Tel: 7676775624 | Mail: info@yellowandred.in

Language: EN KAN

    Follow us :


ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಸಮೀಕ್ಷೆವೇಳೆ ಅಪೌಷ್ಠಿಕತೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಸಲಹೆ - ಡಾ. ಶಶಿಕಲಾ

Posted date: 25 May, 2023

Powered by:     Yellow and Red

ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಸಮೀಕ್ಷೆವೇಳೆ ಅಪೌಷ್ಠಿಕತೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಸಲಹೆ - ಡಾ. ಶಶಿಕಲಾ

ರಾಮನಗರ, ಮೇ 2: ಅಪೌಷ್ಠಿಕತೆ ಮುಖ್ಯವಾದ ಆರೋಗ್ಯ ಸಮಸ್ಯೆಯಾಗಿದ್ದು. ಅಪೌಷ್ಠಿಕತೆ ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ಅಪೌಷ್ಠಿಕತೆ ನಿವಾರಿಸಲು ತಾಯಿ ಹುಟ್ಟಿದ ಅರ್ಥ ಗಂಟೆಯೊಳಗೆ ಎದೆ ಹಾಲು ನೀಡಬೇಕು. 6 ತಿಂಗಳವರೆಗೆ ಎದೆ ಹಾಲು ಮಾತ್ರ ಕುಡಿಸಬೇಕು. ಜೇನು ತುಪ್ಪ, ಸಕ್ಕರೆ ನೀರು, ಬಾಟಲ್ ಹಾಲು ಕೊಡಬಾರದು, 6 ತಿಂಗಳ ನಂತರ ಎದೆ ಹಾಲಿನ ಜೊತೆಗೆ ಪೂರಕ ಆಹಾರ ನೀಡಬೇಕು. ಕನಿಷ್ಠ 2 ವರ್ಷದವರೆಗೆ ಎದೆ ಹಾಲು ನೀಡುವುದರಿಂದ ಮಗು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಾಲ್ಲೂಕು ಅರೋಗ್ಯಾಧಿಕಾರಿ ಡಾ. ಶಶಿಕಲಾ ಅವರು ತಿಳಿಸಿದರು.


ಅವರು ಇಂದು ರಾಮನಗರ ತಾಲ್ಲೂಕಿನ ತೆಂಗಿನಕಲ್ಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಬೆಂಗಳೂರು ಹೆಚ್.ಎಸ್.ಆರ್.ಲೇ-ಔಟ್‌ನಲ್ಲಿರುವ ದಿ-ಎಕ್ಸ್ಫರ್ಟ್ ವಿಜ್ಞಾನ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕ ಎನ್.ಎಸ್.ಎಸ್ ಶಿಬಿರವನ್ನು ಆಯೋಜಿಸಿದ್ದು ಈ ಶಿಬಿರದಲ್ಲಿ ಅಪೌಷ್ಠಿಕತೆ ಮಕ್ಕಳ ಪತ್ತೆ ಹಾಗೂ ಚಿಕಿತ್ಸೆ ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಎನ್.ಎಸ್.ಎಸ್. ಶಿಬಿರಾರ್ಥಿಗಳಾದ ತಾವುಗಳು ಮನೆಗಳಿಗೆ ಭೇಟಿಮಾಡುವ ಸಂದರ್ಭದಲ್ಲಿ 0-2, 3-5, 6-14 ವರ್ಷದೊಳಗಿನ ಮಕ್ಕಳ ಸಮೀಕ್ಷೆ ಮಾಡಿ ಅವರಲ್ಲಿ ಎತ್ತರಕ್ಕೆ ತಕ್ಕಂತೆ ತೂಕ, ವಯಸ್ಸಿಗೆ ತಕ್ಕಂತೆ ಎತ್ತರ ಹಾಗೂ ಸಾರ್ವತ್ರಿಕ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.


ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಈಗಾಗಲೆ ಎನ್.ಆರ್.ಸಿ. ಕೇಂದ್ರಗಳಲ್ಲಿ 14 ದಿನಗಳ ವರೆಗೆ ಪೌಷ್ಠಿಕ ಆಹಾರ ಮತ್ತು ಚಿಕಿತ್ಸೆ ಸೌಲಭ್ಯ ಹಾಗೂ ಮಗುವನ್ನು ನೋಡಿಕೊಳ್ಳುವ ಪೋಷಕರಿಗೆ ಪ್ರತಿದಿನಕ್ಕೆ ಕೂಲಿ ರೂ. 259 ರಂತೆ ನೀಡಲಾಗುತ್ತಿದ್ದು, ಮಗುವನ್ನು ಅಪೌಷ್ಠಿಕತೆಯಿಂದ ರಕ್ಷಣೆ ಮಾಡಲಾಗುತ್ತಿದೆ. 5-ವರ್ಷದೊಳಗಿನ ಮಕ್ಕಳಲ್ಲಿ ನಿಮೋನಿಯಾ, ಅತಿಸಾರ ಬೇದಿ, ಇನ್ನಿತರೆ ಕಾಯಿಲೆಗಳು ಕಂಡುಬರುತ್ತಿದ್ದು ಇವುಗಳನ್ನು ನಿಯಂತ್ರಿಸಲು ನಿರಂತರವಾಗಿ ಇಲಾಖೆ ವತಿಯಿಂದ ಸೇವೆ ನೀಡಲಾಗುತ್ತಿದ್ದು. ತಾವುಗಳು ಮನೆಗಳಿಗೆ ಭೇಟಿ ವೇಳೆ ಪೋಷಕರಿಗೆ ಅಪೌಷ್ಠಿಕತೆ ನಿಯಂತ್ರಿಸಲು ಅನುಸರಿಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.  


ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಅವರು ಆರೋಗ್ಯವಂತ ಮಗು ಪಡೆಯಬೇಕಾದರೆ ಗರ್ಭಧರಿಸುವ ಮೊದಲ ಹಂತದಲ್ಲಿಯೇ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಹಾಗೂ ಗರ್ಭಿಣಿಯ ಸಂದರ್ಭದಲ್ಲಿ ಸ್ಥಳೀಯವಾಗಿ ದೊರೆಯುವ ಆಹಾರ ಉತ್ಪನ್ನಗಳಾದ ಹಸಿರು ಸೊಪ್ಪು ತರಕಾರಿ, ಕಾಳು, ಹಾಲು, ಮೊಟ್ಟೆ, ಮಾಂಸ ಇತ್ಯಾದಿಗಳನ್ನು  ಸಮರ್ಪಕವಾಗಿ ಸೇವಿಸಬೇಕು ಹಾಗೂ ಮಕ್ಕಳ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಿದರು. 


ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರುಕ್ಮಿಣಿ ಅವರು ಮಾತನಾಡಿ ಇಲಾಖೆ ವತಿಯಿಂದ ತಾಯಿ ಕಾರ್ಡ್ ವಿತರಿಸಿ ನಿಯಮಾನುಸಾರ ಗರ್ಭಿಣಿ ತಪಾಸಣೆ, ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು. ರಕ್ತ ಹೀನತೆ ನಿಯಂತ್ರಿಸಲು ಕಬ್ಬಿಣಾಂಶದ ಮಾತ್ರೆ ನೀಡಲಾಗುತ್ತದೆ. ಮಕ್ಕಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಕಾಲ-ಕಾಲಕ್ಕೆ ಲಸಿಕೆ ನೀಡಲಾಗುತ್ತಿದೆ. ಬಾಣಂತಿಯರಲ್ಲಿ ಅಪೌಷ್ಠಿಕತೆ ನಿವಾರಿಸಲು ಕಬ್ಬಿಣಾಂಶದ ಮಾತ್ರೆ ನೀಡಲಾಗುತ್ತಿದೆ. ಶಾಲಾ ಮಕ್ಕಳಲ್ಲಿ ರಕ್ತ ಹೀನತೆ ನಿವಾರಿಸಲು ಕಬ್ಬಿಣಾಂಶದ ಮಾತ್ರೆಗಳನ್ನು ನೀಡಲಾಗುತ್ತಿದ್ದು. ತಾವುಗಳು ಮನೆಗಳಿಗೆ ಭೇಟಿನೀಡುವ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಸೇವೆ ಪಡೆದುಕೊಳ್ಳುವಂತೆ ತಿಳಿಸಬೇಕು ಎಂದರು.


