Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೧:ಮನೆಯ ಮುಖ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಏಕಿರಬೇಕು ?

Posted date: 27 Aug, 2019

Powered by:     Yellow and Red

ತಾಳೆಯೋಲೆ ೨೧:ಮನೆಯ ಮುಖ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಏಕಿರಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ಮನೆಯ ಮುಖ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಏಕಿರಬೇಕು ?*


ವಾಸ್ತು ಪ್ರಕಾರವಾಗಿ ಮನೆಯ ಮುಖ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು. ಈ ಎರಡು ದಿಕ್ಕಿಗೆ ಏಕಿರಬೇಕು ? ಎಂದು ಪ್ರಶ್ನೆ ಮೂಡುವುದು ಸಹಜ.

ಅನುಭವ ಪೂರ್ವಕವಾಗಿ ತಿಳಿಯುವುದೇನೆಂದರೆ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ನಿರ್ಮಿಸಿದ ಮನೆಗಳಿಂದ ಅನೇಕ ರೀತಿಯ ಉಪಯೋಗಗಳಿವೆ ಎಂದು ಈ ದಿಕ್ಕಿನಲ್ಲಿ ಬಾಗಿಲಿರುವ ಮನೆಗಳಲ್ಲಿ ಶಾಂತಿ ಮತ್ತು ಸಂತೋಷ ಕೂಡಿರುತ್ತದೆ ಎಂದು ನಿರೂಪಿತವಾಗಿದೆ.


ದಕ್ಷಿಣ ಭಾರತದಲ್ಲಿ ಈ ರೀತಿಯಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. *ಮಳೆ ಬೀಳುವ ರೀತಿ, ಗಾಳಿ ಬೀಸುವ ದಿಕ್ಕು, ಮತ್ತು ಸೂರ್ಯನ ಕಿರಣಗಳು ಪ್ರಸರಿಸುವ ದಿಕ್ಕುಗಳ ಆಧಾರದ* ಮೇಲೆ ವಾಸ್ತು ಗೃಹ ನಿರ್ಮಾಣ ದ ವಿಧಾನವನ್ನು ತಿಳಿಸುತ್ತದೆ.


ವಾತಾವರಣದ ಮಾಲಿನ್ಯದಿಂದ *ಓಜೋನ್ ಪದರ* ವೂ ಕ್ಷೀಣಿಸುವ ಅವಕಾಶ ಹೆಚ್ಚಿರುವುದರಿಂದ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮುಖ ದ್ವಾರವಿದ್ದರೆ *ನೇರಳೆ ಕಿರಣಗಳು* ನೇರವಾಗಿ ಭೂಮಿಗೆ ತಾಕುತ್ತವೆ. ಇದರಿಂದ ಮಾನವನಿಗೆ ತೊಂದರೆ ಉಂಟಾಗುತ್ತದೆ, ಅದೇ ಮನೆಯ ಮುಖವು ಪೂರ್ವ ಅಥವಾ ಉತ್ತರಕ್ಕಿದ್ದರೆ ನೇರಳೆ ಕಿರಣಗಳು ಪ್ರವೇಶಿಸುವ ಅವಕಾಶ ತುಂಬಾ ಕಡಿಮೆ ಇರುತ್ತದೆ ಹಾಗೂ ಮನೆಯ ಮುಂದೆ ಕುಳಿತುಕೊಳ್ಳುವುದಕ್ಕೂ ಅನುಕೂಲವಾಗಿರುತ್ತದೆ.


ಒಂದು ವೇಳೆ ಮನೆಯು ಉತ್ತರ ಮುಖಿಯಾಗಿದ್ದರೆ ಬೆಳಗಿನ ಸೂರ್ಯ ಕಿರಣಗಳು ಬೀಳುತ್ತವೆ, ಇದರಲ್ಲಿ ವಿಟಮಿನ್ ಗಳು ಹೇರಳವಾಗಿರುತ್ತವೆ. ನಮ್ಮ ಶರೀರದ ಮೇಲೆ ಈ ಕಿರಣಗಳು ಪಸರಿಸಿದಾಗ ಅರೋಗ್ಯ ವೃದ್ದಿಸಲಿದೆ, ಸೂರ್ಯನ ಕಿರಣಗಳು ಮನೆಯ ಒಳಗೆ ಪ್ರವೇಶಿಸುವಂತಿದ್ದರೇ ಹೊತ್ತೇರುವ ವರೆಗೂ ಸೋಮಾರಿಗಳಂತೆ ನಿದ್ರೆ ಹೋಗುವ ಸಮಸ್ಯೆಯಿಂದ ದೂರ ಇರಬಹುದು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