Tel: 7676775624 | Mail: info@yellowandred.in

Language: EN KAN

    Follow us :


ಕಲಾ ತಪಸ್ವಿ ಬನ್ನಿಕುಪ್ಪೆ ಗುರುಮೂರ್ತಪ್ಪ

Posted date: 17 Feb, 2018

Powered by:     Yellow and Red

ಕಲಾ ತಪಸ್ವಿ ಬನ್ನಿಕುಪ್ಪೆ ಗುರುಮೂರ್ತಪ್ಪ

ಕರ್ನಾಟಕ ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿದವರು ಬನ್ನಿಕುಪ್ಪೆ ಗುರುಮೂರ್ತಪ್ಪ. ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ಜನಿಸಿದ ಗುರುಮೂರ್ತಪ್ಪನವರು ಬಹುಮುಖ ಪ್ರತಿಭೆ ಉಳ್ಳವರು.

ಖ್ಯಾತ ಚಿತ್ರನಟ ಡಾ. ರಾಜ್‌ ಕುಮಾರ್ ಅವರಿಗೆ ಗುಬ್ಬಿ ಕಂಪೆನಿಯಲ್ಲಿದ್ದ ಗುರುಮೂರ್ತಪ್ಪ ಅವರು ಮಾರ್ಗದರ್ಶಕರಾಗಿದ್ದರು. ಈ ಮಾತನ್ನು ಸ್ವತಃ ರಾಜ್‌ ಕುಮಾರ್ ಅವರೇ ಗುರುಮೂರ್ತಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಹೇಳಿದ್ದರು ಎಂದು ಹಿರಿಯ ಸಂಗೀತ ವಿದ್ವಾನ್‌ ಶಿವಾಜಿರಾವ್ ಸ್ಮರಿಸಿಕೊಳ್ಳುತ್ತಾರೆ. 

ಗುಬ್ಬಿ ಕಂಪನಿ ಸೇರಿದಂತೆ ಹಲವು ನಾಟಕ ಕಂಪನಿಗಳಲ್ಲಿ ಕಲಾವಿದರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 90 ವರ್ಷಗಳ ಕಾಲ ಬದುಕಿದ್ದ ಇವರು ರಂಗಗೀತೆಗಳ ಗಾಯನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ವಿದ್ಯೆಯನ್ನು ಮರಳಿನಲ್ಲಿ ಬರೆಯುವ ಮೂಲಕ ಕಲಿತ ಗುರುಮೂರ್ತಪ್ಪನವರು ಸಂಸ್ಕೃತ ಅಭ್ಯಾಸ ಮಾಡಿ ಪಿಟೀಲು, ಹಾರ್ಮೋನಿಯಂ ಪಾಂಡಿತ್ಯದ ಜೊತೆಗೆ ರಾಮಾಯಣ, ಮಹಾಭಾರತದ ವೀರಾಟಪರ್ವ ಅಭ್ಯಾಸಮಾಡಿ ವ್ಯಾಖ್ಯಾನ ಸಹ ಮಾಡುತ್ತಿದ್ದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಎದುರಿಗೆ ಅರಮನೆಯಲ್ಲಿ ಅಭಿನಯಿಸಿದಾಗ ಅವರಿಂದ ಮೆಚ್ಚುಗೆ ವ್ಯಕ್ತವಾಗಿ ಅವರ ಕೈಯಲ್ಲಿದ್ದ ವಜ್ರದ ಉಂಗುರವನ್ನೇ ಬಹುಮಾನವಾಗಿ ನೀಡಿದ್ದರು. ಜೊತೆಗೆ ಇವರಿಗೆ ಬಂಗಾರದ ಕಡಗ ಸಹ ಬಹುಮಾನವಾಗಿ ಬಂದಿತ್ತು. ಗುರುಮೂರ್ತಪ್ಪ ಇಲ್ಲದೆ ಕಂಪನಿ ಇಲ್ಲ ಎನ್ನುವಂತಾಗಿದ್ದ ಸಂದರ್ಭವಿತ್ತು. ಗುರುಮೂರ್ತಪ್ಪ ಅವರು ಮೂಲತಃ ಒಂದು ಅಲ್ಪಸಂಖ್ಯಾತ ಅಲೆಮಾರಿ ಸಮುದಾಯವಾದ ವೈಷ್ಣವದಾಸ (ದೊಂಬಿದಾಸ) ಸಮುದಾಯದಿಂದ ಬಂದು ರಂಗಕಲೆಯಲ್ಲಿ ಅಘಾಧವಾದ ಎತ್ತರಕ್ಕೆ ಬೆಳೆದವರು.

