Tel: 7676775624 | Mail: info@yellowandred.in

Language: EN KAN

    Follow us :


ನನ್ನೂರು ನನಗೇನ ಕೊಡಬೇಕು...?

Posted date: 01 Feb, 2018

Powered by:     Yellow and Red

ನನ್ನೂರು ನನಗೇನ ಕೊಡಬೇಕು...?

ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟಿದ್ದೆ. ಊರಿನಲ್ಲಿ ರಥಸಪ್ತಮಿ ಜಾತ್ರೆ. ಕೂನಗಲ್ ರಂಗನಾಥಸ್ವಾಮಿ ಜಾತ್ರೆ ನಮ್ಮ ಊರನ್ನು ಬಿಟ್ಟು ನಡೆಯುವಂತಿಲ್ಲ. ಕಾರಣ ಕೃಷ್ಣಾಪುರದೊಡ್ಡಿ ಎಂಬ ಸುಂದರ ಪುಟ್ಟ ಊರು ಕೂನಗಲ್‌ನ ದಾಖಲೆ ಗ್ರಾಮ. ತಾತ ಮುತ್ತಾತಂದಿರು ಅಲ್ಲೆÃ ವಾಸಿಸುತ್ತಿದ್ದು ಅರ್ಕಾವತಿ ನದಿಯ ದಕ್ಷಿಣ ಭಾಗದಲ್ಲಿ ಜಮೀನು ಇದ್ದುದರಿಂದ ತುಂಬಿ ಹರಿವ ಹೊಳೆಯನ್ನು (ಹೊಳೆ ತುಂಬಿ ಹರಿಯುತ್ತಿದ್ದುದು ಒಂದು ಇತಿಹಾಸ) ದಾಟಲು ಕಷ್ಟವಾಗುತ್ತದೆ. ನದಿಯಾಚೆಗೆ ಮನೆ ಮಾಡಿದರೆ ಹೇಗೆ ಎಂದು ಆಲೋಚಿಸಿ ಅದರಂತೆ ಈಗಿನ ಕೃಷ್ಣಾಪುರದೊಡ್ಡಿಯ ಮೊದಲ ಮನೆ ನಿರ್ಮಾಣವಾಯಿತು. ನನ್ನಪ್ಪ ನನಗೆ ಈ ವಿಚಾರ ಹೇಳುತ್ತಿದ್ದರು. ತಾತನ ಮನೆ ಇದ್ದ ಕೂನಗಲ್ ಜಾಗವನ್ನು ಈಗಲೂ ನಮಗೆ ತೋರಿಸುತ್ತಾರೆ. ದಿಕ್ಕು ತಪ್ಪಿಸಿದೆನೇನೋ ಅನಿಸುತ್ತಿದೆ. ಏನೋ ಹೇಳಲು ಹೊರಟವನು ಮತ್ತೆÃನೋ ಪ್ರವರ ಆರಂಭಿಸಿದೆ ಎಂದುಕೊಳ್ಳಬೇಡಿ.
ಹ್ಞಾ ಕೂನಗಲ್ಲಿನ ರಂಗನಾಥಸ್ವಾಮಿ ದೇಗುಲ ಸರಿಸುಮಾರು ಏಳುನೂರು ವರ್ಷಗಳಷ್ಟು ಹಳೆಯದು. ಸುತ್ತ ಮುತ್ತಲ ಏಳು ಹಳ್ಳಿಗಳಿಗೆ ಆರಾಧ್ಯ ದೈವ, ಕೂನಗಲ್ ಬೆಟ್ಟದ ತಪ್ಪಲಿನಲ್ಲಿ ಪರಿಸರದ ಮಧ್ಯೆ ಇತ್ತು. ಈಗ ಬಿಡಿ, ಎದುರಿಗೆ ಹೈಸ್ಕೂಲು, ಪದವಿಪೂರ್ವ ಕಾಲೇಜು ಎಲ್ಲ ಆಗಿದೆ. ರಥಸಪ್ತಮಿಯ ಅಂಗವಾಗಿ ದೊಡ್ಡ ಪ್ರಮಾಣದ ಜಾತ್ರೆ ಪ್ರತಿವರ್ಷ ನಡೆಯುತ್ತದೆ. ಸುಮಾರು ನಲವತ್ತು ವರ್ಷಗಳ ಕಾಲ ಆ ಜಾತ್ರೆಯಲ್ಲಿ ನನ್ನದು ಸಕ್ರಿಯ ಪಾತ್ರ. ಈ ಬಾರಿ ಜಾತ್ರೆ ನಡೆಯುವುದನ್ನೆÃ ನನಗೆ ತಿಳಿಸಲಿಲ್ಲವಲ್ಲ ಎಂದು ಬೇಸರಿಸಿಕೊಂಡು ಮುದ್ದುಶ್ರಿÃ ದಿಬ್ಬದ ಬೇವಿನ ಮರದಡಿ ಕುಳಿತಿದ್ದೆ. ಇಲ್ಲೊಂದು ವಿವರಣೆ ಬೇಕು. ಯಾವುದೀ ಮುದ್ದುಶ್ರಿÃ ದಿಬ್ಬ? ಪ್ರಶ್ನೆ ಸಹಜ ತಾನೆ...?
