Tel: 7676775624 | Mail: info@yellowandred.in

Language: EN KAN

    Follow us :


ಬಿಡದಿ ರೈತರ ಸೇವಾ ಸಹಕಾರ ಸಂಘವನ್ನು ಸೂಪರ್ ಸೀಡ್ ಮಾಡಿ : ಬಾನಂದೂರು ಬಸವರಾಜು

Posted date: 03 Mar, 2018

Powered by:     Yellow and Red

ರಾಮನಗರ: ಬಿಡದಿ ರೈತರ ಸೇವಾ ಸಹಕಾರ ಸಂಘದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಕೂಡಲೇ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಬೇಕು ಎಂದು ಸಂಘದ ಷೇರುದಾರರು ಆದ ಕರ್ನಾಟಕ ರಾಜ್ಯ ಕಾರ್ಮಿಕ ಪಡೆ ಜಿಲ್ಲಾ ಘಟಕದ ಅಧ್ಯಕ್ಷ ಬಾನಂದೂರು ಬಸವರಾಜು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ನಗರದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ಲಕ್ಷತನದಿಂದ ಸಂಘದಲ್ಲಿ ಷೇರು ಹೂಡಿಕೆದಾರರ ಹಣ ಮತ್ತು ಸರಕಾರದಿಂದ ಬಂದ ಅನುದಾನದಲ್ಲಿ ಭಾರಿ ವ್ಯತ್ಯಾಸಗಳು ಕಂಡುಬಂದಿರುವುದು ಆಡಿಟ್ ವರದಿಯಿಂದ ದೃಢಪಟ್ಟಿರುತ್ತದೆ, 2016-17ನೇ ಸಾಲಿನ ಆಡಿಟ್ ವರದಿಯಲ್ಲಿ ಎಲ್ಲಾ ವಿಭಾಗಳಿಂದ ಸುಮಾರು 40 ಲಕ್ಷ ರೂಗಳವರೆಗೆ ಹಣ ವ್ಯತ್ಯಾಸವಾಗಿರುವುದು ಕಂಡುಬಂದಿದೆ, ಇದರಿಂದ ರೈತರು ಮತ್ತು ಷೇರುದಾರರಿಗೆ ತೀರಾ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಿರುವ ರೈತರ ಸೇವಾ ಸಹಕಾರ ಸಂಘದ ಗ್ರಾಚ್ಯುಟಿ ನಿಧಿ ನಾಪತ್ತೆಯಾಗಿದೆ, ಸಂಘದ ನೌಕರರ ಭವಿಷ್ಯ ನಿಧಿ(ಪಿಎಫ್) ಹಣ ದುರ್ಬಳಕೆ ಆಗಿದೆ, ಸಿಬ್ಬಂದಿ ಅಕ್ರಮ ನೇಮಕ, ಸಂಘದ ಅಧೀನದಲ್ಲಿರುವ ಅಂಗಡಿಯ ಬಾಡಿಗೆ ಹಣವನ್ನು ಕಬಳಿಕೆ ಮಾಡಲಾಗಿದೆ, ಅಲ್ಲದೆ 2012ರಲ್ಲಿ ಸೇವೆಯಿಂದ ನಿವೃತ್ತಿ ಆಗಿರುವ ಸಂಘದ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಶ್ರೀ ಸಂಜೀವಯ್ಯ ಎಂಬುವರನ್ನು ಐದಾರು ವರ್ಷಗಳಿಂದ ಬಿಡುಗಡೆಗೊಳಿಸದೆ ಸೇವೆಯಲ್ಲಿ ಮುಂದುವರೆಸಲಾಗಿದೆ, ಶ್ರೀ ಸಂಜೀವಯ್ಯನವರು ಪ್ರಬಾರಿ ಆಗಿದ್ದರೂ ಸಹ ಸಂಘದ ಸೀಲು(ಮುದ್ರೆ) ಸಹಿಗಳನ್ನು ಯಥಾವತ್ತಾಗಿ ಬಳಕೆ ಮಾಡುತ್ತಿದ್ದಾರೆ, ಇದರಿಂದ ಸಂಘದ ಅವ್ಯವಹಾರಗಳನ್ನು ಬಯಲಾಗದಂತೆ ತಡೆಹಿಡಿಯಲಾಗುತ್ತಿದೆ ಎಂದು ಆರೋಪಿಸಿದರು.
