Tel: 7676775624 | Mail: info@yellowandred.in

Language: EN KAN

    Follow us :


ಗಾರ್ಮೇಂಟ್ಸ್ ಬಸ್ಸು ಢಿಕ್ಕಿ ; ಇಬ್ಬರು ಯುವಕರ ಸಾವು

Posted Date: 02 Mar, 2020

ಗಾರ್ಮೇಂಟ್ಸ್ ಬಸ್ಸು ಢಿಕ್ಕಿ ; ಇಬ್ಬರು ಯುವಕರ ಸಾವು

ಚನ್ನಪಟ್ಟಣ.ಮಾ: ರಸ್ತೆಬದಿಯಲ್ಲಿ 

ಚಲಿಸುತ್ತಿದ್ದ ದ್ವಿಚಕ್ರವಾಹನಕ್ಕೆ 

ಅತಿವೇಗವಾಗಿ ಬಂದ ಗಾರ್ಮೇಂಟ್ಸ್ ಬಸ್ಸು ಢಿಕ್ಕಿ 

ಹೊಡೆದ ಪರಿಣಾಮ ಇಬ್ಬರು ಯುವಕರು 

ಸ್ಥಳದಲ್ಲೇ ಸಾವನಪ್ಪಿರುವ ದುರ್ಘಟನೆ, 

ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ 

ಸಿ.ಪಿ.ಟಿ.ಗಾರ್ಡನ್ ಮುಂಭಾಗ ಬೆಂಗಳೂರು 

ಮೈಸೂರು ಹೆದ್ದಾರಿಯಲ್ಲಿ ಸೋಮವಾರ 

ನಸುಕಿನ ಸುಮಾರು ೦೪:೦೦ ರ ಸಮಯದಲ್ಲಿ 

ನಡೆದಿದೆ.


ರಸ್ತೆಯ ಭೀಕರ ಅಪಘಾತದಲ್ಲಿ 

ಸಾವನಪ್ಪಿರುವ ದುರ್ದೈವಿ ಯುವಕರು 

ಸಚಿನ್(೨೪) ಹಾಗೂ ಪ್ರತಾಪ್(೨೨) ಎಂದು 

ಗುರುತಿಸಲಾಗಿದ್ದು, ಗ್ರಾಮಾಂತರ 

ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ 

ಕೂಡ್ಲೂರು ಗ್ರಾಮದ ದಾಸಪ್ಪ 

ಎಂಬುವರ ಮಗ ಸಚಿನ್ ಹಾಗೂ ಅದೇ 

ಗ್ರಾಮದ ನಾಗರಾಜು ಎಂಬುವರ ಮಗ 

ಪ್ರತಾಪ್ ಇಬ್ಬರು ತಮ್ಮ ರಾಯಲ್ ಎನ್ಫೀಲ್ಡ್ (ಬುಲೆಟ್) ದ್ವಿಚಕ್ರವಾಹನದಲ್ಲಿ ಕೆಲಸಕ್ಕೆ 

ಹೋಗುವಾಗ ಈ ಘಟನೆ ನಡೆದಿದೆ.


ರಸ್ತೆಬದಿಯಲ್ಲಿ ಚಲಿಸುತ್ತಿದ್ದ 

ದ್ವಿಚಕ್ರವಾಹನಕ್ಕೆ ಚಾಲಕನ 

ಅಜಾಗರೂಕತೆಯಿಂದ ಅತಿವೇಗವಾಗಿ ಬಂದ 

ಮದರ್‍ಸನ್ ಗಾರ್ಮೇಂಟ್ಸ್‍ನ ಮೇಘಾ ಬಸ್ಸು 

ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಈ 

ಸಂದರ್ಭದಲ್ಲಿ ತಲೆಗೆ ಭಾರಿ ಪ್ರಮಾಣದ 

ಪೆಟ್ಟಾಗಿ ತೀವ್ರ ರಕ್ತಸ್ರಾವವಾದ ಇಬ್ಬರೂ 

ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬಸ್ಸಿನ 

ಮುಂಬದಿಗೆ ಸಿಕ್ಕಿಕೊಂಡ 

ದ್ವಿಚಕ್ರವಾಹನವನ್ನು ಸುಮಾರು 100 

ಮೀಟರ್ ದೂರದವರೆಗೆ ಎಳೆದುಕೊಂಡು 

ಹೋಗಿದ್ದು, ಡಾಂಬಾರು ರಸ್ತೆಯಲ್ಲಿ ವೇಗವಾಗಿ 

ಎಳೆದು ಹೋಗಿದ್ದರಿಂದ ತಕ್ಷಣ 

ಬೆಂಕಿಹೊತ್ತಿಕೊಂಡು 

ಉರಿಯಲಾರಂಭಿಸಿದ್ದು, ತಕ್ಷಣ 

ಸ್ಥಳಿಯರು ಬೆಂಕಿಯನ್ನು ನಂದಿಸಿ 

ಮುಂದಾಗುವ ಅನಾಹುತವನ್ನು 

ತಪ್ಪಿಸಿದ್ದಾರೆನ್ನಲ್ಲಾಗಿದೆ.


ಅಲ್ಲದೆ ಬಸ್ ಲ್ಲಿ ಗಾರ್ಮೇಂಟ್ಸ್ ಗೆ 

ತೆರಳಲು ಕುಳಿತಿದ್ದ ಮಂಗಳವಾರ

ಪೇಟೆಯ ಮುತ್ತುರಾಜು ಎಂಬುವರ 

ಮಗಳಾದ ಜ್ಯೋತಿ ಎಂಬಾಕೆಗೂ 

ಗಂಭೀರಗಾಯಗಳಾಗಿದ್ದು, 

ಆಕೆಯನ್ನು ನಗರದ ಸಾರ್ವಜನಿಕ 

ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಬಸ್ಸು ಬೆಂಕಿ ಹೊತ್ತಿಕೊಳ್ಳುವ ರೀತಿಯಲ್ಲಿ ಈ 

ಘಟನೆ ನಡೆದಿದ್ದು, ಗಾರ್ಮೇಂಟ್ಸ್ ಬಸ್ಸ್ ಚಾಲಕ 

ನಸುಕಿನಲ್ಲಿಯೂ ಯಾವಮಟ್ಟದ 

ವೇಗದಲ್ಲಿದ್ದನು ಎಂದು ಅಂದಾಜಿಸಲಾಗಿದೆ.

ಮೃತರಾದ ಸಚಿನ್ ಎಂಬ ಯುವಕ ಬೆಂಗಳೂರು 

ನಗರದಲ್ಲಿ ಟ್ಯಾಕ್ಷಿ ಚಾಲಕನಾಗಿದ್ದು 

ಮತ್ತೊಬ್ಬ ಪ್ರತಾಪ್ ಬಿಡದಿಯ ಟಯೋಟಾ 

ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ.

 

ಇಬ್ಬರೂ ಪ್ರತಿ ದಿವಸ ಜೊತೆಯಲ್ಲಿಯೇ 

ಗ್ರಾಮದಿಂದ ನಗರಕ್ಕೆ 

ಬರುತ್ತಿದ್ದೆನ್ನಲ್ಲಾಗಿದ್ದು, ಎಂದಿನಂತೆ 

ನಸುಕಿನಲ್ಲಿ ಬಂದ ಇವರನ್ನು 

ಜವರಾಯನಾದ ಗಾರ್ಮೇಂಟ್ಸ್ ಬಸ್ಸು ಬಲಿ 

ತೆಗೆದುಕೊಂಡಿದೆ.

