ಸಾರಿಗೆ ಬಸ್ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದುವರೆಗೂ ರೈತರ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿ ಸಲಗವೊಂದು ಶಿವನಹಳ್ಳಿ ಗ್ರಾಮದ ರಸ್ತೆಯ ಮಧ್ಯ ನಿಂತು ಬಸ್ಗೆ ಅಡ್ಡ ಬಂದು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಘಟನೆ ನಡೆದಿದೆ.
ಕನಕಪುರ ತಾಲೂಕಿನ ಕಾಡು ಶಿವನಹಳ್ಳಿ ಗ್ರಾಮದಿಂದ ಇಂದು ಬೆಳಗ್ಗೆ ಸಾರಿಗೆ ಬಸ್ಸಿಗೆ ಅಡ್ಡಲಾಗಿ ಬಂದ ಒಂಟಿ ಸಲಗ ಸುಮಾರು ಹೊತ್ತು ರಸ್ತೆಯಲ್ಲಿಯೇ ಅಡ್ಡಲಾಗಿ ನಿಂತಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರು ಜೋರಾಗಿ ಕಿರುಚಿದ ಪರಿಣಾಮ ಸ್ವಲ್ಪ ಹೊತ್ತು ಹಿಂಭಾಗಕ್ಕೆ ತೆರಳಿ ಮತ್ತೆ ಬಸ್ಸಿನ ಮುಂಭಾಗಕ್ಕೆ ಈ ಒಂಟಿ ಸಲಗ ಬರುತ್ತಿತ್ತು. ನಂತರ ಬಸ್ನ ಹಾರನ್ ಶಬ್ದ ಹೊಡೆದಾಗಲೂ ಕೂಡ ಹಿಂದೆ ಹೋಗುವ ಆನೆ ಮತ್ತೆ ಬಸ್ಸಿನ ಮುಂಭಾಗ ಬಂದಿದೆ.
ರಾಮನಗರದಲ್ಲಿ ಬಸ್ಗೆ ಅಡ್ಡಬಂದ ಆನೆಯಿಂದ ಪ್ರಯಾಣಿಕರು ಭಯಗೊಂಡು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಸದ್ಯಕ್ಕೆ ಒಂಟಿ ಸಲಗ ಪ್ರಯಾಣಿಕರಿಗೆ ಹಾಗೂ ಬಸ್ಸಿಗೆ ಯಾವುದೇ ತೊಂದರೆ ನೀಡದೆ ಕಾಡಿನತ್ತ ಪಯಣ ಬೆಳೆಸಿತು. ಆಗ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು
Recent news in kanakapura »

ಕನಕಪುರದ ಮರಳೆಗವಿ ಮಠಕ್ಕೆ ರಾಜ್ಯಪಾಲರ ಭೇಟಿ ಪ್ರತಿಭಾನ್ವಿತ ಪುಟಾಣಿಗಳನ್ನು ಸನ್ಮಾನಿಸಿದ ರಾಜ್ಯಪಾಲರು
ಕನಕಪುರ:16.01.2023:
ಭರತ ಖಂಡವು ಇಡೀ ವಿಶ್ವದಲ್ಲೇ ತನ್ನ ಸಂಸ್ಕೃತಿ ಮತ್ತು ಸಂಸ್ಕಾರಗಳಿಂದ ವಿಶಿಷ್ಟ ಸ್ಥಾನವನ್ನು ಗಳಿಸಿದ ಕಾರಣ ಇಲ್ಲಿ ಸಾಧು ಸಂತರು ಸತ್ಪುರುಷರು ಮತ್ತು ಋಷಿಮುನಿಗಳ

ಮಕ್ಕಳಿಂದ ಮಕ್ಕಳಿಗಾಗಿ ನಡೆದ ಬ್ಲಾಸಮ್ ಸಾಂಸ್ಕೃತಿಕ ಹಬ್ಬ
ಕನಕಪುರ: ಡಾ ಬಿ.ಶಶಿಧರ್ ರವರ ಬ್ಲಾಸಮ್ ಶಾಲೆಯು ವಿಶಿಷ್ಟವಾದ ಮೂವತ್ತೊಂದನೇ ವರ್ಷದ ಸಾಂಸ್ಕೃತಿಕ ಹಬ್ಬವನ್ನು ಬಹಳ ಸಂಭ್ರಮದಿಂದ ನಗರದ ಅಂಬೇಡ್ಕರ್