ಕೆ.ಜಿ. ಹೊಸಹಳ್ಳಿ ಕೆರೆಯ ದಂಡೆಯಲ್ಲಿನ ಪುಟ್ಟಹಳ್ಳಿಗೆ ಕೆರೆಮೇಗಳದೊಡ್ಡಿ ಎನ್ನುತ್ತಾರೆ. ಊರಿಗೆ ನೂರು ಮೀಟರ್ ದೂರದಲ್ಲಿ ಜಮೀನು ತೆಗೆದುಕೊಂಡು ಒಂದು ಪುಟ್ಟ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿ ಅದಕ್ಕೆ ಮುದ್ದುಶ್ರಿÃ ದಿಬ್ಬವೆಂದು ಹೆಸರಿಸಿದ್ದೆÃನೆ. ಅಲ್ಲೊಂದು ಬಯಲು ರಂಗಮಂದಿರವಿದೆ. ಬಂದವರು ಉಳಿದುಕೊಳ್ಳಲು ಅನುಕೂಲವಾಗುವ ಹಾಗೆ ಒಂದಷ್ಟು ಕೊಠಡಿಗಳು, ಸ್ನಾನದ ಮನೆಗಳು, ಶೌಚಗೃಹಗಳು, ಅಡುಗೆ ಮನೆ ಇತ್ಯಾದಿ ನಿರ್ಮಾಣವಾಗಿವೆ. ರಾಮಫಲ, ಲಕ್ಷö್ಮಣಫಲ, ಅಂಜೂರ, ಜಂಬುನೇರಳೆ, ಗಜನಿಂಬೆ, ಸಪೋಟ, ಸೀಬೆ, ಅಡಿಕೆ, ತೆಂಗು ಇತ್ಯಾದಿ ಕೆಲವು ಮರಗಿಡಗಳನ್ನು ನೆಟ್ಟು ಪೋಷಿಸುವ ಕೆಲಸವೂ ನಡೆದಿದೆ. ಆಗಾಗ ಕವಿಗೋಷ್ಠಿ, ವಿಚಾರ ಸಂಕಿರಣ, ಮಕ್ಕಳಿಗಾಗಿ ರಂಗತರಬೇತಿ ಶಿಬಿರಗಳು, ಜಾನಪದ ಸಂಶೋಧಕರಿಗೆ ಕ್ಷೆÃತ್ರಕಾರ್ಯ ತರಬೇತಿ ಶಿಬಿರಗಳು ನಿರಂತರ ನಡೆಯುತ್ತವೆ. ಇಷ್ಟೆಲ್ಲ ಗಳಿಸಿಕೊಳ್ಳಲು ಅಗತ್ಯವಾದ ಶಕ್ತಿಕೊಟ್ಟ ನನ್ನೂರು ನನಗೇನ ಕೊಟ್ಟಿದೆ, ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಿಲ್ಲ ಎಂಬುದು ನನ್ನ ಸಣ್ಣತನವಲ್ಲವೇ? ಈ ಹಿನ್ನೆಲೆಯಲ್ಲಿ ಅನಿಸಿದ್ದನ್ನು ಮನದಾಳದಿಂದ ಸಹೃದಯರೆದುರು ಬಿಚ್ಚಿಡಬೇಕೆನಿಸಿತು. ಅದು ಕಾರಣ ಈ ಬರೆಹ.
ಅದೇ ಬಯಲು ರಂಗಮಂದಿರದ ಒಣ ಬೇವಿನ ಮರದ ಕೆಳಗೆ ಕುಳಿತು ಯೋಚಿಸುತ್ತಿದ್ದೆ. ನನ್ನ ಸಣ್ಣತನಗಳ ಬಗ್ಗೆ ಹೇಸಿಗೆ ಹುಟ್ಟಲಾರಂಭಿಸಿತು. ನನ್ನೊಳಗೆ `ನಾನು’ ಎಂಬ ಅನಿಷ್ಠ ಆವರಿಸಿಕೊಂಡಿದೆ ಎನ್ನಿಸಿತು. ಅದರ ಅವಸಾನದ ದಾರಿ! ಹುಡುಕಾಡಿದೆ, ಗೋಚರಿಸಲೊಲ್ಲದು. ನನ್ನೂರು ನನ್ನ ಜನ ನನ್ನನ್ನು ಭಿನ್ನವಾಗಿ, ತುಂಬಾ ಎತ್ತರದಲ್ಲಿಟ್ಟು ಓಲೈಸಬೇಕೆಂಬ ಹಂಬಲ ಹುಟ್ಟಿಕೊಂಡಿದ್ದು ಅಸಹ್ಯ ಅನಿಸಿತು. ಮರುಕ್ಷಣ ಬುದ್ಧ ನೆನಪಾದ. ಅವನ ದಾರಿ ಗೋಚರಿಸಿತು. ಅವನ ನಡೆ ನುಡಿ, ಆಲೋಚನಾ ಕ್ರಮ, ಅವನು ಆರಿಸಿಕೊಂಡ ಅನುಭವದ ನುಡಿಗಳು ಅನುರಣಿಸಲಾರಂಭಿಸಿತು. ಹುಟ್ಟಿದ, ಸಕಲ ಸುಖ ಭೋಗದಲ್ಲಿ ಬೆಳೆದ. ಯಶೋಧರೆಯನ್ನು ವರಿಸಿ ಮಕ್ಕಳನ್ನೂ ಪಡೆದು ಏಕಾಏಕಿ ರಾತ್ರೋರಾತ್ರಿ ಜಗವೆಲ್ಲ ಮಲಗಿರುವಾಗ ತಾನೆದ್ದು ಹೊರಟ. ಇದು ಲೋಕದ ದೃಷ್ಟಿಯಲ್ಲಿ ಬುದ್ಧ ಬೆನ್ನುತೋರಿದ ಎನ್ನಿಸಬಹುದು. ಆದರೆ ಇನ್ನೊಂದು ಮುಖವಿದೆ. ಸಮಾಜ ಸದಸ್ಯನಾಗಿ ಹುಟ್ಟಿದ ಮೇಲೆ ನನ್ನದೇ ಕರ್ತವ್ಯಗಳಿವೆ ಎಂಬುದನ್ನು ಮನಗಂಡ. ಎಲ್ಲ ಐಹಿಕ ಬಂಧನಗಳಿಂದ ಹೊರಬರಬೇಕೆನ್ನುತ್ತಲೇ ಒಂದೊಂದಾಗಿ ಕಳೆದುಕೊಳ್ಳುತ್ತಾ ಸಂಪೂರ್ಣ ಖಾಲಿಯಾದ. ಶೂನ್ಯದ ಪ್ರಭೆಯಲ್ಲಿ ಪ್ರಜ್ವಲಿಸಿದ. ಸಾಮಾನ್ಯರೊಳು ಸಾಮಾನ್ಯನಾಗಿ ಕಾಷಾಯ ವಸ್ತ್ರ ಧರಿಸಿ ಭಿಕ್ಷಾಪಾತ್ರೆ ಹಿಡಿದು ತನಗರಿವಿಲ್ಲದಂತೆಯೇ ಲೋಕೋಪಕಾರಕ್ಕೆ ಕಟಿಬದ್ಧನಾಗಿ ನಿಂತ. ಸ್ವಾರ್ಥದ ಹಂಗು ತೊರೆದು ಜಗದ ಮಹಾಬೆಳಕಾದ. ಮೋಕ್ಷವನ್ನರಸುತ್ತ ಪ್ರಿÃತಿಯ ಬಂಧಿಯಾದ. ಧೀನರು ಆರ್ಥರು ದಲಿತರ ಪರವಾಗಿ ನಿಂತ ಬುದ್ಧ ತನ್ನನ್ನೇ ತಾನು ಗೆದ್ದ.
ಅದೇ ಸಂದರ್ಭಕ್ಕೆ ಭಾರತದ ತುಂಡುಡುಗೆಯ ಫಕೀರ ಗಾಂಧಿ ನೆನಪಾದ, ಅಂಬೇಡ್ಕರ್, ಗೋಖಲೆ, ತಿಳಕರು, ಅಬ್ದುಲ್ ಕಲಂ ಮುಂತಾದ ಸ್ವಾತಂತ್ರö್ಯ ಹೋರಾಟಗಾರರು ಇವರುಗಳ ಸಾಧನೆ, ಕ್ರಮಿಸಿದ ದೂರ, ಅವರಿಟ್ಟ ಹೆಜ್ಜೆಗಳು, ಅವರು ತೊಟ್ಟ ಧಿಕ್ಷೆಗಳು ನೆನಪಾದವು. ಅವರೆಲ್ಲ ನನ್ನ ಹಾಗೆಯೇ ಸಂಕುಚಿತವಾಗಿ ಯೋಚಿಸಿ ಬಿಟ್ಟಿದ್ದರೆ ಈ ನೆಲಕ್ಕೆ ಎಂಥಾ ಅನ್ಯಾಯವಾಗಿಬಿಡುತ್ತಿತ್ತು! ರಾಷ್ಟçಕವಿ ಕುವೆಂಪು ತನ್ನೂರಿಗೇ ಸೀಮಿತರಾಗಿಬಿಟ್ಟಿದ್ದರೆ...!?
ಇಂಥ ಸಂಬುದ್ಧ, ಗಾಂಧಿ, ಬಸವ, ಅಂಬೇಡ್ಕರರನ್ನು ಓದಿಕೊಂಡ, ಅವರ ತತ್ವ ಆದರ್ಶಗಳಿಗೆ ಮಾರುಹೋದ ನಾನೆಂಬ ನಾನು, ನನ್ನೂರಿನ ಯಾವುದೇ ಶುಭಾಶುಭ ಕಾರ್ಯಗಳಿಗೆ ನನ್ನನ್ನು ಕರೆಯದೆ ಆಚರಿಸುವರಲ್ಲ .ಅವರೆಲ್ಲ ನನ್ನನ್ನು ಮರೆತೇಬಿಟ್ಟರಲ್ಲ. ನನ್ನ ನೆನಪೇ ಅವರಿಗಾಗಲಿಲ್ಲವೇ ಎಂದು ನಾನೇ ತೀರ್ಮಾನಿಸಿ ಕರೆಯದಿದ್ದಾಗ ವ್ಯಗ್ರನಾದೆ. ದರಿದ್ರದವರು ನನ್ನ ಯೋಗ್ಯತೆಯನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ. ನಾನೆಂಥ ಉತ್ತುಂಗದಲ್ಲಿದ್ದೆÃನೆ ಎಂಬ ಅರಿವೇ ಇಲ್ಲವಲ್ಲ, ಇಂಥ ಕೊಚ್ಚೆ ರಚ್ಚೆಯಲ್ಲಿ ಬಿದ್ದು ಒದ್ದಾಡಿದೆ. ಹಾಗಂದುಕೊಂಡೆ ನನ್ನ ನಲ್ಮೆಯ ಮುದ್ದುಶ್ರಿÃ ದಿಬ್ಬದ ಒಣಗಿಹೋದ ಬೇವಿನ ಮರದಡಿ ಕುಳಿತು ಅದನ್ನೆÃ ನೋಡುವಾಗ... ಎಲಾ! ಒಂದು ವರ್ಷದ ಹಿಂದೆ ಹೇಗೆ ನಳನಳಿಸುತ್ತಿದ್ದುದು ಇಂದು ಒಣಕಟ್ಟಿಗೆಯಾಗಿ ನಿಂತಿದೆಯಲ್ಲ. ಇಷ್ಟೆÃ ಜೀವನ. ಇದೇ ಬದುಕು. ನನ್ನ ಅಲವತ್ತುಕೊಳ್ಳುವಿಕೆಗೆ ಅರ್ಥ ಇದೆಯೇ ಎಂದು, ಇದ್ದಕ್ಕಿದ್ದಂತೆ ನನಗನ್ನಿಸಿದ್ದು ನಾನೇಕೆ ಹಾಗಂದುಕೊಳ್ಳಬೇಕು. ಅಂಥ ವಿಶೇಷತೆ ನನ್ನೊಳಗೇನಿದೆ ಮಹಾ. ಈ ಭಾವ ಚಿಗುರಲಾರಂಭಿಸಿತು. ಅಂiÉÆ್ಯÃ ಅವಿವೇಕವೇ ನನ್ನೂರು ನನಗೆ ಜನ್ಮ ನೀಡುವ ಮೂಲಕ ಮಾಡಿರುವ ದೊಡ್ಡ ಉಪಕಾರ ಸ್ಮರಣೆ ಮಾಡಲಾರದಾದೆನಲ್ಲ ಎಂದು ನಾಚಿಕೆ ಹುಟ್ಟಿತು.
ನನ್ನಪ್ಪ, ಅಮ್ಮ, ಅಕ್ಕ-ಅಣ್ಣಂದಿರು, ನನ್ನೂರು, ಸಹಪಾಠಿಗಳು, ಕೆರೆ ಕುಂಟೆ ಗುಡ್ಡ ಬೆಟ್ಟಗಳು ಕೊಟ್ಟಿರುವ ಅನುಭವ ಕಡಿಮೆಯೇ. ಜೀವಮಾನವಿಡೀ ನಾನು ಸ್ಮರಿಸಿದರೂ ಆ ಋಣ ತೀರಿಸಲು ಸಾಧ್ಯವೇ. ಅದೆಷ್ಟು ಕುಬ್ಜನಾಗಿ ಯೋಚಿಸುತ್ತಿದ್ದೆ ನನ್ನೂರು ನನ್ನ ಮರೆತಿದೆಯೆಂದು. ನೆನಪಿಟ್ಟುಕೊಳ್ಳುವಂಥದ್ದು ನಾನೇನು ನನ್ನೂರಿಗೆ ಮಾಡಿರುವುದು. ಇಪ್ಪತ್ತು ವರ್ಷಗಳ ಕಾಲ ಮೂಕವಾಗಿಯೇ ಮಾತನಾಡಿವೆಯಲ್ಲ ಆ ಬೆಟ್ಟದ ಒಂದೊಂದು ಕಲ್ಲು-ಕಡಕಲುಗಳು. ಸೀಗೆ ಒಡ್ಡು, ಕುಲುಮೆ ಒಡ್ಡು, ಬಾವಿಕಲ್ಲು ಬೆಟ್ಟ, ಮೂಗನ ಕಣಿವೆ, ಕಟುಕನ ಅಂಗಡಿ ಕಲ್ಲು, ಅಂಗಡಿ ಮಾಳ, ಚಿನಿವಾರ ಪೇಟೆ, ರಹಸ್ಯ ದುರ್ಗ, ಅನೇಕ ಆಳರಸರು, ಪಾಳೆಗಾರರು ಕಟ್ಟಿ ಆಳ್ವಿಕೆ ಮಾಡಿ ಮೆರೆದ ಒಂದೊಂದು ಸ್ಥಳಗಳು ಅದೆಷ್ಟು ಜ್ಞಾನವನ್ನು ಸೃಜಿಸಿವೆ. ಇವೆಲ್ಲ ಕೇಳದೆಯೇ ಪಡೆದುಕೊಂಡ ಅನುಭವಗಳು ಮತ್ತು ನನ್ನದೇ ಪುಣ್ಯವಲ್ಲವೇ.
ಮೇಗಳ ಕೇರಿಯ ಎಲ್ಲ ತಾಯಂದಿರು ತಮ್ಮ ಪ್ರೀತಿಯನ್ನು ಧಾರೆ ಎರೆದು ಆದರಿಸಿದ್ದಾರೆ. ಜಾತಿ ಬೇಧ ಮರೆತು ತುತ್ತಿಟ್ಟು ಸಲಹಿದ್ದಾರೆ. ಊರಿಂದೂರಿಗೆ ಬಂದ ವಿಭೂತಿ ಕೆಂಪಮ್ಮನ ಮಗ ಅಂದಾನಿ ಸಹೋದರನಾಗಿ ಬೆಳೆಯುತ್ತ ಕಣ್ಣೆದುರೇ ಕೊನೆಯುಸಿರು ಎಳೆದಾಗ ಎಂಥ ನೋವಾಗಿರಬೇಡ. ಅಣ್ಣ ಇಟ್ಟುಕೊಟ್ಟ ಅಂಗಡಿಯಲ್ಲಿ ಕುಳಿತಿರುವಾಗ ಬಂದು ಚಿಕ್ಕೆರೆ ಕಡೆ ಎಮ್ಮೆ ಮೇಯಿಸಲು ಹೋದಾಗ ಸೇದಲು ಅನುಕೂಲವಾಗುತ್ತದೆಂದು ಉಬ್ಬಿಸಿ ಬೀಡಿ ಕಟ್ಟು ಬೆಂಕಿಪೊಟ್ಟಣ ತೆಗೆದುಕೊಂಡು ಹೋಗಿ ಅಲ್ಲಿ ಕೇಳಿದರೆ ಸತಾಯಿಸಿದ ಅಗಸರ ಹುಡುಗ ಸಿದ್ಧರಾಜ ಆ ಕ್ಷಣಗಳು ಮರಳಿ ಬರಬಹುದೇ. ನನಗಿಂತಲೂ ಚಿಕ್ಕ ಪ್ರಾಯದ ಆತ ತೀರಿಕೊಂಡದ್ದು ವಿಧಿಯ ಕೈವಾಡ ಅಲ್ಲವೇ. ಚಿಕ್ಕೆರೆಗೆ ಇಳಿಯುವ ನನ್ನವ್ವನ ಅವ್ವ ಕೊಟ್ಟ ತಾಯೆಮ್ಮೆಯ ಬಾಲ ಹಿಡಿದು ಕಲಿತ ಈಜು ಜೀವನದಲ್ಲಿ ಧೈರ್ಯ ತುಂಬಿಲ್ಲವೇ. 
