Tel: 7676775624 | Mail: info@yellowandred.in

Language: EN KAN

    Follow us :


ಸರಳತೆಯ ಮೂಲಕವೆ ವಿದ್ಯಾರ್ಥಿಗಳ ಮನಗೆದ್ದ ಕೃಷ್ಣಮೂರ್ತಿ ಮೇಷ್ಟ್ರು

Posted Date: 07 Sep, 2018

ಸರಳತೆಯ ಮೂಲಕವೆ ವಿದ್ಯಾರ್ಥಿಗಳ ಮನಗೆದ್ದ ಕೃಷ್ಣಮೂರ್ತಿ ಮೇಷ್ಟ್ರು

ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಬಹುಪಾಲನ್ನು ಮೀಸಲಾಗಿಡುವ ಶಿಕ್ಷಕರು ಅದೆಷ್ಟೋ ಮಂದಿ ಇದ್ದಾರೆ. ಅಂತವರಲ್ಲಿ ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್. ಕೃಷ್ಣಮೂರ್ತಿ ಅವರು ಒಬ್ಬರು.
        ಪರಿಚಯ : ರಾಮನಗರ ತಾಲ್ಲೂಕಿನ  ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮದಲ್ಲಿ 27-11-1961 ರಂದು ಜನಿಸಿದರು. ತಂದೆ ಎಚ್.ಎನ್. ಸಿದ್ದಾಚಾರ್, ತಾಯಿ ಕಮಲಮ್ಮ. ರಾಮನಗರದಲ್ಲಿ ಪ್ರಾಥಮಿಕ  ಮತ್ತು ಪ್ರೌಢಶಿಕ್ಷಣವನ್ನು ಪಡೆದ ಇವರು ವೃತ್ತಿ ಶಿಕ್ಷಣವನ್ನು ಬಿಡದಿಯಲ್ಲಿ ಪಡೆದುಕೊಂಡರು.
        ಸರ್ಕಾರಿ ಶಿಕ್ಷಕ ವೃತ್ತಿಗೆ ಸೇರುವ ಮೊದಲು ಇವರು ತಮ್ಮ ತಂದೆಯ ಕಸುಬಾದ ಮರಗೆಲಸದಲ್ಲಿ  ತೊಡಗಿಸಿಕೊಂಡರು. ದಿನಾಂಕ: 30-08-1993 ರಂದು ಸರ್ಕಾರಿ  ಶಾಲೆಯಲ್ಲಿ ಶಿಕ್ಷಕನಾಗಿ ಸೇರಿದರು. ಚಾಮನಹಳ್ಳಿ  ಸರ್ಕಾರಿ  ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ  ಪ್ರಾರಂಭಿಸಿ ಕಳೆದ 25 ವರ್ಷಗಳಿಂದ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
        ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಮೂರು ಬಾರಿ ಚುನಾಯಿತ  ಪ್ರತಿನಿಧಿಯಾಗಿ, ಒಂದು ಬಾರಿ ಪ್ರಧಾನ  ಕಾರ್ಯದರ್ಶಿಯಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಇಲಾಖೆಯಿಂದ ಶಿಕ್ಷಕರಿಗೆ ಆಗಬೇಕಾದ ಕೆಲಸಗಳನ್ನು ಮಾಡಿಸಿದ್ದಾರೆ, ಈಗಲೂ ಮಾಡಿಸುತ್ತಿದ್ದಾರೆ.
        ಎಚ್.ಎಸ್. ಕೃಷ್ಣಮೂರ್ತಿ ಅವರ ಪತ್ನಿ ರುಕ್ಮಿಣಿ.  ಕೆ. ಮೇಘನಾ,  ಕೆ. ಮನುಮಯೂರ್ ಇವರ ಇಬ್ಬರ ಮಕ್ಕಳು. ಇಬ್ಬರೂ ತಾಂತ್ರಿಕ ಶಿಕ್ಷಣದಲ್ಲಿ  ಪದವಿ ಪಡೆದಿದ್ದಾರೆ.
        ಈಗ ಐಜೂರಿನ ಮಲ್ಲೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಇವರು ಸರ್ಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ಶ್ರಮಿಸುತ್ತಿದ್ದಾರೆ.