ಜೂನಿಯರ್ ನೆಟ್ ಬಾಲ್ ತಂಡ ಮುನ್ನಡೆಸುವ ಸಚೇತ್ ಗೆ ಅಭಿನಂದನೆ
ಕನಕಪುರ: ರಾಮನಗರ ಜಿಲ್ಲೆಯ ಕನಕಪುರದ ಸಚೇತ್ ಎಂಬ ಕ್ರೀಡಾಪಟುವು ಜೂನಿಯರ್ ನೆಟ್ ಬಾಲ್ ನ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷ

ಹಿರಿಯ ವಿದ್ಯಾರ್ಥಿಗಳನ್ನು ಶ್ರೀ ಮಠದಲ್ಲಿ ನೋಡಿ ಸಂತೋಷವಾಗಿದೆ: ಮುಮ್ಮಡಿ ನಿರ್ವಾಣ ಶ್ರೀಗಳು
ಕನಕಪುರ: ಶ್ರೀ ದೇಗುಲ ಮಠದ ಹಿರಿಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಸರ್ವ ಸದಸ್ಯರ ಮಹಾಧಿವೇಶ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪ

ಸುತ್ತೂರಿನಲ್ಲಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯಲಿದೆ ಮುಮ್ಮಡಿ ನಿರ್ವಾಣ ಶ್ರೀ
ಕನಕಪುರ: ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಮುಮ್ಮಡಿ ನಿರ್ವಾಣ ಶ್ರೀಗಳು ತಿಳಿಸಿದರು. ಅವರು ದೇಗುಲ

ಭಕ್ತರ ಕಣ್ಮನ ಸೆಳೆದ ದೇಗುಲಮಠದ ಲಕ್ಷದೀಪೋತ್ಸವ
ಕನಕಪುರ ): ನಗರದ ಶ್ರೀ ದೇಗುಲಮಠದಲ್ಲಿ ಕಡೆ ಕಾರ್ತಿಕ ಮಾಸ ಅಮಾವಾಸ್ಯೆ ಪ್ರಯುಕ್ತ ಲಕ್ಷದೀಪೋತ್ಸದ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲ

ನರೇಗಾ ದಲ್ಲಿ ವೈಯುಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ ಜಿಪಂ ಸಿಇಓ
ಕನಕಪುರ: ನರೇಗಾ ಯೋಜನೆಯಡಿ ನಿಗದಿಪಡಿಸಿರುವ ಮಾನವ ದಿನಗಳ ಗುರಿ ಸಾದಿಸಿ, \"ನಮ್ಮ ಹೊಲ ನಮ್ಮ ದಾರಿಗೆ\" ಹೆಚ್ಚಿನ ಒತ್ತು ನೀಡಿ, ಹೆಚ್ಚು-ಹೆಚ್ಚು

ಕೇರಳದಲ್ಲಿ ನಡೆಯುವ ಅನುಭಾವ ಸಂಗಮದಲ್ಲಿ ಪ್ರಭುಕಿರೀಟ ಸ್ವಾಮೀಜಿ ಭಾಗಿ
ಕನಕಪುರ: ತಾಲೂಕಿನ ದೊಡ್ಡ ಮರಳವಾಡಿ ಶಿವಮಠದ ಕಿರಿಯ ಪರಮಪೂಜ್ಯ ಶ್ರೀ ಶ್ರೀ ಪ್ರಭು ಕಿರೀಟ ಮಹಾಸ್ವಾಮಿಗಳವರು ಕೇರಳ ರಾಜ್ಯದ ತಿರುವಂತನಪುರದ

ಶಮಿವೃಕ್ಷ ಪೂಜಿಸುವ ಮೂಲಕ ವಿಜಯದಶಮಿ ಆಚರಿಸಿದ ದೇಗುಲ ಮಠದ ಶ್ರೀಗಳು
ಕನಕಪುರ: ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ವಿಜಯ ದಶಮಿಯಂದು ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವಮಹಾಸ್ವಾಮಿಗಳು ಶಮೀವೃಕ

ವಿದ್ಯಾರ್ಥಿ ಮತ್ತು ನೌಕರರ ಸಹಕಾರಿ ಸಂಸ್ಥೆಯ ವಾರ್ಷಿಕ ಸಭೆ ಉದ್ಘಾಟಿಸಿದ ಸ್ವಾಮೀಜಿ
ಕನಕಪುರ: ಶ್ರೀ ದೇಗುಲಮಠದ ಶ್ರೀ ನಿರ್ವಾಣೇಶ್ವರ ಹಿರಿಯ ವಿದ್ಯಾರ್ಥಿಗಳ ಮತ್ತು ನೌಕರರ ಸೌಹಾರ್ದ ಸಹಕಾರಿ ಸಂಘ ನಿಯಮಿತ ದ 16ನೇ ವರ್ಷದ ವಾರ್ಷಿಕ
ಪ್ರತಿಕ್ರಿಯೆಗಳು