Tel: 7676775624 | Mail: info@yellowandred.in

Language: EN KAN

    Follow us :


ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

Posted date: 19 Nov, 2021

Powered by:     Yellow and Red

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸಾಪ ಸದಸ್ಯರು ಎರಡನೇ ಬಾರಿಯೂ ಆಶೀರ್ವದಿಸಿ ಕಳುಹಿಸಿದರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಕನ್ನಡ ಭವನ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ಜಾನಪದ ತಜ್ಞ ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.


ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ, ಕನ್ನಡ ಭಾಷೆ, ನಾಡು, ನುಡಿ, ನೆಲ, ಜಲ, ಕನ್ನಡದ ಅಸ್ಮಿತೆಗೆ ಕುಂದು ಎದುರಾದಾಗ ಸರ್ಕಾರದ ಹಾಗೂ ಇಲಾಖೆಯ ಯಾವುದೇ ಹಂಗು ಇಲ್ಲದೇ ನಿರ್ಭೀತಿಯಿಂದ ಹೋರಾಟ ಚಳವಳಿಯಲ್ಲಿ ಭಾಗವಹಿಸಿ ನ್ಯಾಯದೊರಕಿಸಿಕೊಡಬಲ್ಲ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡದ ತೇರನ್ನು ಮತ್ತಷ್ಟು ಮುಂದಕ್ಕೆ ಎಳೆದು ಬರುವ ಮಹದಾಸೆಯನ್ನು ಹೊಂದಿರುವ ಸರಳ ಸಜ್ಜನ, ಕ್ರಿಯಾಶೀಲ ಹೋರಾಟಗಾರ,ಸಂಘಟಕ ಬಿ.ಟಿ.ನಾಗೇಶ್ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ಮತದಾರರು ಬೆಂಬಲಿಸಿ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದರು. ಅವರು ನಗರದ ಖಾಸಗಿ ಹೋಟೆಲ್‍ನಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು,


ಬಿ.ಟಿ.ನಾಗೇಶ್ ಅವರನ್ನು ಈ ಚುನಾವಣೆಯಲ್ಲಿ ನಾವು ಸೇರಿದಂತೆ ಮತದಾರ ಪ್ರಭುಗಳು ಏಕೆ ಬೆಂಬಲಿಸಬೇಕು ಎಂಬುದನ್ನು ವಿವರಿಸಿದ ಅವರು, ಹಿರಿಯ ಚೇತನಗಳು, ನಿರ್ವಂಚನೆ, ನಿಷ್ಪಕ್ಷಪಾತ, ನಿಸ್ವಾರ್ಥದ ತಳಹದಿಯ ಮೇಲೆ ಬೆಳೆದು ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಇಂದು ಸ್ವಜನಪಕ್ಷಪಾತ, ರಾಜಕೀಯ,ಕೋಮುವಾದ ರಾಜಕಾರಣ ಪ್ರವೇಶ ಮಾಡುತ್ತಿದೆ. ಒಬ್ಬ ಸರ್ಕಾರಿ ನೌಕರನಾದರೆ ಅಥವಾ ಒಂದು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಕನ್ನಡ ನಾಡು, ಭಾಷೆ, ನುಡಿ, ನೆಲ,ಜಲಕ್ಕೆ ಕುಂದು ಎದುರಾದರೆ ಕನ್ನಡದ ಅಸ್ಮಿತೆಗೆ ಕುಂದು ಉಂಟಾದಾಗ ಸರ್ಕಾರದ ಅಥವಾ ಸಂಸ್ಥೆಯ ಹಂಗು ತೊರೆದು ಮುಕ್ತವಾಗಿ ನಿರ್ಭೀತಿಯಿಂದ ಸರ್ಕಾರ, ಅಧಿಕಾರಿಗಳ ವಿರುದ್ಧ ಹೋರಾಟ, ಚಳವಳಿಯಲ್ಲಿ ಭಾಗವಹಿಸಿ ನ್ಯಾಯದೊರಕಿಸಿ ಕೊಡಲು ಮತ್ತು  ಆ ಹುದ್ದೆಗೆ ನ್ಯಾಯ ಒದಗಿಸಲು ಸಾಧ್ಯವೇ ಎಂದು ಪ್ರಶ್ನಿಸಿ, ಮತದಾರರು ಈ ಬಗ್ಗೆ ಚಿಂತನೆ ಮಾಡಿ ಯಾರು ಅರ್ಹರು ಎಂಬುದನ್ನು ಅರಿತು ತಮ್ಮ ಮತ ಚಲಾಯಿಸಬೇಕು ಎಂದರು.


ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿ.ಟಿ.ನಾಗೇಶ್ ಅವರು ಯಾವುದೇ ಸರ್ಕಾರಿ ನೌಕರರಲ್ಲ. ಪೂರ್ಣ ಪ್ರಮಾಣದ ಕನ್ನಡದ ಪರಿಚಾರಕರು. 2013ರಲ್ಲಿ ಕಸಾಪ.ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಕಸಾಪ. ಆಳ, ಅಗಲ, ಒಳ, ಹೊರಗಿನ ಚಿತ್ರಣವನ್ನು ಬಲ್ಲವರಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲೆ,ತಾಲ್ಲೂಕು, ಹೋಬಳಿ ಅಲ್ಲದೇ ಅಂತರ ಜಿಲ್ಲಾ ಸಮ್ಮೇಳನ ಸೇರಿದಂತೆ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮವನ್ನು ರೂಪಿಸಿ ಕನ್ನಡ ಕಟ್ಟುವ ಕೆಲಸವನ್ನು ಸಾಕಷ್ಟು ಮಾಡಿದ್ದಾರೆ. ಆ ಹುದ್ದೆಗೆ ನ್ಯಾಯದೊರಕಿಸಿ ಕೊಡುತ್ತಾರೆ ಎಂಬ ನಂಬಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಇಂತಹವರ ಅವಶ್ಯಕತೆ ತುಂಬ ಇದೆ ಎಂಬುದನ್ನು ಸಮಾನ ಮನಸ್ಕರಾದ ನಾವೆಲ್ಲರೂ ಸೇರಿ ಮುಕ್ತಮನಸಿನಿಂದ ಬಿ.ಟಿ.ನಾಗೇಶ್ ಅವರನ್ನು ಬೆಂಬಲಿಸುತ್ತಿದ್ದೇವೆ. ಈ ಬಾರೀ ಅವರನ್ನು ಬಹುಮತದಿಂದ ಆಯ್ಕೆ ಮಾಡಿ ಕನ್ನಡ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.


ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿ.ಟಿ.ನಾಗೇಶ್ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೂ ವಿವಿಧ ಕನ್ನಡಪರ, ರೈತಪರ ಹೋರಾಟ, ವಿವಿಧ ಕನ್ನಡಪರ ಸಾಂಸ್ಕೃತಿಕ ಸಂಘಟನೆಗಳ ಜೊತೆಗೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯಾಭಿರುಚಿ ಮೂಡಿಸುತ್ತಾ ನಿರಂತರವಾಗಿ ಕನ್ನಡದ ಕಾಯಕದಲ್ಲಿ ಸೇವಕನಾಗಿ ದುಡಿಯುತ್ತಿದ್ದೇನೆ. 2013-15ರ ಅವಧಿಯಲ್ಲಿ ರಾಮನಗರ ಜಿಲ್ಲಾ ಕ.ಸಾ.ಪ.ಅಧ್ಯಕ್ಷನಾಗಿ ಎಲ್ಲರ ಆಶೀರ್ವಾದಿಂದ ಆಯ್ಕೆಯಾಗಿ ಎಲ್ಲರ ಸಲಹೆ ಸಹಕಾರದೊಂದಿಗೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ದತ್ತಿಗಳನ್ನು ಹೆಚ್ಚಿಸಿದ್ದೇನೆ. ಜಿಲ್ಲಾ ಕ.ಸಾ.ಪ. ಹೆಸರಿನಲ್ಲಿ ತಲಾ 1 ಲಕ್ಷ ರೂ.ನಂತೆ 3 ದತ್ತಿಗಳನ್ನು ಸ್ಥಾಪಿಸಿದ್ದೇನೆ. ಜೊತೆಗೆ ಕನಕಪುರ ತಾ.ಹಾರೋಹಳ್ಳಿಯಲ್ಲಿ ಎಲ್ಲರ ಸಹಕಾರದಿಂದ ಕಸಾಪಕ್ಕೆ ನಿವೇಶನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ. ಮತ್ತಷ್ಟು ಕನ್ನಡದ ಸೇವೆಯನ್ನು ಮಾಡುವ, ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಶ್ರೀಮಂತಿಕೆಯನ್ನು ಕೊಡಬೇಕೆಂಬ ಮಹದಾಸೆಯನ್ನು ಹೊಂದಿರುವ  ನನಗೆ ಎಲ್ಲಾ ಪಕ್ಷದವರು, ನಾಯಕರು, ಮುಖಂಡರು,ಎಲ್ಲಾ ಸಮುದಾಯದವರು ಬೆಂಬಲ ವ್ಯಕ್ತಪಡಿಸುತ್ತಿದ್ದು, ಮತದಾರರು ಯಾವುದೇ ಒಡಕು ಧ್ವನಿಗಳಿಗೆ ಕಿವಿಗೊಡದೇ ನನ್ನನ್ನು ಬೆಂಬಲಿಸಿ ಆಶೀರ್ವದಿಸಿ ಕನ್ನಡ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು  ಮನವಿ ಮಾಡಿದರು.


