Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೦: ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ಯಾಕಾಗಿ ಬೆಳೆಸಬೇಕು?

Posted date: 24 Aug, 2019

Powered by:     Yellow and Red

ತಾಳೆಯೋಲೆ ೨೦: ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ಯಾಕಾಗಿ ಬೆಳೆಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ಯಾಕಾಗಿ ಬೆಳೆಸಬೇಕು ?

ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ಬೆಳೆಸಬೇಕೆಂದು ಹಿರಿಯರ ಸುಬೋಧೆ. ಈ ಗಿಡಗಳನ್ನು ಅನೇಕ ಖಾಯಿಲೆಗಳಿಗೆ ಪ್ರಥಮ ಚಿಕಿತ್ಸೆ ಗಾಗಿ ಹಿರಿಯರು ಬಳಸುತ್ತಿದ್ದರು. ಆಧುನಿಕ ವೈದ್ಯಕೀಯವು ಅಭಿವೃದ್ಧಿ ಹೊಂದಿದ ನಂತರ ಈ‌ ರೀತಿಯಾದ ಗಿಡಗಳನ್ನು ಮನೆಯ ಪರಿಸರದಲ್ಲಿ ಬೆಳೆಸಲು ನಿರ್ಲಕ್ಷ್ಯ ತೋರಲಾಗಿದೆ.


ದೇವರ ಪೂಜೆಯಲ್ಲಿ ಉಪಯೋಗಿಸುವ ಅನೇಕ ಪತ್ರ ಪುಷ್ಪಗಳು ಔಷಧೀಯ ಗುಣಗಳನ್ನು ಹೊಂದಿವೆ, ವಾಸ್ತವವಾಗಿ ಇವುಗಳು ಆಯುರ್ವೇದಕ್ಕೆ ಸಂಬಂಧಿಸಿದ ಔಷಧೀಯ ಸಸ್ಯಗಳು.

ಈ ಪೂಜಾದ್ರವ್ಯ ಪತ್ರ ಪುಷ್ಪಗಳು ಹಲವು ರೀತಿಯ ಪ್ರತ್ಯೇಕ ರೋಗಗಳನ್ನು ಗುಣಪಡಿಸಿತ್ತವೆ. *ದಾಸವಾಳ ದ ಹೂವುಗಳನ್ನು ಶಿವ, ವಿಷ್ಣು ಮತ್ತು ಅಯ್ಯಪ್ಪ ಸ್ವಾಮಿಯ ಪೂಜೆಯಲ್ಲಿ ಪ್ರಿಯವಾಗಿ ಉಪಯಗಿಸುತ್ತಾರೆ, ಇದೊಂದು ಔಷಧೀಯ ಗಿಡವಾಗಿದ್ದು, ಅಮ್ಮ ನವರ ಪೂಜೆಯಲ್ಲಿ ಉಪಯೋಗಿಸುವ ಕಮಲ ಪುಷ್ಪಗಳು ಸಹ ಔಷಧೀಯ ಗುಣಗಳನ್ನು ಹೊಂದಿವೆ, ಶಿವ ನಿಗೆ ಪ್ರಿಯವಾದ ಬಿಲ್ವಪತ್ರೆ ಮತ್ತು ತುಳಸಿ ದಳಗಳು ಬೇವು ಮುಂತಾದ ದೇವಿ ದೇವತಾ ಪ್ರಿಯವಾದ ದಳಗಳು, ಫಲಪುಷ್ಪ ಪತ್ರೆಗಳಾದಿಯಾಗಿ ಬಹುತೇಕ ಎಲ್ಲಾ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿವೆ.


*ಕರೋನಾರಿಯ (Caronaria) ಸಸ್ಯವನ್ನು ಕಣ್ಣಿನ ಕಾಯಿಲೆಗಳಿಗೆ ಉಪಯೋಗಿಸುತ್ತಾರೆ, * *ಸ್ತ್ರೀಯರ ಗರ್ಭಾಶಯದ ಕಾಯಿಲೆಯನ್ನು ಒಂದು ರೀತಿಯಾದ* *(ದಾಸವಳಕ್ಕೆ ಸೇರಿದ ಹಲವು ಜಾತಿಯ ದಳಗಳು ವಾಸಿ ಮಾಡುತ್ತವೆ)* *ದಾಸವಾಳದ ಎಲೆಗಳ ರಸವನ್ನು ತೆಗೆದು ಕೆಲವರು ತಲೆಗೆ ಹಚ್ಚಲು ಉಪಯೋಗಿಸುತ್ತಾರೆ,* *ಮಲ್ಲಿಗೆಯನ್ನು ಅನೇಕ ಔಷಧಗಳಲ್ಲಿ ಉಪಯೋಗಿಸುತ್ತಾರೆ,* *ಮಕ್ಕಳ ತಲೆಯಲ್ಲಿ ನ ಹೊಟ್ಟನ್ನು (Dandruff) ಹೋಗಲಾಡಿಸಲು ಇಕ್ಸೋರಾ ಕೋಸೀನಿಯಾ (Ixora Cocaine) ವನ್ನು ಉಪಯೋಗಿಸುವರು.*


ತುಳಸಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ, ಮಧುಮೇಹಕ್ಕೆ ಬಿಲ್ವಪತ್ರೆಯನ್ನು ಉಪಯೋಗಿಸುತ್ತಾರೆ, ಈ ರೀತಿಯಾಗಿ ಅದೆಷ್ಟೋ ಉಪಯೋಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಪ್ರಾಚೀನ ಕಾಲದವರು ಮನೆಯ ಮುಂದೆ ಅನೇಕ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ಬೆಳೆಸಿತ್ತಿದ್ದರು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