Tel: 7676775624 | Mail: info@yellowandred.in

Language: EN KAN

    Follow us :


ಎರೇಹಳ್ಳಿ ಎಂಪಿಸಿಎಸ್‍ನಲ್ಲಿ ವಿಶೇಷ ಸರ್ವಸದಸ್ಯರ ಸಭೆ

Posted date: 06 Mar, 2018

Powered by:     Yellow and Red

ಎರೇಹಳ್ಳಿ ಎಂಪಿಸಿಎಸ್‍ನಲ್ಲಿ ವಿಶೇಷ ಸರ್ವಸದಸ್ಯರ ಸಭೆ

ರಾಮನಗರ : ತಾಲ್ಲೂಕಿನ ಕೂಟಗಲ್ ಹೋಬಳಿ ಎರೇಹಳ್ಳಿ ಎಂಪಿಸಿಎಸ್‍ನಲ್ಲಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಭಂಧಕರ ಆದೇಶದನ್ವಯ ಸಂಘದ ಅಧ್ಯಕ್ಷ ಎಂ.ಶಿವಯ್ಯ ಅಧ್ಯಕ್ಷತೆಯಲ್ಲಿ ವಿಶೇಷ ಸರ್ವ ಸದಸ್ಯರ ಮಹಾಸಭೆ ಜರುಗಿತು.
ಸಂಘದ ಆವರಣದಲ್ಲಿ ನಡೆದ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಾಲು ಉತ್ಪಾದಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಕೂಟಗಲ್ ಹೋಬಳಿಯಲ್ಲಿ ಪ್ರತಿದಿನ 3 ಸಾವಿರ ಲೀಟರ್ ಹಾಲು ಉತ್ಪಾದನೆಯನ್ನು ಮಾಡುತ್ತಿರುವ ಸಂಘ ಎರೇಹಳ್ಳಿ ಎಂಪಿಸಿಎಸ್ ಪ್ರಥಮವಾಗಿದೆ. ಅಲ್ಲದೆ ವಾರ್ಷಿಕ 2.5 ಕೋಟಿ ವಹಿವಾಟು ನಡೆಸುತ್ತಿದ್ದು 60 ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶಿಕ್ಷಣಕ್ಕೆ ಒತ್ತು ನೀಡುವಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಯದರ್ಶಿ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಬೆಂಗಳೂರು ಹಾಲು ಒಕ್ಕೂಟ ಒಂದರಲ್ಲಿ 802 ಜನ ರೈತರು ಮರಣ ಹೊಂದಿದ್ದು, ರಾಮನಗರ ತಾಲ್ಲೂಕಿನಲ್ಲಿ 122 ಹಾಲು ಉತ್ಪಾದಕ ರೈತರು ಸಾವನ್ನಪ್ಪಿದ್ದಾರೆ. ಅವರಿಗೆ ಈ ವಿಮೆಯಿಂದ ಹಣ ಸಿಗಲಿದೆ.  ಸಾವು ಶಾಶ್ವತವಲ್ಲ, ಸಹಜವಾದ ಸಾವಿಗೆ ಬೆಲೆ ತೆತ್ತಲಾಗದಿದ್ದರೂ, ಹೈನುಗಾರಿಕೆಯನ್ನು ನಂಬಿರುವ ರೈತ ಕುಟುಂಬಕ್ಕೆ ಅಲ್ಪಮಟ್ಟಿಗೆ ಹಣ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ವಿಸ್ತರಣಾಧಿಕಾರಿ ಉಮೇಶ್ ಸಭೆಯಲ್ಲಿ ಆಡಿಟ್ ವರದಿಯನ್ನು ಮಂಡಿಸಿ ಎರೇಹಳ್ಳಿ ಎಂಪಿಸಿಎಸ್ ಪ್ರಾರಂಭವಾದಾಗ ಕಾರ್ಯನಿರ್ವಹಿಸಿದ್ದ ಕಾರ್ಯದರ್ಶಿ ಶಿವನಂಜಯ್ಯ ಅವಧಿಯಲ್ಲಿ 47.782 ರೂಪಾಯಿ ದುರುಪಯೋಗವಾಗಿದ್ದು ನಂತರ 2001 ರಿಂದ 2006 ರವರಗೆ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ವೈ.ಜೆ.ರಮೇಶ್ ಅವಧಿಯಲ್ಲಿ 8.81.358 ರೂಪಾಯಿ ಸಂಘದ ಹಣ ದುರುಪಯೋಗ ಹಾಗಿರುವ ಬಗ್ಗೆ ಲೆಕ್ಕಪರಿಶೋಧನೆ ವೇಳೆ ತಿಳಿದು ಬಂದಿದ್ದು ವರದಿಯಲ್ಲಿ ಉಲ್ಲೇಖವಾಗಿದೆ ಎಂದರು. 
