Tel: 7676775624 | Mail: info@yellowandred.in

Language: EN KAN

    Follow us :

ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ವತಿಯಿಂದ ಇರುಳಿಗರದೊಡ್ಡಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಸಾಮಗ್ರಿ ವಿತರಣೆ

Posted date: 12 Jun, 2023

Powered by:     Yellow and Red

ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ವತಿಯಿಂದ ಇರುಳಿಗರದೊಡ್ಡಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಸಾಮಗ್ರಿ ವಿತರಣೆ

ಚನ್ನಪಟ್ಟಣ:  ದಾನಿಗಳು ನೀಡುವ ಪಠ್ಯ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ಶಾಲಾ ಮಕ್ಕಳು ವಿಶೇಷವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಸಿಂ.ಲಿಂ.ನಾಗರಾಜು ಪ್ರತಿಷ್ಠಾನದ ಎಸ್.ಎನ್.ಆದರ್ಶ ಕುಮಾರ್ ಕಿವಿಮಾತು ಹೇಳಿದರು. ಅವರು

ತಾಲ್ಲೂಕಿನ ಗಡಿಗ್ರಾಮ ಇರುಳಿಗರದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನಲವತ್ತೈದಕ್ಕೂ ಹೆಚ್ಚು ಮಕ್ಕಳಿಗೆ ಶನಿವಾರ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಪ್ರತಿಷ್ಠಾನದ ವತಿಯಿಂದ ಕೊಡುಗೆ ನೀಡಿ ಅವರು ಮಾತನಾಡಿದರು.

ತಮ್ಮ ತಂದೆ, ಸಹಕಾರಿ ಧುರೀಣ ಸಿಂ.ಲಿಂ.ನಾಗರಾಜು ಅವರ ಸವಿನೆನಪಿನಲ್ಲಿ ಹಲವಾರು ಜನಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಸಿಂ.ಲಿಂ.ನಾಗರಾಜು ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದ್ದು, ಪ್ರತಿಷ್ಠಾನದ ಮೂಲಕ ತಾಲ್ಲೂಕಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಸಿಂ.ಲಿಂ.ನಾಗರಾಜು ಅವರ ಒಡನಾಡಿಗಳೆಲ್ಲಾ ಸೇರಿ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಮುಂಬರುವ ದಿನಗಳಲ್ಲಿ ತಮ್ಮ ತಂದೆಯವರ ಆಶಯದಂತೆ ಜನಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆದರ್ಶ ಕುಮಾರ್ ವಾಗ್ದಾನ ಮಾಡಿದರು.

ಎಸ್ ಡಿಎಂಸಿ ರಾಜ್ಯ ಉಪಾಧ್ಯಕ್ಷ, ಪ್ರತಿಷ್ಠಾನದ ಹಿತೈಷಿ ನಾಗವಾರ ಶಂಭುಗೌಡ ಮಾತನಾಡಿ, ಕನ್ನಡ ಪರ ಹೋರಾಟ, ಶಿಕ್ಷಣ, ಸಹಕಾರ, ಸಾಹಿತ್ಯ, ರೈತಪರ ಕಾಳಜಿ, ನ್ಯಾಯ ಪಂಚಾಯಿತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿ ಚನ್ನಪಟ್ಟಣ ತಾಲ್ಲೂಕಿನ ಮನೆಮಗನಾಗಿದ್ದ ಕನ್ನಡದ ಕಟ್ಟಾಳು ದಿ.ಸಿಂ.ಲಿಂ.ನಾಗರಾಜು ಅವರ ಪುತ್ರ ಆದರ್ಶ ಕುಮಾರ್ ಅವರು ಹೆಸರಿಗೆ ತಕ್ಕಂತೆ ಆದರ್ಶ ವ್ಯಕ್ತಿ ಹಾಗೂ ತಂದೆಯಂತೆಯೇ ಸರಳ ಜೀವನ, ಉದಾತ್ತ ಚಿಂತನೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳಲು ಮುಂದಾಗಿರುವುದು ಶ್ಲಾಘನೀಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನ ಎಂ.ಟಿ.ನಾಣಯ್ಯ ಲಾ ಚೇಂಬರ್ ಅಸೋಸಿಯೇಷನ್ ನ ಖ್ಯಾತ  ವಕೀಲ ಅಶೋಕ್ ಮಾತನಾಡಿ, 

ಸಿಂ.ಲಿಂ.ನಾಗರಾಜು ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ರಚನೆಯಾಗಿರುವ ಪ್ರತಿಷ್ಠಾನ ಹಾಗೂ ಆದರ್ಶ ಕುಮಾರ್ ಅವರ ಬೆನ್ನಿಗೆ ನಿಂತು ಕೆಲಸ ಮಾಡಲು ಅನೇಕ ಮನಸ್ಸುಗಳು ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಕೈಜೋಡಿಸಲು ಬದ್ದರಾಗಿದ್ದೇವೆ ಎಂದು ತಿಳಿಸಿದರು.

