ಎ ಆರ್ ಎಂ ರೇಷ್ಮೆ ನೂಲು ಬಿಚ್ಚಣಿಕೆ ಫಿಲೇಚರಿಯಲ್ಲಿ ಮಂಡ್ಯ ಮೂಲದ ಕಾರ್ಮಿಕ ನೇಣು ಬಿಗಿದು ಸಾವು, ದೂರು ದಾಖಲು

ಚನ್ನಪಟ್ಟಣ:ಡಿ/07/20/ಸೋಮವಾರ. ತಾಲ್ಲೂಕಿನ ಸುಣ್ಣಘಟ್ಟ ಬಳಿಯ ನೀಲಸಂದ್ರ ರಸ್ತೆಯಲ್ಲಿರುವ ಎ ಎಂ ಆರ್ ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದ ಮಹೇಶ್ (೨೫) ನೇಣು ಬಿಗಿದುಕೊಂಡು ಸಾವನ್ನಪ್ಪಿದ ವ್ಯಕ್ತಿ. ಈತ ಕಳೆದೊಂದು ವರ್ಷದಿಂದ ಇದೇ ಫಿಲೇಚರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಫಿಲೇಚರಿಗೆ ಹೊಂದಿಕೊಂಡಂತೆ ಇರುವ ಹಿಂದಿನ ಕೊಠಡಿಯಲ್ಲಿ ವಾಸವಾಗಿದ್ದನೆಂದು ತಿಳಿದುಬಂದಿದೆ.
ತನ್ನದೇ ರುಮಾಲಿನ್ನು (ಮಪ್ಲರ್) ಮೇಲಿನ ಕಬ್ಬಿಣದ ಸರಳಿಗೆ ಕಟ್ಟಿ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಹತ್ತಿ ನೇಣು ಬಿಗಿದುಕೊಂಡಿರವುದಾಗಿ ಮೇಲ್ನೋಟಕ್ಕೆ ಕಂಡುಬರುತ್ತದೆ. ಸ್ಥಳದಲ್ಲಿಯೇ ಬಿಯರ್ ಬಾಟಲಿಯೊಂದಿದ್ದು ನೇಣಿಗೂ ಮುನ್ನಾ ಬಿಯರ್ ಕುಡಿದಿರಬಹುದು ಎಂಬ ಶಂಕೆಯನ್ನು ಪೋಲೀಸರು ವ್ಯಕ್ತಪಡಿಸಿದ್ದಾರೆ.
ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ ನಂತರ ಶವವನ್ನು ಕೆಳಗಿಳಿಸಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಶವವನ್ನು ನೀಡಿದ್ದು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ಡಿ ಶಿವಕುಮಾರ್, ಎಸ್ ಐ ಶಿವಕುಮಾರ್ ಮತ್ತು ಸಿಬ್ಬಂದಿಗಳು ಹಾಗೂ ಫಿಲೇಚರಿ ಮಾಲೀಕ ಎಲೆಕೇರಿ ಶ್ರೀನಿವಾಸಮೂರ್ತಿ ಭೇಟಿ ನೀಡಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in obituary »

ನಿಘಂಟು ತಜ್ಞ, ಶತಾಯುಷಿ ಪ್ರೊ ಜಿ ವೆಂಕಟಸುಬ್ಬಯ್ಯ ನಿಧನ
1913ರ ಆಗಸ್ಟ್ 23ರಂದು ಜನಿಸಿದ ಪೂಜ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಮ್ಮ 108ನೇ ವರ್ಷದಲ್ಲಿ ವಯೋಸಹಜ ಅನಾರೋಗ್ಯದಿಂದ ನಿನ್ನೆ ರಾತ್ರಿ ನಮ್ಮನ್ನಗಲಿದ್ದಾರೆ, ಮೃತರ ಆತ್ಮಕ್ಕೆ ಶಾಂತ

ಮಹಿಳೆ ಆತ್ಮಹತ್ಯೆ, ಕಾರಣ ನಿಗೂಢ. ಪೋಲೀಸರ ಸರ್ಪಗಾವಲು
ನಗರದ ಹೈವೇ ರಸ್ತೆಯಲ್ಲಿರುವ ಸಾಗರ್ ಮೆಡಿಕಲ್ ಮಾಲೀಕ ಮೆಣಸಿಗನಹಳ್ಳಿ ಗ್ರಾಮದ ಕಿರಣ ಕುಮಾರ್ ರವರ ಪತ್ನಿ ಸುಷ್ಮಾ (28) ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಗರ ಪ

