Tel: 7676775624 | Mail: info@yellowandred.in

Language: EN KAN

    Follow us :


ಕೆಂಪೇಗೌಡರ ಜಯಂತಿಯಲ್ಲಿ ಒಗ್ಗಟ್ಟಾಗುತ್ತಿರುವ ತಾಲ್ಲೂಕಿನ ಪ್ರೌಢ ಒಕ್ಕಲಿಗರು

Posted date: 25 Jun, 2023

Powered by:     Yellow and Red

ಕೆಂಪೇಗೌಡರ ಜಯಂತಿಯಲ್ಲಿ ಒಗ್ಗಟ್ಟಾಗುತ್ತಿರುವ ತಾಲ್ಲೂಕಿನ ಪ್ರೌಢ ಒಕ್ಕಲಿಗರು

ಚನ್ನಪಟ್ಟಣ: ಒಕ್ಕಲಿಗ ಪ್ರೌಢನಲ್ಲಾ ಎಂಬ ಮಾತೊಂದಿದೆ. ಹಲವಾರು ದಶಕಗಳಿಂದ ಚಾಲ್ತಿಯಲ್ಲಿರುವ ಮಾತಾದರೂ ಅದು ಅಲ್ಲಗಳೆಯುವಂತಿಲ್ಲಾ, ದಾಯಾದಿಗಳಿಂದ ಹಿಡಿದು ರಾಜಕೀಯದ ತನಕ ಒಕ್ಕಲಿಗರು ಒಂದಾಗುವುದೇ ಕಷ್ಟವಾಗಿದೆ. ಇದಕ್ಕೆ ಸ್ಪಷ್ಟ ಕಾರಣ ನಾನೂ ನಾಯಕ, ನಾನೂ ನಾಯಕ ಎಂಬ ಸ್ವಯಂ ಘೋಷಿತ ನಾಯಕರು ಎಂಬುದು ಸುಸ್ಪಷ್ಟ. ಒಕ್ಕಲಿಗ ಪ್ರೌಢನಲ್ಲಾ ಎಂಬುದನ್ನು ಶಾಶ್ವತವಾಗಿ ಅಳಿಸಲು ಚನ್ನಪಟ್ಟಣ ನಗರದಲ್ಲಿ ಇದೇ ತಿಂಗಳ ೨೭ನೇ ತಾರಿಖಿನ ಮಂಗಳವಾರದಂದು ನಡೆಯುವ 'ನಾಡಪ್ರಭು ಕೆಂಪೇಗೌಡರ' ಜಯಂತಿಯನ್ನು ತಾಲ್ಲೂಕು ಆಡಳಿತದ ಜೊತೆಗೂಡಿ ಅದ್ದೂರಿಯಾಗಿ ಆಚರಣೆ ಮಾಡಿ, ಒಗ್ಗಟ್ಟನ್ನು ಪ್ರದರ್ಶಿಸಲು ತಾಲ್ಲೂಕಿನ ಒಕ್ಕಲಿಗರು ಮುಂದಾಗಿರುವುದು ಸಮುದಾಯದ ಹೆಮ್ಮೆಯ ಸಂಗತಿಯಾಗಿದೆ.



ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆ;


