Tel: 7676775624 | Mail: info@yellowandred.in

Language: EN KAN

    Follow us :


ಬುಧವಾರ ಕೆಆರ್ ಪೇಟೆಯಲ್ಲಿ ನಡೆಯುವ ಕಸಾಪ ದತ್ತಿ ಪ್ರಶಸ್ತಿ ಸ್ವೀಕರಿಸಲಿರುವ ಜಿಲ್ಲೆಯ ಜಾನಪದ ಕಲಾವಿದೆ ಲಕ್ಷ್ಮಿ ಶ್ರೀನಿವಾಸ
ಬುಧವಾರ ಕೆಆರ್ ಪೇಟೆಯಲ್ಲಿ ನಡೆಯುವ ಕಸಾಪ ದತ್ತಿ ಪ್ರಶಸ್ತಿ ಸ್ವೀಕರಿಸಲಿರುವ ಜಿಲ್ಲೆಯ ಜಾನಪದ ಕಲಾವಿದೆ ಲಕ್ಷ್ಮಿ ಶ್ರೀನಿವಾಸ

ರಾಮನಗರ/ಚನ್ನಪಟ್ಟಣ:ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ೨೦೨೦ ೨೦೨೧ ಹಾಗೂ ೨೦೨೨ ನೇ ಸಾಲಿನ "ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿ' ಪ್ರಕಟಗೊಂಡಿದ್ದು, ೨೦೨೦ನೇ ಸಾಲಿನ ಪ್ರಶಸ್ತಿಗೆ ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಜಾನಪದ ಕಲಾವಿದೆ ಲಕ್ಷ್ಮಿ ಗೋ ರಾ ಶ್ರೀನಿವಾಸ್ ಆಯ್ಕೆಯಾಗಿದ್ದು, ನವೆಂಬರ್.೨೯ರ ಬುಧವಾರ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ  ಪಿಇಎಸ್ ಕಾಲೇಜು

ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್, ಡಿಪೋ ತಡೆಗೋಡೆಗೆ ಢಿಕ್ಕಿ
ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್, ಡಿಪೋ ತಡೆಗೋಡೆಗೆ ಢಿಕ್ಕಿ

ಚನ್ನಪಟ್ಟಣ: ಇತ್ತೀಚೆಗೆ ತಾಲ್ಲೂಕಿನಾದ್ಯಂತ ಸಾರಿಗೆ ಬಸ್ಸುಗಳ ಅಪಘಾತ ಹೆಚ್ಚಾಗುತ್ತಿದ್ದು, ಅಮಾಯಕರ ಪ್ರಾಣವನ್ನು ಬಲಿ ಪಡೆಯುತ್ತಿವೆ. ರಸ್ತೆಯ ಮೇಲೆ ಸಂಚರಿಸುವ ಸಾರಿಗೆ ಬಸ್ಸುಗಳ ಅಪಘಾತವಷ್ಟೇ ಅಲ್ಲದೆ ಡಿಪೋ ಗೆ ಸರ್ಮಿಸ್‍ಗೆ ಬಂದಿದ್ದ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್‍ಗೆ ಡಿಕ್ಕಿ ಹೊಡೆದು ಗೋಡೆಯನ್ನು ಬೀಳಿಸಿರುವ ಘಟನೆ ನಗರದ ಸಾರಿಗೆ ಡಿಪೋದಲ್ಲಿ ನಡೆದಿದೆ.

ದೀಪಾವಳಿ ನೆಪದಲ್ಲಿ ಅನಾಥವಾದ ನೆಹರು/ಮಕ್ಕಳ ಜಯಂತಿ
ದೀಪಾವಳಿ ನೆಪದಲ್ಲಿ ಅನಾಥವಾದ ನೆಹರು/ಮಕ್ಕಳ ಜಯಂತಿ

ರಾಮನಗರ: ಇಂದು ನವೆಂಬರ್ ೧೪ ಮಕ್ಕಳ ದಿನಾಚರಣೆ, ಚಾಚಾಜಿ ಅಡ್ಡ ಹೆಸರಿನ ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ರವರ ಹೆಸರಿನಲ್ಲಿ ರಾಷ್ಟ್ರದಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಅದರಲ್ಲೂ ಬಲಿಪ

