Tel: 7676775624 | Mail: info@yellowandred.in

Language: EN KAN

    Follow us :


ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್

Posted date: 25 Jan, 2024

Powered by:     Yellow and Red

ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್

ಚನ್ನಪಟ್ಟಣ: ಪ್ರತಿ ವರ್ಷವೂ ಲಕ್ಷಾಂತರ ಯುವಕ ಯುವತಿಯರು ಪದವಿಯೊಂದಿಗೆ ಹೊರಬರುತ್ತಾರೆ. ವಿಶ್ವ ವಿದ್ಯಾಲಯಗಳಿಂದ ಪದವಿಯೊಂದಿಗೆ ಬರುವವರಿಗೆ ಸೂಕ್ತ  ಉದ್ಯೋಗ ಸಿಗುತ್ತಿಲ್ಲ. ಪ್ರತಿ ನೇಮಕಾತಿಗಳಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ಕೇಳಿ ಬರುತ್ತಿದೆ. ಸರ್ಕಾರ ಪದವೀಧರರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯುವಜನರು ಎದುರಿಸುತ್ತಿರುವ ಸಮಸ್ಯೆ ಗಳಿಗೆ ಧ್ವನಿಯಾಗಲು ತಾವು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಬೆಂಗಳೂರು ಪದವೀಧರ ಕ್ಷೇತ್ರದ ಆಕಾಂಕ್ಷಿ ಉದಯ್ ಸಿಂಗ್ ಅವರು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,

ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ಪ್ರತಿನಿಧಿಗಳು ಪದವೀಧರರನ್ನೇ ಮರೆಯುತ್ತಿದ್ದಾರೆ. ಇದುವರೆಗೆ ಪದವೀಧರರ ಕುರಿತು ಯಾರೂ ಮಾತನಾಡಿಲ್ಲ, ಇನ್ನೂ ಅವರಿಗೆ ಕೆಲಸ ದೊರಕಿಸುವ ಮಾತು ದೂರವೇ ಉಳಿದಿದೆ. ಯುವಜನರು ಒಟ್ಟಾರೆ ಪದವೀಧರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ದನಿ ಎತ್ತುವವರೇ ಇಲ್ಲವಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ಅವರು ಕಾಣಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು. 


ಉಚ್ಚ ನ್ಯಾಯಾಲಯದ ವಕೀಲನಾಗಿರುವ ನಾನು, ಕಳೆದ ಇಪ್ಪತ್ತು ವರ್ಷಗಳಿಂದ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದೇನೆ. ಪದವೀಧರರ ಕೂಗನ್ನು ಸರ್ಕಾರಕ್ಕೆ ಮುಟ್ಟಿಸುವ ಸಲುವಾಗಿ, ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಸದ್ಯ ಕ್ಷೇತ್ರಕ್ಕೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಇನ್ನೂ ಘೋಷಿಸಿಲ್ಲ. ಇವರ ನಡುವೆಯೇ ಸ್ವತಂತ್ರವಾಗಿ  ಪದವೀಧರರ ದನಿಯಾಗಲು ಮುಂದಾಗಿದ್ದೇನೆ ಎಂದು ತಿಳಿಸಿದರು.


