Tel: 7676775624 | Mail: info@yellowandred.in

Language: EN KAN

    Follow us :


ಜಮೀರ್ ಅಹ್ಮದ್ ವಿರುದ್ದ ಮಾತನಾಡಿರುವ ಜೆಡಿಎಸ್ ಅಲ್ಪಸಂಖ್ಯಾತ ಅಧ್ಯಕ್ಷ ಕ್ಷಮೆ ಯಾಚಿಸಬೇಕು, ಫೈಲ್ವಾನ್ ಅಕ್ರಂ

Posted date: 05 Oct, 2023

Powered by:     Yellow and Red

ಜಮೀರ್ ಅಹ್ಮದ್ ವಿರುದ್ದ ಮಾತನಾಡಿರುವ ಜೆಡಿಎಸ್ ಅಲ್ಪಸಂಖ್ಯಾತ ಅಧ್ಯಕ್ಷ ಕ್ಷಮೆ ಯಾಚಿಸಬೇಕು, ಫೈಲ್ವಾನ್ ಅಕ್ರಂ

ರಾಮನಗರ:ಚನ್ನಪಟಣ; ಜಮೀರ್ ಅಹ್ಮದ್ ಕೊಡುಗೈ ದಾನಿ, ಮುಸ್ಲಿಂ ಸಮುದಾಯ ಅಷ್ಟೇ ಅಲ್ಲದೆ ಎಲ್ಲಾ ಸಮುದಾಯದ, ಸಮಾಜದಲ್ಲಿರುವ ಪ್ರತಿಯೊಬ್ಬರ ಕಷ್ಟಸುಖಗಳಿಗೆ ಸ್ಪಂದನೆ ಮಾಡುವುದರ ಮುಖಾಂತರ ಸರ್ವಜನಾಂಗದ ಸಮಾಜ ಸೇವಕ ಎಂದು ಗುರುತಿಸಿಕೊಂಡಿರುವ ಸಚಿವ ಬಿ ಜಡ್ ಜಮೀರ್ ಅಹದ್‌ ರವರ ಬಗ್ಗೆ ಹಗುರವಾಗಿ ಮಾತನಾಡಿರುವವರು ತಮ್ಮ ಕೀಳುಮಟ್ಟವನ್ನು ಪ್ರದರ್ಶವ ಮಾಡಿದ್ದಾರೆಂದು, ಸಮಾಜಸೇವಕ ಬಿ ಜಡ್ ಜಮೀರ್‌ ಅಹದ್ ಅಭಿಮಾನಿ ಬಳಗದ ಅಧ್ಯಕ್ಷ ಅಲ್ಪಸಂಖ್ಯಾತ ಹಿರಿಯ ಮುಖಂಡ ಪೈಲ್ವಾನ್ ಅಕ್ರಂ ಉಸ್ಮಾನಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು.


ಅವರು ನಗರದ ಪ್ರವಾಸಿಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಲ್ಪಸಂಖ್ಯಾತ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಫಾಜೀಲ್, ಸಚಿವ ಬಿ ಜಡ್ ಜಮೀರ್ ಅಹದ್‌ ಖಾನ್ ರವರನ್ನು ಒಬ್ಬ ಡ್ರೈವರ್ ಹಾಗೂ ಬಿಜೆಪಿಯವರ ಜೊತೆ ಚಡ್ಡಿ ಹಾಕಿ ಕೊಂಡಿದ್ದಾರೆಂದು ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಫಾಜೀಲ್‌ಗೆ ಬುದ್ದಿ ಭ್ರಮಣೆಯಾಗಿದೆ ಎಂದು ಕಿಡಿಕಾರಿದರು.

