Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೫೭: ಹಣೆಯ ಮೇಲೆ ತಿಲಕವನ್ನು‌ ಧರಿಸುವುದು ಅಗತ್ಯವೇ ?

Posted date: 10 Oct, 2019

Powered by:     Yellow and Red

ತಾಳೆಯೋಲೆ ೫೭: ಹಣೆಯ ಮೇಲೆ ತಿಲಕವನ್ನು‌ ಧರಿಸುವುದು ಅಗತ್ಯವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಹಣೆಯ ಮೇಲೆ ತಿಲಕವನ್ನು‌ ಧರಿಸುವುದು ಅಹತ್ಯವೇ ?


ಆಧ್ಯಾತ್ಮಿಕ ವಿಕಾಸವನ್ನು ಹಣೆಯ ಮೇಲಿರುವ ತಿಲಕ ತಿಳಿಸುತ್ತದೆ. ಎರಡು ಕಣ್ಣಿನ ಉಬ್ಬುಗಳ‌ ನಡುವೆ ಪರಮ ಶಿವನ ಮೂರನೆಯ ಕಣ್ಣು ಇರುವ ಕಡೆ ನಾವು ತಿಲಕವನ್ನು ಇಟ್ಟುಕೊಳ್ಳುತ್ತೇವೆ. *ಕುಂಕುಮ, ಗಂಧ ಲೇಪನ ಮತ್ತು ವಿಭೂತಿಯನ್ನು ತಿಲಕ (ಬೊಟ್ಟು) ಎಂದು ಕರೆಯುತ್ತೇವೆ*. ಈ ತಿಲಕವನ್ನು ಹಣೆಯ ಮೇಲಿಡುವುದು ಹಿಂದೂ ಸಂಪ್ರದಾಯ ಎಂದು ಭಾವಿಸಿದರೂ ಈ ರೀತಿಯಾಗಿ ಬೊಟ್ಟು ಇಟ್ಟುಕೊಂಡಿರುವರ ಮೇಲೆ ಅನುಕೂಲ ಪ್ರಭಾವಗಳು ಇರುತ್ತವೆ.


*ಶರೀರದಲ್ಲಿನ ಐದನೆಯ ಅಥವಾ ಆರನೆಯ ಶಕ್ತಿ ಕೇಂದ್ರೀಕೃತವಾದ ಭೃಕಟಿ ಪ್ರಾಂತ್ಯದಲ್ಲಿ ಬೊಟ್ಟನ್ನು ಇಟ್ಟುಕೊಳ್ಳುತ್ತೇವೆ. ಮೂಗಿನ ದೂಲಕ್ಕೆ ಮೇಲೆ ಎರಡು ಕಣ್ಣು ಉಬ್ಬುಗಳ ನಡುವೆ ಶಕ್ತಿ ಕೇಂದ್ರೀಕೃತವಾಗಿದೆ. ಮಾನಸಿಕ ವೈದ್ಯರು ಚಿಕಿತ್ಸೆ ಮಾಡುವಾಗ ತನ್ನ ದೃಷ್ಟಿಯನ್ನು ಈ ಕೇಂದ್ರದ ಮೇಲೆ ಲಗ್ನವಿಟ್ಟು ಸಮ್ಮೋಹನವನ್ನು ಮಾಡುತ್ತಾರೆ. ಭೃಕುಟಿ ಯಲ್ಲಿ ಕುಂಕುಮವನ್ನು ಇಟ್ಟುಕೊಳ್ಳುವುದರಿಂದ ಅದು ಸೂರ್ಯನ ಕಿರಣಗಳಲ್ಲಿನ ಔಷಧೀಯ ತತ್ವಸಾರವನ್ನು ಗ್ರಹಿಸಿ ಮೆದುಳಿಗೆ ಸರಬರಾಜು ಮಾಡುತ್ತದೆ.*


ಭೃಕಟಿ ಪ್ರಾಂತ್ಯದಲ್ಲಿ ಗಂಧಲೇಪನ, ಕುಂಕುಮ ಮತ್ತು ವಿಭೂತಿಯನ್ನು ಬೆಳಿಗ್ಗೆ ಮತ್ತು ಸಾಯಂಕಾಲಗಳಲ್ಲಿ ಧರಿಸುವುದರಿಂದ ಬಹಳಷ್ಟು *ರೋಗಾಣುಗಳು ನಾಶ ಹೊಂದಿ ನಾಡಿ ವ್ಯವಸ್ಥೆ  ಚುರುಕಾಗಿ* ಇರುತ್ತದೆಂದು ಸೂರ್ಯ ಕಿರಣಗಳಿಗೆ ಮತ್ತು ನಮ್ಮ ಶರೀರದ ನಡುವೆ ಇರುವ ಅಧ್ಯಯನವನ್ನು ಮಾಡುವುದರ ಮುಖಾಂತರ ತಿಳಿದಿದೆ.


ಗಂಧವನ್ನು ಮತ್ತು ವಿಭೂತಿಯನ್ನು ಧರಿಸುವುದಕ್ಕೆ ಕೆಲವು ಪದ್ದತಿಗಳಿವೆ. ಬೆಳಗ್ಗಿನ ಸಮಯದಲ್ಲಿ ವಿಭೂತಿಯನ್ನು ನೀರಿನಲ್ಲಿ ಒದ್ದೆ ಮಾಡಿ ಹಚ್ಚಿಕೊಳ್ಳಬೇಕು, ಹಾಗೆಯೇ ಮಧ್ಯಾಹ್ನ ದ ವೇಳೆ ಸ್ವಲ್ಪ ಗಂಧವನ್ನು ಕಲೆಸಿ ವಿಭೂತಿಯನ್ನು ಹಚ್ಚಿಕೊಳ್ಳಬೇಕು. ಮಹಿಳೆಯರು ಪುಡಿ ವಿಭೂತಿಯನ್ನು ಮಾತ್ರ ಹಚ್ಚಿಕೊಳ್ಳಬೇಕೆಂಬ ನಿಯಮವಿದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