Tel: 7676775624 | Mail: info@yellowandred.in

Language: EN KAN

    Follow us :


ನಾಡು-ನುಡಿಗಾಗಿ ಜೀವನ ಮುಡಿಪಾಗಿಟ್ಟ ರಮೇಶಗೌಡ, ಮಾಜಿ ಶಾಸಕ

Posted date: 13 Jan, 2024

Powered by:     Yellow and Red

ನಾಡು-ನುಡಿಗಾಗಿ ಜೀವನ ಮುಡಿಪಾಗಿಟ್ಟ ರಮೇಶಗೌಡ, ಮಾಜಿ ಶಾಸಕ

ಚನ್ನಪಟ್ಟಣ: ನಾಡಿನ ಅಸ್ಮಿತೆಗಾಗಿ ತಮ್ಮ ಜೀವನವನ್ನು ಹೋರಾಟಕ್ಕೆ ಸೀಮಿತವಾಗಿಸಿಕೊಂಡಿರುವ ರಮೇಶ್‍ಗೌಡರ ಹೋರಾಟ ಅರ್ಥಪೂರ್ಣವಾಗಿದ್ದು ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಮಾಜಿ ಶಾಸಕರಾದ ಎಂ.ಸಿ.ಅಶ್ವಥ್ ಅವರು ಅಭಿಪ್ರಾಯಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‍ಗೌಡರ ನೇತೃತ್ವದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಶುಕ್ರವಾರ ನಡೆದ 100 ನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಹೋರಾಟಗಳು ಎಂಟತ್ತು ದಿನಗಳಿಗೆ ಮಾತ್ರ ಸೀಮಿತವಾಗುತ್ತವೆ. ಅದರಲ್ಲೂ ನಾಡಿನ ಏಳಿಗೆಗೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಸುಲಭದ ಮಾತಲ್ಲ. ಈ ಹೋರಾಟಗಳಿಗೆ ಹಲವು ಸಮಸ್ಯೆಗಳು, ಕಷ್ಟಗಳು ಅಡೆತಡೆಗಳು ಬರುತ್ತದೆ. ಎಲ್ಲವನ್ನು ಮೆಟ್ಟಿ ರಮೇಶ್‍ಗೌಡರು ಕಾವೇರಿ ಉಳಿಸಿ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಸತತವಾಗಿ 100 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು, ಇವರ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ತಾಲೂಕಿನ ಎಲ್ಲಾ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ರಮೇಶ್‍ಗೌಡರು ಪ್ರತ ನಿತ್ಯ ಒಂದಲ್ಲಾ ಒಂದು ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದು ಅವರ ಜೀವನ ಹೋರಾಟಕ್ಕೆ ಸೀಮಿತವಾಗಿದ್ದು ಈ ಹೋರಾಟ ನಾಡಿನ ಒಳಿಗೆ ಎಂಬುದು ಶ್ಲಾಘನೀಯವಾಗಿದೆ. ಕಾವೇರಿ ನದಿ ನೀರಿನ ಸಮಸ್ಯೆ ಇಂದಿನದಲ್ಲ. ಕೆಆರ್‍ಎಸ್ ಜಲಾಶಯ ನಿರ್ಮಾಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‍ ಅವರ ಕುಟುಂಬದ ಒಡೆವೆಗಳನ್ನು ಮಾರಿ ಹಣ ಒದಗಿಸಿದ್ದಾರೆ. ಜಲಾಶಯ ನಿರ್ಮಾಣದಲ್ಲಿ ವಿಶೇಶ್ವರಯ್ಯ ಅವರ ಶ್ರಮ ಅಪಾರವಾಗಿದೆ. ಇವರ ಶ್ರಮದ ಫಲ ನಮ್ಮ ನಾಡಿನ ಜನತೆಗೆ ಮೊದಲು ಸಿಗಬೇಕು ಎನ್ನುವ ನಿಟ್ಟಿನಲ್ಲಿ ರಮೇಶ್‍ಗೌಡರು ನಿರಂತರವಾಗಿ ಹೋರಾಟ ಮಾಡುತ್ತಿದ್ದು ದೆಹಲಿ ವರೆಗೂ ಕಾವೇರಿ ಹೋರಾಟ ವಿಸ್ತರಿಸುವ ಅವರ ಪ್ರಯತ್ನಕ್ಕೆ ಫಲ ಸಿಗಲಿ ಎಂದರು ಅಶ್ವಥ್‍ಅವರು ಶ್ಲಾಘನೆ ಮಾಡಿದರು.