ಹಳೆ ಮೈಸೂರು ಭಾಗವು ಒಕ್ಕಲಿಗರ ಸಾಮ್ರಾಜ್ಯ ಎಂದರೆ ತಪ್ಪಾಗಲಾರದು, ಬೆಂಗಳೂರು ಮೈಸೂರು ನಡುವಿನ ಮಂಡ್ಯ ಹೊರತು ಪಡಿಸಿದರೆ ಅತಿ ಹೆಚ್ಚು ಪ್ರಬಲವಾದ ತಾಲ್ಲೂಕು ಕೇಂದ್ರ ಚನ್ನಪಟ್ಟಣ. ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ರಾಜಮನೆತನವಾದ ಒಕ್ಕಲಿಗರ ಮೂಲ ಎನ್ನುವ ಗಂಗರಸರಿಂದ ಹಿಡಿದು ಜಗದೇವರಾಯ ರವರೆಗೂ ಒಕ್ಕಲಿಗರ ಇತಿಹಾಸ ಹಾಗೂ ಪುರಾಣವಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆ. ಆಗಿನ ಕಾಲಕ್ಕೆ ತಾಲ್ಲೂಕಿನ ಹಲವಾರು ಒಕ್ಕಲಿಗ ಸಿರಿವಂತ ಮುಖಂಡರು ಸೇರಿ ನಗರದ ಜಯಚಾಮರಾಜೇಂದ್ರ ರಸ್ತೆ, ನಾಗವಾರ ಮತ್ತು ಮತ್ತೀಕೆರೆ-ಶೆಟ್ಟಿಹಳ್ಳಿ ಗ್ರಾಮದಲ್ಲಿ ಕಟ್ಟಿ ಬೆಳೆಸಿದ ರೀತಿಯೇ ಅದ್ಭುತ. ಅದೇ ರೀತಿಯಲ್ಲಿ ವಿ ವೆಂಕಟಪ್ಪ, ಆರ್ಥಿಕ ತಜ್ಞ ಪ್ರೊ ವೆಂಕಟಗಿರಿಗೌಡ, ಹೆಚ್ ಕೆ ವೀರಣ್ಣಗೌಡ ಸೇರಿದಂತೆ ಹಲವಾರು ಅಂದಿನ ಒಕ್ಕಲಿಗ ಸಮುದಾಯದ ನಾಯಕರು ಮುಂಚೂಣಿಯಲ್ಲಿದ್ದುದು ಸಮುದಾಯದ ಹೆಮ್ಮೆಯ ಸಂಗತಿಯಾಗಿದೆ.


ಮಂಡ್ಯಸ ಪ್ರತಿಭಾ ಪ್ರಕರಣ ಒಕ್ಕಲಿಗರಿಂದ ಬೃಹತ್ ಪ್ರತಿಭಟನೆ



೧೯೯೯-೨೦೦೦ ರಲ್ಲಿ ಮಂಡ್ಯ ದ ಗೌಡಗೆರೆ ಗ್ರಾಮದ ಒಕ್ಕಲಿಗ ಹೆಣ್ಣು ಮಗಳಾದ ಪ್ರತಿಭಾ ಎಂಬ ಯುವತಿಯನ್ನು ಹರಿಜನ ಹುಡುಗರು ಚುಡಾಯಿಸಿದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು, ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳದ ಅಲ್ಲಿನ ಡಿವೈಎಸ್ಪಿ ಮತ್ತು ಯುವಕರ ವಿರುದ್ಧ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದೇ ಸಮಯದಲ್ಲಿ ತಾಲ್ಲೂಕಿನ ಬ್ರಹ್ಮಣಿಪುರ ಗ್ರಾಮದಲ್ಲೂ ಒಕ್ಕಲಿಗ ಹೆಣ್ಣು ಮಗಳ ಮೇಲೆ ಅತ್ಯಾಚಾರ ಪ್ಕಕರಣ ನಡೆದಿತ್ತು, ಹರಿಜನರ ಉದ್ದಾರಕ್ಕಾಗಿ, ಅವರ ಪರವಾಗಿ ಇದ್ದ ಜಾತಿ ಕಾನೂನನ್ನು ಕೆಲ ಹೀನ ಮನಸ್ಥಿತಿ ಯವರು ದ್ವೇಷ ಇದ್ದವರ ವಿರುದ್ಧ ಬೇಕೂಂತಲೇ ದುರುಪಯೋಗಪಡಿಸಿಕೊಂಡಿದ್ದರು. ಜಾತಿ ಸಮಸ್ಯೆ ಇಂದಿಗಿಂತ ಅಂದು ಬಲಾಢ್ಯವಾಗಿತ್ತು. ಅಂತಹ ಸಮಯದಲ್ಲಿ ತಾಲ್ಲೂಕಿನಾದ್ಯಂತ ಇರುವ ಒಕ್ಕಲಿಗರು ಒಂದಾಗಿ ಪ್ರತಿಭಟಿಸಿದ್ದರು. ಆ ಪ್ರಕರಣಕ್ಕೆ ಕಾಲು ಶತಮಾನ ತುಂಬಿದೆ. ವರದೇಗೌಡರು, ಟಿ ವಿ ಕೃಷ್ಣಪ್ಪ ನವರ ನೇತೃತ್ವದಲ್ಲಿ ಆಗ ತಾನೇ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದ ಎಲ್ ರಮೇಶಗೌಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದು ಒಂದು ದಾಖಲೆಯಾಗಿತ್ತು.