ಸಹಕಾರ ಸಂಘಗಳ ರಿಜಿಸ್ಟ್ರಾರ್ ರವರಿಂದ ಅನುಮೋದನೆ ಪಡೆಯದೆ ಕೆಲವು ಹುದ್ದೆಗಳನ್ನು ಏಕಾಏಕಿ ನೇಮಕ ಮಾಡಿಕೊಂಡಿರುವುದು ಅಕ್ರಮ, ಪ್ರಬಾರ ಸಿಇಒ ರವರನ್ನು ಸೇವೆಯಿಂದ ತಕ್ಷಣ ಬಿಡುಗಡೆಗೊಳಿಸುವಂತೆ, ತಪ್ಪಿತಸ್ಥರ ವಿರುದ್ಧ ಸಹಕಾರ ಸಂಘದ ಕಾಯ್ದೆಯನ್ವಯ ಸೂಕ್ತ ಕ್ರಮ ಜರುಗಿಸುವಂತೆ ಈಗಾಗಲೇ ಕರ್ನಾಟಕ ರಾಜ್ಯ ಕಾರ್ಮಿಕ ಪಡೆ ಸಂಘಟನೆ ರಾಮನಗರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ನೀಡಿದೆ, ಇದರ ಮೇರೆಗೆ ನಿಬಂಧಕರು ರೈತರ ಸೇವಾ ಸಹಕಾರ ಸಂಘಕ್ಕೆ ಅನುಮತಿ ಪಡೆಯದೆ ಮಾಡಿಕೊಂಡಿರುವ ನೇಮಕ ರದ್ದುಪಡಿಸುವಂತೆ ಮತ್ತು ಪ್ರಬಾರ ಸಿಇಒ ರವರನ್ನು ತುರ್ತಾಗಿ ಸೇವೆಯಿಂದ ಬಿಡುಗಡೆಗೊಳಿಸುವಂತೆ ನೋಟೀಸ್ ಜಾರಿ ಮಾಡಿರುತ್ತಾರೆ ಎಂದರು.
ಸಹಕಾರ ಸಂಘದಲ್ಲಿ ಆದಾಯಕ್ಕಿಂತ ನಷ್ಟದ ಬಾಬ್ತು ಹೆಚ್ಚಾಗುತ್ತಿರುವುದು ಆಡಿಟ್ ವರದಿಯಲ್ಲಿ ಉಲ್ಲೇಖವಾಗಿದೆ, 2016-17ನೇ ಸಾಲಿನ ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದೆ, ರೈತರು ಹಾಗೂ ನಾಗರೀಕರ ಹಿತದೃಷ್ಠಿಯಿಂದ ಸ್ಥಾಪನೆಯಾಗಿರುವ ಸಂಘವನ್ನು ದಿವಾಳಿ ಮಾಡಲು ಕೆಲವು ನಿರ್ದೇಶಕರು ಮುಂದಾಗಿದ್ದಾರೆ, ಸಂಘದಲ್ಲಿ ನಡೆದಿರುವ ಭಾರಿ ಮೊತ್ತದ ವ್ಯತ್ಯಾಸಗಳಿಗೆ ಉಪ ವಿಭಾಗದ ಸಹಕಾರ ಸಂಘಗಳ ನಿಬಂಧಕರು ಅಧಿಕಾರಿಗಳ ಹೊಣೆಗೇಡಿತನವೂ ಕಾರಣವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಮದ್ಯೆ ಪ್ರವೇಶಿಸಿ ಸೂಕ್ತವಾದ ತನಿಖೆ ನಡೆಸಲು ಸಂಬಂಧಪಟ್ಟ ಇಲಾಖಾಧಿಕಾರಿಗೆ ಸೂಚನೆ ನೀಡಬೇಕು, ತಪ್ಪಿತಸ್ಥರಿಂದ ವ್ಯತ್ಯಾಸವಾಗಿರುವ ಹಣವನ್ನು ವಸೂಲು ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. 