ಮೇಕೆದಾಟು ಯೋಜನೆ ನಿರ್ಮಾಣದಿಂದ 6 ಜಿಲ್ಲೆಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದ್ದು, ಜೊತೆಗೆ ವಿದ್ಯುತ್ ಉತ್ಪಾದನೆಗೂ ಸಹ ಕ್ರಮ ಕೈಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎರಡು ರಾಜ್ಯಗಳ ನಡುವೆ ಮದ್ಯಸಿಕೆ ವಹಿಸಿ ಎರಡು ರಾಜ್ಯಗಳಿಗೆ ಅನುಕೂಲವಾಗುವ ಮೇಕೆದಾಟು ಯೋಜನೆಯನ್ನು ಅನುಷ್ಟಾನಕ್ಕೆ ತರಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಮೇಶ್‍ಗೌಡರ ನಿರಂತರ ಹೋರಾಟಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.
ಜ್ಞಾನ ಸರೋವರ ವಿದ್ಯಾಸಂಸ್ಥೆಯ ಉಪನ್ಯಾಸಕರಾದ ಪ್ರವೀಣ್‍ಕುಮಾರ್ ಅವರು ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟಸೂತ್ರ ರಚಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ರಮೇಶ್‍ಗೌಡರು ನಡೆಸುತ್ತಿರುವ ಈ ಹೋರಾಟ ವಯುಕ್ತಿಕ ಹೋರಾಟವಲ್ಲ. ಈ ಹೋರಾಟದಿಂದ ರಾಜ್ಯದ ರೈತರು ಮತ್ತು ಜನರಿಗೆ ನೀರನ್ನು ಉಳಿಸಿಕೊಡುವ ಹೋರಾಟವಾಗಿದ್ದು ಕಾವೇರಿ ನದಿ ನೀರು ಕುಡಿಯುವ ಪ್ರತಿಯೊಬ್ಬರೂ ಈ ಹೋರಾಟದ ಜವಾಬ್ದಾರಿ ಹೊರಬೇಕಿದ್ದು, ಈ ನಿಟ್ಟಿನಲ್ಲಿ ಕಾವೇರಿ  ಹೋರಾಟಕ್ಕೆ ನಮ್ಮ ಕಾಲೇಜಿನ ಸಂಪೂರ್ಣ ಬೆಂಬಲ ಇದೆ ಎಂದರು.

