ಅವರು ನಗರದ ಮಹದೇಶ್ವರ ನಗರದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತೆಯ ರಥ ಮತ್ತು ಜನತಾ ನ್ಯಾಯಾಲಯದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್ ನಟರಾಜು ರವರು ಮಾತನಾಡಿ ನಿಮಗೆ ಬೇಕಾದ ವಸ್ತುಗಳನ್ನು ನಿಮಗಿಷ್ಟವಾದ ಆಯ್ಕೆಗಳು ಇದ್ದರೆ ಮಾತ್ರ ತೆಗೆದುಕೊಳ್ಳಬೇಕು, ಮಾರುವವನ ಮತ್ತು ತಯಾರಕನ ಇಷ್ಟದ ವಸ್ತು ಕೊಳ್ಳಬೇಕಿಲ್ಲ, ನಾವು ಏನು ಪದಾರ್ಥ ಕೊಂಡರು ಅದರಿಂದ ಏನು ಉಪಯೋಗ ಎನ್ನುವುದನ್ನು ಮನಗಾಣಬೇಕು, ಕಿರಾಣಿ ಅಂಗಡಿಯಲ್ಲಿ ಒಂದು ಪದಾರ್ಥ ಖರೀದಿಸಿದರೆ ಮಾಮೂಲಿ ಬೆಲೆ, ಪ್ರವಾಸಿ ತಾಣ ಇನ್ನಿತರೆ ತಾಣಗಳಲ್ಲಿ ಗರಿಷ್ಠ ಮಟ್ಟದ ಹಣ ವಸೂಲಿ ಮಾಡುತ್ತಾರೆ ಗ್ರಾಹಕರು ಪ್ರಶ್ನಿಸುವುದಿಲ್ಲ, ಸಣ್ಣ ಪದಾರ್ಥಗಳಿಂದ ಹಿಡಿದು ಕಾರು, ಬೈಕು, ಕ್ಲಿನಿಕ್ ಯಾವುದೇ ಪದಾರ್ಥ ಮತ್ತು ಸೇವೆ ಗಳ ಮೂಲ ಬೆಲೆಗಿಂತ ಹೆಚ್ಚು ಕೇಳಿದರೆ ನೀವು ಕೇಳಬಹುದು ಜೊತೆಗೆ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದರು. ನೀವು ಯಾವ ಸ್ಥಳದಲ್ಲಿ ವಸ್ತು ಖರೀದಿ ಮಾಡಿರುತ್ತೀರೋ ಆ ನಗರದ ವ್ಯಾಪ್ತಿಯಲ್ಲಿ ಮಾತ್ರ ದೂರು ನೀಡಬೇಕು, ಕೆಲವು ವಸ್ತುಗಳಿಗೆ ಎರಡು ವರ್ಷಗಳು ಕೆಲವು ವಸ್ತುಗಳಿಗೆ ಎರಡು ವರ್ಷಗಳ ನಂತರವೂ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿ ವಕೀಲರಿಲ್ಲದೆಯೂ ನೀವೆ ವಾದ ಮಾಡಿ ಗೆಲ್ಲಬಹುದು, ಖರೀದಿಸುವ ಪದಾರ್ಥಗಳ ಸಂಪೂರ್ಣ ದಾಖಲೆ ಸಲ್ಲಿಸಬೇಕು ಎಂದರು.
ವಕೀಲ ಹೆಚ್ ಕೃಷ್ಣೇಗೌಡರು ಮೋಟಾರು ವಾಹನ ಕಾಯ್ದೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಕಾಂತರಾಜು ರವರು ಪೌಷ್ಟಿಕಾಂಶ ಆಹಾರದ ಬಗ್ಗೆ ಮತ್ತು ನಿಲಯ ಪಾಲಕ ಎನ್ ಮೋಹನ್ ರವರು ವಿದ್ಯಾರ್ಥಿ ಗಳ ಕಾನೂನು ತಿಳುವಳಿಕೆ ಬಗ್ಗೆ ಉಪನ್ಯಾಸ ನೀಡಿದರು.
ಕಾನೂನು ಸಾಕ್ಷರತೆಯ ರಥ ಮತ್ತು ಜನತಾ ನ್ಯಾಯಾಲಯದ ಕಾರ್ಯಕ್ರಮವನ್ನು ಚನ್ನಪಟ್ಟಣ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ ಇಲಾಖೆ, ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಬೆಳಿಗ್ಗೆ ೯:೩೦ ರಲ್ಲಿ ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡು ಎಲೆಕೇರಿ ಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂತರ ಬಿಸಿಎಂ ಹಾಸ್ಟೆಲ್ ನಲ್ಲಿ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶೆ ಕು ಬಿ ಟಿ ಅನ್ನಪೂರ್ಣೇಶ್ವರಿ, ಸಹಾಯಕ ಸರ್ಕಾರಿ ಅಭಿಯೋಜಕಿ ಎಲ್ ರೂಪ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ ವಿ ಗಿರೀಶ್, ಪದಾಧಿಕಾರಿಗಳಾದ ಕೆ ಆರ್ ರವಿ, ಸಿ ಎಲ್ ಶಿವರಾಜು, ಶಿಕ್ಷಣ ಇಲಾಖೆಯ ಇಸಿಓ ತಮ್ಮಣ್ಣ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಶ್ನೋತ್ತರ ದ ಮೂಲಕ ತಮ್ಮ ಕಾನೂನು ತಿಳುವಳಿಕೆ ಹೆಚ್ಚಿಸಿಕೊಂಡಿದ್ದಲ್ಲದೆ ಸಮಸ್ಯೆಗಳನ್ನು ಪರಿಹರಿಸಿಕೊಂಡರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು