Tel: 7676775624 | Mail: info@yellowandred.in

Language: EN KAN

    Follow us :


ಬಂಜಾರರ ಸಾಮಾಜಿಕ ಹರಿಕಾರ ಸಂತ ಸೇವಾಲಾಲ್

Posted date: 28 Feb, 2018

Powered by:     Yellow and Red

ಬಂಜಾರರ ಸಾಮಾಜಿಕ ಹರಿಕಾರ ಸಂತ ಸೇವಾಲಾಲ್

ಐತಿಹಾಸಿಕವಾಗಿ ಭಾರತದ ಮೂಲ ನಿವಾಸಿಗಳಲ್ಲಿ ಒಂದಾದ ಬಂಜಾರರು (ಲಂಬಾಣಿ) ನೆಲ ಮೂಲ ಸಂಸ್ಕøತಿಯನ್ನು ಇಂದಿಗೂ ಉಳಿಸಿಕೊಂಡಿರುವ ಸಮುದಾಯವಾಗಿದೆ. ಬುಡಕಟ್ಟು ಪರಂಪರೆಯ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಶೋಷಿತ ಸಮುದಾಯ. ಬದಲಾದ ಕಾಲಘಟ್ಟದಲ್ಲಿ ಸ್ಥಿತ್ಯಂತರಕ್ಕೆ ಒಳಪಟ್ಟು, ರಾಜಕೀಯ ಪಲ್ಲಟಗಳಿಂದಾಗಿ ತಮ್ಮ ಸಂಸ್ಕøತಿ, ಭಾಷೆ, ಸಾಹಿತ್ಯ ಉಳಿಸಿಕೊಳ್ಳಲು ಹೆಣಗಾಡುತ್ತಿದೆ, ಐತಿಹಾಸಿಕ, ಸಾಂಸ್ಕøತಿಕ ಶ್ರೀಮಂತಿಕೆಯನ್ನು ಹೊಂದಿರುವ ಬಂಜಾರ ಬುಡಕಟ್ಟಿನ ಆಚಾರ-ವಿಚಾರಗಳು, ವೇಷ, ಭಾμÉ, ಸಾಹಿತ್ಯ, ಉಡುಗೆ-ತೊಡುಗೆ, ಆಹಾರ ಪದ್ಧತಿ ಇತರೆ ಬುಡಕಟ್ಟುಗಳಿಗಿಂತ ಭಿನ್ನವಾಗಿರಿಸಿಕೊಂಡಿದೆ. ಇಂತಹ ಶ್ರೀಮಂತಿಕೆಯನ್ನು ಹೊಂದಿದ ಬಂಜಾರ ಬುಡಕಟ್ಟು ಇಂದು ನಿರ್ಲಕ್ಷಕ್ಕೆ ಒಳಗಾದ ಸಮುದಾಯ. 
ಭಾರತದ ಸಂಸ್ಕøತಿಯಲ್ಲಿ ಬಂಜಾರರ ಉಡುಗೆ-ತೊಡಿಗೆಗೆ ಒಂದು ವಿಶೇಷತೆ ಇದೆ. ತಮ್ಮ  ಪುರಾತನತೆಯನ್ನು ಸಿಂಧೂ ಸಂಸ್ಕøತಿಯೊಂದಿಗೆ ಹೋಲಿಸಿ ಮಾತನಾಡುತ್ತಾರೆ. ಹರಪ್ಪ ಸಂಸ್ಕøತಿಯ ಕಾಲದವಳು ಎಂದು ಹೇಳುವ ನುಡಿಗಟ್ಟಿನಿಂದ ಹಿಡಿದು (ಏ ಮಾ ಹರಪ್ಪಣಿ ಛೂ) ತಮ್ಮ ಸಾಧಕರನ್ನು ನಕ್ಷತ್ರಗಳಿಗೆ ಹೋಲಿಸಿ ಹೇಳುವ ಪೋರಿಯಾರೋ ತಾರಾ ಪದಗಳು ಗೋರ್ ಬೋಲಿ (ಬಂಜಾರ ಮಾತೃ ಭಾಷೆ) ಭಾಷೆಯಲ್ಲಿ ಉಳಿದು ಬಂದಿವೆ. 