ಖಾಸಗಿ ಜಮೀನಿನ ಬಾವಿಯೊಂದರಲ್ಲಿ ಸುಮಾರು 40/45 ವರ್ಷದ ಅಪರಿಚಿತ ಗಂಡಸಿನ ಶವ ದೊರೆತಿದೆ.
ತಾಲ್ಲೂಕಿನ ಕೆಂಗಲ್ ಬಳಿಯ, ಹನುಮಂತಪುರ ಗ್ರಾಮಕ್ಕೆ ಹೋಗುವ ರಸ್ತೆಯ ಬಳಿ ಖಾಸಗಿ ಜಮೀನಿನ ಬಾವಿಯೊಂದರಲ್ಲಿ ಸುಮಾರು 40/45 ವರ್ಷದ ಅಪರಿಚಿತ ಗಂಡಸಿನ ಶವ ದೊರೆತಿದೆ.
ಮೂರ್ನಾಲ್ಕು ದ

ಅಂಗಾಂಗ ದಾನ ಮಾಡುವ ಮೂಲಕ, ಸಾವಿನಲ್ಲೂ ಸಾರ್ಥಕತೆ ಮೆರೆದ ಜೆ ಬ್ಯಾಡರಹಳ್ಳಿ ಗ್ರಾಮದ ಪ್ರಸನ್ನ.
ಚನ್ನಪಟ್ಟಣ:ಜ/13/21/ಬುಧವಾರ. ತಾಲ್ಲೂಕಿನ ಜೆ ಬ್ಯಾಡರಹಳ್ಳಿ ಗ್ರಾಮದ ಇಪ್ಪತ್ತೇಳು ವರ್ಷದ ಪ್ರಸನ್ನ ರವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರ

ಎ ಆರ್ ಎಂ ರೇಷ್ಮೆ ನೂಲು ಬಿಚ್ಚಣಿಕೆ ಫಿಲೇಚರಿಯಲ್ಲಿ ಮಂಡ್ಯ ಮೂಲದ ಕಾರ್ಮಿಕ ನೇಣು ಬಿಗಿದು ಸಾವು, ದೂರು ದಾಖಲು
ಚನ್ನಪಟ್ಟಣ:ಡಿ/07/20/ಸೋಮವಾರ. ತಾಲ್ಲೂಕಿನ ಸುಣ್ಣಘಟ್ಟ ಬಳಿಯ ನೀಲಸಂದ್ರ ರಸ್ತೆಯಲ್ಲಿರುವ ಎ ಎಂ ಆರ್ ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಯಲ್ಲಿ

ಟಿವಿ9 ರಾಜು ಎಂದೇ ಹೆಸರುವಾಸಿಯಾಗಿದ್ದ ಹಲಸಿನಮರದದೊಡ್ಡಿ ರಾಜು ನಿಧನ
ಚನ್ನಪಟ್ಟಣ:ಅ/14/20/ಬುಧವಾರ. ಹಿರಿಯ ಮಾಧ್ಯಮ ವರದಿಗಾರರಾಗಿದ್ದ Tv9 ರಾಜುರವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವ

ಮುಸ್ಲಿಂ ಯುವತಿ ಪ್ರೀತಿಸಿದ್ದಕ್ಕೆ ಅಳಿಯನನ್ನೇ ಕೊಲೆ ಮಾಡಿದ ಯುವತಿಯ ತಂದೆ*
ಮಾಗಡಿ:ಅ/08/20/ಗುರುವಾರ. ಮಾಗಡಿ ತಾಲ್ಲೂಕಿನ ಕನಕೇನಹಳ್ಳಿ ಇಸ್ಲಾಂಪುರದ ಯುವತಿ ಅಂಬ್ರೀನಾಬಾನು ಹಾಗೂ ನೆಲಮಂಗಲದ ಲಕ್ಷ್ಮೀಪತಿ ಎಂಬುವವರು ಕಳೆದ

ಕುಂತೂರುದೊಡ್ಡಿ ಬಳಿ ಮಡಿಕೇರಿ ಮೂಲದ ವ್ಯಕ್ತಿಯ ಶವ ಪತ್ತೆ*
ಚನ್ನಪಟ್ಟಣ:ಅ/08/20/ಗುರುವಾರ. ಪಾನಮತ್ತನಾದ ನಂತರ ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿರುವ ಗಂಡಸಿನ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಗ್ರಾಮ

ನಗರಸಭೆಯ ಮಾಜಿ ಅಧ್ಯಕ್ಷೆ ಶ್ವೇತಾ ಗೋಪಾಲಕೃಷ್ಣ ನಿಧನ
ಚನ್ನಪಟ್ಟಣ:ಸೆ/29/20/ಮಂಗಳವಾರ. ನಗರಸಭೆಯ ಮಾಜಿ ಅಧ್ಯಕ್ಷೆ ಮಂಗಳವಾರಪೇಟೆ ಯ ನಿವಾಸಿ ಶ್ರೀಮತಿ ಶ್ವೇತಾ ಗೋಪಾಲಕೃಷ್ಣ (35) ಇಂದು ಸಂಜೆ ಹೃದಯಘಾತ

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಚನ್ನಪಟ್ಟಣ:ಸೆ/22/20/ಮಂಗಳವಾರ. ವಿದ್ಯುತ್ ತಂತಿ ಎಳೆಯುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ
??????????????