ಸದಸ್ಯರು ನಂತರ ದುರುಪಯೋಗವಾಗಿರುವ ಹಣವನ್ನು ಸಂಬಂಧಿಸಿದವರಿಂದ ಹಣಮರು ಪಾವತಿಗೆ ಕಾನೂನಾತ್ಮಕವಾಗಿ ಪತ್ರ ವ್ಯವಹಾರ ಮಾಡಿ ನೋಟಿಸ್ ನೀಡಿ ದಾಖಲೆಯಿದ್ದರೆ ಅವರು ಆಡಿಟ್ ಅವರಿಗೆ ಸಲ್ಲಿಸಲಿ, ಇಲ್ಲವಾದಲ್ಲಿ ಸಂಘದ ದುರುಪಯೋಗವಾದ ಹಣ ವಸೂಲಿ ಮಾಡುವಂತೆ ಸಭೆಯಲ್ಲಿ ಸದಸ್ಯರು ಸುದೀರ್ಘ ಚರ್ಚೆ ಮಾಡಿ ತೀರ್ಮಾನಿಸಿತು. 
2006 ರಿಂದ ಇದುವರೆವಿಗೆ ಸಂಘದ ಅಧ್ಯಕ್ಷ ಎಂ.ಶಿವಯ್ಯ ಮತ್ತು ಕಾರ್ಯದರ್ಶಿ ಬಿ.ಸುರೇಶ್ ಅವಧಿಯಲ್ಲಿ ಸಂಘ 63 ಲಕ್ಷ ಆದಾಯ ಗಳಿಸಿದ್ದು, ಆದಾಯದಲ್ಲಿ ಹಾಲು ಸರಬರಾಜು ರೈತರಿಗೆ 28 ಲಕ್ಷ ನಿವ್ವಳ ಲಾಭ ವಿತರಣೆ ಮಾಡುವ ಬಗ್ಗೆ ಮತ್ತು ಸಮಗ್ರ ಬೈಲಾ ತಿದ್ದುಪಡಿ ಮಾಡುವ ಬಗ್ಗೆ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಯಿತು. 
ಎಂಪಿಸಿಎಸ್ ಅಧ್ಯಕ್ಷ ಎಂ.ಶಿವಯ್ಯ ಮಾತನಾಡಿ, 7 ಲೀಟರ್ ಹಾಲು ಸಂಗ್ರಹದೊಂದಿಗೆ 1997-98ರಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಹಾಲು ಉತ್ಪಾದಕರ ಸಂಘದಲ್ಲಿ ಇಂದು ಪ್ರತಿನಿತ್ಯ 3 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು ಗ್ರಾಮದ ರೈತಾಪಿ ಜನರಲ್ಲಿ ಇಂದು ಹೈನುಗಾರಿಕೆ ಮುಖ್ಯ ಉದ್ಯಮವಾಗಿ ರೂಪುಗೊಂಡಿದೆ ಎಂದರು.
ನನ್ನ ಅಧ್ಯಕ್ಷ ಅವಧಿಯಲ್ಲಿ ಸಂಘವನ್ನು ಪಾರದರ್ಶಕವಾಗಿ ನಡೆಸುವ ಮೂಲಕ 63 ಲಕ್ಷ ಲಾಭ ತಂದುಕೊಟ್ಟಿದ್ದೇನೆ. ಚಿರಾಸ್ತಿ ಠೇವಣಿ ಸೇರಿ ಒಂದು ಕೋಟಿಗು ಅಧಿಕ ಸಂಘದ ಆಸ್ತಿ ಇದ್ದು ಇದೀಗ ಬಂದಿರುವ ಲಾಭಾಂಶದಲ್ಲಿ ಸದ್ಯದಲ್ಲಿಯೇ 30 ಲಕ್ಷ ರೂ.ಗಳ ಹಣವನ್ನು ಬೋನಸ್ ರೂಪದಲ್ಲಿ ಹಾಲು ಉತ್ಪಾದಕ ರೈತಾಪಿ ನೀಡಲಾಗುತ್ತದೆ ಎಂದರು.
ಸಂಘದ ಕಾರ್ಯದರ್ಶಿ ಬಿ.ಸುರೇಶ್ ಮಾತನಾಡಿ, ಸಂಘದಲ್ಲಿ ಕಳೆದ 21 ವರ್ಷಗಳ ಆಡಿಟ್ ವರದಿಯನ್ನು ತಯಾರಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಶಾಸಕ ಬಾಲಕೃಷ್ಣ ಹಾಗು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರು ಸಹಕರಿಸಿದರು ಎಂದರು.
ಸಭೆಯಲ್ಲಿ ರಾಮನಗರ ಶಿಬಿರ ವ್ಯವಸ್ಥಾಪಕ ಡಾ.ಶಿವಶಂಕರ್, ನಿರ್ದೇಶಕರಾದ ಶಿವಣ್ಣ, ಅಪ್ಪಾಜಿ, ರವಿ, ಶೇಖರ್, ಜಯರಾಮಯ್ಯ, ನಿಂಗೇಗೌಡ, ಸಿದ್ಧಯ್ಯ, ಸರಸ್ವತಿ, ಜಯಮ್ಮ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು. 
 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