Tel: 7676775624 | Mail: info@yellowandred.in

Language: EN KAN

    Follow us :


ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್

Posted date: 12 Sep, 2019

Powered by:     Yellow and Red

ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್

ಚನ್ನಪಟ್ಟಣ: ರಾಷ್ಟ್ರದಲ್ಲೇ ಪ್ರಥಮವಾಗಿ ಶಿಶುಗಳಿಗೆ ಹಾಕಲ್ಪಡುತ್ತಿರುವ *ರೋಟಾ* ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕೆಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಅಶೋಕ್ ವೆಂಕೋಬರಾವ್ ತಿಳಿಸಿದರು.

ಅವರು ಇಂದು ಮಗುವಿಗೆ *ರೋಟಾ* ಲಸಿಕೆ ಹಾಕುವ ಮೂಲಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ತಾಲ್ಲೂಕಿನ ಎಲ್ಲಾ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಪ್ರತಿ ಗುರುವಾರ ಲಸಿಕೆ ಹಾಕಲಾಗುತ್ತದೆ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ದಿನವೂ ಲಸಿಕೆ ಲಭ್ಯವಿದ್ದು ಒಂದು ಪ್ರತ್ಯೇಕ ಕೊಠಡಿಯಲ್ಲಿ ಲಸಿಕೆ ಹಾಕಲಾಗುವುದು ಮಕ್ಕಳ ಪೋಷಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.


ಮಕ್ಕಳ ವೈದ್ಯ ಡಾ ಮಂಜುನಾಥ ರವರು ಮಾತನಾಡಿ ಮಕ್ಕಳಲ್ಲಿ ಅತಿಸಾರ ಭೇದಿ ಆದರೆ ತಡೆಗಟ್ಟುವುದು ಕಷ್ಟಸಾಧ್ಯವಾಗಿತ್ತು, ಈ ಲಸಿಕೆ ಹಾಕಿದರೆ ಅತಿಸಾರ ಭೇದಿ ಆಗುವ ಸಾಧ್ಯತೆ ಬಹಳ ಕಡಿಮೆಯಾಗುವುದರಿಂದ ಎಲ್ಲಾ ಶಿಶುಗಳಿಗೂ *ಒಂದೂವರೆ, ಎರಡೂವರೆ ಮತ್ತು ಮೂರುವರೆ* ತಿಂಗಳಿಗೆ ಲಸಿಕೆ ಹಾಕಿಸುವ ಮೂಲಕ ಶಿಶುಗಳ ಆರೋಗ್ಯವನ್ನು ಸ್ಥಿರವಾಗಿ ಉಳಿಯುವಂತೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ, ಲ್ಯಾಬ್ ಪರಿಕ್ಷಕಿ ಸುಧಾ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