ಕನ್ನಡ ಜಾನಪದ ಪರಿಷತ್‍ನ ಜಿಲ್ಲಾ ಕಾರ್ಯದರ್ಶಿ ಬಾನಂದೂರು ನಂಜುಂಡಿ ಮಾತನಾಡಿ ರೈತರ ಸೇವಾ ಸಹಕಾರ ಸಂಘವು 1976 ರಲ್ಲಿ ಸ್ಥಾಪನೆಯಾಗಿ, ಈಗ ಸುಮಾರು 7 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಸದಸ್ಯ(ಷೇರುದಾರರು)ರನ್ನು ಹೊಂದಿರುತ್ತದೆ, ಸಹಕಾರ ಸಂಘದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಷೇರುದಾರರು ಇದ್ದಾರೆ, ಹಿಂದಿನಿಂದ ನಡೆದು ಬಂದ ಸಂಘದ ಆಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ವಿಶ್ವಾಸವಿರಿಸಿ ಸಂಘದಲ್ಲಿ ರೈತರು ಸುಮಾರು 3 ಕೋಟಿ ರೂಗಳಷ್ಟು ಹಣವನ್ನು ನಿಶ್ಚಿತ ಠೇವಣಿ(ಎಫ್‍ಡಿ)ಖಾತೆಯಲ್ಲಿ ಜಮಾ ಮಾಡಿದ್ದಾರೆ, 3 ಕೋಟಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದಾರೆ, ಸುಮಾರು 2 ಕೋಟಿ ರೂಗಳಷ್ಟು ಉಳಿತಾಯ ಖಾತೆಯಲ್ಲಿ ವ್ಯವಹಾರ ನಡೆಯುತ್ತಿದೆ, ಆದರೆ ಹೂಡಿಕೆದಾರೆಲ್ಲರಿಗೂ ದಿವಾಳಿತನ ಕಾಡ ತೊಡಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೋರ್ವ ಷೇರುದಾರ ಕಾರ್ಮಿಕ ಪಡೆ ಬಿಡದಿ ಹೋಬಳಿ ಅಧ್ಯಕ್ಷ ಸಿದ್ಧರಾಜು(ಸಿದ್ಧು) ಮಾತನಾಡಿ 2016-17ನೇ ಸಾಲಿನ ಜಮಾಖರ್ಚು ವಿಭಾಗದ ಉಳಿತಾಯ ಖಾತೆಯಲ್ಲಿ 71,383 ರೂಗಳ ವ್ಯತ್ಯಾಸ ಕಂಡು ಬಂದಿದೆ. ಚಿಲ್ಲರೆ ದಿನಸಿ ಮಾರಾಟ ವಿಭಾಗದಲ್ಲಿ ಆಡಿಟ್ ರಿಪೋರ್ಟ್‍ನಲ್ಲಿ 15,68,181 ರೂ ಎಂದು ತೋರಿಸುತ್ತಿದೆ, ಆದರೆ ಜಮಾ ಖರ್ಚಿನಲ್ಲಿ 15,10,352 ಎಂದು ನಮೂದಾಗಿದೆ, ಇದರಿಂದ 57,829 ರೂ ವ್ಯತ್ಯಾಸ ಕಂಡುಬಂದಿದೆ. ಸೀಮೆ ಎಣ್ಣೆ ವಿಭಾಗದಲ್ಲಿ ಆಡಿಟ್ ರಿಪೋರ್ಟ್ ನಲ್ಲಿ 10,49,723 ರೂ ಬರೆದಿದೆ  ಆದರೆ ಜಮಾ ಖರ್ಚಿನಲ್ಲಿ 9,09,746 ರೂ ಎಂದು ನಮೂದಾಗಿದೆ, ಇದರಿಂದ 1,39,977 ರೂಗಳ ವ್ಯತ್ಯಾಸ ಆಗಿದೆ. ಚಿನ್ನಾಭರಣ ವಿಭಾಗದಲ್ಲಿ ಆಡಿಟ್ ವರದಿಯಲ್ಲಿ 28,78,715 ರೂ ಮೊತ್ತ ತೋರಿಸುತ್ತಿದೆ, ಆದರೆ ಜಮಾ ಖರ್ಚಿನಲ್ಲಿ 27,82,089 ರೂ ನಮೂದಾಗಿದೆ, ಇದರಿಂದ 83,171 ರೂ ವ್ಯತ್ಯಾಸವಿದೆ, ಕೆನರಾ ಬ್ಯಾಂಕ್ ಖಾತೆಯಲ್ಲಿ 28,250 ರೂಗಳ ವ್ಯತ್ಯಾಸ ಕಂಡು ಬಂದಿದೆ ಎಂದು ಅಂಕಿ ಅಂಶ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ವಿಜಯೇಂದ್ರ ಕುಮಾರ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