Tel: 7676775624 | Mail: info@yellowandred.in

Language: EN KAN

    Follow us :


ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

Posted date: 24 Mar, 2024

Powered by:     Yellow and Red

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚಂದ್ರ ತೇಜಸ್ವಿ ರವರ "ಅಣ್ಣನ ನೆನಪು" ನಾಟಕವು ಅದ್ಭುತವಾಗಿ ಪ್ರದರ್ಶನ ಕಂಡಿತು. ಇನ್ನಷ್ಟು ಉತ್ತಮಗೊಳ್ಳಲು ಶತಮಾನೋತ್ಸವ ಭವನದ ತಾಂತ್ರಿಕತೆಯ ವಿಫಲತೆಯಿಂದ ಪೇಲವವಾಯಿತು.


ಕುವೆಂಪು ಮತ್ತು ತೇಜಸ್ವಿ ರವರ ವಿಚಾರಧಾರೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ತಂಡ ವಿಫಲವಾಯಿತೆನ್ನಲಡ್ಡಿಯಿಲ್ಲ. ಬ್ರಾಹ್ಮಣ್ಯವಿರಲಿ ತುಳಿತಕ್ಕೊಳಗಾದ ಶೂದ್ರರೇ ನಮ್ಮ ಮೇಲೆ ಮುಗಿ ಬೀಳುತ್ತಾರೇನೋ ಎಂಬ ಭಯ ಕಾಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನಗಳು ಉಳಿಯಲಿಲ್ಲ.


ನಾಟಕದ ನಿರೂಪಣೆಯನ್ನು ಪೂಚಂತೇ ರವರ ಪಾತ್ರಧಾರಿಯೇ ನಿರ್ವಹಿಸಿಕೊಂಡು ನಾಟಕದಲ್ಲಿ ಅಭಿನಯಿಸಿದ್ದು ಚಂದವಾಗಿತ್ತು, ಮನೆಗೆಲಸದ ಬೋರಮ್ಮ ನ ಧ್ವನಿ ಹೊರತುಪಡಿಸಿ ಮಿಕ್ಕೆಲ್ಲಾ ಪಾತ್ರಧಾರಿಗಳ ಧ್ವನಿ ಕ್ಷೀಣವಾಗಿತ್ತು. ಅದಕ್ಕೆ ಭವನದ ತಾಂತ್ರಿಕತೆಯೇ ಕಾರಣ ಎಂಬುದನ್ನು ಆಯೋಜಕರು, ನಾಟಕ ತಂಡ ಹಾಗೂ ಭವನದ ಆಡಳಿತ ಮಂಡಳಿ ಒಪ್ಪಿಕೊಂಡಿದೆ.


ದಾನಿಗಳ ಹಾಗೂ ಟಿಕೆಟ್ ಮಾರಾಟದಿಂದ ಮುನ್ನೂರಕ್ಕೂ ಹೆಚ್ಚು ಜನ ಸೇರಿಸುವಲ್ಲಿ ಆಯೋಜಕರಾದ ಅಂಕಯ್ಯ ನಾಗವಾರ ಸರ್, ಡಾ ಕೂಡ್ಲೂರು ವೆಂಕಟಪ್ಪ ಸರ್ ಸೇರಿದಂತೆ ವಿಚಾರವಾದ ಮಂಡಿಸುವ ಕೆಲ ಯುವಕರು ಸೇರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಕುವೆಂಪು ಮತ್ತು ಪೂಚಂತೇ ರವರ ನಾಟಕಕ್ಕೆ ಹೆಚ್ಚು ಜನ ಸೇರಲಿಲ್ಲವಲ್ಲಾ ಎಂಬುದೇ ದೊಡ್ಡದಾಗಿದೆ.