ಈ ಪ್ರಕರಣದ ಬಗ್ಗೆ ಸಂಚಾರಿ ಪೊಲೀಸ್ 

ಠಾಣೆಯಲ್ಲಿ ದೂರು ದಾಖಲಾಗಿದ್ದು,

ಮೃತದೇಹವನ್ನು ನಗರದ ಸಾರ್ವಜನಿಕ 

ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ 

ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದ್ದು, 

ಅಪಘಾತ ಮಾಡಿದ ವಾಹನವನ್ನು 

ವಶಪಡಿಸಿಕೊಂಡಿರುವ 

ಪೊಲೀಸರು,ಅಪಘಾತ ಮಾಡಿದ 

ಚಾಲಕನನ್ನು ಬಂಧಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ನಾಯಿ ಅಡ್ಡ ಬಂದು ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಓರ್ವ ಸಾವು
ನಾಯಿ ಅಡ್ಡ ಬಂದು ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಓರ್ವ ಸಾವು

ಚನ್ನಪಟ್ಟಣ:ಮಾ/೨೭/೨೦/ಗುರುವಾರ.ತಾಲ್ಲೂಕಿನ ಮುದುಗೆರೆ ಗ್ರಾಮದ ಕೆರೆ ಏರಿಯ ಬಳಿ ನಾಯಿ ಅಡ್ಡ ಬಂದಿದ್ದರಿಂದ ಆಯತಪ್ಪಿ ದ್ವಿಚಕ್ರ ವಾಹನದ ಸವಾರರೊಬ್ಬರು

ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ ನಿಧನ
ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ ನಿಧನ

ಚನ್ನಪಟ್ಟಣ/ಕನಕಪುರ:.  ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಲೇಟ್ ಬಸವೇಗೌಡರ ಪುತ್ರ, ಬೆಸ್ಕಾಂ ನ ನಿವೃತ್ತ ನೌಕರ ಎಸ್ ಬಿ ಕೃಷ್ಣೇಗೌಡ (೬೯)

ಗಾರ್ಮೇಂಟ್ಸ್ ಬಸ್ಸು ಢಿಕ್ಕಿ ; ಇಬ್ಬರು ಯುವಕರ ಸಾವು
ಗಾರ್ಮೇಂಟ್ಸ್ ಬಸ್ಸು ಢಿಕ್ಕಿ ; ಇಬ್ಬರು ಯುವಕರ ಸಾವು

ಚನ್ನಪಟ್ಟಣ.ಮಾ: ರಸ್ತೆಬದಿಯಲ್ಲಿ 

ಚಲಿಸುತ್ತಿದ್ದ ದ್ವಿಚಕ್ರವಾಹನಕ್ಕೆ 

ಅತಿವೇಗವಾಗಿ ಬಂದ ಗಾರ್ಮೇಂಟ್ಸ್ ಬಸ್ಸು ಢಿಕ್ಕಿ 

ಹೊಡೆದ ಪರಿಣಾಮ ಇಬ್ಬರ

ಚನ್ನಂಕೇಗೌಡನದೊಡ್ಡಿ ಚಲುವರಾಜು ನಿಧನ
ಚನ್ನಂಕೇಗೌಡನದೊಡ್ಡಿ ಚಲುವರಾಜು ನಿಧನ

ಚನ್ನಪಟ್ಟಣ:ಫೆ/೨೨/೨೦/ಶನಿವಾರ.


ಮುದಗೆರೆ ಬಳಿ ಭೀಕರ ಅಪಘಾತ ಎರಡು ಸಾವು, ಓರ್ವ ಗಂಭೀರ
ಮುದಗೆರೆ ಬಳಿ ಭೀಕರ ಅಪಘಾತ ಎರಡು ಸಾವು, ಓರ್ವ ಗಂಭೀರ

ಚನ್ನಪಟ್ಟಣ: ಬೆಂಗಳೂರು ಮೈಸೂರು ಹೆದ್ದಾರಿಯ ಮುದುಗೆರೆ ಗೇಟ್ ನ ವೈಶಾಲಿ ಹೋಟೆಲ್ ಬಳಿ ಬೆಳಗಿನ ಚುಮುಚುಮು ಚಳಿಯ ವೇಳೆ ಕಾರು ಬೈಕ್ ನಡುವೆ ಭೀಕರ ಅಪಘಾತ ಸಂಭವ