ತಾಪಂ ಮಾಜಿ ಸದಸ್ಯೆ ಶಿವಲಿಂಗಮ್ಮ, ಸಮಾಜ ಸೇವಕ ಅಕ್ಕೂರು ಹೊಸಹಳ್ಳಿ ಸುರೇಶ್, 

ಮಾಕಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಎಸ್.ರಾಮಣ್ಣ, ಮಾಕಳಿ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕ ರಾಮಲಿಂಗೇಗೌಡ, ಇರುಳಿಗರದೊಡ್ಡಿ ಸರ್ಕಾರಿ ಶಾಲೆ ಶಿಕ್ಷಕ ಡಿ.ಮಹದೇವಯ್ಯ, 

ಅಂಗನವಾಡಿ ಶಿಕ್ಷಕಿ ಧನಲಕ್ಷ್ಮಿ, ಶಾಲಾ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in education »

ಜವಾಹರ್ ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಹಾಕುವಂತೆ ಬಿಇಓ ಮರಿಗೌಡ ಮನವಿ
ಜವಾಹರ್ ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಹಾಕುವಂತೆ ಬಿಇಓ ಮರಿಗೌಡ ಮನವಿ

ಚನ್ನಪಟ್ಟಣ : ಕನಕಪುರ ತಾಲೂಕಿನ ಶಿವನಹಳ್ಳಿ ಬಳಿ ಇರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ, ನವೋದಯ ವಿದ್ಯಾಲಯ ಸ

ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ

ರಾಮನಗರ: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ರಾಮನಗರ ಜಿಲ್ಲೆಯ ವಸತಿ ಶಾಲೆ, ಕಾಲೇಜು ಹಾಗೂ ಮೌಲಾನಾ ಆಜ

ಅನಧಿಕೃತ ಶಾಲೆಗಳಿಗೆ ದಾಖಲಾತಿ ಮಾಡಿಸಬೇಡಿ: ಕ್ಷೇತ್ರ ಶಿಕ್ಷಣಾಧಿಕಾರಿ
ಅನಧಿಕೃತ ಶಾಲೆಗಳಿಗೆ ದಾಖಲಾತಿ ಮಾಡಿಸಬೇಡಿ: ಕ್ಷೇತ್ರ ಶಿಕ್ಷಣಾಧಿಕಾರಿ

ರಾಮನಗರ, ಜೂ. 28:   ಅನುದಾನ ರಹಿತ ಶಾಲೆಗಳು 2023-24ನೇ ಸಾಲಿನಲ್ಲಿ ಆಡಳಿತ ಮಂಡಳಿಯವರು ಇಲಾಖೆಯ ಅನುಮತಿ ಪಡೆಯದೇ ಶಾಲೆಗಳನ್ನು ನಡೆಸುತ್ತ

ಪಜಾ ಮತ್ತು ಪಪಂ ದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ರಾಮನಗರ, ಜೂ. 17:    ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರ

ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ವತಿಯಿಂದ ಇರುಳಿಗರದೊಡ್ಡಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಸಾಮಗ್ರಿ ವಿತರಣೆ
ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ವತಿಯಿಂದ ಇರುಳಿಗರದೊಡ್ಡಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಸಾಮಗ್ರಿ ವಿತರಣೆ

ಚನ್ನಪಟ್ಟಣ:  ದಾನಿಗಳು ನೀಡುವ ಪಠ್ಯ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ಶಾಲಾ ಮಕ್ಕಳು ವಿಶೇಷವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉನ್ನತ

ಜವಳಿ ಮತ್ತು ಕೈಮಗ್ಗ ಡಿಪ್ಲೊಮಾ ಗೆ ಅರ್ಜಿ ಆಹ್ವಾನ
ಜವಳಿ ಮತ್ತು ಕೈಮಗ್ಗ ಡಿಪ್ಲೊಮಾ ಗೆ ಅರ್ಜಿ ಆಹ್ವಾನ