ಗೌಡಾಸ್ ಕೂಟ


ಗರಕಹಳ್ಳಿ ಕೃಷ್ಣೇಗೌಡ ರು ಹುಟ್ಟು ಹೋರಾಟಗಾರರು, ನೀರಾ ಚಳವಳಿಯ ಹರಿಕಾರರು, ಇಂದು ಒಂದು ಪಕ್ಷವನ್ನು ಹೇಗೆ ತಲೆ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಾರೋ ಅಂದು ಅದೇ ರೀತಿಯಲ್ಲಿ ಎಲ್ಲಾ ವರ್ಗದ ರೈತರು ಮತ್ತು ಗೌಡರು ಎಂದರೆ ದೊಡ್ಡ ಹೆಮ್ಮೆ ಎಂಬ ಸತ್ಯ ಕಂಡುಕೊಂಡಿದ್ದರು. ಅಂಬೇಡ್ಕರ್, ಲೋಹಿಯಾ, ಕುವೆಂಪು, ಪೂರ್ಣಚಂದ್ರತೇಜಶ್ವಿ, ಯಂತಹ ಮಹಾನ್ ವಿಚಾರವಾದಿಗಳನ್ನು ಒಂದಷ್ಟು ಓದಿಕೊಂಡವರು. ಅವರು ಕೆಲ ಗೌಡರನ್ನು ನಂಬಿ ನಗರದಲ್ಲಿ 'ಗೌಡಾಸ್ ಕೂಟ' ಎಂಬ ಬೃಹತ್ ಕಾರ್ಯಕ್ರಮವನ್ನು ೨೦೦೮ರಲ್ಲಿ ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮಕ್ಕೆ ಸಾವಿರಕ್ಕೂ ಮಿಗಿಲಾಗಿ ಜನರು ಸೇರಿದ್ದರಾದರೂ ನಿರೀಕ್ಷೆ ಮೀರಲಿಲ್ಲ. ಕೃಷ್ಣೇಗೌಡರು ನಂಬಿದ್ದ ಕೆಲ ಗೌಡರು ಆರ್ಥಿಕವಾಗಿ ಕೈಕೊಟ್ಟಿದ್ದರಿಂದ ತೋಟ ಮಾರಿ ಶಾಮಿಯಾನದವರಿಗೆ ದುಡ್ಡು ಕೊಟ್ಟಿದ್ದನ್ನು ಗೌಡರು ಅಲ್ಲಲ್ಲೇ ಸ್ಮರಿಸಿಕೊಳ್ಳುತ್ತಾರೆ.


