Tel: 7676775624 | Mail: info@yellowandred.in

Language: EN KAN

    Follow us :


ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ !

Posted date: 27 Sep, 2019

Powered by:     Yellow and Red

ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ !

ಚನ್ನಪಟ್ಟಣ: ಬೇವೂರು ಜಿಲ್ಲಾ ಪಂಚಾಯತಿ ಭಾಗ ೪

ಅಂದಿನ ಜಿಲ್ಲಾ ಪಂಚಾಯತಿ ಪರಿಕ್ಷಾರ್ಥ *ಇಂಜಿನಿಯರ್ ಶಂಕರ್*ತಾಲ್ಲೂಕಿನ ಎಲ್ಲಾ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲೂ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಒಂದೊಂದು ಕಾಮಗಾರಿಯಲ್ಲೂ ಆರಂಕಿಯ ಹಣ ನುಂಗಿದ್ದು *ನೂತನ ಬಕಾಸುರ* ನಾಗಿ ಹೊರಹೊಮ್ಮಿದ್ದಾನೆ.

*ಹೊಂಗನೂರು, ಮಳೂರು ಮತ್ತು ಕೋಡಂಬಳ್ಳಿ* ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ *ಏಳು ಅಂಕಿ* ಯ ಹಣವನ್ನು ನುಂಗಿದ್ದು *ಬೇವೂರು* ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿಯೂ*ಹತ್ತು ಲಕ್ಷ* ರೂ  ಆಜೂಬಾಜೂ ನುಂಗಿರುವ ಕಾಮಗಾರಿಗಳ ದಾಖಲೆಗಳಿವೆ, ಅಂದಿನ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ *ಕುಮಾರಸ್ವಾಮಿ, ಪರೀಕ್ಷಾರ್ಥ ಇಂಜಿನಿಯರ್ ಶಂಕರ್, ಆಯಾಯ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗಾದರರ ಜೊತೆಗೆ ಸಂಬಂಧಿಸಿದ ಜಿಲ್ಲಾ ಪಂಚಾಯತಿ ಸದಸ್ಯರನ್ನು*ಹೊಣೆಗಾರರನ್ನಾಗಿಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ಒತ್ತಾಯಿಸಿದ್ದಾರೆ.

ಬೇವೂರು ಜಿಲ್ಲಾ ಪಂಚಾಯತಿ ಯ *ತಿಟ್ಟಮಾರನಹಳ್ಳಿ ಗ್ರಾಮ ಘಟಾನುಘಟಿ ರಾಜಕಾರಣಿಗಳ ತವರೂರು*. ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೇ ಅರ್ಧಂಬರ್ಧ ಕಳಪೆ ಕಾಮಗಾರಿ ಮಾಡಿ ಹಣ ದೋಚಿರುವುದು ಬೆಳಕಿಗೆ ಬಂದಿದೆ.

ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ *ಪಟ್ಲು ಗ್ರಾಮ*ದ ಮುಖ್ಯ ರಸ್ತೆಯಿಂದ ಎಸ್ ಸಿ‌ ಕಾಲೋನಿ ಗೆ ಹೋಗುವ ರಸ್ತೆ ಅಭಿವೃದ್ಧಿ ಗೆ *ಜಿಲ್ಲಾ ಪಂಚಾಯತಿ ಯ ಅನುದಾನದಲ್ಲಿ ಗುತ್ತಿಗೆದಾರ ಸೋಮಶೇಖರಯ್ಯ* ನ ಹೆಸರಿನಲ್ಲಿ *೨,೦೦,೦೦೦* ರೂ ಬಿಲ್ ಮಾಡಿದ್ದು *೧,೦೦,೦೦೦* ರೂ ನಷ್ಟ ಉಂಟಾಗಿದೆ ಎಂದು ದೂರಿದ್ದಾರೆ.

ಬಿಲ್ ನಲ್ಲಿ *೨೨೪ ಮೀಟರ್ ಉದ್ದ ಮತ್ತು ೩.೭೫ ಮೀಟರ್ ಅಗಲ* ನಮೂದಿಸಿದ್ದು ರಸ್ತೆ ಇರುವುದೇ *೧೦೦ ಮೀಟರ್* ಎಂದು ದಾಖಲೆಗಳ ಸಮೇತ ನಿರೂಪಿಸಿದ್ದಾರೆ.

ರಾಮನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಗೆ ದೂರು ನೀಡಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


*ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯ ಅಭಿವೃದ್ಧಿ ಅಧಿಕಾರಿ ಕಾವ್ಯಾ ರವರನ್ನು ಈ ಮೇಲಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ ಬೇರೆ ಇಲಾಖೆಯ ಅನುದಾನದಲ್ಲಿ ಕಾಮಗಾರಿ ಮಾಡುವ ಮುನ್ನಾ ನಮ್ಮ ಗಮನಕ್ಕೆ ತಂದಿಲ್ಲ, ಕಾಮಗಾರಿ ಮಾಡಿರುವುದು ನಮ್ಮ ಗಮನಕ್ಕೆ ಬಂದಿಲ್ಲ, ನಮ್ಮಿಂದ ಯಾವುದೇ ನಿರಪೇಕ್ಷಣಾ ಪತ್ರವನ್ನು ಅವರು ಪಡೆದಿಲ್ಲ ಮೇಲಾಗಿ ಈ ಕಾಮಗಾರಿಗಳನ್ನು ನರೇಗಾ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಮಾಡಲಾಗಿದೆ ಎಂದರು.*

*ಆಯಾಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಇಲಾಖೆಯ ಅನುದಾನದಿಂದ ಕಾಮಗಾರಿ ಮಾಡಿದರೂ ಗ್ರಾಮ ಸಭೆಯ ಮುಂದೆ ಮಂಡಿಸಿ ಅನುಮತಿ ಪಡೆದುಕೊಳ್ಳಬೇಕು, ಕಾಮಗಾರಿ ಪೂರ್ಣಗೊಂಡ  ನಂತರ ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳಬೇಕು, ಯಾವುದನ್ನೂ ಮಾಡಿಲ್ಲ ಎಂದಾದರೆ ಅವರು ಕಾಮಗಾರಿ ಮಾಡಿಲ್ಲ ಎಂಬುದು ಸಾಬೀತಾಗುತ್ತದೆ.*

*ರಾಮಕೃಷ್ಣ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಚನ್ನಪಟ್ಟಣ.*


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