ಲಂಬಾಣಿಗರು ತಮ್ಮನ್ನು ಗೋರ್‍ಮಾಟಿ, ಗೋರ್ ಬಂಜಾರಗಳೆಂದು ಕರೆದುಕೊಳ್ಳುತ್ತಾರೆ. ತಾವು ಉಳಿದ ಜನರಿಂದ ಪ್ರತ್ಯೇಕವಾಗಿ ಊರಿನಿಂದ ಹೊರಗೆ ತಾಂಡಾಗಳನ್ನು ಕಟ್ಟಿಕೊಂಡು ಬದುಕು ಕಟ್ಟಿಕೊಂಡವರು. 
ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಬಂಜಾರರ ಕುಲಗುರು, ಆರಾಧ್ಯ ದೈವ, ಧಾರ್ಮಿಕ ನಾಯಕ ಶ್ರೀ ಸಂತ ಸೇವಾಲಾಲರನ್ನು ಗುರುತಿಸಿ ಅವರ ಜನ್ಮ ದಿನವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ. ಹಾಗೂ ಫೆಬ್ರವರಿ 15ರ ದಿನವನ್ನು ಪ್ರತಿ ವರ್ಷ ಸರ್ಕಾರದ ವತಿಯಿಂದ ಸಂತ ಸೇವಾಲಾಲ್ ಜಯಂತಿ ಆಚರಿಸಲು ತೀಮಾನಿಸಿ ಲಂಬಾಣಿಗರಲ್ಲಿ ತಮ್ಮ ಸಂಸ್ಕøತಿ ಮತ್ತು ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ಒಂದು ಹೊಸ ಆಸೆ ಚಿಗುರೊಡೆದಂತಾಗಿದೆ.
 ಲಂಬಾಣಿಗರು ತಮ್ಮ ಬದುಕಿನಲ್ಲಿ ಸೇವಾಭಾಯಾನಿಗೆ ಮಹತ್ವದ ಸ್ಥಾನ ನೀಡುತ್ತಾರೆ. (ಸೇವಾ ನನೋಭಾವ ಉಳ್ಳವನು, ಭಾಯಾ ಅಂದರೆ ಅಣ್ಣ) ಬ್ರಹ್ಮಚಾರಿಯಾಗಿ, ಸಮುದಾಯದ ರಕ್ಷಕನಾಗಿ, ಸಮಾಜ ಸುಧಾರಕನಾಗಿ ಗುರುತಿಸಲ್ಪಟ್ಟಿದ್ದಾನೆ. ಲಂಬಾಣಿಗರ ಐತಿಹಾಸಿಕ ವೀರನಾದ ಈತನ ಕುರಿತು ಜನಪದ ಕಥೆಗಳು, ಕಥನ ಗೀತೆಗಳು, ಕಥನ ಕಾವ್ಯಗಳು ಇವೆ. 
ಕನ್ನಡದ ಮೌಖಿಕ ಚರಿತ್ರೆಯಲ್ಲಿ ಬರುವ ಮಾದೇಶ್ವರ, ಸಿದ್ದಪ್ಪಾಜಿ, ಮಂಟೇಸ್ವಾಮಿಯ ಹಾಗೆ; ಸೇವಾಬಾಯಾ ಕೆಲವು ಪವಾಡಗಳನ್ನು ಮಾಡುವುದರ ಮೂಲಕ ಬಂಜಾರ ಸಮುದಾಯದಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ಪ್ರಕೃತಿಯೊಡನೆ, ಪ್ರಾಣಿ-ಪಕ್ಷಿಗಳೊಡನೆ ಮಾತನಾಡುತ್ತಾನೆ. ವೃದ್ಧರಿಗೆ, ಕಷ್ಟದಲ್ಲಿರುವವರಿಗೆ, ಅನಾರೋಗ್ಯ ಪೀಡಿತರಿಗೆ, ತೊಂದರೆಯಲ್ಲಿ ಸಿಲುಕಿದವರಿಗೆ ರಕ್ಷಿಸಿದ್ದಾನೆ. ಸಮಾಜದ ಕಲ್ಯಾಣಕ್ಕಾಗಿ ತನ್ನ ಬದುಕನ್ನು ಸವೆಸಿದ್ದಾನೆ. 
