Tel: 7676775624 | Mail: info@yellowandred.in

Language: EN KAN

    Follow us :


ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ !

Posted date: 24 Sep, 2019

Powered by:     Yellow and Red

ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ !

ಕುಂತೂರುದೊಡ್ಡಿ ಗ್ರಾಮದಿಂದ ರಾಂಪುರ ಗ್ರಾಮದ ಅಭಿವೃದ್ಧಿ ಕೆಲಸ !

ಚನ್ನಪಟ್ಟಣ: ಬೇವೂರು ಜಿಲ್ಲಾ ಪಂಚಾಯತಿ ಭಾಗ ೧

ಅಂದಿನ ಜಿಲ್ಲಾ ಪಂಚಾಯತಿ ಪರಿಕ್ಷಾರ್ಥ *ಇಂಜಿನಿಯರ್ ಶಂಕರ್* ತಾಲ್ಲೂಕಿನ ಎಲ್ಲಾ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲೂ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಒಂದೊಂದು ಕಾಮಗಾರಿಯಲ್ಲೂ ಆರಂಕಿಯ ಹಣ ನುಂಗಿದ್ದು *ನೂತನ ಬಕಾಸುರ* ನಾಗಿ ಹೊರಹೊಮ್ಮಿದ್ದಾನೆ.


*ಹೊಂಗನೂರು, ಮಳೂರು ಮತ್ತು ಕೋಡಂಬಳ್ಳಿ* ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ *ಏಳು ಅಂಕಿ* ಯ ಹಣವನ್ನು ನುಂಗಿದ್ದು *ಬೇವೂರು* ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿಯೂ *ಹತ್ತು ಲಕ್ಷ* ರೂ  ಆಜೂಬಾಜೂ ನುಂಗಿರುವ ಕಾಮಗಾರಿಗಳ ದಾಖಲೆಗಳಿವೆ, ಅಂದಿನ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ *ಕುಮಾರಸ್ವಾಮಿ, ಪರೀಕ್ಷಾರ್ಥ ಇಂಜಿನಿಯರ್ ಶಂಕರ್, ಆಯಾಯ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗಾದರರ ಜೊತೆಗೆ ಸಂಬಂಧಿಸಿದ ಜಿಲ್ಲಾ ಪಂಚಾಯತಿ ಸದಸ್ಯರನ್ನು* ಹೊಣೆಗಾರರನ್ನಾಗಿಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ಒತ್ತಾಯಿಸಿದ್ದಾರೆ.


ಬೇವೂರು ಜಿಲ್ಲಾ ಪಂಚಾಯತಿ ಯ *ತಿಟ್ಟಮಾರನಹಳ್ಳಿ ಗ್ರಾಮ ಘಟಾನುಘಟಿ ರಾಜಕಾರಣಿಗಳ ತವರೂರು*. ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೇ ಅರ್ಧಂಬರ್ಧ ಕಳಪೆ ಕಾಮಗಾರಿ ಮಾಡಿ ಹಣ ದೋಚಿರುವುದು ಬೆಳಕಿಗೆ ಬಂದಿದೆ.


೧) ಕುಂತೂರುದೊಡ್ಡಿ ಎಸ್ ಸಿ ಕಾಲೋನಿಯಿಂದ ರಾಂಪುರ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ *೩೯೦ ಮೀಟರ್ ಉದ್ದದ ಮತ್ತು ೩.೭೫ ಮೀಟರ್ ಅಗಲದ ರಸ್ತೆ* ಎಂದು ಬಿಲ್ ನಲ್ಲಿ ನಮೂದಿಸಿದ್ದು ಅಷ್ಟು ಅಗಲದ ರಸ್ತೆ ಇಲ್ಲವೇ ಇಲ್ಲ.


ಈ ಕಾಮಗಾರಿಯ ಅಂದಾಜು ವೆಚ್ಚ *೩,೫೦,೦೦೦* ರೂಪಾಯಿಗಳಾಗಿದ್ದು *೩,೪೯,೨೧೦* ರೂಪಾಯಿಗಳನ್ನು *ಗುತ್ತಿಗೆದಾರ ಎನ್ ಪಿ ಸುಧಾಕರ್* ಎಂಬುವವರ ಹೆಸರಿನಲ್ಲಿ ಪಡೆದುಕೊಂಡಿದ್ದು ಕನಿಷ್ಠ *೨,೦೦,೦೦೦* ರೂಪಾಯಿಗಳಿಗೂ ಹೆಚ್ಚು ಹಣ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ.


೨) ಈ ರಸ್ತೆ ಕಾಮಗಾರಿಗೆ ಸಂಬಂಧಿಸಿ ಲಗತ್ತಿಸಿರುವ ಪೋಟೋಗಳು ಈ ರಸ್ತೆಗೆ ಸಂಬಂಧಿಸಿದವುಗಳಲ್ಲ.


೩) ಈ ರಸ್ತೆ ಕಾಮಗಾರಿಯ ಹೆಸರಿನಲ್ಲಿ ಪ್ರತಿ ವರ್ಷವೂ ಒಂದೊಂದು ಅನುದಾನದಲ್ಲಿ ಹಣ ಪಡೆದು ರಸ್ತೆ ಅಭಿವೃದ್ಧಿ ಮಾಡದೇ ಹಣ ದೋಚುವುದನ್ನೇ ಕಾಯಕ ಮಾಡಿಕೊಂಡಿದ್ದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