ನಿರ್ಮಲಾನಂದನಾಥ ಸ್ವಾಮೀಜಿ ಪುರ ಪ್ರವೇಶಕ್ಕೆ ಕಲ್ಲು


ಹೆಚ್ ಡಿ ಕುಮಾರಸ್ವಾಮಿ ಯವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ತಾಲ್ಲೂಕಿನಲ್ಲಿ ಕೆಂಪೇಗೌಡರ ಜಯಂತಿಯನ್ನು ಆಚರಿಸುವ ಸಲುವಾಗಿ ಮೆಂಗಹಳ್ಳಿ ಮಹೇಶ್ ಮತ್ತು ನಾನು (ಗೋ ರಾ ಶ್ರೀನಿವಾಸ) ಮುಂದಡಿ ಇಟ್ಟೆವು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ನಂತರ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಪುರ ಪ್ರವೇಶವನ್ನು ಇದೇ ಸಂದರ್ಭದಲ್ಲಿ ಅದ್ದೂರಿಯಾಗಿ ಏರ್ಪಡಿಸಬೇಕು ಎಂಬ ನಿಟ್ಟಿನಲ್ಲಿ ನಾವೇ ಖುದ್ದು ಹಿರಿ-ಕಿರಿಯ ನಾಯಕರು, ಸಮಾಜ ಸೇವಕರು, ನಾಡು-ನುಡಿ ಪರ ಸಂಘಟನೆಗಳ ಮುಖ್ಯಸ್ಥರ ಜೊತೆಗೆ ಎಲ್ಲಾ ಪಕ್ಷಗಳ ಮುಖಂಡರನ್ನು ನಗರದ ಪ್ರವಾಸಿ ಮಂದಿರಲ್ಲಿ ಸಭೆ ಸೇರಿಸಿ ಚರ್ಚಿಸಿ, ಅಂದೇ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಹಾಗೂ ಕುಮಾರಸ್ವಾಮಿ ಯವರನ್ನು ಭೇಟಿ ಮಾಡಿ ದಿನಾಂಕ ನಿಗದಿ ಮಾಡಿ ಮನೆಗೆ ಬಂದಾಗ ಮಾರನೆಯ ದಿನದ ಮುಂಜಾನೆ. ಅಂದರೆ ಹನ್ನೆರಡು ಗಂಟೆಗಳ ಕಾಲ ಈ ಕೆಲಸ ನಡೆಯಿತು. ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಅವರದೇ ಪಕ್ಷದ ಮುಖಂಡರ ಮುಸುಕಿನ ಗುದ್ದಾಟದಿಂದ ಆ ಕಾರ್ಯಕ್ರಮವು ಜರುಗದೇ ಸ್ವಾಮೀಜಿಗಳ ಮುಂದೆ ನಾನು ಕ್ಷಮೆ ಕೇಳಬೇಕಾಗಿ ಬಂದಿದ್ದು ನೋವಿನ ಸಂಗತಿ. ಅಂದು ನಮ್ಮ ಕರೆಗೆ ಓಗೊಟ್ಟು ಸ್ಪಂದಿಸಿದ ಎಲ್ಲರೂ ಇಂದಿಗೂ ನಮ್ಮ ಸ್ಮೃತಿ ಪಟಲದಲ್ಲಿದ್ದಾರೆ.


ಸಾಧಾರಣವಾಗಿ ನಡೆದ ಮೊದಲ ಜಯಂತಿ


ತಾಲ್ಲೂಕಿನ ಹಲವಾರು ಸಮಾನ ಮನಸ್ಕರು ತಾಲ್ಲೂಕು ಆಡಳಿತದ ಜೊತೆಗೂಡಿ   ತಾಲ್ಲೂಕು ಕಛೇರಿ ಆವರಣದಲ್ಲಿ ಕೆಂಪೇಗೌಡರ ಮೊದಲ ಜಯಂತಿಯನ್ನು ಆಚರಣೆ ಮಾಡಲಾಯಿತು. ಅದಕ್ಕೂ ಸಹ ಸಾಧಾರಣವಾಗಿ ಕುಲಬಾಂಧವರು ಸೇರಿದರು. ತಿಮ್ಮೇಶಪ್ರಭು ಮುಂದಾಳತ್ವದಲ್ಲಿ ಒಂದಷ್ಟು ಹಣವೂ ಸಂಗ್ರಹವಾಗಿತ್ತು. ಬಹಳ ಮುಖ್ಯವಾಗಿ ಆ ಕಾರ್ಯಕ್ರಮದ ಇಂಚಿಂಚೂ ಲೆಕ್ಕವನ್ನೂ ಸಾರ್ವಜನಿಕರಿಗೆ ಅಂದಿನ ಸಮಾನ ಮನಸ್ಕರ ತಾತ್ಕಾಲಿಕ ಸಮಿತಿ ನೀಡಿತ್ತು. ಉಳಿದ ಹನ್ನೊಂದು ಸಾವಿರ ರೂಪಾಯಿಗಳನ್ನು ರಾಮನಗರದ ಅರ್ಚಕರಹಳ್ಳಿ ಬಳಿ ಇರುವ ಆದಿಚುಂಚನಗಿರಿ ಶಾಖಾ ಮಠದ ಅಂಧ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಯವರಿಗೆ ನೀಡಲಾಯಿತು.