ಕ್ರಿ.ಶ.1739 ಫೆಬ್ರವರಿ 15 ಬೆಳಗಿನ 9 ಗಂಟೆ ಸೋಮವಾರ ಶಿವರಾತ್ರಿಯ ದಿನ ಸೇವಾಲಾಲ್ ಕರ್ನಾಟಕದ ಇಂದಿನ ದಾವಣಗೆರೆ ಜಿಲ್ಲೆ ಹೊನ್ನಳ್ಳಿ ತಾಲ್ಲೂಕಿನ ಬೆಳಗುತ್ತಿ ಹೋಬಳಿಯ ಸುರಗೊಂಡನಕೊಪ್ಪದಲ್ಲಿ (ಭಾಯಗಡ್) ಜನಿಸಿದ. ತಂದೆ ಭೀಮಾನಾಯ್ಕ ದೊಡ್ಡ ವ್ಯಾಪಾರಿ 3751 (ತೀನ್ ಹಜಾರ್ ಸಾತ್ಸೆ ಪಚ್ಚಾವನ್) ಹಸುಗಳ ಒಡೆಯ. ತಾಯಿ ಆಂದ್ರಪ್ರದೇಶದ ಚಿತ್ತೂರಿನ ಜೈರಾಮ್ ಜಾದವ್‍ನ ಮಗಳು ಧರ್ಮಣಿಬಾಯಿ. ತನ್ನ ತಂದೆ-ತಾಯಿಗೆ ಆದಿಶಕ್ತಿ ಅಂಬಾಭವಾನಿಯ ಆಶಿರ್ವಾದದಿಂದ 12 ವರ್ಷದ ನಂತರ ಹುಟ್ಟಿದ್ದರಿಂದ ತಮ್ಮ ತಾಂಡಾದ ಜನರಿಗೆ ಅಚ್ಚು ಮೆಚ್ಚಿನವನಾದ. ಹುಟ್ಟಿದ ದಿನ ತಾಂಡಾದಲ್ಲಿ ನಂಗಾರ ವಾಧ್ಯ (ಒಂಟಿ ನಗಾರಿ) ನುಡಿಸಿ ಸಂತಸ ಪಟ್ಟರು. ಈತನ ನಾಮಕರಣಕ್ಕೆ ಸಪ್ತಮಾತೆಯರು (ಸಾತೀ ಭವಾನಿ) ಬಂದು ತೊಟ್ಟಿಲನ್ನು ತೂಗಿ ಜಗದಂಬೆ ಆದಿಶಕ್ತಿ ಮರಿಯಮ್ಮ ಈತನಿಗೆ ಸೋಮವಾರ ಹುಟ್ಟಿದ್ದರಿಂದ ಸೇವಾ, ಸೇವಾಲಾಲ್ ಎಂದು ಹೆಸರಿಟ್ಟಳು. 
ಬಾಲ್ಯದಲ್ಲಿ ಬೇಟೆಗೆ ಹೋಗಿದ್ದಾಗ ನವಿಲು (ಮೋರ್) ಬೇಟೆಗಾರನ ಕಣ್ ತಪ್ಪಿಸಿ ತಾನು ಕುಳಿತಿದ್ದ ಬಂಡೆಯ ಬಳಿ ಬಂದು ತನ್ನ ಬಿಳಿ ಪಂಚೆಯಲ್ಲಿ ಅಡಗಿ ಕುಳಿತುಕೊಂಡಿತು. ಆಗ ಬೇಟೆಗಾರನ ದಿಕ್ಕು ತಪ್ಪಿಸಿ ನವಿಲಿನ ಪ್ರಾಣ ಉಳಿಸಿದ. ಪ್ರಾಣಿಗಳ ಬಗ್ಗೆ ದಯೇ ತೋರಿ ಅಹಿಂಸಾ ಪ್ರಿಯನಾದ. ಮುಂದೆ ಬೇಟೆಯಾಡುವುದನ್ನು ಬಿಟ್ಟ. ಲಂಬಾಣಿಗರು ಎಂದಿಗೂ ನವಿಲನ್ನು ತಿನ್ನಬಾರದೆಂದು ಬೋಧಿಸಿದ. 