    ಕೆಲ ತಿಂಗಳ  ಹಿಂದೆ ರಾಜಕೀಯಕ್ಕೆ ಬಂದಿರುವ ಫಾಜೀಲ್ ಯಾರು? ನಮ್ಮ ನಾಯಕ ಬಿ ಜಡ್ ಜಮೀರ್ ಅಹದ್‌ ರವರ ಬಗ್ಗೆ ಏನು ತಿಳಿದುಕೊಂಡಿದ್ದಾರೆ, ಅವರ ರಾಜಕೀಯ ಜೀವನ, ಅವರಲ್ಲಿರುವ ಅಂತಕುರಣೆ, ಸೇವಾಮನೋಭಾವ, ನೊಂದವರ ಕಷ್ಟಕ್ಕೆ ಒಂದಾಗುವ ಮೃದು ಮನಸ್ಸಿನ ಹೃದಯವಂತನ ಬಗ್ಗೆ ಏಕವಚನದಲ್ಲಿ ಅವನೊಬ್ಬ ಡ್ರೈವರ್, ಚಡ್ಡಿ ಹಾಕೊಂಡಿದ್ದಾನೆ ಎಂದು ತಮ್ಮ ನಾಲಿಗೆಯನ್ನು ಹರಿ ಬಿಟ್ಟಿರುವ ಫಾಜೀಲ್ ಮೊದಲು ನಿನ್ನ ಬಗ್ಗೆ ತಿಳಿದುಕೋ ಅನಂತರ ಬೇರೆಯವರ ಬಗ್ಗೆ ಮಾತನಾಡುವೆ ಎಂದು ಚಾಟಿ ಬೀಸಿದರು.


  ದೇವರು ಕೊಟ್ಟಿರುವ ನಾಲಿಗೆಯನ್ನು ಸಮರ್ಪಕವಾಗಿ  ಬಳಸಬೇಕು, ಅನವಶ್ಯಕವಾಗಿ ನಾಲಿಗೆಯನ್ನು ಹರಿ ಬಿಟ್ಟರೆ ಕಾಲವೇ ಉತ್ತರ ನೀಡುತ್ತದೆ, ಅಲ್ಪಸಂಖ್ಯಾತ ಜೆಡಿಎಸ್ ಘಟಕದ ಅಧ್ಯಕ್ಷರಾಗಿ ಕಚೇರಿ ತರೆದು ನಂತರ ಮುಚ್ಚಿರುವ ತಾವು ಒಂದು ಪಕ್ಷದ ಸಿದ್ದಾಂತದ ಬಗ್ಗೆ ಮಾತನಾಡುತ್ತೀರಿ ಎಂದು ಪಾಜೀಲ್ ಹೇಳಿಕೆಗೆ ತಿರುಗೇಟು ನೀಡಿದರು.

  ಮಾನ್ಯ ಫಾಜೀಲ್‌ರವರೇ ನಿಮ್ಮ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ, ರಾಜ್ಯಮಟ್ಟದ ನಾಯಕ, ಸಮಾಜ ಸೇವಕ, ಬಿ ಜಡ್ ಜಮೀರ್ ಅಹಮ್ಮದ್ ರವರ ಬಗ್ಗೆ ಈ ರೀತಿ ಹಗುರವಾಗಿ ಹೇಳಿಕೆ ನೀಡಿರುವುದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಬೇರೆ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


    ಇದೇ ಸಂದರ್ಭದಲ್ಲಿ ಬಿ ಜಡ್ ಜಮೀರ್ ಅಭಿಮಾನಿಗಳ  ಬಳಗದ ಪ್ರಧಾನ ಕಾರ್ಯಧರ್ಶಿ ಕಿಝರ್ ಅಹಮ್ಮದ್ ಮಾತನಾಡಿ, ಸಚಿವರಾದ ಬಿ ಜಡ್ ಜಮೀರ್ ಅಹದ್‌ ರವರು ಒಂದು ಸಮುದಾಯಕ್ಕೆ ಸೀಮಿತವಲ್ಲ,ಅವರು ಸರ್ವಸಮುದಾಯಕ್ಕೆ ಬೇಕಾಗಿರುವ ಹೃದಯವಂತ ನಾಯಕ, ಅಂತಹ ನಾಯಕರ ಬಗ್ಗೆ ಕನಿಷ್ಟ ತಿಳಿದುಕೊಳ್ಳದ ಫಾಜೀಲ್‌ರವರು ಯಾರೋ ಹೇಳಿಕೊಟ್ಟ ಮಾತನ್ನು ಪತ್ರಿಕಾ ಹೇಳಿಕೆ ನೀಡಿರುವುದು ನಿಮಗೆ ತರವೇ ಎಂದು ಅವರ ಹೇಳಿಕೆಯನ್ನು ಖಂಡಿಸಿದರು.

