Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೩: ಕುಳಿತಿರುವ ವ್ಯಕ್ತಿ ಕಾಲುಗಳನ್ನು ಏಕೆ ತೂಗಿಸಬಾರದು ?

Posted date: 15 Aug, 2019

Powered by:     Yellow and Red

ತಾಳೆಯೋಲೆ ೧೩: ಕುಳಿತಿರುವ ವ್ಯಕ್ತಿ ಕಾಲುಗಳನ್ನು ಏಕೆ ತೂಗಿಸಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಕುಳಿತಿರುವ ವ್ಯಕ್ತಿ ಕಾಲುಗಳನ್ನು ಏಕೆ ತೂಗಿಸಬಾರದು ?


ಸಂಪ್ರದಾಯದ ನಂಬಿಕೆಯ ಪ್ರಕಾರ ಯಾವುದಾದರೊಂದು ಎತ್ತರದ ಜಾಗದ (ಕುರ್ಚಿ ಮೇಜು ಇತ್ಯಾದಿ) ಮೇಲೆ ಕುಳಿತು ಕಾಲು ತೂಗಿಸುವುದು (ಅಲ್ಲಾಡಿಸುವುದು) ತಂದೆ ತಾಯಿಯರು ಆರ್ಥಿಕ ತೊಂದರೆಗಳು ಇಲ್ಲವೇ ಸಾಲಗಳಲ್ಲಿ ಸಿಲುಕಿಕೊಂಡಿರುತ್ತಾರೆ. ಈ ನಿಷೇಧವನ್ನು ಪ್ರಮುಖವಾಗಿ ಮಕ್ಕಳ ಮೇಲೆ ಪೂರ್ವ ಕಾಲದಲ್ಲಿ ವಿಧಿಸಿದ್ದರು.


ಹಠ ಮಾಡುವ ಮಕ್ಕಳು ಈ ನಂಬಿಕೆಯು ಅರ್ಥ ಇಲ್ಲದ್ದೆಂದು ತಮ್ಮ ಹಿರಿಯರೊಂದಿಗೆ ವಾದಿಸುವರು. ಆದರೆ ಹಿರಿಯರು ತಾವು ಇತರರ ಮೂಲಕ ತಿಳಿದಿರುವುದಾಗಿ ಹೇಳುತ್ತಾರೆ.


ಈ ನಂಬಿಕೆಯು ಮೂಢ ನಂಬಿಕೆಯಾಗಿ ಕಾಣಿಸಿದರೂ ಒಂದು ನಿಜಾಂಶ ಕಾಣಿಸಿತ್ತದೆ. ಅದೇನೆಂದರೆ ಈ ರೀತಿಯಾಗಿ ಮಕ್ಕಳು ಕಾಲುಗಳನ್ನು ತೂಗಿಸುವುದರಿಂದ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಇದು ಈ ನಂಬಿಕೆಗೆ ಕಾರಣ.

ಮತ್ತೊಂದು ಕಾರಣವೆಂದರೆ ಹಿಂದಿನ ಕಾಲದಲ್ಲಿ ಔಷಧಗಳನ್ನು ಇಡುವ ಪೆಟ್ಟಿಗೆಗಳು, ಹಣದ ಪೆಟ್ಟಿಗೆ, ಎಣ್ಣೆ ಹಾಕುವ ಪಾತ್ರೆಗಳು ಮುಂತಾದ ವಸ್ತುಗಳನ್ನು ಅಜ್ಜಿ ತಾತಂದಿರ ಮಂಚಗಳ ಕೆಳಗೆ ಬಚ್ಚಿಡುತ್ತಿದ್ದರು. ಅವರಿಗೆ ಎಲೆ ಅಡಿಕೆ ಹಾಕುವ ಅಭ್ಯಾಸ ದಹ ಇರುತಿತ್ತು. ಆದ್ದರಿಂದ ಅದನ್ನು ಉಗಿಯಲು ಪಾತ್ರೆಗಳನ್ನು ಉಪಯೋಗಿಸುತ್ತಿದ್ದು ಆ ಪಾತ್ರೆಗಳನ್ನು ಮಂಚದ ಕೆಳಗೆ ಇಡುತ್ತಿದ್ದರು. ಒಂದು ವೇಳೆ ಮಕ್ಕಳು ಮಂಚದ ಮೇಲೆ ಕುಳಿತು ಕಾಲುಗಳನ್ನು ತೂಗಿಸಿದ್ದೇ ಆದರೇ ಮಂಚದ ಕೆಳಗಿದ್ದ ಪಾತ್ರೆಗಳು ಅಥವಾ ವಸ್ತುಗಳು ಕಾಲಿಗೆ ತಗುಲಿ ಬಿದ್ದು ಒಡೆಯುವುದೋ ಚಲ್ಲುವುದೋ‌ ಆಗುತ್ತಿತ್ತು. ಈ ಕಾರಣದಿಂದ ಮಕ್ಕಳ ಮೇಲೆ ಕಾಲು ತೂಗಿಸದಂತೆ ನಿಷೇಧ ಹೇರಿದ್ದರು.


ಹಿರಿಯರ ಮಾತನ್ನು ಕೇಳದ ಮಕ್ಕಳು ಬೆಲೆ ಬಾಳುವ ವಸ್ತುಗಳನ್ನು, ಮಡಿಕೆ ಕುಡಿಕೆಗಳನ್ನು ಕಾಲುಗಳನ್ನು ತೂಗಿಸುವ ಭರದಲ್ಲಿ ಒದ್ದು ಹೊಡೆದು ಹಾಕುತ್ತಿದ್ದರು. ಇದರ ಮುಖಾಂತರ ಆ ಕುಟುಂಬಕ್ಕೆ ಧನಹಾನಿ ಆಗಿ‌ ಸಾಲ‌ ಆಗಬಹುದು. ತಂದೆ ತಾಯಿ‌ ಸಾಲಗಳು‌ ಮಕ್ಕಳಿಗೂ‌ ಸೇರುತ್ತಿತ್ತು. ಆದ್ದರಿಂದ ಕುಟುಂಬದ ಕ್ಷೇಮವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ರೀತಿಯಾಗಿ ಎತ್ತರದಲ್ಲಿ ಕುಳಿತು ಕಾಲುಗಳನ್ನು ತೂಗಿಸಬಾರದೆಂದು ಹಿರಿಯರ ಹಿತ ನುಡಿ. ಜೊತೆಗೆ ಈ ದುರಭ್ಯಾಸವು ದೇಹದ ಶಕ್ತಿಯನ್ನು ಸಹ ಕಡಿಮೆ ಮಾಡುತ್ತದೆ.


ಸಂಗ್ರಹ ಮತ್ತು ಪ್ರಚಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