ಸೇವಾಲಾಲ್ ಎಲ್ಲರಂತೆ ಬಾಲ್ಯದಲ್ಲಿ ತಮ್ಮ ಕುಲಕಸುಬು ದನ ಮೇಯಿಸುವುದು, ಕುದುರೆ ಕಾಯುವುದರ ಮೂಲಕ ಗೌರವಯುತ ಜೀವನ ನಡೆಸುತ್ತಿದ್ದನು. ತಮ್ಮ ಮನೆಯ ದನ ಕಾಯುವ ಕೆಲಸಗಾರರಾದ ಸಕ್ಯಾ-ಪಟ್ಯಾ ರೊಡನೆ ಕಾಡಿಗೆ ಹೋಗುತ್ತಿದ್ದನು. ತಾಯಿ ಬುತ್ತಿ ಕೊಟ್ಟರೆ ತೆಗೆದುಕೊಂಡು ಹೋಗುತ್ತಿರಲಿಲ್ಲ. ತೆಗೆದುಕೊಂಡು ಹೋದರೆ ತನ್ನ ಜೊತೆ ದನ ಕಾಯುವ ಗೆಳೆಯರಿಗೆ ನೀಡುತ್ತಿದ್ದನು. ತನಗೆ ಹಸಿವಾದಾಗ ಹಳ್ಳದ ದಂಡೆಯ ಮರಳಿನಿಂದ ಸಿರಾ, ಪೂರಿಗಳನ್ನು ತಯಾರಿಸುತ್ತಿದ್ದ, ಕಲ್ಲನ್ನು ನಗಾರಿಯನ್ನಾಗಿ, ತಾಳೆ ಎಲೆಗಳನ್ನು ತಾಳಗಳನ್ನಾಗಿ ಮಾಡಿಕೊಂಡು ನುಡಿಸಿ ಹಾಡುತ್ತಿದ್ದನು. ಹೀಗೆ ಅನೇಕ ಪವಾಡಗಳನ್ನು ಮಾಡುತ್ತಿದ್ದನು. 
ಸೇವಾಲಾಲ್ ಸಮಾಜ ಸುದಾರಣೆಗಾಗಿ ಒಮ್ಮೆ ಷೇಂಗಾವತ್ ಎಂಬ ತಾಂಡಾಕ್ಕೆ ಹೋಗಿ ದೀಪಾವಳಿ ಹಬ್ಬದಲ್ಲಿ ಪಾಲ್ಗೊಳ್ಳುವುದೆಂದು ತೀರ್ಮಾನಿಸಿದ್ದನು. ದೀಪಾವಳಿ ಹಬ್ಬ, ನಾಡೆಲ್ಲಾ ಸಡಗರ ಸಂಭ್ರಮದಲ್ಲಿದ್ದರೆ. ಆಗ ತಾನೆ ಮದುವೆಯಾಗಿ ಬಂದ ತಾಂಡಾದ ಅಳಿಯನಿಗೆ ಮಸೋಬಾ (ಗಾಳಿ ಸೋಕಿ) ಮೂರ್ಚೆ ಬಂದು ಬಿದ್ದಿದ್ದ. ಇದನ್ನ ತಿಳಿದ ಜನ ಆ ವರ್ಷದ ದೀಪಾವಳಿ ಹಬ್ಬವನ್ನು ರದ್ದುಮಾಡಿದರು. ನವ ವರ ಸತ್ತಿದ್ದಾನೆಂದು ತಿಳಿದು ಊರೆಲ್ಲಾ ಶೋಕದಲ್ಲಿ ಮುಳುಗಿದ್ದರು. ಬಂಜಾರರ ಮೊದಲ ಸಾದು ಈ ತಾಂಡಾಗೆ ಬೇಟಿಕೊಟ್ಟಿದ್ದನ್ನು ತಿಳಿದ ಜನ ಹಬ್ಬವಂತು ರದ್ದಾಗಿದೆ. ಸಾದು ಬೇರೆ ಬಂದಿದ್ದಾನೆ ಎಂದು ತಿಳಿದು ಆರತಿ ಬೆಳಗಿ ಕಳುಹಿಸುವುದು ಎಂದು ತೀರ್ಮಾನಿಸಿದರು. ಆರತಿ ಬೆಳಗಲು ಊರ ಹೆಣ್ಣು ಮಕ್ಕಳು ಸೇರಿದರು. ಆರತಿ ತಟ್ಟೆ ಬೆಳಗಲು ಹೋಗಿ ತಟ್ಟೆ ಎತ್ತಲಾಗದೆ ಹೋದರು. ಮತ್ತೊಂದು ಕಡೆ ಮದುವೆಯಾದ ಮೊದಲ ದಿನವೇ ಗಂಡನನ್ನು ಕಳೆದುಕೊಂಡ ದುಃಖದಲ್ಲಿ ಹುಡುಗಿ ಡಾವುಳೋ (ಶೋಕ ಗೀತೆ) ಮಾಡುತ್ತಾ ಅಳುತ್ತಿದ್ದಾಳೆ. 