ಕ.ಸಾ.ಪ.ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದ ಸಿಂ.ಲಿಂ.ನಾಗರಾಜು ಅವರ ಪುತ್ರ, ಕನ್ನಡದ ಪರಿಚಾರಕ ಸಿ.ಎನ್.ಆದರ್ಶಕುಮಾರ್ ಅವರು ಮಾತನಾಡಿ, ಕ.ಸಾ.ಪ. ವ್ಯವಹಾರಿಕ ಸಂಸ್ಥೆ ಆಗಬಾರದು. ಅಂತಹವರ ಕೈಗೆ ಅಧಿಕಾರ ಸಿಗಬಾರದು. ಹಳ್ಳಿ ಹಳ್ಳಿಗೆ ಕನ್ನಡದ ಕಂಪನ್ನು ಹರಿಸುವ ಸಾಮರ್ಥ್ಯವನ್ನು ಹೊಂದಿರುವ ಬಿ.ಟಿ.ನಾಗೇಶ್ ಅವರನ್ನು ಪ್ರಬುದ್ಧ ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

 ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ರಾಜಶೇಖರ್, ತಾಲ್ಲೂಕು ಕಾರ್ಯದರ್ಶಿ ಸ್ವಾಮಿ, ರಾಮಣ್ಣ, ನಿಕಟ ಪೂರ್ವ ತಾಲ್ಲೂಕು ಅಧ್ಯಕ್ಷ ಮತ್ತೀಕೆರೆ ಚಲುವರಾಜು, ನವ್ಯ ಪೌಂಡೇಷನ್ ಸಂಸ್ಥೆಯ ಮುಖ್ಯಸ್ಥೆ ನವ್ಯಶ್ರೀ, ನಿಕಟ ಪೂರ್ವ ತಾಲ್ಲೂಕು ಕಾರ್ಯದರ್ಶಿ ಮಂಜೇಶ್‍ಬಾಬು, ಖಜಾಂಚಿ ಶ್ರೀನಿವಾಸ್ ರಾಂಪುರ, ಮತ್ತೀಕೆರೆ ಚಲುವರಾಜು, ರಾಜು, ಚಕ್ಕೆರೆ ಪುಟ್ಟಸ್ವಾಮಿ ಸೇರಿದಂತೆ ಹಲವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಬಿ.ಟಿ.ನಾಗೇಶ್‍ಗೆ ಬೆಂಬಲವನ್ನು ವ್ಯಕ್ತಪಡಿಸಿ, ಮತದಾರರು ಬಿ.ಟಿ.ನಾಗೇಶ್ ಅವರನ್ನು ಬೆಂಬಲಿಸಬೇಕೆಂದು ಕೋರಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