ಹಾರುವಯ್ಯನ ಮಗಳ ಮೋಹಕ್ಕೆ ಬಿದ್ದು ಯಾವ ಹೆಣ್ಣು ತನ್ನ ಜೀವನ ಸಂಗಾತಿಯಾಗಬೇಕಿತ್ತೋ ಅವಳಿಗೆ ಉಪದೇಶ ಮಾಡಿದ ಎಳವೆಯ ಪ್ರೀತಿಯ ಮರೆತು ಜೀವಿಸಬಹುದೇ. ಕೆದಕಿದಷ್ಟು ಬಿಡಿಸಿದ ಕೊಡೆಯಂತೆ ತೆರೆದುಕೊಳ್ಳುವ ನೆನಪಿನ ಸುರುಳಿಗಳು ಎಂಥ ಮಾರ್ದವತೆ ನೀಡುತ್ತವೆ ಅಲ್ಲವೆ. ನಾಲ್ಕನೇ ವಯಸ್ಸಿನಲ್ಲಿ ಇತರರಿಗೆ ಗುಮ್ಮುತ್ತ ನನ್ನನ್ನು ಮಾತ್ರ ಕರುಣೆ ಮಮತೆ ವಾತ್ಸಲ್ಯಗಳಿಂದ ನೋಡುತ್ತಿದ್ದ ಕನ್ನಮಂಗಲದ ಹಸುವಿನಿಂದ ಕರೆದ ನೊರೆ ಹಾಲಿನ ಹನಿಯನ್ನೂ ಮನೆ ಮಂದಿ ಬಳಸದೆ ಸಿರಿಕಲ್ಚರ್ ಫಾರಮ್ಮಿನ ಅಧಿಕಾರಿವರ್ಗಕ್ಕೆ ಸೇರು, ಅರ್ಧಸೇರು ಪಾವುಗಳ ಲೆಕ್ಕದಲ್ಲಿ ಅಳತೆ ಮಾಡಿ ಕೊಟ್ಟುಬರುತ್ತಿದ್ದ ಮೈ ಕೊರೆವ ಚಳಿಯ ನೆನಪು ಅದೆಂಥ ಅಪೂರ್ವಾನುಭವ. ಅಧಿಕಾರಿಯ ಮಗನೆಂಬ ಯಾವುದೇ ಅಹಂ ಇಲ್ಲದೆ ಭ್ರಾತೃವಾತ್ಸಲ್ಯ ಮೆರೆದ ಸುರೇಶನ ಆ ಪ್ರೀತಿಗೆ ಬೆಲೆ ಕಟ್ಟಬಹುದೆ. ಕಿರಿವಯಸ್ಸಲ್ಲೇ ಹಸಿವು ಏನೆಂದು ಅರಿವು ಮೂಡಿಸಿದ ಆ ದಿನಗಳು ಕಲಿಸಿದ್ದು ಕಡಿಮೆಯೇ. 
ನನ್ನೂರಿನವರೇ ಆದ ವೆಂಕಟಪ್ಪ ಮೇಸ್ಟ್ರು, ಪ್ರಾಥಮಿಕ ಶಾಲೆಯ ವಿಭೂತಿಕೆರೆ ಬಸವರಾಜು ಕುದೂರಿನಿಂದ ಕೈಲಾಂಚ ಮಾಧ್ಯಮಿಕ ಶಾಲೆಗೆ ಬರುತ್ತಿದ್ದ ರಾಮಯ್ಯ ಮೇಸ್ಟ್ರು, ಬನ್ನಿಕುಪ್ಪೆ ಹೈಸ್ಕೂಲಿನ ಕನ್ನಡ ಮೇಸ್ಟ್ರು ಅಂಕೇಗೌಡ, ಹಿಂದಿ ಮೇಸ್ಟ್ರು ಎಂ ಎಂ. ಅನ್ವರ್ ಅಬ್ಬಾಸ್, ಪಿ.ಟಿ ಮೇಸ್ಟ್ರು ಸಿದ್ಧಪ್ಪ, ವಿಜ್ಞಾನದ ಎಸ್.ಸಿ.ವಿ. ಶಂಕರಯ್ಯ, ಸಮಾಜ ವಿಜ್ಞಾನದ ಜವನೇಗೌಡ, ಪ್ರೀತಿಯಿಂದಲೇ ವಿದ್ಯಾರ್ಥಿಗಳ ಮೇಲೆ ತಮ್ಮ ಹಿಡಿತ ಸಾಧಿಸಿದ್ದ ಫೈಲ್ವಾನ ಮುದ್ದಪ್ಪ, ಪಿ.ಒನ್. ಶಿವಣ್ಣ ಇವರುಗಳು ನನ್ನ ವ್ಯಕ್ತಿತ್ವ ರೂಪಿಸಿದವರಲ್ಲವೆ. 