ಸಂತ ನಿರಾಕಾರಿ ಬಾಪು ದಾಡೋ ನಿಕಲೋಕೋನಿ ಜೇರಾಂಗ್
ದಾಡೋ ಡುಬಾಗೋ; ಜೇನ್ ಆಯೊ ಕಾಯ್ ಬಾಪು ಆಯೀಯೋ..... ಅಂದರೆ ಸೂರ್ಯ ಹುಟ್ಟುವುದಕ್ಕಿಂತ ಮುಂಚೆಯೇ ಸೂರ್ಯ ಮುಳುಗಿರುವುದನ್ನು ನೋಡಲು ಬಂದ ಸಂತ ನಿರಾಕಾರನೆ ಎನ್ನುವ ಶೋಕ ಗೀತೆಯನ್ನು ಹಾಡುತ್ತಾ ಅಳುತ್ತಿದ್ದಾಳೆ. ಆಗ ಸೇವಾಲಾಲ್ ನಿಮ್ಮ ಮನೆಯವನ್ನು ಸತ್ತಿಲ್ಲ ಏತಕ್ಕಾಗಿ ಅಳುತ್ತಿ ಎಂದು ಹೇಳುತ್ತಾನೆ. ಅಳುತ್ತಿದ್ದ ಹುಡುಗಿ ಸಂತಸಗೊಂಡು ಬಂದು ಆರತಿ ಎತ್ತಿ ಬೆಳಗಿದಳು. ಕೂಡಲೇ ಬೇವಿನ ಸೊಪ್ಪಿನಿಂದ ದೇಹಕ್ಕೆ ಸವರಿ ಸತ್ತ ಹುಡುಗನಿಗೆ ಜೀವ ಬರಿಸಿದ. ತನ್ನ ವೈದ್ಯಕೀಯ ಜ್ಞಾನದಿಂದ ಸತ್ತಿದ್ದವನಿಗೆ ಬದುಕಿಸಿ ಪವಾಡ ಪುರುಷನಾದನು. 
ಸೇವಾಲಾಲ್ ಕೇವಲ ಲಂಬಾಣಿಗರಿಗೆ ಸಮುದಾಯಕ್ಕೆ ಮಾತ್ರ ಸುಧಾರಕನಾಗಿರಲಿಲ್ಲ. ಒಮ್ಮೆ ಝೂರಿ ಬಾಂಬೆಯ ಒಬ್ಬ ಮುತ್ತು ರತ್ನಗಳ ವ್ಯಾಪಾರಿಯ ಹಡಗು ಹಿಂದೂ ಮಹಾಸಾಗರದಲ್ಲಿ ಬಿರುಗಾಳಿಯ ರಭಸಕ್ಕೆ ಸಿಕ್ಕಿ ತತ್ತರಿಸುತ್ತಿತ್ತು. ಝೂರಿಯು ಎಲ್ಲಾ ದೇವತೆಗಳಲ್ಲಿ ಮೊರೆ ಹೋದನು ಏನೂ ಆಗದೇ ಇದ್ದಾಗ ಕೊನೆಗೆ ಸೇವಾಲಾಲರನ್ನು ಪ್ರಾರ್ಥಿಸಿಕೊಂಡನು. ಆತನ ಹಡಗು ಬಿರುಗಾಳಿಯ ಅಪಾಯದಿಂದ ಉಳಿದುಕೊಂಡಿತು. 
