Tel: 7676775624 | Mail: info@yellowandred.in

Language: EN KAN

    Follow us :


ಮಳೆಯಲ್ಲಿ ಕೊಚ್ಚಿಹೋದ ಬದುಕು, ನೆರವಿನ ಹಸ್ತಕ್ಕಾಗಿ ಕಾದು ನಿಂತ ವಯೋವೃದ್ದೆ

Posted date: 10 Oct, 2019

Powered by:     Yellow and Red

ಮಳೆಯಲ್ಲಿ ಕೊಚ್ಚಿಹೋದ ಬದುಕು, ನೆರವಿನ ಹಸ್ತಕ್ಕಾಗಿ ಕಾದು ನಿಂತ ವಯೋವೃದ್ದೆ

ಚನ್ನಪಟ್ಟಣ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಲವಾರು ಜನಸಾಮಾನ್ಯರ ಬದುಕು ಕೊಚ್ಚಿ ಹೋಗಿದೆ, ನಗರದ ಸಾತನೂರು ರಸ್ತೆಯ ಲಾಳಾಘಟ್ಟ ವೃತ್ತದಲ್ಲಿರುವ ಭಾಗ್ಯಮ್ಮ ಉ ಭಾಗ್ಯಲಕ್ಷ್ಮಿ ರವರ ಮನೆಯ ಒಂದು ಭಾಗದ ಗೋಡೆ ಸಂಪೂರ್ಣ ಕುಸಿದಿದ್ದು ಬಾಗಿಲಿದ್ದೂ ಬಯಲಿನಂತಾಗಿದೆ.


ವಾರಸುದಾರರಿಲ್ಲದ ವೃದ್ದೆ ಭಾಗ್ಯಮ್ಮ ರವರಿಗೆ ಹತ್ತಿರದ ಸಂಬಂಧಿಗಳು ಯಾರು ಇಲ್ಲ, ಕೆಲ ಸಂಬಂಧಿಗಳಿದ್ದರೂ ಇದ್ದು ಇಲ್ಲದಂತಿದ್ದಾರೆ, ಸ್ಥಳೀಯ ನಗರಸಭೆಯ ಸದಸ್ಯರಾಗಲಿ, ರಾಜಕೀಯ ಮುಖಂಡರಾಗಲಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಾಗಲಿ ಇದುವರೆಗೆ ಭೇಟಿ ನೀಡಿಲ್ಲ, ನನಗೆ ಏನೂ ಮಾಡಬೇಕು ? ಯಾರ ಬಳಿ ಹೋಗಬೇಕೆಂಬುದು ಗೊತ್ತಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.


ಒಂದು ಭಾಗದ ಗೋಡೆ ಬಹುತೇಕ ಕುಸಿದಿದ್ದು ಮೇಲಿನ ಹೆಂಚುಗಳು ಮತ್ತು ತೀರುಗಳು (ಮರ) ಸಹ ಬೀಳುವ ಹಂತದಲ್ಲಿವೆ, ವೃದ್ಯಾಪ್ಯ ವೇತನದಲ್ಲಿ ಬದುಕುತ್ತಿರುವ ಭಾಗ್ಯಮ್ಮ ನವರಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಪರಿಹಾರ ಕಲ್ಪಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


*ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಸೂಕ್ತ ಪರಿಹಾರ ಕಲ್ಪಿಸಿಕೊಡುತ್ತೇವೆ.*

*ಸುದರ್ಶನ್ ತಹಶಿಲ್ದಾರ್ ಚನ್ನಪಟ್ಟಣ*


*ನಗರಸಭೆಯಿಂದ ಪರಿಹಾರ ಕೊಡಲು ಬರುವುದಿಲ್ಲ, ಸೂಕ್ತ ದಾಖಲೆ ನೀಡಿದರೆ ಮಾನವೀಯತೆ ದೃಷ್ಟಿಯಿಂದ ಮುಂದಿನ ಸಭೆಯಲ್ಲಿ ಚರ್ಚಿಸಿ ಕನಿಷ್ಠ ಪರಿಹಾರ ವಿತರಿಸಲು ಪ್ರಯತ್ನ ಮಾಡುತ್ತೇನೆ.*

*ಮಾಯಣ್ಣಗೌಡ ಪ್ರಭಾರ ಪೌರಾಯುಕ್ತ*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