ವೈದ್ಯಾಧಿಕಾರಿ ಡಾ. ಸುನಿಲ್, ಎನ್.ಎಸ್.ಎಸ್. ಅಧಿಕಾರಿ ಪ್ರೊಫೆಸರ್ ಮರಿಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿ ರಾಜೇಶ್, ಆಶಾ ಕಾರ್ಯಕರ್ತೆ ಭಾಗ್ಯಮ್ಮ, ಎನ್.ಎಸ್.ಎಸ್. ಶಿಬಿರಾರ್ಥಿಗಳು ಹಾಗೂ ಗ್ರಾಮದ ಸಾರ್ವಜನಿಕರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in education »

ಜವಾಹರ್ ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಹಾಕುವಂತೆ ಬಿಇಓ ಮರಿಗೌಡ ಮನವಿ
ಜವಾಹರ್ ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಹಾಕುವಂತೆ ಬಿಇಓ ಮರಿಗೌಡ ಮನವಿ

ಚನ್ನಪಟ್ಟಣ : ಕನಕಪುರ ತಾಲೂಕಿನ ಶಿವನಹಳ್ಳಿ ಬಳಿ ಇರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ, ನವೋದಯ ವಿದ್ಯಾಲಯ ಸ

ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ

ರಾಮನಗರ: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ರಾಮನಗರ ಜಿಲ್ಲೆಯ ವಸತಿ ಶಾಲೆ, ಕಾಲೇಜು ಹಾಗೂ ಮೌಲಾನಾ ಆಜ

ಅನಧಿಕೃತ ಶಾಲೆಗಳಿಗೆ ದಾಖಲಾತಿ ಮಾಡಿಸಬೇಡಿ: ಕ್ಷೇತ್ರ ಶಿಕ್ಷಣಾಧಿಕಾರಿ
ಅನಧಿಕೃತ ಶಾಲೆಗಳಿಗೆ ದಾಖಲಾತಿ ಮಾಡಿಸಬೇಡಿ: ಕ್ಷೇತ್ರ ಶಿಕ್ಷಣಾಧಿಕಾರಿ

ರಾಮನಗರ, ಜೂ. 28:   ಅನುದಾನ ರಹಿತ ಶಾಲೆಗಳು 2023-24ನೇ ಸಾಲಿನಲ್ಲಿ ಆಡಳಿತ ಮಂಡಳಿಯವರು ಇಲಾಖೆಯ ಅನುಮತಿ ಪಡೆಯದೇ ಶಾಲೆಗಳನ್ನು ನಡೆಸುತ್ತ

ಪಜಾ ಮತ್ತು ಪಪಂ ದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ರಾಮನಗರ, ಜೂ. 17:    ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರ

ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ವತಿಯಿಂದ ಇರುಳಿಗರದೊಡ್ಡಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಸಾಮಗ್ರಿ ವಿತರಣೆ
ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ವತಿಯಿಂದ ಇರುಳಿಗರದೊಡ್ಡಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಸಾಮಗ್ರಿ ವಿತರಣೆ

ಚನ್ನಪಟ್ಟಣ:  ದಾನಿಗಳು ನೀಡುವ ಪಠ್ಯ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ಶಾಲಾ ಮಕ್ಕಳು ವಿಶೇಷವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉನ್ನತ

ಜವಳಿ ಮತ್ತು ಕೈಮಗ್ಗ ಡಿಪ್ಲೊಮಾ ಗೆ ಅರ್ಜಿ ಆಹ್ವಾನ
ಜವಳಿ ಮತ್ತು ಕೈಮಗ್ಗ ಡಿಪ್ಲೊಮಾ ಗೆ ಅರ್ಜಿ ಆಹ್ವಾನ

ರಾಮನಗರ, ಜೂ. 09:    ರಾಮನಗರ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2023-24ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು

ಎಂಬಿಬಿಎಸ್ ನಲ್ಲಿ ಗೋಲ್ಡ್ ಮೆಡಲ್, ಪಿಜಿ ಯಲ್ಲಿ ದೇಶಕ್ಕೆ ಎರಡು ಸಾವಿರ ರ್ಯಾಂಕ್ ಪಡೆದ ಅಪ್ಪಟ ಗ್ರಾಮೀಣ ಪ್ರತಿಭೆ ಚಕ್ಕಲೂರು ಗ್ರಾಮದ ಡಾ ಅನುಶ್ರೀ
ಎಂಬಿಬಿಎಸ್ ನಲ್ಲಿ ಗೋಲ್ಡ್ ಮೆಡಲ್, ಪಿಜಿ ಯಲ್ಲಿ ದೇಶಕ್ಕೆ ಎರಡು ಸಾವಿರ ರ್ಯಾಂಕ್ ಪಡೆದ ಅಪ್ಪಟ ಗ್ರಾಮೀಣ ಪ್ರತಿಭೆ ಚಕ್ಕಲೂರು ಗ್ರಾಮದ ಡಾ ಅನುಶ್ರೀ

ಚನ್ನಪಟ್ಟಣ: ತಾಲ್ಲೂಕಿನ ಚಕ್ಕಲೂರು ಗ್ರಾಮದಿಂದ ಚನ್ನಪಟ್ಟಣ ನಗರಕ್ಕೆ ಪ್ರತಿದಿನ ಅಂದರೆ ಹದಿನಾಲ್ಕು ವರ್ಷಗಳ ಕಾಲ ಇಪ್ಪತ್ನಾಲ್ಕು ಕಿಲೋಮೀಟರ್ ಪ್ರಯಾಣ

ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಸಮೀಕ್ಷೆವೇಳೆ ಅಪೌಷ್ಠಿಕತೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಸಲಹೆ - ಡಾ. ಶಶಿಕಲಾ
ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಸಮೀಕ್ಷೆವೇಳೆ ಅಪೌಷ್ಠಿಕತೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಸಲಹೆ - ಡಾ. ಶಶಿಕಲಾ

ರಾಮನಗರ, ಮೇ 2: ಅಪೌಷ್ಠಿಕತೆ ಮುಖ್ಯವಾದ ಆರೋಗ್ಯ ಸಮಸ್ಯೆಯಾಗಿದ್ದು. ಅಪೌಷ್ಠಿಕತೆ ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ಅಪೌಷ್ಠಿಕತೆ ನಿವಾರಿಸಲು ತಾಯಿ

ಶಿಸ್ತು ಮತ್ತು ಶ್ರದ್ಧೆ ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಸಾಹಿತಿ ವಿಜಯ್ ರಾಂಪುರ
ಶಿಸ್ತು ಮತ್ತು ಶ್ರದ್ಧೆ ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಸಾಹಿತಿ ವಿಜಯ್ ರಾಂಪುರ

ಚನ್ನಪಟ್ಟಣ :ಪ್ರತಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅವಧಿಯಲ್ಲಿ ಶಿಸ್ತು ಮತ್ತು ಶ್ರದ್ಧೆಯ ಜೊತೆಗೆ ಸಮಯ ಪಾಲನೆ ರೂಢಿಸಿಕೊಂಡಲ್ಲಿ, ವಿದ್ಯಾರ್ಥಿಗಳು ತಮ್ಮ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಕ್ರಮ: ಹೆಚ್ಚಿನ ವಿಚಾರಣೆಗಾಗಿ ಮೂವರು ಪೊಲೀಸರ ವಶಕ್ಕೆ: ಏಳು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಕ್ರಮ: ಹೆಚ್ಚಿನ ವಿಚಾರಣೆಗಾಗಿ ಮೂವರು ಪೊಲೀಸರ ವಶಕ್ಕೆ: ಏಳು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ರಾಮನಗರ: 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಹತ್ತು ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಇವರಲ್ಲಿ ಮೂವರನ್ನು‌ ಹೆಚ್ಚಿನ ವಿಚಾರಣೆಗಾ

Top Stories »  


Top ↑