ದೀಪಾವಳಿ ನೆಪದಲ್ಲಿ ಅನಾಥವಾದ ನೆಹರು/ಮಕ್ಕಳ ಜಯಂತಿ

ರಾಮನಗರ: ಇಂದು ನವೆಂಬರ್ ೧೪ ಮಕ್ಕಳ ದಿನಾಚರಣೆ, ಚಾಚಾಜಿ ಅಡ್ಡ ಹೆಸರಿನ ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ರವರ ಹೆಸರಿನಲ್ಲಿ ರಾಷ್ಟ್ರದಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಅದರಲ್ಲೂ ಬಲಿಪಾಡ್ಯಮಿ ಯಂದೇ ಮಕ್ಕಳ ದಿನಾಚರಣೆ ಬಂದಿದ್ದು ಒಂದು ವರ್ಷ ಕಾಲ ಮರೆಯುವಂತೆ ಮಾಡಿದೆ.
ಇಂದು ಪ್ರಧಾನಿ ಜವಾಹರಲಾಲ್ ನೆಹರು ಅವರ ೧೩೪ನೇ ಜನ್ಮ ದಿನಾಚರಣೆ. ಮಕ್ಕಳನ್ನು ಜೀವದಂತೆ ಪ್ರೀತಿಸಿದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ ೧೪ ರಂದು ಭಾರತದಲ್ಲಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಪಂಡಿತ್ ಜವಾಹರಲಾಲ್ ನೆಹರು ಅವರು ೧೮೮೯ ರಲ್ಲಿ ಅಲಹಾಬಾದ್ ನಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಬರಹಗಾರರಾಗಿದ್ದ ಅವರು, ವಾಗ್ಮಿ ಮತ್ತು ರಾಜಕಾರಣಿಯಾಗಿ ವಿವಿಧ ಸಾಮರ್ಥ್ಯಗಳಲ್ಲಿ ಪ್ರಸಿದ್ಧರಾಗಿದ್ದರು. ಚಾಚಾ ನೆಹರೂ ಅವರು ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ ಎಂದು ಪರಿಗಣಿಸಲಾಗಿದೆ.
೧೯೬೪ ರಲ್ಲಿ ಜವಾಹರಲಾಲ್ ನೆಹರು ಅವರು ಮರಣ ಹೊಂದಿದರು. ನಂತರ ಸಂಸತ್ತು ಅವರ ಜನ್ಮದಿನವಾದ ನವೆಂಬರ್ ೧೪ನೇ ದಿನಾಂಕವನ್ನು ಮಕ್ಕಳ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಜವಾಹರಲಾಲ್ ನೆಹರೂ ಅವರ ಮರಣದ ಮೊದಲು, ಭಾರತವು ನವೆಂಬರ್ ೨೦ ರಂದು ಮಕ್ಕಳ ದಿನವನ್ನು ಆಚರಿಸಿತು. ವಿಶ್ವಸಂಸ್ಥೆಯು ವಿಶ್ವ ಮಕ್ಕಳ ದಿನವನ್ನಾಗಿ ಆಚರಿಸಿದ ದಿನವು ಅದಾಗಿತ್ತು. ಆದರೆ ಅವರ ಮರಣದ ನಂತರ ಅವರ ಜನ್ಮದಿನವನ್ನು ಮಕ್ಕಳ ದಿನಾವರಣೆಯನ್ನಾಗಿ ಆಚರಿಸಲಾಯಿತು.
೨೦೨೩ ನೇ ಸಾಲಿನಲ್ಲಿ ದೀಪಾವಳಿ ಹಬ್ಬದಂದೇ ಮಕ್ಕಳ ದಿನಾಚರಣೆ ಬಂದಿದೆ. ಹಬ್ಬಕ್ಕೆಂದು ರಜೆ ನೀಡಿದ್ದರಿಂದ ಶಾಲಾ-ಕಾಲೇಜುಗಳು ರಜೆ ಇರುವುದರಿಂದ ಮಕ್ಕಳಿಗೆ ಅರ್ಥಪೂರ್ಣವಾದ ಮಕ್ಕಳ ಅರ್ಥಾತ್ ನೆಹರು ಜಯಂತಿ ನೆನಪಿಲ್ಲದಂತಾಗಿದೆ. ಹಲವಾರು ಸರ್ಕಾರಿ ರಜಾ ದಿನಗಳಂದು ಹಲವು ಮಹನೀಯರ ಜಯಂತಿಯನ್ನು ಸ್ಥಳೀಯ ಆಡಳಿತ ಸರಳವಾಗಿಯಾದರೂ ಆಚರಿಸುತ್ತಾರೆ, ಅದರಲ್ಲೂ ಸಮುದಾಯದ ನಾಯಕರಾಗಿ ಗುರುತಿಸಿಕೊಂಡವರ ದಿನಾಚರಣೆಯನ್ನು ಚಾಚು ತಪ್ಪದೆ ನೆರವೇರಿಸುತ್ತಾರೆ. ಬಹುಶಃ ಸಮುದಾಯದ ನಾಯಕರ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂಬ ಭಯ ಕಾಡಿರಬಹುದು. ಆದರೆ ಮಕ್ಕಳ ದಿನಾಚರಣೆಯನ್ನು ಶಾಲೆಗಳು ಹಾಗೂ ಸ್ಥಳೀಯ ಆಡಳಿತ ಸಾಂಕೇತಿಕವಾಗಿಯಾದರೂ ಆಚರಿಸಿ, ಮಕ್ಕಳಿಗೆ ಹಾಗೂ ಮಾಜಿ ಪ್ರಧಾನಮಂತ್ರಿ ಗಳಿಗೆ ಗೌರವ ಸೂಚಿಸಬಹುದಾಗಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ನವೆಂಬರ್ ೧೫ನೇ ದಿನಾಂಕದಂದಾದರು ಪ್ರತಿ ಶಾಲಾ-ಕಾಲೇಜುಗಳಲ್ಲಿ ವಿಜೃಂಭಣೆಯಿಂದ ಮಕ್ಕಳ ದಿನಾಚರಣೆಯನ್ನಾಚರಿಸಿ, ಚಾಚಾ ನೆಹರುರವರ ದೂರದರ್ಶಿತ್ವದ ಮನವರಿಕೆ ಮಾಡಿಕೊಡಲಿ ಎಂಬುದು ಪತ್ರಿಕೆಯ ಆಶಯವಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara-district »