ಸೇವಾಲಾಲ್ ತಮ್ಮ ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿದ್ದುಕೊಂಡು ಆದರ್ಶ ಪುರುಷನಾದ. ಸಮುದಾಯದ ಜನರಿಗೆ ಸ್ಥಿರ ಜೀವನಕ್ಕೆ ಹಾದಿ ತೋರಿದ. ವ್ಯಾಪಾರದಲ್ಲಿ ಕಷ್ಟ ಕೋಟಲೆಗಳು ಅಧಿಕವಾಗಿದ್ದನ್ನು ತಾನೇ ಸ್ವತಹಃ ಅನುಭವಿಸಿದ್ದರಿಂದ ಒಂದೇ ಕಡೆ ಶಾಸ್ವತವಾಗಿ ನೆಲೆ ಊರಲು ಮಾರ್ಗದರ್ಶನ ಮಾಡಿದ. ಭೂಮಿ, ನೀರು ನಂಬಿಕೊಂಡು ವ್ಯವಸಾಯ, ಪಶುಪಾಲನೆ ಮಾಡಲು ತಿಳುವಳಿಕೆ ನೀಡಿದ. ಹೆಣ್ಣು ಮಕ್ಕಳು ಮೈತುಂಬಾ ಬಟ್ಟೆ ಹಾಕಬೇಕು, ಹಬ್ಬ-ಹರಿದಿನಗಳು, ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ತಾವೇ ತಯಾರಿಸಿದ ಮಧ್ಯವನ್ನು ಸೇವಿಸಬೇಕು. ತಾಂಡಾಗಳಲ್ಲಿ ಎಲ್ಲೂ ಬ್ರಾಹ್ಮಣರು ಇಲ್ಲದುದ್ದರಿಂದ ಎಲ್ಲರೂ ಒಟ್ಟಿಗೆ ಸೇರಿ ಶುಭ ಕಾರ್ಯಗಳನ್ನು ಸಾಮೂಹಿಕವಾಗಿ ಒಂದಾಗಿ ಆಚರಿಸಲು ಕರೆ ನೀಡಿದ. 
ಬಂಜಾರರು ಶ್ರಮಜೀವಿಗಳು, ಬಡಿದು ತಿನ್ನುವವರಲ್ಲ; ದುಡಿದು ತಿನ್ನುವವರು. ಯಾರಿಗೂ ತೊಂದರೆ ನೀಡಿದವರಲ್ಲ, ಮೋಸಗಾರರಲ್ಲ, ಯಾರಿಗೂ ಅನ್ಯಾಯ ಮಾಡುವವರಲ್ಲ, ಹೊಟ್ಟೆಪಾಡಿಗಾಗಿ ಬದುಕು ಕಟ್ಟಿಕೊಂಡವರು. ರಾಭೇನಿತೊ ಚಾಭೇನ್ ಮಳೇನಿ (ಕೆಲಸ ಮಾಡದಿದ್ದರೆ ತಿನ್ನಲು ಸಿಗುವುದಿಲ್ಲ) ಎನ್ನುವ ನುಡಿಗಟ್ಟು ಕಾಯಕ ತತ್ವ ಹೇಳಿದ ಬಸವಣ್ಣನ ‘ಕಾಯಕವೇ ಕೈಲಾಸಕ್ಕೆ’ ಅನ್ವರ್ಥಕ್ಕೆ ಅನುಗುಣವಾಗಿ ಬದುಕಿದವರು. 
ಲೇಖನ : ಡಾ ರವಿ ಯು.ಎಂ, ಸಂಶೋಧಕ ಮತ್ತು ಉಪನ್ಯಾಸಕ, 
ಉರುಗನದೊಡ್ಡಿ, ತಟ್ಟೆಕೆರೆ ಅಂಚೆ,
ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ
ದೂ: 9945792712.

ಪ್ರತಿಕ್ರಿಯೆಗಳು1 comments

  • Bhojaraj s wrote:
    01 Mar, 2018 12:41 am

    Please give me information about sathgRu sevalal

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