ಸಾರಿಗೆ ಬಸ್ ಸ್ಟಿಯರಿಂಗ್ ಕಟ್, ಸ್ಕೂಟರ್ ಗೆ ಢಿಕ್ಕಿ ಇಬ್ಬರ ಸಾವು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಪಾರು
ಸಾರಿಗೆ ಬಸ್ ಸ್ಟಿಯರಿಂಗ್ ಕಟ್, ಸ್ಕೂಟರ್ ಗೆ ಢಿಕ್ಕಿ ಇಬ್ಬರ ಸಾವು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಪಾರು

ಚನ್ನಪಟ್ಟಣ: ನಗರಕ್ಕೆ ಹೊಂದಿಕೊಂಡಿರುವ ತಿಟ್ಟಮಾರನಹಳ್ಳಿ ಗ್ರಾಮದ ನಡುವಿನ ರಾಮಮ್ಮ ನ ಕೆರೆ ಏರಿಯ ಮೇಲೆ ಸೋಮವಾರ ಮುಂಜಾನೆ ಸಾರಿಗೆ ಬಸ್ ಮತ್ತು ಸ್ಕೂಟರ್ ನಡುವೆ ಢಿಕ್ಕಿಯಾಗಿ ಸ್ಕೂಟರ್ ಸವಾರರಾದ ತಂದೆ-ಮಗ ಸಾವನ್ನಪ್ಪಿದ ಘಟನೆ ಜರುಗಿದೆ.ಚನ್ನಪಟ್ಟಣ ನಗರದಿಂದ ಭೈರನಾಯಕನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಮೂವತ್ತಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು.

ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಟಿ ವಿ ಗಿರೀಶ್ ಆಯ್ಜೆ, ಹಲವರಿಂದ ಅಭಿನಂದನೆ
ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಟಿ ವಿ ಗಿರೀಶ್ ಆಯ್ಜೆ, ಹಲವರಿಂದ ಅಭಿನಂದನೆ

ಚನ್ನಪಟ್ಟಣ:ನಗರದ ನ್ಯಾಯಾಲಯದಲ್ಲಿರುವ ವಕೀಲರ ಸಂಘದ ಕಛೇರಿಯಲ್ಲಿ ತಾಲ್ಲೂಕು ವಕೀಲರ ಸಂಘದ ಚುನಾವಣೆಯು ಶನಿವಾರ ಜರುಗಿದ್ದು ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಟಿ ವಿ ಗಿರೀಶ್ ಆಯ್ಕೆಯಾದರು. ಎರಡು ವರ್ಷಕ್ಜೊಮ್ಮೆ ನಡೆಯುವ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಗಾದಿಗೆ ನಾಲ್ಕು ಮಂದಿ, ಉಪಾಧ್ಯಕ್ಷ ಗಾದಿಗೆ ಇಬ್ಬರು, ಕಾರ್ಯದರ್ಶಿ ಗಾದಿಗೆ ಮೂವರು ಹಾಗೂ ಖಜಾಂಚಿ ಸ್ಥಾನಕ್ಕೆ ಇಬ್ಬರು ಸ್ಪರ್ಧೆ ಮಾಡಿದ್ದು ಟ

ತೌಟನಹಳ್ಳಿ ಬಳಿ ಹತ್ತಾರು ಎಕರೆ ಸರ್ಕಾರಿ ಗುಡ್ಡೆ, ದಲಿತರ ಜಮೀನು ಒತ್ತುವರಿ ಮಾಡಿದ ಬಿಜೆಪಿ ಮುಖಂಡ, ಕ್ರಮಕ್ಕೆ ಆಗ್ರಹ
ತೌಟನಹಳ್ಳಿ ಬಳಿ ಹತ್ತಾರು ಎಕರೆ ಸರ್ಕಾರಿ ಗುಡ್ಡೆ, ದಲಿತರ ಜಮೀನು ಒತ್ತುವರಿ ಮಾಡಿದ ಬಿಜೆಪಿ ಮುಖಂಡ, ಕ್ರಮಕ್ಕೆ ಆಗ್ರಹ