*ಪದವೀಧರರಿಗಿಂತ ಖೈದಿಗಳಿಗೆ ಸಂಬಳ ಜಾಸ್ತಿ:*  

ಇವತ್ತಿನ ದಿನಗಳಲ್ಲಿ ಯಾವುದೇ ಪದವೀಧರರಿಗಿಂತ ದಿನಗೂಲಿ ಲೆಕ್ಕದಲ್ಲಿ ದುಡಿಯುವ ಖೈದಿಗಳಿಗೇ ಹೆಚ್ಚಿನ ಸಂಬಳ ದೊರೆಯುತ್ತಿದೆ. ಪದವೀಧರರ ಬದುಕು ಖೈದಿಗಳಿಗಿಂತಲೂ ಕನಿಷ್ಠವಾಗಿದೆ ಎಂದು ಉದಯ್ ಸಿಂಗ್ ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ೪೩ ಇಲಾಖೆಗಳಲ್ಲಿ ೨.೫೮ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ೨೦೨೨ರ ಅಂತ್ಯಕ್ಕೆ ರಾಜ್ಯದಲ್ಲಿ ೨.೭೬ ಲಕ್ಷ ಮಂದಿ ಸರ್ಕಾರಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಸಂಖ್ಯೆ ಬೆಳೆಯುತ್ತಲೇ ಇದ್ದರೂ, ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿಲ್ಲ. ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರ ಸಮಸ್ಯೆ ಕೇಳುವವರೇ ಇಲ್ಲ. ಇಂದಿಗೂ ಹಲವು ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರೇ ಹೆಚ್ಚಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಪದವೀಧರರು ಎದುರಿಸುತ್ತಿರುವ ಇಂತಹ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ. ಅದಕ್ಕಾಗಿ, ಸರ್ಕಾರದ ಮಟ್ಟದಲ್ಲಿ ಅವರನ್ನು ಪ್ರತಿನಿಧಿಸುವವರು ಗಟ್ಟಿಯಾಗಿ ದನಿ ಎತ್ತಬೇಕಿದೆ. ಆಗ ಮಾತ್ರ ಪದವೀಧರರು, ಯುವಜನರು, ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು, ಹೊರಗುತ್ತಿಗೆ ನೌಕರರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಉದಯ್ ಸಿಂಗ್ ಅಭಿಪ್ರಾಯ ಪಟ್ಟರು.


ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಉಜ್ವಲ ಅಕಾಡೆಮಿಯ ಕೆ.ಯು. ಮಂಜುನಾಥ್, ಮಾಧ್ಯಮ ಸಲಹೆಗಾರ ನೀರಕಲ್ಲು  ಶಿವಕುಮಾ‌ರ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in education »

ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು
ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು

ಚನ್ನಪಟ್ಟಣ: ನಾವು ನಮ್ಮ ಕಾಲದಲ್ಲಿ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಹಲವಾರು ಸಮಸ್ಯೆಗಳು ನಮ್ಮ ಎದುರಿಗಿದ್ದವು. ಆದರೆ, ಈಗ ಅಂತಹ

ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ
ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ

ಚನ್ನಪಟ್ಟಣ: ಶಾಲಾ ವಿದ್ಯಾರ್ಥಿಗಳು ಕೇವಲ ಪಾಠ ಮತ್ತು ಆಟಕ್ಕೆ ಸೀಮಿತವಾಗದೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಕೌಶಲ್ಯ ಕಲಿತ ಮಕ್ಕಳ ಪ್ರತಿಭೆಯನ್ನ

ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್
ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್

ಚನ್ನಪಟ್ಟಣ: ಪ್ರತಿ ವರ್ಷವೂ ಲಕ್ಷಾಂತರ ಯುವಕ ಯುವತಿಯರು ಪದವಿಯೊಂದಿಗೆ ಹೊರಬರುತ್ತಾರೆ. ವಿಶ್ವ ವಿದ್ಯಾಲಯಗಳಿಂದ ಪದವಿಯೊಂದಿಗೆ ಬರುವವರಿಗೆ ಸೂಕ್ತ  ಉದ್ಯೋಗ

ದಿವ್ಯಚೇತನ ಇಂಗ್ಲಿಷ್ ಶಾಲೆಯಲ್ಲಿ ಮೇಳೈಸಿದ ಮಿನಿ ವಿಜ್ಞಾನ ಮೇಳ
ದಿವ್ಯಚೇತನ ಇಂಗ್ಲಿಷ್ ಶಾಲೆಯಲ್ಲಿ ಮೇಳೈಸಿದ ಮಿನಿ ವಿಜ್ಞಾನ ಮೇಳ

ಚನ್ನಪಟ್ಟಣ: ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಬ್ರಾಡ್ಕಾಂ ವಿಜ್ಞಾನ ಕೇಂದ್ರ ಚನ್ನಪಟ್ಟಣ ಇವರ ವತಿಯಿಂದ ನಗರದ ದಿವ್ಯ ಚೇತನ ಇಂಗ್ಲಿಷ್ ಪ್ರೌಢಶಾಲೆಯಲ್ಲ

ಪಾಠದ ಜೊತೆಗೆ ಆಟದಲ್ಲಿಯೂ ಮುಂಚೂಣಿಗೆ ಬರಬೇಕು. ವಿ ಬಾಲಸುಬ್ರಹ್ಮಣ್ಯಂ
ಪಾಠದ ಜೊತೆಗೆ ಆಟದಲ್ಲಿಯೂ ಮುಂಚೂಣಿಗೆ ಬರಬೇಕು. ವಿ ಬಾಲಸುಬ್ರಹ್ಮಣ್ಯಂ

ಚನ್ನಪಟ್ಟಣ,: ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಯಲ್ಲಿ ಕ್ರೀಡಾಮನೋಭಾವನೆ ಬೆಳಸಿಕೊಳ್ಳಬೇಕು. ಮನಸ್ಸು ಉಲ್ಲಸಿತವಾಗಲು ಕ್ರೀಡೆ ಸಹಕಾರಿ ಎಂದು ಬಾಲು

ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ
ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ

ಚನ್ನಪಟ್ಟಣ: ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಧರಣಿ ನಿರತರಾಗಿರುವುದರಿಂದ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ. ಇದರಿಂದ ಶೈಕ್ಷಣಿಕ ವರ್ಷದ ಕಲಿಕೆಗೆ ತೊ

ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ
ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ

ಚನ್ನಪಟ್ಟಣ:bಆಸ್ಪತ್ರೆಗೆ ಬರುವ ರೋಗಿಗಳ ಅರೋಗ್ಯ ತಪಾಸಿಸಿ, ರೋಗ ವಾಸಿ ಮಾಡಿ, ಅವರ ಆರೋಗ್ಯ ದ ಜೊತೆಗೆ ಆಯಸ್ಸನ್ನು ಹೆಚ್ಚಿಸುವಲ್ಲಿ ನಿಷ್ಣಾತರಾದ ವೈದ್ಯರು

ಪೆಟ್ಟಾ ಸರ್ಕಾರಿ ಶಾಲಾ ಆವರಣದಲ್ಲಿ ನಗರಸಭೆಯ ಕಸದ ರಾಶಿ, ಅಲ್ಲಗಳೆದ ಪೌರಾಯುಕ್ತ
ಪೆಟ್ಟಾ ಸರ್ಕಾರಿ ಶಾಲಾ ಆವರಣದಲ್ಲಿ ನಗರಸಭೆಯ ಕಸದ ರಾಶಿ, ಅಲ್ಲಗಳೆದ ಪೌರಾಯುಕ್ತ

ಚನ್ನಪಟ್ಟಣ: ನಗರದ ಡೂಂ ಲೈಟ್ ವೃತ್ತದಲ್ಲಿರುವ ಏಳು ದಶಕದಷ್ಟು ಹಳೆಯಾದಾದ ಪೆಟ್ಟಾ ಹೆಸರಿನ ಸರ್ಕಾರಿ ಶಾಲಾ ಆವರಣದಲ್ಲಿ ಹತ್ತಾರು ಟನ್ ಕಸದ ರಾಶಿಯನ್ನು ರಾ

ಆರ್ಥಿಕವಾಗಿ ಬೆಳೆದವರೆಲ್ಲರೂ ವಿದ್ಯಾರ್ಜನೆಗೆ ಮುಂದಡಿಯಿಡಬೇಕು, ಸಚಿವ ಮಧುಬಂಗಾರಪ್ಪ
ಆರ್ಥಿಕವಾಗಿ ಬೆಳೆದವರೆಲ್ಲರೂ ವಿದ್ಯಾರ್ಜನೆಗೆ ಮುಂದಡಿಯಿಡಬೇಕು, ಸಚಿವ ಮಧುಬಂಗಾರಪ್ಪ

ಚನ್ನಪಟ್ಟಣ: ಬಡತನದ ಬೇಗೆಯಲ್ಲಿ ಬೆಂದು, ಉನ್ನತ ಶಿಕ್ಷಣ ಪಡೆದು, ಉತ್ತಮ ಸ್ಥಾನಮಾನದ ಜೊತೆಗೆ ಆರ್ಥಿಕವಾಗಿ ಸದೃಢವಾದ ನಂತರ ತನ್ನ ಜನ್ಮದಾತರಿಗೆ, ಹುಟ್ಡಿದೂರ

ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು
ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು

ರಾಮನಗರ: ನಮ್ಮ ರಾಜ್ಯದ ಕೆಲ ಭಾಗಗಳಿಗೆ ಕುಡಿಯುವ ನೀರಿಗೆ ತತ್ವಾರವಾಗಿದೆ, ಮಂಡ್ಯ, ಮೈಸೂರು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲಾ, ಇಂತಹ ಸಂಕಷ್ಟದ ಸಮಯ

Top Stories »  


Top ↑