ಮಕ್ಕಳ ಭವಿಷ್ಯ ರೂಪಿಸುವ, ಸತ್ಪಥದಲ್ಲಿ ಮುನ್ನಡೆಯುವಂತೆ ಮಾರ್ಗ ತೋರುವ ಅಂಥ ಗುರುಗಳ ಸ್ಮರಣೆ ಸದಾ ಕಾಲಕ್ಕೂ ನಡೆಯಬೇಕು. ಒಬ್ಬ ವಿದ್ಯಾರ್ಥಿ ಗುರುವನ್ನೂ, ಶಿಕ್ಷಕ ಒಬ್ಬ ವಿದ್ಯಾರ್ಥಿ ಗುರುವನ್ನೂ, ಶಿಕ್ಷಕ ಒಬ್ಬ ವಿದ್ಯಾರ್ಥಿಯನ್ನೂ ಸ್ಮರಿಸಲು ಶಿಕ್ಷಕ ದಿನಾಚರಣೆ ಒಳ್ಳೆಯ ಸಂದರ್ಭ ಎಂದು ಮುಖ್ಯಶಿಕ್ಷಕ ಎಚ್.ಎಸ್. ಕೃಷ್ಣಮೂರ್ತಿ ತಿಳಿಸಿದರು.
ಶಿಕ್ಷಕರು ಹಾಗೂ ಮಕ್ಕಳ  ಬಾಂಧವ್ಯ ಇಂದು ಔಪಚಾರಿಕ ಶಿಕ್ಷಣಕ್ಕೆ ಸೀಮಿತವಾಗಿದೆ. ಶಿಕ್ಷಕ ಪರಿಣಾಮಕಾರಿಯಾಗಿ ಬೋಧಿಸುವ ಕಲೆ ಕರಗತ ಮಾಡಿಕೊಳ್ಳಬೇಕು. ಇದರಿಂದ ಹೆಚ್ಚು ವಿಚಾರ ತಿಳಿಸಲು ಸಾಧ್ಯವಾಗುತ್ತದೆ. ಅದು  ಮಕ್ಕಳ  ಕೇಳುವಿಕೆಗೂ ಸಹಕಾರಿಯಾಗುತ್ತದೆ. ಇದು ಜೀವನದ ಉದ್ದಕ್ಕೂ ಉಳಿಯಲು ನೆರವಾಗುತ್ತದೆ ಎಂಬುದು ಇವರ ಅಭಿಪ್ರಾಯವಾಗಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದೇ ಪರಮಸತ್ಯ ಎಂದು ನಂಬುತ್ತದೆ. ಮಗುವಿನ ಜಗತ್ತಿನಲ್ಲಿ ಶಿಕ್ಷಕನೇ ಮಾದರಿ  ವ್ಯಕ್ತಿ. ತನ್ನ ಗುರುಗಳಿಗೆ ಎಲ್ಲವೂ ತಿಳಿದಿದೆ ಎಂದೇ ಮಗು ಭಾವಿಸುತ್ತದೆ ಎಂದು ತಿಳಿಸಿದರು.
        ಇದಕ್ಕಾಗಿಯೇ ಶಿಕ್ಷಕರ ಜವಾಬ್ದಾರಿ, ಸ್ಥಾನವನ್ನು ಶ್ರೇಷ್ಠ ಎಂದು ಕಾಣಲಾಗುತ್ತದೆ. ಎಲ್ಲಾ ವಿಷಯಗಳಲ್ಲೂ ಸಮಾನತೆ  ಕಾಯ್ದುಕೊಂಡು ಆರೋಗ್ಯ ಪೂರ್ಣ ಸಮಾನತೆ  ಕಾಯ್ದುಕೊಂಡು ಆರೋಗ್ಯ ಪೂರ್ಣ ಸಮಾಜಕ್ಕಾಗಿ ಪ್ರಜೆಗಳನ್ನು ರೂಪುಗೊಳಿಸುವ ಜವಾಬ್ದಾರಿ ಗುರುವಿನದು
ಎಂದು ತಿಳಿಸಿದರು.
        ಪ್ರಶಸ್ತಿ ಪ್ರಧಾನ : ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಎಲ್.  ನರಸಿಂಹಯ್ಯ ಶಿಕ್ಷಕ ಸೇವಾ ರತ್ನ ಪ್ರಶಸ್ತಿಗೆ ಎಚ್.ಎಸ್. ಕೃಷ್ಣಮೂರ್ತಿ ಅವರು ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ರಾಮನಗರ ತಾಲ್ಲೂಕಿನ ಕೃಷ್ಣಾಪುರದೊಡ್ಡಿಯಲ್ಲಿ ತಾನಿನಾ ರಂಗದಂಗಳದಲ್ಲಿ ದಿನಾಂಕ 08-09-2018ರಂದು ಬೆಳಿಗ್ಗೆ ಗಂಟೆಗೆ ನಡೆಯಲಿದೆ.
        ಎಚ್.ಎಸ್. ಕೃಷ್ಣಮೂರ್ತಿ ಅವರು ಮಂಜುನಾಥನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನನಗೂ   ಶಿಕ್ಷಕರಾಗಿದ್ದರು. ಇವರ ಸರಳತೆ, ಪಠ್ಯ ಬೋಧಿಸುವ ಕ್ರಮ ಇತರರಿಗೆ ಮಾದರಿಯಾಗಬೇಕಿದೆ. ಶಿಕ್ಷಕರ ದಿನಾಚರಣೆಯ ಈ ಸುಸಂದರ್ಭದಲ್ಲಿ
ಕೃಷ್ಣಮೂರ್ತಿ ಅವರಿಗೆ ಅಭಿನಂದನೆಗಳು.