ಡಾ.ರಾಜ್‍ಕಲಾಬಳಗದ ಅಧ್ಯಕ್ಷ ಎಲೇಕೇರಿ ಮಂಜುನಾಥ್‍ ಅವರು ಮಾತನಾಡಿ, ಕನ್ನಡದ ನೆಲ, ಜಲ, ಭಾಷೆಯ ಅಸ್ಮಿತೆಗೆ ರಾಜ್ಯದಲ್ಲಿ ಎಲ್ಲೇ ಸಮಸ್ಯೆ ಉಂಟಾದರೂ ಅದರ ವಿರುದ್ಧ ಕಕಜ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‍ಗೌಡರು ಮೊದಲ ಹೋರಾಟದ ಕಿಚ್ಚನ್ನು ಚನ್ನಪಟ್ಟಣದಲ್ಲಿ ಹಚ್ಚುತ್ತಾರೆ. ಇದು ರಾಜ್ಯಾದ್ಯಂತ ಜ್ವಾಲೆಯಾಗಿ ರಾಜ್ಯದ ಗಮನ ಸೆಳೆಯುತ್ತದೆ. ಅದೇ ರೀತಿ ಕೊಡಗಿನಲ್ಲಿ  ಮಳೆಯ ಅಭಾವ ಉಂಟಾದ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಸಮಸ್ಯೆ ಉಂಟಾಗುತ್ತಲೇ ಇದೆ. ಈ ಬಗ್ಗೆ ತಮಿಳುನಾಡು ಮತ್ತು ನಮ್ಮ ನಡುವೆ ಹೋರಾಟಗಳು ನಡೆಯುತ್ತಲೇ ಇವೆ. ಆದರೆ ಮಳೆ ಬಂದಾಗ ಅಥವಾ ಜಲಾಶಯದಲ್ಲಿ ನೀರು ಖಾಲಿಯಾದಾಗ ಈ ಹೋರಾಟಗಳು ಮರೆಯಾಗುತ್ತದೆ. ಸರ್ಕಾರ ಮತ್ತು ಜನರ ಮನಸ್ಸಿನಿಂದ ಈ ಸಮಸ್ಯೆ ದೂರವಾಗುತ್ತದೆ. ಆದರೆ ಈ ಸಮಸ್ಯೆ ಮತ್ತೆ ಬರುತ್ತದೆ ಎಂಬ ಬಗ್ಗೆ ಕಲ್ಪನೆಯೇ ಇಲ್ಲವಾಗಿದ್ದು, ಮೇಕೆದಾಟು ಯೋಜನೆ ಹೆಸರಲ್ಲಿ ವೀರಾವೇಷದಲ್ಲಿ ಪಾದಯಾತ್ರ ಮಾಡಿ ಅಧಿಕಾರಕ್ಕೆ ಬಂದ ಸರ್ಕಾರ ಇಂದು ಕಾವೇರಿ ಸಮಸ್ಯೆ ವಿರುದ್ಧ ಮೇಕೆದಾಟು ಯೋಜನೆ ಆಗಬೇಕು ಎಂದು ಹೋರಾಟ ಮಾಡಿದರೆ ನಮ್ಮ ವಿರುದ್ಧವೇ ಪ್ರಕರಣ ದಾಖಲಿಸುತ್ತಾರೆ. ಈ ನಿಟ್ಟಿನಲ್ಲಿ ಕಾವೇರಿ ನದಿ ನೀರಿನ ಹಂಚಿಕೆಗೆ ಶಾಸ್ವತ ಪರಿಹಾರ ನೀಡಬೇಕು. ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕಬೇಕು ಎಂಬ ನಿಟ್ಟಿನಲ್ಲಿ ಜನರ ಮನಸ್ಸಿನಲ್ಲಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ರಮೇಶ್‍ಗೌಡರು ನಿರಂತರ ಹೋರಾಟಕ್ಕೆ ಚಾಲನೆ ನೀಡಿದ್ದು 100 ನೇ ದಿನದ ಈ ಹೋರಾಟ ಮುಂದೆ ಸಾವಿರ ದಿನಕ್ಕೂ ಹೋಗುತ್ತದೆ. ಅವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.


ಕಕಜ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‍ಗೌಡರು ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಾಲ್ಕು ರಾಜ್ಯಗಳಿಗೆ ಕೊಡಗಿನಲ್ಲಿನ ಮಳೆ ಆಧಾರಿದ ನೀರು ಹಂಚಿಕೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ 68 ಟಿಎಂಸಿ ನೀರನ್ನು ಸಂಗ್ರಹ ಮಾಡಿ 6 ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಿ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ರಾಜಕೀಯ ಬಳಕೆಗೆ ಸೀಮಿತ ಮಾಡಿಕೊಳ್ಳದೆ ಅನುಷ್ಠಾನಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿದ್ದು, ಈ ಹೋರಾಟಕ್ಕೆ ಪ್ರತಿನಿತ್ಯ ಬೆಂಬಲ ನೀಡುತ್ತಿರುವ ತಾಲೂಕಿನ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿ ಮುಂದೆಯೂ ನಿಮ್ಮ ಬೆಂಬಲ ಇರಲಿ ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ 100 ದಿನಗಳಿಂದ ಹೋರಾಟದಲ್ಲಿ ಭಾಗಿಯಾಗಿದ್ದವರಿಗೆ ಕಾವೇರಿ ಕಾವಲುಗಾರ ಎಂದು ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. 