ತುಮಕೂರು ವಿ.ವಿ. ವಿ.ಸಿ. ಡಾ.ವೈ ಎಸ್. ಸಿದ್ದೇಗೌಡರಿಗೆ ಮಾತೃ ವಿಯೋಗ.
ತುಮಕೂರು ವಿ.ವಿ. ವಿ.ಸಿ. ಡಾ.ವೈ ಎಸ್. ಸಿದ್ದೇಗೌಡರಿಗೆ ಮಾತೃ ವಿಯೋಗ.

ಮೈಸೂರು:  ಪ್ರಸ್ತುತ ತುಮಕೂರು ವಿ.ವಿ. ಕುಲಪತಿ ಹಾಗೂ ಮೈಸೂರು ವಿ.ವಿ. ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರೊಫೆಸರ್ ಆಗಿ ಇತ್ತೀಚೆಗೆ ನಿವೃತ

ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ನಾಗವಾರ ತಿಮ್ಮಯ್ಯ ನಿಧನ
ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ನಾಗವಾರ ತಿಮ್ಮಯ್ಯ ನಿಧನ

ಚನ್ನಪಟ್ಟಣ: ತಾಲೂಕಿನ ನಾಗವಾರ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಎನ್. ತಿಮ್ಮಯ್ಯ (101) ವಯೋಸಹಜ ಖಾಯಿಲೆಯಿಂದಾಗಿ ಬುಧವಾರ ವಿಧಿವಶರಾದರು.

ಶಿವಗಿರಿಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ರವರ ತಾಯಿ ನಿಧನ
ಶಿವಗಿರಿಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ರವರ ತಾಯಿ ನಿಧನ

ಕನಕಪುರ: ಕನಕಪುರ ತಾಲೂಕಿನ ಬರಡನಹಳ್ಳಿ ಗ್ರಾಮದ ದೇವೇಗೌಡ ರ ಧರ್ಮಪತ್ನಿ ಶ್ರೀಮತಿ ಕೆಂಪಮ್ಮ (೬೫) ನವರು ಇಂದು ಸ್ವರ್ಗಸ್ಥರಾದರು.

ನಿವೃತ್ತ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ  ಶ್ರೀಯುತ ಸಿದ್ದಯ್ಯ ಅಸುನೀಗಿದರು
ನಿವೃತ್ತ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಯುತ ಸಿದ್ದಯ್ಯ ಅಸುನೀಗಿದರು

ಚನ್ನಪಟ್ಟಣ: ತಾಲ್ಲೂಕಿನ ಮಂಕುಂದ ಗ್ರಾಮದ ನಿವಾಸಿ ಸಿದ್ದಯ್ಯ ನವರು (೯೩) ಇಂದು ಮುಂಜಾನೆ ಅಸುನೀಗಿದರು. ಶ್ರೀಯುತರು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.<

ಅಕ್ಕೂರು ಸಿದ್ದಯ್ಯ ನಿಧನ
ಅಕ್ಕೂರು ಸಿದ್ದಯ್ಯ ನಿಧನ

ಚನ್ನಪಟ್ಟಣ; ತಾಲ್ಲೂಕಿನ ಅಕ್ಕೂರು ಗ್ರಾಮದ ನಿವೃತ್ತ ಗ್ರಾಮ ಸಹಾಯಕ ಸಿದ್ದಯ್ಯ (ಚೆನ್ನಿ ಸಿದ್ದಯ್ಯ) ನವರು ನಿನ್ನೆ ರಾತ್ರಿ ಅಸುನೀಗಿದರು.


ಮೃತರ ಅಂತ್ಯಕ್ರಿಯೆಯು ಗ್

Top Stories »  


Top ↑