ಲೇಖನ : ಎಸ್. ರುದ್ರೇಶ್ವರ,

ಸಂಶೋಧನಾ ವಿದ್ಯಾರ್ಥಿ,

ಬೆಂಗಳೂರು ವಿಶ್ವವಿದ್ಯಾಲಯ. 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in education »

ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್
ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್

ರಾಮನಗರ:ಜು/೦೧/೨೦/ಬುಧವಾರ. ರಾಮನಗರ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು  ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು

ಕೊರೊನಾ ಎಫೆಕ್ಟ್; ಮಾಹೆ ಶುಲ್ಕ ಹೊರತುಪಡಿಸಿ ಬೇರೆ ಶುಲ್ಕ ಪಡೆಯಲ್ಲ. ಬಾಲು ಶಾಲೆಯ ವೆಂಕಟ ಸುಬ್ಬಯ್ಯ ಚೆಟ್ಟಿ
ಕೊರೊನಾ ಎಫೆಕ್ಟ್; ಮಾಹೆ ಶುಲ್ಕ ಹೊರತುಪಡಿಸಿ ಬೇರೆ ಶುಲ್ಕ ಪಡೆಯಲ್ಲ. ಬಾಲು ಶಾಲೆಯ ವೆಂಕಟ ಸುಬ್ಬಯ್ಯ ಚೆಟ್ಟಿ

ಚನ್ನಪಟ್ಟಣ:ಮೇ/೨೩/೨೦/ಶನಿವಾರ. ನನಗೆ ನಾಳೆ (ಮೇ ೨೪ ಭಾನುವಾರ) ಅರವತ್ತು ವರ್ಷ ತುಂಬುತ್ತದೆ. ನನಗೆ ಇಷ್ಟು ವಯಸ್ಸಾಯಿತು, ಆದರೆ ಹಿಂದುರಿಗಿ ನೋಡಿದಾಗ ಸಾಧನ

ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ರಾಮನಗರ:ಮೇ/೨೨/೨೦/ಶುಕ್ರವಾರ. ಸ್ನಾತಕೋತ್ತರ (ವಾರ್ಷಿಕ/ಸೆಮಿಸ್ಟರ್) ಪದವಿಗಳಾದ ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಎಡ್, ಎಂ.ಲಿಬ್.ಐ.ಎಸ್ಸಿ, ಎಂ.ಎಸ್ಸಿ,

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಹುಮಾನಕ್ಕೆ ಅರ್ಜಿ ಆಹ್ವಾನ
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಹುಮಾನಕ್ಕೆ ಅರ್ಜಿ ಆಹ್ವಾನ

ರಾಮನಗರ:ಮೇ/೧೧/೨೦/ಸೋಮವಾರ.ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನವರಿ ೨೦೧೯ ರಿಂದ ಡಿಸೆಂಬರ್ ೨೦೧೯ ರವರೆಗೆ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ

ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ : ಅವಧಿ ವಿಸ್ತರಣೆ
ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ : ಅವಧಿ ವಿಸ್ತರಣೆ

ರಾಮನಗರ:ಮೇ/೧೧/೨೦/ಸೋಮವಾರ. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ೨೦೧೯ ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹ

ಸುವಿದ್ಯಾ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟ
ಸುವಿದ್ಯಾ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟ

ಚನ್ನಪಟ್ಟಣ:ಮೇ /೦೫/೩೦/ಮಂಗಳವಾರ. ಕರ್ನಾಟಕದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವು ಇಂದು ಪ್ರಕಟವಾಗಿದೆ. ಕರ್ನಾಟಕದಾದ್ಯಂತ ಲಾಕ

ಸೋಗಾಲ ಸರ್ಕಾರಿ ಶಾಲೆಗೆ ಬೆಂಕಿ, ಸುಟ್ಟು ಕರಕಲಾದ ದಾಖಲೆಗಳು ಮತ್ತು ಪೀಠೋಪಕರಣಗಳು
ಸೋಗಾಲ ಸರ್ಕಾರಿ ಶಾಲೆಗೆ ಬೆಂಕಿ, ಸುಟ್ಟು ಕರಕಲಾದ ದಾಖಲೆಗಳು ಮತ್ತು ಪೀಠೋಪಕರಣಗಳು

ಚನ್ನಪಟ್ಟಣ:ಏ/೨೬/೨೦/ಭಾನುವಾರ. ತಾಲ್ಲೂಕಿನ ಅಕ್ಕೂರು ಪೋಲೀಸ್ ಠಾಣಾ ವ್ಯಾಪ್ತಿಯ ಸೋಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಛೇರಿಯ ಕೊಠ

ಶಿಕ್ಷಣಕ್ಕೆ ಒತ್ತು ನೀಡುತ್ತೇನೆ, ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿ ಗೆ ಬದ್ಧ ಕುಮಾರಸ್ವಾಮಿ
ಶಿಕ್ಷಣಕ್ಕೆ ಒತ್ತು ನೀಡುತ್ತೇನೆ, ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿ ಗೆ ಬದ್ಧ ಕುಮಾರಸ್ವಾಮಿ

ಚನ್ನಪಟ್ಟಣ: ಮೂವತ್ತಾರು ಲಕ್ಷ ರೂಪಾಯಿಗಳ ಡೆಸ್ಕ್, ಸುಸಜ್ಜಿತ ಕ್ಯಾಂಟೀನ್ ಮತ್ತು ಕಂಪ್ಯೂಟರ್ ಲ್ಯಾಬ್ ಗೆ ಸಂಬಂಧಿಸಿದ ಪರಿಕರಗಳನ್ನು ಕೊಡಿಸಿ, ಶ

ಸಾವಿತ್ರಿ ಜ್ಯೋತಿ ಬಾಫುಲೆ ಹೆಣ್ಣು ಮಕ್ಕಳ ದನಿಯಾದರೆ ಕುವೆಂಪು ಶೂದ್ರರ ದನಿಯಾಗಿದ್ದರು ಸುತರಾ
ಸಾವಿತ್ರಿ ಜ್ಯೋತಿ ಬಾಫುಲೆ ಹೆಣ್ಣು ಮಕ್ಕಳ ದನಿಯಾದರೆ ಕುವೆಂಪು ಶೂದ್ರರ ದನಿಯಾಗಿದ್ದರು ಸುತರಾ

ಚನ್ನಪಟ್ಟಣ: ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ದಲಿತರ, ದಮನಿತರ ದನಿಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿ ನಿಂತವರು ಸಾವಿತ್ರಿ ಜ್ಯ

ನವಂಬರ್ 15 ಬುಡಕಟ್ಟು ವನವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಹಾಗೂ ರಾಷ್ಟ್ರೀಯ ಗಿರಿಜನ ದಿನೋತ್ಸವ.
ನವಂಬರ್ 15 ಬುಡಕಟ್ಟು ವನವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಹಾಗೂ ರಾಷ್ಟ್ರೀಯ ಗಿರಿಜನ ದಿನೋತ್ಸವ.

ತನ್ನ ಯವ್ವನದ ವಯಸ್ಸಿನಲ್ಲಿಯೇ ಬಿರ್ಸಾ ಮುಂಡಾ  ತನ್ನ ಜನಾಂಗವಾದ ವನವಾಸಿಗಳ ಪರ ನಿಲ್ಲಲು ಕಾರಣ ಬ್ರಿಟೀಷ್ ವಸಾಹತುಸಾಹಿ ಆಡಳಿತದ ವಿರುದ್ಧ ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದ  ತಮ್ಮ ಭೂಮ

Top Stories »  


Top ↑