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿಶ್ರೀಧರ್, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶಂಕರ್ ಆರ್., ಕಲಾವಿದ ತಿಮ್ಮರಾಜು, ನಿ. ಶಿಕ್ಷಕ ಪುಟ್ಟಪ್ಪಾಜಿ, ಮುಜಾಯಿದ್, ದುರ್ಗೇಗೌಡ,   ಹಿರಿಯ ಕಲಾವಿದ  ರಾಜ್ ಕಲಾ ಬಳಗದ ಅಧ್ಯಕ್ಷ ಎಲೆಕೇರಿ  ಮಂಜುನಾಥ್,  ಮೆಣಸಿಗನಹಳ್ಳಿ ರಾಮಕೃಷ್ಣಯ್ಯ, ರಾಜಪ್ಪ, ಶಿವಣ್ಣ ಅರಳಾಳುಸಂದ್ರ, ಸಿದ್ದಪ್ಪಾಜಿ ಚಿಕ್ಕೇನಹಳ್ಳೀ, ಕರ್ನಾಟಕ ರಕ್ಷಣಾ  ವೇದಿಕೆಯ ಪ್ರವೀಣ್ ಶೆಟ್ಟಿ ಬಳಗದ ರಾಜು ಎಂ.ಎನ್., ಕರ್ನಾಟಕ ರಕ್ಷಣಾ  ವೇದಿಕೆಯ  ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ಕರುನಾಡ ಸೇನೆಯ ಜಿಲ್ಲಾಧ್ಯಕ್ಷ ಜಯಕುಮಾರ್,  ಲಕ್ಷ್ಮೀಶ್, ಕೆಂಪರಾಜು, ಕರುನಾಡ ಸೇನೆಯ ರಾಜ್ಯ ಉಪಾಧ್ಯಕ್ಷ ಜಗದೀಶ್, ರಾಜಣ್ಣ ಉ|| ತಿಮ್ಮಯ್ಯ, ಐಟಿಬಿಟಿ ಘಟಕದ ಅಧ್ಯಕ್ಷ ಚೇತನ್ ಕೀಕರ್, ಕರುನಾಡ ಕಣ್ವ ಪತ್ರಿಕೆ ಸಂಪಾದಕ ಶಿವಶಂಕರ್,  ನೃತ್ಯ ಗುರು ಸುಜೇಂದ್ರ ಬಾಬು,   ವಿ.ಎಸ್.ಎಸ್.ಎನ್ ಮಾಜಿ ಅಧ್ಯಕ್ಷ ರಮೇಶ್ ಹೊಟ್ಟಿಗನಹೊಸಹಳ್ಳಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮತ್ತೀಕೆರೆ ಹನುಮಂತು, ವೇಣುಗೋಪಾಲ ರೈತ ಸಂಘದ ಚಾಮರಾಜು, ಶಂಕರ್, ನಾಗರಾಜು ಕೋಡಂಬಹಳ್ಳಿ, ಯೇಸು,  ಕಾರ್ಮಿಕರ ಘಟಕದ ಅಧ್ಯಕ್ಷ ಕರ್ಣ,  ಆದಿ ಜಾಂಬವಂತ ಜಲ ಜಾಗೃತಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ತಾಲ್ಲೂಕು ಅಧ್ಯಕ್ಷ ಶಿವಪ್ರಸಾದ್, ಎಂ.ಎನ್. ರವೀಂದ್ರ,  ಎಂ.ಸಿ. ರವಿ, ಕೋಡಂಬಹಳ್ಳಿ ನಾಗರಾಜು, ನಾರಾಯಣ್, ರಾಜೇಶ್ ಮಳೂರುಪಟ್ಟಣ, ಬಿಳಿಯ ವಿಕ್ರಮ ಕನಕಪುರ,  ವೆಂಕಟೇಶ್, ಸ್ವಾಮಿ ರಾಜು,  ನಿಂಗರಾಜು, ಕಾಳಪ್ಪ, ರಾಜಸ್ಥಾನದ ಸಂಘದ ಸುಮತಿ ಕುಮಾರ್ ಜೈನ್,  ಬೇರು ಸಿಂಗ್, ಶಾಂತಿ ಲಾಲ್, ಚತುರ ರಾಮ್, ಪೋಕರ್ ರಾಮ್, ದಾಗ್ಲ ರಾಮ್, ಇಂದೆರ ಚಾಂದ್, ಓಂ  ಪ್ರಕಾಶ್ ಗೇವರ್, ಪರಸ್ ಕುಮಾರ್, ವಿಕಾಸ್, ಸತೀಶ್,  ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿನ  ಉಪನ್ಯಾಸಕರು ಜಾಕಿರ್ ಹುಸೇನ್,  ನಿವೇದಿತ, ಭಾವನಾ  ಸೇರಿದಂತೆ ಹಲವರು ಉಪಸ್ಥಿತದ್ದರು.    