ಶಾಲಾ ದಿನಗಳಲ್ಲಿ ಊರಿಂದೂರಿಗೆ ನಡೆದೇ ಹೋಗುವಾಗ ಕಡಲೆಕಾಯಿ, ಮಾವಿನಕಾಯಿ, ನೇರಳೆ ಹಣ್ಣು, ಕಾರೆಹಣ್ಣಿನ ಒಂದೊಂದು ಮರ ಮೆಳೆಗಳ ತಾವು ಅವುಗಳನ್ನು ತಿನ್ನಲೇಬೇಕೆಂದು ಮಾಡಿದ ಹಠವೇ ನನ್ನೊಳಗಿನ ಆತ್ಮಸ್ಥೆöÊರ್ಯದ ಹಿನ್ನೆಲೆ.
ಗೋಪಾಲ, ಕೃಷ್ಣಾಜಿ, ಶಿವಾಜಿ, ಹನುಮಂತ, ಚಂದ್ರಾಬಾಯಿ, ಬೇಬಿ, ಅಮ್ಮಣ್ಣಿ, ಪದ್ಮಶಿಂಧೆ, ಪ್ರಭ, ಭಾಗೀರಥಿ ಇವರೆಲ್ಲ ಪ್ರಾಥಮಿಕ ಶಾಲಾ ಸಹಪಾಠಿಗಳಾದರೆ, ಹೈಸ್ಕೂಲಿನ ಪಟಾಲಂ ಬೇರೆ.
ಕವಣಾಪುರದ ಶಿವಲಿಂಗಯ್ಯ, ಅವ್ವೇರಹಳ್ಳಿ ಶಂಕರ, ಚಂದ್ರಶೇಖರ ಕೈಲಾಂಚಾದ ರಾಮಕೃಷ್ಣ, ಮಂಜುನಾಥ, ಮಲ್ಲಿಕಾರ್ಜುನ, ಅಂಕನಹಳ್ಳಿ ಚೋರಬಾಯಿಯ ರಾಮಕೃಷ್ಣ, ಚಿಕ್ಕೇನಹಳ್ಳಿ ಪಾರ್ಥ, ಕೃಷ್ಣ, ದೊಡ್ನಳ್ಳಿ ಗೂಳಿಗೌಡ, ಕಾಡನಕುಪ್ಪೆ ಚಂದ್ರಶೇಖರ, ಲಕ್ಕೋಜನಹಳ್ಳಿ ಕೃಷ್ಣ, ಲಕ್ಕಪ್ಪನ ಹಳ್ಳಿ ದೇಸಿಲಿಂಗಯ್ಯ, ಮಂಜು, ಚಿಕ್ಕಬೀರಯ್ಯ, ನಂಜಾಪುರದ ವಿಜಯ, ಬನ್ನಿಕುಪ್ಪೆ ರಮೇಶ, ನಿಜಗುಣ, ಲೋಕೇಶ, ಪದ್ಮ, ಇಂದ್ರ ಓ ನೆನಪುಗಳ ಮಾಲೆಗೆ ಅದೆಷ್ಟು ಕುಸುಮಗಳು. ಬನ್ನಿಕುಪ್ಪೆಯಲ್ಲಿ ರಂಗಭೂಮಿಯ ದಿಗ್ಗಜ ಗುರುಮೂರ್ತಪ್ಪನವರ ಸಂತತಿ ನಮಗೆ ಸ್ಫೂರ್ತಿ. ದತ್ತಾತ್ರೇಯ ಮಠದ ಆವರಣ, ಕೆರೆಬಯಲು, ಕಲ್ಯಾಣಿ... ಓ ಬಾಲ್ಯವೇ ನಿನ್ನ ನೆನಪುಗಳೇ ಮಧುರ ಮಧುರ ಮಧುರ.
ಎಂಬತ್ತರ ದಶಕ ಬೈರೇಗೌಡನ ವ್ಯಕ್ತಿತ್ವ ನಿರ್ಮಾಣದ ಪರ್ವಕಾಲ. ಊರಲ್ಲಿ ಗಣೇಶೋತ್ಸವದ ಪೂರ್ಣ ಹೊಣೆಗಾರಿಕೆ. ಆಗಲೇ ನಾಟಕಗಳ ನಿರ್ದೇಶಕ. ಒಂದು ತಿಂಗಳಕಾಲ ಮನೆಯ ಕೆಲಸಗಳನ್ನು ಮುಗಿಸಿ ಗಣೇಶೋತ್ಸವದಲ್ಲಿ ತೊಡಗಿ ನನ್ನನ್ನೇ ನಾನು ಮರೆತುಹೋಗುತ್ತಿದ್ದೆ. ಅವರವರ ಶಕ್ತಾö್ಯನುಸಾರ ನೀಡುವ ದೇಣಿಗೆ ಹಣದ ವಹಿವಾಟು, ಚಪ್ಪರ ನಿರ್ಮಾಣ, ಗಣೇಶಮೂರ್ತಿಯ ಪ್ರತಿಷ್ಠಾಪನೆ, ಏಳು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜವಾಬ್ದಾರಿ, ರಂಗತರಬೇತಿ ಎಷ್ಟು ಅನುಭವಿಯನ್ನಾಗಿಸಿದೆ ನನ್ನೂರು. ಪಾತ್ರಧಾರಿಯಾಗಿ ಸೂತ್ರಧಾರಿಯಾಗಿ ಬೆಂಗಳೂರಿನಿಂದ ಸ್ತ್ರೀ ಪಾತ್ರಧಾರಿಗಳನ್ನು ಕರೆತಂದು ಕಳುಹಿಸಿಕೊಡುವ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವ ಛಾತಿಯನ್ನು ಕಲಿಸಿಲ್ಲವೇ ನನ್ನೂರು. ಬಹುಶಃ ನನ್ನ ಹದಿವಯಸ್ಸಿಗೇ ಐವತ್ತರ ಅನುಭವ ನನ್ನದಾಗಿಸಿದ್ದು ನನ್ನ ಊರು.