ಗುರುಮೂರ್ತಪ್ಪ ಅವರ ಜೊತೆ ಸಹ ಕಲಾವಿದರಾಗಿ ಎಂ.ವಿ.ಸುಬ್ಬಯ್ಯ ನಾಯ್ಡು, ಸೋಮಾಜಿರಾವ್, ಗೋವಿಂದಶೆಟ್ಟಿ, ಎಂ.ಸುಬ್ಬರಾವ್, ಜಿ.ನಾಗೇಶರಾಯರು, ಕಬೀರ ಪತ್ನಿ ಪಾತ್ರದ ನಾರಾಯಣ ನಾಯ್ಡು, ಮುಂತಾದ ರಂಗ ದಿಗ್ಗಜರು ಇದ್ದರು ಎಂಬುದು ಬಹುಮುಖ್ಯ. 1920-–21 ರಲ್ಲಿ 'ಸಾಮ್ರಾಜ್ಯ ನಾಟಕ ಮಂಡಳಿ' (ಮಳವಳ್ಳಿ ಸುಬ್ಬಣ್ಣನವರ ಮಗ ದೊಡ್ಡಮಲ್ಲಯ್ಯ ನವರ ಕಂಪನಿ) ಯಲ್ಲಿ ಗುರುಮೂರ್ತಪ್ಪ ಅವರು ಮಳವಳ್ಳಿ ಸುಂದರಮ್ಮ, ಮಳವಳ್ಳಿ ಪಾರ್ವತಮ್ಮ, ಇವರ ಜೊತೆಗೆ ಕೃಷ್ಣ, ಕಾಳಿದಾಸ, ಅರ್ಜುನ, ರಾಜಕಿರೀಟಿ, ರಾಮ, ಚಂದ್ರಭಾನು, ಹರಿಶ್ಚಂದ್ರ, ಜಯವೀರ, ಕನಕಸುಂದರ, ಮೊದಲಾದ ರಾಜ ಪಾರ್ಟುಗಳನ್ನು ಹಾಕುತ್ತಿದ್ದರು.

ಬಿ.ವಿ. ಗುರುಮೂರ್ತಪ್ಪ ಅವರ ಕಲಾ ಪ್ರತಿಭೆಯನ್ನು ಪ್ರಚೋದಿಸುವಂತಹ ಒಂದು ಸಂದರ್ಭ ಒದಗಿ ಬಂತು. ಬನ್ನಿಕುಪ್ಪೆ ಪಕ್ಕದ ಮೂರು ಮೈಲು ಅಂತರದ ಅಮ್ಮನಪುರದೊಡ್ಡಿ ಹತ್ತಿರದ ಪುಣ್ಯಕ್ಷೇತ್ರವಾದ 'ಶ್ರೀ ರೇವಣಸಿದ್ದೇಶ್ವರ ಬೆಟ್ಟ'ದ ಅರ್ಚಕರಾಗಿದ್ದ 'ಹಟೀರುದ್ರಪ್ಪ' ಅವರಿಗೆ ಒಮ್ಮೆ ನಾಟಕ ಆಡಬೇಕೆಂಬ ಬಯಕೆ ಬಂತು, ಆಗಲೇ ರಂಗಪರಿಕರಗಳನ್ನು ಸಿದ್ದಪಡಿಸಿಕೊಂಡಿದ್ದರು. ಅವರಿಗೆ ಗುರುಮೂರ್ತಪ್ಪ ಅವರ ನೆನಪಾಗಿ ಅವರನ್ನು ತಮ್ಮೊಡನೆ ಕರೆತಂದು ತರಬೇತಿ ನೀಡಿದರು. ನಾಟಕ 'ಪಾಂಡವ ವಿಜಯ', 'ದ್ರೌಪದಿ' ಪಾತ್ರ, ನಾಟಕ ಯಶಸ್ವಿಯಾಯಿತು. 'ಸತ್ಯಹರಿಶ್ಚಂದ್ರ','ಸಾರಂಗಧರ' ನಾಟಕಗಳು ಏರ್ಪಾಟಾಯಿತು. ಚಂದ್ರಮತಿ, ಚಿತ್ರಾಂಗಿ ಪಾತ್ರಗಳನ್ನು ಗುರುಮೂರ್ತಪ್ಪನವರು ಯಶಸ್ವಿಯಾಗಿ ನಿಭಾಯಿಸಿದರು.