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara-district »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

ಶಿಕ್ಷಣ ಪಡೆದರೆ ಜೀತ ಪದ್ಧತಿ ಅಳಿಸಲು ಸಾಧ್ಯ : ನ್ಯಾಯಾಧೀಶೆ ಅನಿತಾ ಎನ್. ಪಿ.
ಶಿಕ್ಷಣ ಪಡೆದರೆ ಜೀತ ಪದ್ಧತಿ ಅಳಿಸಲು ಸಾಧ್ಯ : ನ್ಯಾಯಾಧೀಶೆ ಅನಿತಾ ಎನ್. ಪಿ.

ರಾಮನಗರ: ಉದ್ದೇಶ ಪೂರ್ವಕವಾಗಿ ಹಾಗೂ ವ್ಯಕ್ತಿಯೋರ್ವರನ್ನು ತಮ್ಮ ಅವಶ್ಯಕತೆಗನುಗುಣವಾಗಿ ಬಳಸಿಕೊಳ್ಳಲು ಸಾಲ ಕೊಡುವುದು ಅಥವಾ ಜೀತದಾಳಾಗಿ ದುಡಿಮೆ ಮಾಡಲು ಇರ

ಫೆ. 11 ರಂದು ಎಲೇಕೇರಿ ಶ್ರಿ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವ
ಫೆ. 11 ರಂದು ಎಲೇಕೇರಿ ಶ್ರಿ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವ

ರಾಮನಗರ:ಚನ್ನಪಟ್ಟಣ; ಚನ್ನಪಟ್ಟಣ ನಗರದ ಎಲೇಕೇರಿ (ಗೆಂಡೆಮಡು)ಯಲ್ಲಿನ  ಶ್ರೀ ಚೌಡೇಶ್ವರಿ ಅಮ್ಮನವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವವು ಫೆ.10 ಮತ್ತು

ಯುರೋ ಕಿಡ್ಸ್, ಪ್ರೀ ಸ್ಕೂಲ್ ವತಿಯಿಂದ ಮೆಗಾ ವಾಕಥಾನ್

 ಚನ್ನಪಟ್ಟಣ: ಪಟ್ಟಣದ ಕುವೆಂಪು ನಗರದ ಏಳನೇ ಕ್ರಾಸ್‍ನಲ್ಲಿರುವ ಯೂರೋ ಕಿಡ್ಸ್, ಪ್ರೀ ಸ್ಕ

Top Stories »  


Top ↑