚನ್ನಪಟ್ಟಣ ಮೊದಲನೇ ಸ್ಥಾನ
ಎಸ್ ಎಸ್ ಎಲ್ ಸಿ ಯಲ್ಲಿ ರಾಮನಗರ ಎಂಟನೇ ಸ್ಥಾನ, ಚನ್ನಪಟ್ಟಣ ಮೊದಲನೇ ಸ್ಥಾನ

ರಾಮನಗರ:ಆ/10/20/ಸೋಮವರ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ನೆನ್ನೆ ಪ್ರಕಟವಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿ

ರಾಜ್ಯ ಮತ್ತು ತಾಲೂಕಿಗೆ ಟಾಪರ್ ಚನ್ನಪಟ್ಟಣ ತಾಲ್ಲೂಕಿನ ವಿದ್ಯಾರ್ಥಿನಿಯರು
ರಾಜ್ಯ ಮತ್ತು ತಾಲೂಕಿಗೆ ಟಾಪರ್ ಚನ್ನಪಟ್ಟಣ ತಾಲ್ಲೂಕಿನ ವಿದ್ಯಾರ್ಥಿನಿಯರು

ಚನ್ನಪಟ್ಟಣ:ಜು/೧೫/೨೦/ಬುಧವಾರ. ನಿನ್ನೆ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು,  ತಾಲೂಕಿನ ವಿದ್ಯಾರ್ಥಿನಿ ಬೃಂದಾ.ಜೆ.ಎನ್ ವಾಣಿಜ್ಯ

ಪಿಯುಸಿ ಫಲಿತಾಂಶ; ಉಕ ಜಿಲ್ಲೆ ಪ್ರಥಮ, ವಿಜಯಪುರ ಕೊನೆಯ ಸ್ಥಾನ. ೨೫ ನೇ ಸ್ಥಾನಕ್ಕೆ ಕುಸಿದ ರಾಮನಗರ
ಪಿಯುಸಿ ಫಲಿತಾಂಶ; ಉಕ ಜಿಲ್ಲೆ ಪ್ರಥಮ, ವಿಜಯಪುರ ಕೊನೆಯ ಸ್ಥಾನ. ೨೫ ನೇ ಸ್ಥಾನಕ್ಕೆ ಕುಸಿದ ರಾಮನಗರ

ಬೆಂಗಳೂರು:ಜು/೧೪/೨೦/ಮಂಗಳವಾರ. ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.೬೧.೮೦ ಫಲಿತಾಂಶ ಬಂದಿದೆ. ಇಂದು ಬೆಳಗ್ಗೆ ೧೧.

ಖಾಸಗಿ ಶಾಲಾ ಶಿಕ್ಷಕರಿಂದ ಎಸ್ಎಸ್ಎಲ್ ಸಿ ಮೌಲ್ಯಮಾಪನ ‌ಕಡ್ಡಾಯಗೊಳಿಸದಿರಲು ಜಿಲ್ಲಾಧಿಕಾರಿ ಗೆ ಮನವಿ
ಖಾಸಗಿ ಶಾಲಾ ಶಿಕ್ಷಕರಿಂದ ಎಸ್ಎಸ್ಎಲ್ ಸಿ ಮೌಲ್ಯಮಾಪನ ‌ಕಡ್ಡಾಯಗೊಳಿಸದಿರಲು ಜಿಲ್ಲಾಧಿಕಾರಿ ಗೆ ಮನವಿ

ರಾಮನಗರ:ಜು/೦೮/೨೦/ಬುಧವಾರ. ಇಂದು ರಾಮನಗರ ಜಿಲ್ಲಾ ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟದಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಮ

ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್
ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್

ರಾಮನಗರ:ಜು/೦೧/೨೦/ಬುಧವಾರ. ರಾಮನಗರ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು  ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು

ಕೊರೊನಾ ಎಫೆಕ್ಟ್; ಮಾಹೆ ಶುಲ್ಕ ಹೊರತುಪಡಿಸಿ ಬೇರೆ ಶುಲ್ಕ ಪಡೆಯಲ್ಲ. ಬಾಲು ಶಾಲೆಯ ವೆಂಕಟ ಸುಬ್ಬಯ್ಯ ಚೆಟ್ಟಿ
ಕೊರೊನಾ ಎಫೆಕ್ಟ್; ಮಾಹೆ ಶುಲ್ಕ ಹೊರತುಪಡಿಸಿ ಬೇರೆ ಶುಲ್ಕ ಪಡೆಯಲ್ಲ. ಬಾಲು ಶಾಲೆಯ ವೆಂಕಟ ಸುಬ್ಬಯ್ಯ ಚೆಟ್ಟಿ

ಚನ್ನಪಟ್ಟಣ:ಮೇ/೨೩/೨೦/ಶನಿವಾರ. ನನಗೆ ನಾಳೆ (ಮೇ ೨೪ ಭಾನುವಾರ) ಅರವತ್ತು ವರ್ಷ ತುಂಬುತ್ತದೆ. ನನಗೆ ಇಷ್ಟು ವಯಸ್ಸಾಯಿತು, ಆದರೆ ಹಿಂದುರಿಗಿ ನೋಡಿದಾಗ ಸಾಧನ

ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ರಾಮನಗರ:ಮೇ/೨೨/೨೦/ಶುಕ್ರವಾರ. ಸ್ನಾತಕೋತ್ತರ (ವಾರ್ಷಿಕ/ಸೆಮಿಸ್ಟರ್) ಪದವಿಗಳಾದ ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಎಡ್, ಎಂ.ಲಿಬ್.ಐ.ಎಸ್ಸಿ, ಎಂ.ಎಸ್ಸಿ,

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಹುಮಾನಕ್ಕೆ ಅರ್ಜಿ ಆಹ್ವಾನ
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಹುಮಾನಕ್ಕೆ ಅರ್ಜಿ ಆಹ್ವಾನ

ರಾಮನಗರ:ಮೇ/೧೧/೨೦/ಸೋಮವಾರ.ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನವರಿ ೨೦೧೯ ರಿಂದ ಡಿಸೆಂಬರ್ ೨೦೧೯ ರವರೆಗೆ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ

ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ : ಅವಧಿ ವಿಸ್ತರಣೆ
ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ : ಅವಧಿ ವಿಸ್ತರಣೆ

ರಾಮನಗರ:ಮೇ/೧೧/೨೦/ಸೋಮವಾರ. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ೨೦೧೯ ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹ

ಸುವಿದ್ಯಾ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟ
ಸುವಿದ್ಯಾ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟ

ಚನ್ನಪಟ್ಟಣ:ಮೇ /೦೫/೩೦/ಮಂಗಳವಾರ. ಕರ್ನಾಟಕದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವು ಇಂದು ಪ್ರಕಟವಾಗಿದೆ. ಕರ್ನಾಟಕದಾದ್ಯಂತ ಲಾಕ

Top Stories »  


Top ↑