ಚನ್ನಪಟ್ಟಣ: ತಾಲ್ಲೂಕಿನ ಮಳೂರು ಹೋಬಳಿ ಯ ತೌಟನಹಳ್ಳಿ ಗ್ರಾಮದ ಸರ್ವೇ ನಂಬರ್ ೭೪ ರಲ್ಲಿ ೧೭೦ ಎಕರೆ ಸರ್ಕಾರಿ ಜಮೀನು ಇದ್ದು, ಸ್ಥಳೀಯ ರೈತರ ಜಾನುವಾರುಗಳಿಗೆ ಹಾಗೂ ಕಾಡು ಪ್ರಾಣಿಗಳಿಗೆ ಆಶ್ರಯ ತಾಣವಾಗಿತ್ತು. ಜೊತೆಗೆ ಸಮೃದ್ಧವಾಗಿ ಬೆಳೆದು ನಿಂತಿದ್ದ ವಿವಿಧ ಜಾತಿಯ ಗಿಡ-ಮರಗಳಿಂದ ವಾತಾವರಣಕ್ಕೂ ಪೂರಕವಾಗಿತ್ತು. ಇಂತಹ ಸರ್ಕಾರಿ ಗುಡ್ಡೆಯನ್ನು ಹಾಗೂ ಸ್ಥಳೀಯ ದಲಿತರ ಜಮೀನುಗಳನ್ನು ತೌಟನಹಳ್ಳಿ ಗ್ರಾಮದ ಬಿ

ಹಲವು ಎಡವಟ್ಟುಗಳೊಂದಿಗೆ ರಾಜ್ಯೋತ್ಸವ ಆಚರಿಸಿದ ತಾಲ್ಲೂಕು ಆಡಳಿತ
ಹಲವು ಎಡವಟ್ಟುಗಳೊಂದಿಗೆ ರಾಜ್ಯೋತ್ಸವ ಆಚರಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ: ಚನ್ನಪಟ್ಟಣ ನಗರ ಮತ್ತು ತಾಲ್ಲೂಕು ಕೇಂದ್ರವೂ ಪುರಾಣ, ಇತಿಹಾಸ, ಚಳವಳಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ನಂತರವೂ ಹೆಸರುವಾಸಿಯಾಗಿತ್ತು. ಬೆಂಗಳೂರು-ಮೈಸೂರು ನಡುವಿನಲ್ಲಿರು ಎಲ್ಲಾ ತಾಲ್ಲೂಕು ಕೇಂದ್ರ ಗಳಿಗಿಂತ ಚನ್ನಪಟ್ಟಣ ಎಲ್ಲದರಲ್ಲೂ ತುಸು ಮುಂದಿತ್ತು. ಇಂದು ಅಭಿವೃದ್ಧಿ ಸೇರಿದಂತೆ ಎಲ್ಲದರಲ್ಲೂ ಹಿಂದೆ ಸರಿಯುತ್ತಿದೆ. ಅದೇ ರೀತಿ ತಾಲ್ಲೂಕು ಆಡಳಿತ

ಕಾಡಂಕನಹಳ್ಳಿ ಗ್ರಾಮದಲ್ಲಿ ವೃದ್ದನಿಗೆ ಢಿಕ್ಕಿ ಹೊಡೆದ ಬೈಕ್, ಪಾದಚಾರಿ ಸಾವು
ಕಾಡಂಕನಹಳ್ಳಿ ಗ್ರಾಮದಲ್ಲಿ ವೃದ್ದನಿಗೆ ಢಿಕ್ಕಿ ಹೊಡೆದ ಬೈಕ್, ಪಾದಚಾರಿ ಸಾವು