ಇದೊಂದು ಬೃಹತ್ ಸಮಾವೇಶವಾಗುವುದೇ!?

ಹೆಚ್ ಡಿ ದೇವೇಗೌಡರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಸತಾಯಿಸಿದ ಸಂದರ್ಭದಲ್ಲೂ ಸಹ ಅವರ ಮಾನಸ ಪುತ್ರ ಎಂದೇ ಬಿಂಬಿತರಾಗಿದ್ದ ವರದೇಗೌಡರ ನೇತೃತ್ವದಲ್ಲಿ ವಿಧಾನಸೌಧ ಮತ್ತು ರಾಜಭವನಕ್ಕೆ ಮುತ್ತಿಗೆ ಹಾಕಿದ್ದ ತಾಲ್ಲೂಕಿನ ಒಕ್ಕಲಿಗರು ಹಾಗೂ ಪ್ರತಿಭಾ ಪ್ರಕರಣದ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದುದನ್ನು ಬಿಟ್ಟರೆ ಮಂಗಳವಾರ ನಡೆಯುವ ಕೆಂಪೇಗೌಡರ ಜಯಂತಿಗೆ ಅತಿ ಹೆಚ್ಚು ಕುಲಬಾಂಧವರು ಸೇರುವ ನಿರೀಕ್ಷೆ ಇದೆ.

ಹೌದು ತಾಲ್ಲೂಕಿನ ಎಲ್ಲಾ ಒಕ್ಕಲಿಗ ಸಮುದಾಯದ ಗಣ್ಯರು, ಹೋರಾಟಗಾರರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಬಹಳ ಮುಖ್ಯವಾಗಿ ಎಲ್ಲಾ ಪಕ್ಷಗಳ ನೇತಾರರು, ಪಕ್ಷದ ಕಾರ್ಯಕ್ರಮಗಳಿಗೆ ಕಾರ್ಯಕರ್ತರನ್ನು ಕರೆತರುವಂತೆ ಜಯಂತಿಗೂ ಕರೆತರಲು ಮನವಿ ಮಾಡಲಾಗಿದೆ. *ವಿಶೇಷವಾಗಿ ನಾಡಪ್ರಭು ಕೆಂಪೇಗೌಡರು ಒಂದು ಜಾತಿ ಧರ್ಮಕ್ಕೆ ಸೀಮಿತವಾದವರಲ್ಲಾ, ತಾಲ್ಲೂಕಿನ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಂಡು ಬೃಹತ್ ಕಾರ್ಯಕ್ರಮ ಮಾಡಬೇಕಾಗಿದೆ.* ಬ್ರಾಹ್ಮಣ ಸ್ನೇಹಿತರೊಬ್ಬರು ಆಗಾಗ್ಗೆ ಹೇಳುತ್ತಿರುತ್ತಾರೆ. *ಸರ್ ಚನ್ನಪಟ್ಟಣ ದಲ್ಲಿ ಒಕ್ಕಲಿಗರನ್ನು ಬಿಟ್ಟು ಯಾವುದೇ ಕಾರ್ಯಕ್ರಮ ಮಾಡಲಾಗುವುದಿಲ್ಲಾ, ಆದರೆ ಒಕ್ಕಲಿಗರನ್ನು ಮುಂದಿಟ್ಟುಕೊಂಡು ಹೋದರೆ ಆ ಕಾರ್ಯಕ್ರಮವೇ ಆಗುವುದಿಲ್ಲಾ ಎಂದು.* ಇದರ ಜೊತೆಗೆ *ಒಕ್ಕಲಿಗ ಪ್ರೌಢನಲ್ಲಾ* ಎಂಬ ಮಾತು ಸೇರಿರುವುದರಿಂದ ೨೦೨೩ ರ ನಾಡಪ್ರಭು ಕೆಂಪೇಗೌಡರ ಜಯಂತಿ ಮೇಲಿನ ಎರಡು ಮಾತುಗಳನ್ನು ಅಳಿಸುವಂತಾ ಕಾರ್ಯಕ್ರಮವಾಗಲಿ. ಜಾತಿ, ಧರ್ಮ ಹೊರತುಪಡಿಸಿ ಎಲ್ಲಾ ವರ್ಗದ ಜನರು ಸೇರಿ ಈ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಿ. ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ನೆಪಮಾತ್ರಕ್ಕೆ ಬಾರದೆ ಸಮಿತಿ ಜೊತೆಯಲ್ಲಿ ನಿಲ್ಲಲಿ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಹಾಲಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಲಿ, ಜನಪ್ರತಿನಿಧಿಗಳು ಬಂದು ಸಹಕಾರ ನೀಡುವ ಮೂಲಕ ಸಮುದಾಯದ ದನಿಯಾಗಲಿ, ಅದ್ದೂರಿಯಾಗಿ ನಡೆಯುವ ಈ ಕಾರ್ಯಕ್ರಮ ಇತಿಹಾಸದ ಪುಟ ಸೇರುವಂತಾಗಲಿ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara-district »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