ಕೆಂಗಲ್ ಹನುಮಂತಯ್ಯನವರು ಬಾಲ್ಯದಿಂದಲೂ ಇವರಿಗೆ ನಿಕಟರಾಗಿದ್ದರು. ಅವರು ವಾರನ್ನದಲ್ಲಿ, ಬೀದಿ ದೀಪದ ಕೆಳಗೆ ಓದುವ ದಿನಗಳಿಂದಲೂ ಇವರಿಗೆ ಚಿರಪರಿಚಿತರಾಗಿ ಅಭಿಮಾನ ಉಳ್ಳವರಾಗಿದ್ದರು.

ನೆನಪಿನಂಗಳದ ವಿಚಾರ ಮಾಲಿಕೆಯಲ್ಲಿ ಬನ್ನಿಕುಪ್ಪೆ ಗುರುಮೂರ್ತಪ್ಪ : ರಾಮನಗರದ ಸಂಸ್ಕೃತಿ ಸೌರಭ ಟ್ರಸ್ಟ್ ವತಿಯಿಂದ ಕಲೆ, ಸಾಹಿತ್ಯ, ಸಂಸ್ಕೃತಿಗೆ ದನಿಯಾದವರು ವಿಚಾರ ಮಾಲಿಕೆಯಲ್ಲಿ ಬನ್ನಿಕುಪ್ಪೆ ಗುರುಮೂರ್ತಪ್ಪ ಅವರನ್ನು ಕುರಿತ ನೆನಪಿನಂಗಳ ಕಾರ್ಯಕ್ರಮವನ್ನು ಫೆಬ್ರವರಿ 18ರ ಭಾನುವಾರ ಬೆಳಿಗ್ಗೆ 10.30ಕ್ಕೆ ರಾಮನಗರದ ಮಿನಿ ವಿಧಾನಸೌಧ ಹಿಂಭಾಗದ ಸ್ಪೂರ್ತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಶೋಧಕರು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಉಪಾಧ್ಯಕ್ಷರಾದ ಡಾ.ಎಂ.ಜಿ.ನಾಗರಾಜ್ ವಹಿಸಲಿದ್ದು, ಅತಿಥಿಗಳಾಗಿ ಹಿರಿಯ ಸಂಗೀತ ವಿದ್ವಾನ್ ಶಿವಾಜಿರಾವ್, ರಂಗಭೂಮಿ ಕಲಾವಿದ ಎಲ್.ಶಿವಪ್ರಸಾದ್, ಸಾಹಿತಿ ಹಾಗೂ ಕಲಾವಿದರಾದ ಶೈಲೇಶ್ ಸಂಸ್ಕøತಿ ಸೌರಭ ಟ್ರಸ್ಟ್‍ನ ಅಧ್ಯಕ್ಷರಾದ ರಾ.ಬಿ.ನಾಗರಾಜು, ಕಸಾಪ ನಿಕಟಪೂರ್ವ ಕಾರ್ಯದರ್ಶಿ ಕಾ.ಪ್ರಕಾಶ್ ಭಾಗವಹಿಸಲಿದ್ದಾರೆ. 

ಹಾರ್ಮೋನಿಯಂ ವಾದಕರಾದ ಬಿ.ಎಸ್.ಶ್ರೀನಿವಾಸಮೂರ್ತಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಗಾಯಕರಾದ ವಿನಯ್‍ಕುಮಾರ್, ಡಾ. ಹೆಚ್.ವಿ.ಮೂರ್ತಿ, ಶ್ರೀರಂಗಯ್ಯ, ಗೋಪಾಲ್ ಹಾಗೂ ಗುರುಮೂರ್ತಪ್ಪನವರ ಕುಟುಂಬದ ಶೈಲೇಶ್ ಮತ್ತು ವೃಂದದವರಿಂದ  ಗೀತಗಾಯನ ಏರ್ಪಡಿಸಲಾಗಿದೆ ಎಂದು ಟ್ರಸ್ಟ್‍ನ ಕಾರ್ಯದರ್ಶಿ ಹೆಚ್.ಬಿ.ಸಿದ್ದರಾಜು ತಿಳಿಸಿದ್ದಾರೆ.

–ಎಸ್. ರುದ್ರೇಶ್ವರ, ಸಂಶೋಧನಾ ವಿದ್ಯಾರ್ಥಿ, ಬೆಂಗಳೂರು ವಿಶ್ವವಿದ್ಯಾಲಯ.

(ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಪ್ರಕಟವಾಗಿರುವ ಡಾ.ಎ.ಆರ್. ಗೋವಿಂದಸ್ವಾಮಿ ಅವರ ರಾಮನಗರ ಜಿಲ್ಲಾ ರಂಗ ಮಾಹಿತಿ ಪುಸ್ತಕ ಹಾಗೂ ಸಂಗೀತ ವಿದ್ವಾನ್‌ ಶಿವಾಜಿರಾವ್ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ)

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