Tel: 7676775624 | Mail: info@yellowandred.in

Language: EN KAN

    Follow us :


ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ

Posted date: 03 Aug, 2019

Powered by:     Yellow and Red

ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಹರೂರು ರಾಜಣ್ಣ

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಹಲವಾರು ರೈತರು ಬಿತ್ತನೆ ಮಾಡಲಾಗಿಲ್ಲ, ತಡವಾಗಿ ಬಂದ ಅಲ್ಪ ಮಳೆ ನೆಚ್ಚಿಕೊಂಡು ಕೆಲ ರೈತರು ಉಳುಮೆ ಮಾಡಿ ಬಿತ್ತನೆ ಮಾಡಿರುವವರು ಮಳೆ ಕೈಕೊಟ್ಟ ಕಾರಣ ಮಾಡಿದ ಖರ್ಚು ಸಹ ಬಾರದಿರುವ ಕಾರಣ ಕಂಗಾಲಾಗಿದ್ದಾರೆ, ಆದ್ದರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬಿಮಾ ಫಸಲ್ ಯೋಜನೆಯನ್ನು ನೋಂದಣಿ ಮತ್ತು ಸಮಗ್ರ ಕೃಷಿ ಅಭಿಯಾನದ ಮಾಹಿತಿ ಪಡೆದುಕೊಂಡು ಯಶಸ್ವಿ ರೈತರಾಗಬೇಕೆಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ತಿಳಿಸಿದರು.


ಅವರು ತಾಲ್ಲೂಕು ಕಛೇರಿಯ ಆವರಣದಲ್ಲಿ ೨೦೧೯/೨೦ ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ವೇಳಾಪಟ್ಟಿ ಬಿಡುಗಡೆ ಮತ್ತು ಪ್ರಚಾರದ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.


ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ವೀಣಾಕುಮಾರಿಯವರು ಮಾತನಾಡಿ ರೈತನ ಬದುಕು ಇಂದು ಅಧೋಗತಿ ತಲುಪುತ್ತಿದೆ, ರೈತ ಉದ್ದಾರವಾದರೆ ಮಾತ್ರ ದೇಶ ಸುಭಿಕ್ಷವಾಗಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ರೈತನಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಒಗ್ಗೂಡಿ ರೈತರ ಮನೆ ಬಾಗಿಲಿಗೆ ಮಾಹಿತಿ ನೀಡುತ್ತಿರುವುದು ಸಂತಸದ ಸಂಗತಿ ಎಂದು ಅಭಿಪ್ರಾಯ ಪಟ್ಟರು.


ಕಸಬಾ ಹೋಬಳಿಯ ಕಾರ್ಯಕ್ರಮದ ವೇಳಾಪಟ್ಟಿ;

೦೩/೦೮/ ಶನಿವಾರ ನಾಗವಾರ, ಮೈಲನಾಯಕನಹಳ್ಳಿ, ತಿಟ್ಟಮಾರನಹಳ್ಳಿ ಮತ್ತು ರಾಂಪುರ. ೦೪/೦೮/ ರ ಭಾನುವಾರ ವಂದಾರಗುಪ್ಪೆ, ನೀಲಸಂದ್ರ, ತಗಚಗೆರೆ, ಹೊಂಗನೂರು ಮತ್ತು ಕೂಡ್ಲೂರು, ೦೫/೦೮/ ರ ಸೋಮವಾರ ಬೆಳಿಗ್ಗೆ ೧೧:೦೦ ಗಂಟೆಗೆ ಬ್ರಹ್ಮಣಿಪುರ ಗ್ರಾಮದ ಲಕ್ಷ್ಮಿ ದೇವಿ ದೇವಾಲಯದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ವಿರುಪಾಕ್ಷಿಪುರ ಹೋಬಳಿಯ ವೇಳಾಪಟ್ಟಿ;

೦೫/೦೮ ರ ಸೋಮವಾರ ಕೋಡಂಬಳ್ಳಿ, ಜೆ ಬ್ಯಾಡರಹಳ್ಳಿ, ಎಲೆತೋಟದಹಳ್ಳಿ, ಇಗ್ಗಲೂರು, ಹಾರೋಕೊಪ್ಪ, ಸೋಗಾಲ ಮತ್ತು ಸುಳ್ಳೇರಿ.

೦೬/೦೮ ರ ಮಂಗಳವಾರ ಸಿಂಗರಾಜಪುರ, ಭೂಹಳ್ಳಿ, ಬಿ.ವಿ ಹಳ್ಳಿ, ವಿರುಪಾಕ್ಷಿಪುರ, ಅಕ್ಕೂರು ಮತ್ತು ಬಾಣಗಳ್ಳಿ, ೦೭/೦೮ ರ ಬುಧವಾರ ಗರಕಹಳ್ಳಿ ಗ್ರಾಮದ ಅರಳಿಕಟ್ಟೆ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ.


ಮಳೂರು ಹೋಬಳಿಯ ವೇಳಾಪಟ್ಟಿ;

೦೭/೦೮ ರ ಬುಧವಾರ ಮಳೂರು, ಎಂ ಬಿ ಹಳ್ಳಿ , ಬೇವೂರು, ಮಾಕಳಿ ಮತ್ತು ದಶವಾರ. ೦೮/೦೮ ರ ಗುರುವಾರ ಹೆಚ್ ಬ್ಯಾಡರಹಳ್ಳಿ, ಮುದಗೆರೆ, ಮತ್ತಿಕೆರೆ, ಚಕ್ಕೆರೆ ಮತ್ತು ಮಳೂರುಪಟ್ಟಣ.

೦೯/೦೮ ರ ಶುಕ್ರವಾರ ಬೆಳಿಗ್ಗೆ ೧೧:೦೦ ಗಂಟೆಗೆ ಬೇವೂರು ಗ್ರಾಮದ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆಯಾಯ ಪಂಚಾಯತಿ ವ್ಯಾಪ್ತಿಯ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳುವಂತೆ ಕೃಷಿ ಇಲಾಖೆಯ ಉಪ ನಿರ್ದೇಶಕಿ ಅಪರ್ಣಾ ಮನವಿ ಮಾಡಿದರು.


ಚಾಲನೆ ಸಮಯದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆ ಸುಗುಣ, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಚೈತ್ರಾ, ಕೃಷಿ ಸಮಾಜದ ಅಧ್ಯಕ್ಷ ಬಸವೇಗೌಡ, ಮೀನು ಕೃಷಿ ಇಲಾಖೆಯ ಅಧಿಕಾರಿ ಯೋಗಾನಂದ, ಲೈನ್ ಇಲಾಖೆಯ ಅಧಿಕಾರಿಗಳು, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಬೊಮ್ಮೇಶ್ ಸೇರಿದಂತೆ ಹಲವಾರು ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