ಕನ್ನಡದ ಕಟ್ಟಾಳು, ಸಹಕಾರಿ ಧುರೀಣ ಸಿಂ ಲಿಂ ನಾಗರಾಜು ಸ್ಮರಣ ಕಾರ್ಯಕ್ರಮ
ಚನ್ನಪಟ್ಟಣ: ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿಂ.ಲಿಂ.ನಾಗರಾಜು ಅವರು ವಯಕ್ತಿಕವಾಗಿ ಹಾಗೂ
ಕೌಟುಂಬಿಕವಾಗಿ ತಮಗೆ ಏ

ಬುಧವಾರ ಕೆಆರ್ ಪೇಟೆಯಲ್ಲಿ ನಡೆಯುವ ಕಸಾಪ ದತ್ತಿ ಪ್ರಶಸ್ತಿ ಸ್ವೀಕರಿಸಲಿರುವ ಜಿಲ್ಲೆಯ ಜಾನಪದ ಕಲಾವಿದೆ ಲಕ್ಷ್ಮಿ ಶ್ರೀನಿವಾಸ
ರಾಮನಗರ/ಚನ್ನಪಟ್ಟಣ:ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ೨೦೨೦ ೨೦೨೧ ಹಾಗೂ ೨೦೨೨ ನೇ ಸಾಲಿನ "ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶ

ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್, ಡಿಪೋ ತಡೆಗೋಡೆಗೆ ಢಿಕ್ಕಿ
ಚನ್ನಪಟ್ಟಣ: ಇತ್ತೀಚೆಗೆ ತಾಲ್ಲೂಕಿನಾದ್ಯಂತ ಸಾರಿಗೆ ಬಸ್ಸುಗಳ ಅಪಘಾತ ಹೆಚ್ಚಾಗುತ್ತಿದ್ದು, ಅಮಾಯಕರ ಪ್ರಾಣವನ್ನು ಬಲಿ ಪಡೆಯುತ್ತಿವೆ. ರಸ್ತೆಯ ಮೇಲೆ ಸಂಚರಿ

ದೀಪಾವಳಿ ನೆಪದಲ್ಲಿ ಅನಾಥವಾದ ನೆಹರು/ಮಕ್ಕಳ ಜಯಂತಿ
ರಾಮನಗರ: ಇಂದು ನವೆಂಬರ್ ೧೪ ಮಕ್ಕಳ ದಿನಾಚರಣೆ, ಚಾಚಾಜಿ ಅಡ್ಡ ಹೆಸರಿನ ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ರವರ ಹೆಸರಿನಲ್ಲಿ ರ