ರಾಮನಗರ, ಜೂ. 09:    ರಾಮನಗರ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2023-24ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು

ಎಂಬಿಬಿಎಸ್ ನಲ್ಲಿ ಗೋಲ್ಡ್ ಮೆಡಲ್, ಪಿಜಿ ಯಲ್ಲಿ ದೇಶಕ್ಕೆ ಎರಡು ಸಾವಿರ ರ್ಯಾಂಕ್ ಪಡೆದ ಅಪ್ಪಟ ಗ್ರಾಮೀಣ ಪ್ರತಿಭೆ ಚಕ್ಕಲೂರು ಗ್ರಾಮದ ಡಾ ಅನುಶ್ರೀ
ಎಂಬಿಬಿಎಸ್ ನಲ್ಲಿ ಗೋಲ್ಡ್ ಮೆಡಲ್, ಪಿಜಿ ಯಲ್ಲಿ ದೇಶಕ್ಕೆ ಎರಡು ಸಾವಿರ ರ್ಯಾಂಕ್ ಪಡೆದ ಅಪ್ಪಟ ಗ್ರಾಮೀಣ ಪ್ರತಿಭೆ ಚಕ್ಕಲೂರು ಗ್ರಾಮದ ಡಾ ಅನುಶ್ರೀ

ಚನ್ನಪಟ್ಟಣ: ತಾಲ್ಲೂಕಿನ ಚಕ್ಕಲೂರು ಗ್ರಾಮದಿಂದ ಚನ್ನಪಟ್ಟಣ ನಗರಕ್ಕೆ ಪ್ರತಿದಿನ ಅಂದರೆ ಹದಿನಾಲ್ಕು ವರ್ಷಗಳ ಕಾಲ ಇಪ್ಪತ್ನಾಲ್ಕು ಕಿಲೋಮೀಟರ್ ಪ್ರಯಾಣ

ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಸಮೀಕ್ಷೆವೇಳೆ ಅಪೌಷ್ಠಿಕತೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಸಲಹೆ - ಡಾ. ಶಶಿಕಲಾ
ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಸಮೀಕ್ಷೆವೇಳೆ ಅಪೌಷ್ಠಿಕತೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಸಲಹೆ - ಡಾ. ಶಶಿಕಲಾ

ರಾಮನಗರ, ಮೇ 2: ಅಪೌಷ್ಠಿಕತೆ ಮುಖ್ಯವಾದ ಆರೋಗ್ಯ ಸಮಸ್ಯೆಯಾಗಿದ್ದು. ಅಪೌಷ್ಠಿಕತೆ ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ಅಪೌಷ್ಠಿಕತೆ ನಿವಾರಿಸಲು ತಾಯಿ

ಶಿಸ್ತು ಮತ್ತು ಶ್ರದ್ಧೆ ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಸಾಹಿತಿ ವಿಜಯ್ ರಾಂಪುರ
ಶಿಸ್ತು ಮತ್ತು ಶ್ರದ್ಧೆ ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಸಾಹಿತಿ ವಿಜಯ್ ರಾಂಪುರ

ಚನ್ನಪಟ್ಟಣ :ಪ್ರತಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅವಧಿಯಲ್ಲಿ ಶಿಸ್ತು ಮತ್ತು ಶ್ರದ್ಧೆಯ ಜೊತೆಗೆ ಸಮಯ ಪಾಲನೆ ರೂಢಿಸಿಕೊಂಡಲ್ಲಿ, ವಿದ್ಯಾರ್ಥಿಗಳು ತಮ್ಮ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಕ್ರಮ: ಹೆಚ್ಚಿನ ವಿಚಾರಣೆಗಾಗಿ ಮೂವರು ಪೊಲೀಸರ ವಶಕ್ಕೆ: ಏಳು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಕ್ರಮ: ಹೆಚ್ಚಿನ ವಿಚಾರಣೆಗಾಗಿ ಮೂವರು ಪೊಲೀಸರ ವಶಕ್ಕೆ: ಏಳು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ರಾಮನಗರ: 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಹತ್ತು ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಇವರಲ್ಲಿ ಮೂವರನ್ನು‌ ಹೆಚ್ಚಿನ ವಿಚಾರಣೆಗಾ

Top Stories »  

Top ↑