ಅಪ್ಪನಿಂದ ಬಂದ ಶನಿಮಹಾತ್ಮೆ ಓದು, ಆಂಜನೇಯನ ವೇಶ, ಶಕುನಿಯ ತಂತ್ರ ಇವೆಲ್ಲ ಪಾತ್ರಗಳಲ್ಲಿ ಅಭಿನಯಿಸಲು ನನ್ನೂರು ಸಹಕರಿಸಿದೆಯಲ್ಲವೇ.
ಮಧುರಾನುಭವದ ಮಹಾಮಳೆಯಲ್ಲಿ ನೆನೆದು ತಂಪು ಪ್ರೀತಿಯಲಿ ಬೆಳೆದು, ಪೋಷಿಸಿದ ನನ್ನೂರು ಬಿಟ್ಟು ಮಹಾನಗರವನ್ನು ಸೇರಿದಾಗ ಅನುಭವಿಸಿರುವ ಸಂಕಟಗಳು ಅಷ್ಟಿಷ್ಟಲ್ಲ. ಆದರೆ ಅವೆಲ್ಲವನ್ನೂ ಧಿಕ್ಕರಿಸಿ ಆನೆಯಂತೆ ನಡೆದು ಹೋಗಲು ಧೈರ್ಯ ನೀಡಿದ್ದು ನನ್ನೂರಿನ ಇಪ್ಪತ್ತೈದು ವರುಷಗಳ ಸಾಂದ್ರ ಅನುಭವ ಎಂದು ಹೇಳಿಕೊಳ್ಳುವಲ್ಲಿ ಅತೀವ ಆನಂದವಿದೆ.
ಬೇರೆಯವರ ರೇಶಿಮೆ ತೋಟದ ಕೆಲಸದ, ಹುಳು ಸಾಕಾಣಿಕೆ ಮಾಡಿ ಗೂಡು ಬೆಳೆದುಕೊಡುತ್ತಿದ್ದ ಹಂತವನ್ನು ಮೀರಿ ಅಣ್ಣನ ಸದೃಢ ನಿರ್ಧಾರದಿಂದ ದೇಣಿಗೆಗೆ ತೋಟ ಹಿಡಿದು ಬಂದಷ್ಟೂ ಹಣವೂ ನಮ್ಮದೇ ಎಂದು ತಿಳಿದಾಗ ಆದ ಆನಂದವಿದೆಯಲ್ಲ.... ಓಹ್ ಮಧುರಾನುಭವ.
ಆ ದಿನಗಳ ಆಟಗಳ ನೆನಪೇ ಆನಂದ ನೀಡುತ್ತವೆ. ಎಳವೆಯಲ್ಲಿಯೇ ಮನೆಯ ಯಜಮಾನನ ಪಾತ್ರಧಾರಿಯಾಗಿ, ಯಾರೋ ನನ್ನದೇ ವಯಸ್ಸಿನ ಪುಟ್ಟಪೋರಿ ಇದ್ದ ಬಕರೆ ಬಾವೋಡುಗಳಲ್ಲಿ ಅಡುಗೆ ಮಾಡಿದಂತೆ ಮಣ್ಣುಂಡೆಗಳು, ಮಣ್ಣಿನ ಚಕ್ಕುಲಿ ಕೋಡುಬಳೆಗಳು, ನೀರಿನ ತಿಳಿಸಾರು ಸಿದ್ಧಪಡಿಸಿ, ರೀ ಅಡುಗೆಯಾಗಿದೆ ಊಟಕ್ಕೆ ಬನ್ನಿ ಎಂದು ಬಿಂಕದಿಂದ ಕರೆವ ಕುಟುಂಬದ ಆಟ, ಕ್ರಿಕೆಟ್ ಬ್ಯಾಟ್ ಕಾಣದ ನಾವು ಟಾಂಗ್ ಬಿರಾಂಗ್ ಮುಷ್ಠಿ ಕೋನಿ, ಅಂಕಿ, ಜೂಕ್, ಜುಕಾವ್ ಎಂದು ಅಳತೆ ಮಾಡುವ ಚಿನ್ನಿ ದಾಂಡುಗಳೇ ನನ್ನ ಒಡನಾಡಿಗಳು. ಕೂನಗಲ್ ಬೆಟ್ಟದಲ್ಲಿ ದನಕಾಯಲು ಹೋಗುತ್ತಿದ್ದ ಚಿಕ್ಕಪ್ಪನ ಮನೆಯಾಳು ಕೆಂಚಣ್ಣ, ಶಿವಲಿಂಗಣ್ಣರ ಜೊತೆ ಹೋಗಿ ಅಲ್ಲಿ ಕಾರೆಮೆಳೆಯ ಬೇರಿನಿಂದ ಗಟ್ಟಿ ಬುಗುರಿ ಮಾಡಿಸಿಕೊಂಡು ಬಂದು ಇಲ್ಲಿ ಪಟ್ಟಣದಿಂದ ಶ್ರಿÃಮಂತರ ಮಕ್ಕಳು ತರುತ್ತಿದ್ದ ಥಳಕು ಬಳುಕಿನ ಬುಗುರಿಯ ಜೊತೆ ಬಿಟ್ಟುಗುನ್ನದ ಆಟ ಆಡಿ ಒಂದೇ ಏಟಿಗೆ ಫಳಾರನೆ ಸೀಳುವ ಕೌಶಲ್ಯವನ್ನು ಕಲಿಸಿದ್ದು ನನ್ನೂರೇ ಅಲ್ಲವೇ.