ಸಾರಿಗೆ ಬಸ್ ಸ್ಟಿಯರಿಂಗ್ ಕಟ್, ಸ್ಕೂಟರ್ ಗೆ ಢಿಕ್ಕಿ ಇಬ್ಬರ ಸಾವು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಪಾರು
ಚನ್ನಪಟ್ಟಣ: ನಗರಕ್ಕೆ ಹೊಂದಿಕೊಂಡಿರುವ ತಿಟ್ಟಮಾರನಹಳ್ಳಿ ಗ್ರಾಮದ ನಡುವಿನ ರಾಮಮ್ಮ ನ ಕೆರೆ ಏರಿಯ ಮೇಲೆ ಸೋಮವಾರ ಮುಂಜಾನೆ ಸಾರಿಗೆ ಬಸ್ ಮತ್ತು ಸ್ಕೂಟರ್ ನಡ

ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಟಿ ವಿ ಗಿರೀಶ್ ಆಯ್ಜೆ, ಹಲವರಿಂದ ಅಭಿನಂದನೆ
ಚನ್ನಪಟ್ಟಣ:ನಗರದ ನ್ಯಾಯಾಲಯದಲ್ಲಿರುವ ವಕೀಲರ ಸಂಘದ ಕಛೇರಿಯಲ್ಲಿ ತಾಲ್ಲೂಕು ವಕೀಲರ ಸಂಘದ ಚುನಾವಣೆಯು ಶನಿವಾರ ಜರುಗಿದ್ದು ಅತ್ಯಧಿಕ ಮತಗಳನ್ನು ಪಡೆಯುವ ಮೂಲ

ತೌಟನಹಳ್ಳಿ ಬಳಿ ಹತ್ತಾರು ಎಕರೆ ಸರ್ಕಾರಿ ಗುಡ್ಡೆ, ದಲಿತರ ಜಮೀನು ಒತ್ತುವರಿ ಮಾಡಿದ ಬಿಜೆಪಿ ಮುಖಂಡ, ಕ್ರಮಕ್ಕೆ ಆಗ್ರಹ
ಚನ್ನಪಟ್ಟಣ: ತಾಲ್ಲೂಕಿನ ಮಳೂರು ಹೋಬಳಿ ಯ ತೌಟನಹಳ್ಳಿ ಗ್ರಾಮದ ಸರ್ವೇ ನಂಬರ್ ೭೪ ರಲ್ಲಿ ೧೭೦ ಎಕರೆ ಸರ್ಕಾರಿ ಜಮೀನು ಇದ್ದು, ಸ್ಥಳೀಯ ರೈತರ ಜಾನುವಾರುಗಳಿಗೆ

ಹಲವು ಎಡವಟ್ಟುಗಳೊಂದಿಗೆ ರಾಜ್ಯೋತ್ಸವ ಆಚರಿಸಿದ ತಾಲ್ಲೂಕು ಆಡಳಿತ
ಚನ್ನಪಟ್ಟಣ: ಚನ್ನಪಟ್ಟಣ ನಗರ ಮತ್ತು ತಾಲ್ಲೂಕು ಕೇಂದ್ರವೂ ಪುರಾಣ, ಇತಿಹಾಸ, ಚಳವಳಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ

ಕಾಡಂಕನಹಳ್ಳಿ ಗ್ರಾಮದಲ್ಲಿ ವೃದ್ದನಿಗೆ ಢಿಕ್ಕಿ ಹೊಡೆದ ಬೈಕ್, ಪಾದಚಾರಿ ಸಾವು
ಚನ್ನಪಟ್ಟಣ: ತಾಲ್ಲೂಕಿನ ಕಾಡಂಕನಹಳ್ಳಿ ಗ್ರಾಮದ ೬೫ ವರ್ಷದ ಶಿವಮಾದೇಗೌಡ ಎಂಬ ವ್ಯಕ್ತಿಯು ವ್ಯವಸಾಯಗಾರನಾಗಿದ್ದು, ಹೈನುಗಾರಿಕೆ ಮಾಡಿಕೊಂಡಿದ್ದರು. ಪ್ರತಿದಿ

ಪೋಲಿಸರು ಕೆಲಸದ ಒತ್ತಡದ ನಡುವೆ ಆರೋಗ್ಯ ಮತ್ತು ಕುಟುಂಬಕ್ಕೂ ಒತ್ತು ನೀಡಿ, ಜಿಲ್ಲಾಧಿಕಾರಿ
ಚನ್ನಪಟ್ಟಣ: ಪೋಲಿಸರು ಜನರ ರಕ್ಷಣೆಗಾಗಿ ಸದಾ ಒತ್ತಡದ ಮಧ್ಯೆ ಕರ್ತವ್ಯ ನಿರ್ವಹಿಸುತ್ತಾರೆ. ಇದರ ನಡುವೆಯೂ ಪೊಲೀಸರು ತಮ್ಮ ಆರೋಗ್ಯ ಹಾಗೂ ಕುಟುಂಬದ ಕು
ಪ್ರತಿಕ್ರಿಯೆಗಳು