ಚನ್ನಪಟ್ಟಣ: ತಾಲ್ಲೂಕಿನ ಕಾಡಂಕನಹಳ್ಳಿ ಗ್ರಾಮದ ೬೫ ವರ್ಷದ ಶಿವಮಾದೇಗೌಡ ಎಂಬ ವ್ಯಕ್ತಿಯು ವ್ಯವಸಾಯಗಾರನಾಗಿದ್ದು, ಹೈನುಗಾರಿಕೆ ಮಾಡಿಕೊಂಡಿದ್ದರು. ಪ್ರತಿದಿನದಂತೆ ಹಾಲನ್ನು ತೆಗೆದುಕೊಂಡು ಡೈರಿಗೆ ಹಾಕಿ ಮನೆಗೆ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಕೆ ಎ ೧೧ ಇಪಿ ೨೩೪೦ ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಬೈಕ್ ಸವಾರ ಢಿಕ್ಕಿ ಹೊಡೆದಿದ್ದಾನೆ. 

ಪೋಲಿಸರು ಕೆಲಸದ ಒತ್ತಡದ ನಡುವೆ ಆರೋಗ್ಯ ಮತ್ತು ಕುಟುಂಬಕ್ಕೂ ಒತ್ತು ನೀಡಿ, ಜಿಲ್ಲಾಧಿಕಾರಿ
ಪೋಲಿಸರು ಕೆಲಸದ ಒತ್ತಡದ ನಡುವೆ ಆರೋಗ್ಯ ಮತ್ತು ಕುಟುಂಬಕ್ಕೂ ಒತ್ತು ನೀಡಿ, ಜಿಲ್ಲಾಧಿಕಾರಿ

ಚನ್ನಪಟ್ಟಣ: ಪೋಲಿಸರು ಜನರ ರಕ್ಷಣೆಗಾಗಿ ಸದಾ ಒತ್ತಡದ ಮಧ್ಯೆ ಕರ್ತವ್ಯ ನಿರ್ವಹಿಸುತ್ತಾರೆ. ಇದರ ನಡುವೆಯೂ ಪೊಲೀಸರು ತಮ್ಮ ಆರೋಗ್ಯ ಹಾಗೂ ಕುಟುಂಬದ ಕುರಿತು ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರನ್ ಸಲಹೆ ನೀಡಿದರು.ಅವರು ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರ

ನಗರದಲ್ಲಿ ಗುರುವಾರ ಮುಂಜಾನೆ ಚಡ್ಡಿ ಗ್ಯಾಂಗ್ ನಿಂದ ಸರಣಿ ಕಳವು
ನಗರದಲ್ಲಿ ಗುರುವಾರ ಮುಂಜಾನೆ ಚಡ್ಡಿ ಗ್ಯಾಂಗ್ ನಿಂದ ಸರಣಿ ಕಳವು

ಚನ್ನಪಟ್ಟಣ:ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ವಿವಿಧ ರೀತಿಯ ಕಳ್ಳತನ ಪ್ರಕರಣಗಳು ದಿನೆದಿನೇ ಹೆಚ್ಚಾಗುತ್ತಿದ್ದು, ಪೋಲೀಸರ ಆಲಕ್ಷ್ಯವೋ ಕಳ್ಳರ ಕೈಚಳಕವೋ ತಿಳಿಯದಾಗಿದೆ. ಬೈಕ್ ಗಳು, ಕಾರುಗಳು, ಮನೆಯಲ್ಲಿನ ಕಳವಿನ ಜೊತೆಗೆ ಅಂಗಡಿ, ಹೋಟೆಲ್ ಗಳ ಕಳ್ಳತ‌ನ ಪ್ರಕರಣಗಳು ಹೆಚ್ಚಾಗುತ್ತಿವೆ. ಪೋಲಿಸ್ ಠಾಣೆಗಳಲ್ಲಿ ದಾಖಲಾಗುವ ದೂರುಗಳಿಗೂ ಪತ್ತೆಯಾಗುವ ಪ್ರಕರಣಗಳಿಗೂ ಅಜಗಜಾಂತರವಿದೆ ಎಂಬುದು ಸತ್ಯ ಸಂಗತಿ. ಪೋಲಿ

Top Stories »  



Top ↑