*ವಿಚಾರ ಎಂಬುದನ್ನು ಹರಿಯಬಿಡಬೇಕೆ ವಿನಹ ಕಟ್ಟಿಹಾಕಬಾರದು*

ಉತ್ತರದ ಜೆಪಿ, ಲೋಹಿಯಾ ರವರಂತೆ ದಕ್ಷಿಣದ ಪೆರಿಯಾರ್, ಕುವೆಂಪು, ಪೂಚಂತೇ, ಪ್ರೊ ನಂಜುಂಡಸ್ವಾಮಿ ಸೇರಿದಂತೆ ಹಲವಾರು ಮಹನೀಯರು ವಿಚಾರವನ್ನು ಸಾರಿದ್ದಾರೆ. ಅವರ ವಿಚಾರಧಾರೆಗಳು ಈಗಾಗಲೇ ಮರೆತು ಹೋಗುತ್ತಿವೆ. ಇವರ ವಿಚಾರಧಾರೆಗಳನ್ನು ಯುವ ಸಮುದಾಯಕ್ಕೆ ಮುಟ್ಟಿಸಬೇಕು. ಇದಕ್ಕೆ ಹಲವಾರು ಮುಖ್ಯವಾಹಿನಿಗಳ ಜೊತೆಗೆ ಸಾಮಾಜಿಕ ಜಾಲತಾಣ ಬಹಳ ಮುಖ್ಯವಾಹಿನಿಯಾಗಿದೆ. ಇದರ ಮುಖೇನ ಯುವ ಸಮುದಾಯವನ್ನು ವಿಚಾರವಂತಿಕೆಗೆ ಕರೆತರಬೇಕಾಗಿದೆ.


ನಗರದಲ್ಲಿ ನಡೆದ ಅಣ್ಣನ ನೆನಪು ನಾಟಕದಲ್ಲಿದ್ದ ಮುನ್ನೂರಕ್ಕೂ ಹೆಚ್ಚು ಮಂದಿಯಲ್ಲಿ, ಹದಿನೆಂಟರಿಂದ ಇಪ್ಪತ್ತೈದು ವಯಸ್ಸಿನ ವಿದ್ಯಾರ್ಥಿಗಳು ಬೆರಳೆಣಿಕೆಯಷ್ಟಿದ್ದರೆ, ಇಪ್ಪತ್ತೈದರಿಂದ ನಲವತ್ತು ವಯಸ್ಸಿನ ಯುವಸಮೂಹ ಕಣ್ಣಳತೆಯಲ್ಲಿ ಲೆಕ್ಕ ಹಾಕುವಷ್ಟಿತ್ತು. ಇನ್ನುಳಿದವರೆಲ್ಲರೂ ನೆರೆತವರಾಗಿದ್ದರು. ಅಂದರೆ ಇವರೆಲ್ಲರೂ ಕುವೆಂಪು, ಪೂಚಂತೆ ಸಮೇತ ಒಂದಷ್ಟು ವಿಚಾರಗಳನ್ನು ಮೈಗೂಡಿಸಿಕೊಂಡವರಿದ್ದರು. ತಿಳುವಳಿಕೆವುಳ್ಳವರಾಗಿದ್ದರು. ಇವರ ಜೊತೆಗೆ ಅಥವಾ ಮುಂದಿನ ಸರದಿ ಯಾರಿಗೆ ಎಂಬುದು ಇಲ್ಲಿ ಬಹಳ ಮುಖ್ಯ. ಆದರೆ ಇದಾಗದಿರುವುದು. ನಾಟಕ ನಮ್ಮ ತಂಡಕ್ಕೆ ಮಾತ್ರ ಸೀಮಿತ, ಬೇಕಾದವರು ಇಲ್ಲಿಯೇ ಬಂದು ನೋಡಲಿ ಎಂಬುದು ಸರಿಯಲ್ಲಾ ಎಂಬುದು ನನ್ನ ನಿರ್ವಿವಾದ.


ಈ ಮೊದಲೇ ಹೇಳಿದಂತೆ ವಿಚಾರಧಾರೆಗಳು ಈಗ ಬೇಕಿರುವುದು ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ, ಎಲ್ಲರೂ ಆ ಸಮಯಕ್ಕೆ ಬರಲಾಗುವುದಿಲ್ಲ. ಹಾಗಂತ ಮುಂದೆ ಎಲ್ಲೋ ಪ್ರದರ್ಶನಗೊಳ್ಳುವ ತನಕ ಕಾಯಲಾಗುವುದಿಲ್ಲ. ಕಾದರೂ ದೂರ ಎನ್ನುವ ಕಾರಣಕ್ಕೆ ಹೋಗದೆ,ಈ ವಿಚಾರಗಳು, ತಿಳಿದುಕೊಂಡ, ನಿವೃತ್ತಿ ಹೊಂದಿದವರ ಜೊತೆಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ ಯೇ ಉಳಿದುಕೊಂಡು ಬಿಡುತ್ತದೆ. ಅದಕ್ಕೆ ಅವಕಾಶ ಕೊಡದೆ ವಿಚಾರ ಅರಿಯದವರಿಗೆ ಮುಟ್ಟಿಸುವ ಪ್ರಯತ್ನ ಮಾಡಬೇಕೆಂದು ನನ್ನ ಮನದಿಚ್ಚೆಯಾಗಿದೆ.


-ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