ಗೋಲಿಯಾಟದ ವೈವಿಧ್ಯಗಳನ್ನು ಕಲಿಸಿದ್ದು, ಮರ ಏರುವ ಕೌಶಲವನ್ನು ತಿಳಿಹೇಳಿದ್ದು, ಬದುಗಳ ಮೇಲೆ ಹುಲ್ಲು ಹೊರೆ ಹೊತ್ತು ನಡೆವುದನ್ನು ಕಲಿಸಿದ್ದು ಇವೆಲ್ಲ ಮುಂದಿನ ಹಾದಿಗೆ ಹಾಸುಗಲ್ಲುಗಳಲ್ಲವೆ. ಕಷ್ಟಗಳ ಪರಂಪರೆಯನ್ನು ಜಯಿಸುವ ವಿಧಾನಗಳು ಈ ಬಾಲ್ಯದ ಆಠ ಪಾಠಗಳಲ್ಲಿಲ್ಲವೇ? ರೇವಪ್ಪನ ಜಾತ್ರೆಗೆ ಹೋಗಲು ಕಾಸು ಕೂಡಿಸಲೆಂದು ಹೊಳೆ ದಂಡೆ, ಕಾಡು, ಕಣಿವೆಗಳಲ್ಲಿನ ಹೊಂಗೆಮರದ ಕಾಯಿಗಳನ್ನು ಉದುರಿಸಿ ಒಪ್ಪ ಮಾಡಿ ಬರುವ ಬಡೇಸಾಬಿಗೆ ಕೊಟ್ಟು ಚಿಲ್ಲರೆ ಕಾಸು ಪಡೆದು ಕೂಡಿಟ್ಟು ಜಾತ್ರೆಯಲ್ಲಿ ನಮಗೆ ಬೇಕಾದ ಬೆಂಡು ಬತ್ತಾಸು, ಖಾರ, ಕಡಲೆಪುರಿ ಕೊಂಡು ತಿಂದು, ಬಣ್ಣದ ಆಟದ ಸಾಮಾನುಗಳನ್ನು ಟೀಕಾಗಿ ತರುವ ವ್ಯಾವಹಾರಿಕ ಕುಶಲತೆಯನ್ನು ನನ್ನೂರು ಕಲಿಸಿಕೊಟ್ಟಿಲ್ಲವೇ? ಮತ್ತೂ ನಾನೇಕೆ ಕೇಳಬೇಕು ನನಗೆ ನನ್ನೂರು ಏನು ಮಾಡಿದೆ ಎಂದು.
ನನ್ನೂರು ನನಗೆ ಬದುಕು ಕೊಟ್ಟಿದೆ. ನನ್ನೂರು ನನಗೆ ಬದುಕಿನ ಪಾಠಗಳನ್ನು ಹೇಳಿಕೊಟ್ಟಿದೆ. ಸುತ್ತಮುತ್ತಲ ಹತ್ತು ಹಳ್ಳಿಗಳಲ್ಲಿ ಅಲೆದಾಡಿ ಜೀವನ ಸಾರ್ಥಕ ಪಡಿಸಿಕೊಳ್ಳುವ ಎಲ್ಲ ಅವಕಾಶಗಳನ್ನೂ ಒದಗಿಸಿಕೊಟ್ಟಿದೆ. ಇಂಥ ನನ್ನೂರಿನ, ನನ್ನ ಜನರ ಬಗ್ಗೆ ಗೌರವವಿದೆ. ನಮ್ಮ ಮುಂದಿನ ಪೀಳಿಗೆ ಆ ಎಲ್ಲ ಪರಂಪರೆಯನ್ನೂ ಮುಂದುವರೆಸಿಕೊಂಡು ಹೋದರೆ ಅಷ್ಟೆÃ ಸಾಕು. ಯಾವತ್ತೂ ನನ್ನೂರಿಗೆ ನಾ ಋಣಿ ಎಂಬ ಮಾತನ್ನು ಮನದಾಳದಿಂದ ನುಡಿಯುವೆ.

ಓದುಗ ಬಂಧುಗಳೆ, ನನ್ನೂರು ನನಗೇನ ಕೊಡಬೇಕು...? ಇದು ನನ್ನ ಮನದಾಳದ ಪ್ರಶ್ನೆ. ಈಗ ಕೊಟ್ಟಿರುವುದೇ ಹೆಚ್ಚಾಗಿದೆ. ಇನ್ನೂ ನಿರೀಕ್ಷಿಸುವುದು ಎಷ್ಟು ಸರಿ... ಈ ಹಿನ್ನಲೆಯಲ್ಲಿ ಒಂದು ಬರೆಹ ದಯಮಾಡಿ ಓದಿ ನಿಮ್ಮ ಅಭಿಪ್ರಾಯ ತಿಳಿಸಿ
ವಂದನೆಗಳು
ಡಾ. ಎಂ. ಬೈರೇಗೌಡ
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