ಶಿಕ್ಷಣ ಪಡೆದರೆ ಜೀತ ಪದ್ಧತಿ ಅಳಿಸಲು ಸಾಧ್ಯ : ನ್ಯಾಯಾಧೀಶೆ ಅನಿತಾ ಎನ್. ಪಿ.
ಶಿಕ್ಷಣ ಪಡೆದರೆ ಜೀತ ಪದ್ಧತಿ ಅಳಿಸಲು ಸಾಧ್ಯ : ನ್ಯಾಯಾಧೀಶೆ ಅನಿತಾ ಎನ್. ಪಿ.

ರಾಮನಗರ: ಉದ್ದೇಶ ಪೂರ್ವಕವಾಗಿ ಹಾಗೂ ವ್ಯಕ್ತಿಯೋರ್ವರನ್ನು ತಮ್ಮ ಅವಶ್ಯಕತೆಗನುಗುಣವಾಗಿ ಬಳಸಿಕೊಳ್ಳಲು ಸಾಲ ಕೊಡುವುದು ಅಥವಾ ಜೀತದಾಳಾಗಿ ದುಡಿಮೆ ಮಾಡಲು ಇರ

ಫೆ. 11 ರಂದು ಎಲೇಕೇರಿ ಶ್ರಿ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವ
ಫೆ. 11 ರಂದು ಎಲೇಕೇರಿ ಶ್ರಿ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವ

ರಾಮನಗರ:ಚನ್ನಪಟ್ಟಣ; ಚನ್ನಪಟ್ಟಣ ನಗರದ ಎಲೇಕೇರಿ (ಗೆಂಡೆಮಡು)ಯಲ್ಲಿನ  ಶ್ರೀ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವವು ಫೆ.10 ಮತ್ತು

ಯುರೋ ಕಿಡ್ಸ್, ಪ್ರೀ ಸ್ಕೂಲ್ ವತಿಯಿಂದ ಮೆಗಾ ವಾಕಥಾನ್

 ಚನ್ನಪಟ್ಟಣ: ಪಟ್ಟಣದ ಕುವೆಂಪು ನಗರದ ಏಳನೇ ಕ್ರಾಸ್‍ನಲ್ಲಿರುವ ಯೂರೋ ಕಿಡ್ಸ್, ಪ್ರೀ ಸ್ಕ

Top Stories »  


Top ↑