      ಒಂದೇ ಮನೆಯಲ್ಲಿ ಎರಡೆರಡು ಪಕ್ಷಗಳ ಮುಖಂಡರಾಗಿರುವ ನೀವು ಯಾವ ನೈತಿಕತೆಯ ಆಧಾರದ ಮೇಲೆ ನಾಯಕ ಬಿ ಜಡ್ ಜಮೀರ್ ಅಹದ್‌ ರವರ ಬಗ್ಗೆ ಕೆಳಮಟ್ಟದ ಪದ ಬಳಕೆ ಮಾಡಿದ್ದೀರಿ, ತಾವು ಮಾದ್ಯಮದವರ ಜೊತೆ ಮಾತನಾಡುವಾಗ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಅದನ್ನು ಬಿಟ್ಟು ಬೇರೆಯವರಿಂದ ಗಿಣಿ ಪಾಠಕೇಳಿ ಈ ರೀತಿಯ ಹೇಳಿಕೆಗಳನ್ನು ನೀಡಿ ನಗೆಪಾಟೀಲಿಗೆ ಗುರಿಯಾಗುವುದರ ಜೊತೆಗೆ ಬಿ ಜಡ್ ಜಮೀರ್ ಅಹದ್‌ ರವರ ಲಕ್ಷಾಂತರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರ ನೀಡಿದರು.


    ಪತ್ರಿಕಾ ಗೋಷ್ಟಿಯಲ್ಲಿ ಸಚಿವ ಬಿ ಜಡ್ ಜಮೀರ್ ಅಹಮ್ಮದ್ ಅಭಿಮಾನಿಬಳಗದ ಪದಾಧಿಕಾರಿಗಳಾದ ವಾಸಿಂ, ನವಾಜ್ ಅಹ್ಮದ್, ಫರೀದ್, ಬಸೀರ್, ಜೇಸ್ನಾ, ಫರೀದ್ ಅಹಮ್ಮದ್, ಸಲ್ಮಾನ್ ಮತ್ತಿತರರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara-district »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

ಶಿಕ್ಷಣ ಪಡೆದರೆ ಜೀತ ಪದ್ಧತಿ ಅಳಿಸಲು ಸಾಧ್ಯ : ನ್ಯಾಯಾಧೀಶೆ ಅನಿತಾ ಎನ್. ಪಿ.
ಶಿಕ್ಷಣ ಪಡೆದರೆ ಜೀತ ಪದ್ಧತಿ ಅಳಿಸಲು ಸಾಧ್ಯ : ನ್ಯಾಯಾಧೀಶೆ ಅನಿತಾ ಎನ್. ಪಿ.

ರಾಮನಗರ: ಉದ್ದೇಶ ಪೂರ್ವಕವಾಗಿ ಹಾಗೂ ವ್ಯಕ್ತಿಯೋರ್ವರನ್ನು ತಮ್ಮ ಅವಶ್ಯಕತೆಗನುಗುಣವಾಗಿ ಬಳಸಿಕೊಳ್ಳಲು ಸಾಲ ಕೊಡುವುದು ಅಥವಾ ಜೀತದಾಳಾಗಿ ದುಡಿಮೆ ಮಾಡಲು ಇರ

ಫೆ. 11 ರಂದು ಎಲೇಕೇರಿ ಶ್ರಿ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವ
ಫೆ. 11 ರಂದು ಎಲೇಕೇರಿ ಶ್ರಿ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವ

ರಾಮನಗರ:ಚನ್ನಪಟ್ಟಣ; ಚನ್ನಪಟ್ಟಣ ನಗರದ ಎಲೇಕೇರಿ (ಗೆಂಡೆಮಡು)ಯಲ್ಲಿನ  ಶ್ರೀ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವವು ಫೆ.10 ಮತ್ತು

ಯುರೋ ಕಿಡ್ಸ್, ಪ್ರೀ ಸ್ಕೂಲ್ ವತಿಯಿಂದ ಮೆಗಾ ವಾಕಥಾನ್

 ಚನ್ನಪಟ್ಟಣ: ಪಟ್ಟಣದ ಕುವೆಂಪು ನಗರದ ಏಳನೇ ಕ್ರಾಸ್‍ನಲ್ಲಿರುವ ಯೂರೋ ಕಿಡ್ಸ್, ಪ್ರೀ ಸ್ಕ

Top Stories »  


Top ↑