Tel: 7676775624 | Mail: info@yellowandred.in

Language: EN KAN

    Follow us :


ಭಾರತ ಜಗತ್ತಿನ ಜನಕ, ಜಗತ್ತಿಗೆ ಪಾರಂಪರಿಕ ವೈದ್ಯಕೀಯ ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು ನಿರ್ಮಲಾನಂದ ಶ್ರೀ

Posted date: 10 Oct, 2019

Powered by:     Yellow and Red

ಭಾರತ ಜಗತ್ತಿನ ಜನಕ, ಜಗತ್ತಿಗೆ ಪಾರಂಪರಿಕ ವೈದ್ಯಕೀಯ ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು ನಿರ್ಮಲಾನಂದ ಶ್ರೀ

ಭಾರತ ಜಗತ್ತಿನ ಜನಕ, ಭಾರತ ಇಲ್ಲದಿದ್ದರೆ ಜಗತ್ತೇ ಇಲ್ಲ, ಪಾರಂಪರಿಕ ವೈದ್ಯವನ್ನು ಹೇಳಿಕೊಟ್ಟವರು ಭಾರತೀಯರು, ಜಗತ್ತಿಗೆ ಲೆಕ್ಕ ಬರೆದಿಡಲು ಅಂಕಿ ಅಂಶಗಳನ್ನು ಹೇಳಿಕೊಟ್ಡವರು ನಮ್ಮ ದೇಶದ ಮಹಾನ್ ಇತಿಹಾಸಕಾರರು, ನಮ್ಮ ಆರೋಗ್ಯ ಗಿಡ ಮೂಲಿಕೆಗಳಲ್ಲಿದೆ ಎಂದು ಜಗತ್ತಿಗೆ ಸಾರಿದವರು ನಮ್ಮ ಭಾರತೀಯ ಋಷಿ ಮುನಿಗಳು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ದ ಪೀಠಾಧ್ಯಕ್ಷ ಡಾ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಅವರು ಅರ್ಚಕರಹಳ್ಳಿಯ ಶಾಖಾ ಮಠದ ಬಿಜಿಎಸ್ ವಲ್ಡ್೯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೧೩ ನೇ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ಹಾಗೂ ಮೂಲಿಕಾ ಉತ್ಸವ-೨೦೧೯ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.


ನಡೆದಾಡಿದರೆ ಆರೋಗ್ಯ ಎಂದು ಭಾರತೀಯ ಪಾರಂಪರಿಕ ಆಯುರ್ವೇದ ವೈದ್ಯರು ಸಾರಿದರೆ ಪಾಶ್ಚಿಮಾತ್ಯ ಹಾಗೂ ನಮ್ಮ ಇಂಗ್ಲಿಷ್ ವೈದ್ಯರು ವಿಶ್ರಾಂತಿ (ರೆಸ್ಟ್) ಪಡೆದರೆ ಆರೋಗ್ಯ ಎನ್ನುತ್ತಾರೆ. ಚಿಕಿತ್ಸೆ ಗೆ ಬಗ್ಗದ ಆರೋಗ್ಯ ಪ್ರೀತಿಗೆ ಬಗ್ಗುತ್ತದೆ. ಧನ್ವಂತರಿ ಚಿಕಿತ್ಸೆ ಜಗತ್ತಿಗೆ ಪೂರಕವಾಗಿ ನಿಂತಿದೆ, ಭಾರತ ಜಗತ್ತಿನ ನಾಗರೀಕತೆಯ ತೊಟ್ಟಿಲು ಎಂದು ಪಾಶ್ಚಿಮಾತ್ಯ ದೇಶದ ಇತಿಹಾಸಕಾರರು ಹೊಗಳಿದ್ದಾರೆ, ಜಗತ್ತಿಗೆ ಅಕ್ಷರ ಬಾರದ ಸಮಯದಲ್ಲಿ ನಳಂದ ಮತ್ತು ತಕ್ಷಶಿಲಾ ವಿಶ್ವ ವಿದ್ಯಾಲಯ ಇದ್ದ ದೇಶ ನಮ್ಮದು, ಇಡೀ ಜಗತ್ತಿಗೆ ಗಣಿತ ಮತ್ತು ವಿಜ್ಞಾನವನ್ನು ಕೊಡುಗೆಯಾಗಿ ನೀಡಿದ ನಮ್ಮ ಭಾರತ, ಪ್ರಕೃತಿಯಲ್ಲಿ ಸಿಗುವ ವಸ್ತುಗಳೆಲ್ಲವೂ ನಮ್ಮ ದೇಹಕ್ಕೆ ಪೂರಕವಾಗಿವೆ, ಪ್ರಕೃತಿಯ ನಿಯಮಾನುಸಾರ ನಡೆದರೆ ನೂರು ಸಂವತ್ಸರಗಳನ್ನು ಲೀಲಾಜಾಲವಾಗಿ ದಾಟಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನ ಗೌರವ ಉಪಾಧ್ಯಕ್ಷ ಗಾ ನಂ ಶ್ರೀಕಂಠಯ್ಯ ಮಾತನಾಡಿ ಮೂಲಿಕಾ ವೈದ್ಯಕೀಯ ಚಿಕಿತ್ಸೆಯನ್ನು ನಾವು ಸಂಪೂರ್ಣವಾಗಿ ಅಳವಡಿಸಿಕೊಳ್ಳಬೇಕು, ಆಯುಷ್ ವೈದ್ಯಕೀಯ ಕಾರ್ಯಕರ್ತರನ್ನಾಗಿ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ನೇಮಕ ಮಾಡಿಕೊಂಡು ಪಾರಂಪರಿಕ ವೈದ್ಯಕೀಯಕ್ಕೆ ಹೆಚ್ಚು ಒತ್ತು ನೀಡಬೇಕು, ಬ್ರಿಟಿಷರಿಂದ ಬಳುವಳಿಯಾಗಿ ಪಡೆದ ಇಂಗ್ಲಿಷ್ ವೈದ್ಯಕ್ಕಿಂತಲೂ ನಮ್ಮ ಪುರಾತನ ಪಾರಂಪರಿಕ ಔಷಧ ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದರು.


ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಡಿ ಬಿ ನಾಯಕ್ ಮಾತನಾಡಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಇದೆ, ಪಾರಂಪರಿಕ ವೈದ್ಯ ದಲ್ಲಿ ಸ್ಪರ್ಧೆಗಿಂತ ಜ್ಞಾನ ಮುಖ್ಯವಾದದ್ದು ಅದು ನಮ್ಮ ವೈದ್ಯ ರತ್ನ ರಲ್ಲಿದೆ. ಇಂಗ್ಲಿಷ್ ಔಷಧಗಳ ಜೊತೆಗೆ ಪಾರಂಪರಿಕ ಆಯುರ್ವೇದ ಔಷಧ ಗಳು ಮುಖಾಮುಖಿಯಾಗಬೇಕಾಗಿದೆ.

ಇಂದು ಪ್ರಕೃತಿ ಮತ್ತು ವಿಜ್ಞಾನ ಗಳು ಸಂಘರ್ಷಕ್ಕೆ ಇಳಿದಿವೆ ಎಂದು ವಿಷಾದಿಸಿದರು.

ಮಹಾಮಾರಿ ಏಡ್ಸ್ ಮತ್ತು ಕ್ಯಾನ್ಸರ್ ನಂತಹ ಖಾಯಿಲೆಗಳಿಗೂ ನಮ್ಮಲ್ಲಿ ಔಷಧೋಪಚಾರ ಇದೆ ಆದರೆ ಪ್ರಚಾರದ ಕೊರಯೆಯಿಂದ ಜನರ ಅರಿವು ಕಡಿಮೆಯಾಗುತ್ತಿರುವುದರಿಂದ ಪಾರಂಪರಿಕ ವೈದ್ಯ ಮೂಲೆಗುಂಪಾಗುತ್ತಿರುವುದು ವಿಷಾದನೀಯ. ಹೆಚ್ಚು ಜನಸಂಖ್ಯೆ ಮತ್ತು ಅಭಿವೃದ್ಧಿ ದೇಶಗಳಲ್ಲಿ ಪ್ರಚಾರ ಮತ್ತು ಅಧ್ಯಯನ ಕೈಗೊಳ್ಳುವ ಮೂಲಕ ಉಳಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ರಾಮನಗರ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಗಾಣಕಲ್ ನಟರಾಜು ಮತ್ತು ಸನ್ಮಾನಿತರು ಮಾತನಾಡಿದರು.

ತುರುವೇಕೆರೆ ಯ ರೆಹನಾ ಬೇಗಂ, ಬಸವನಬಾಗೇವಾಡಿ ಯ ದುರಗಪ್ಪ ನರಸಪ್ಪ, ರಾಮನಗರ ದ ಮೂಡಲಪ್ಪ, ರಾಯಚೂರಿನ ನೀಲಕಂಠಪ್ಪ ಮತ್ತು ಹಾನಗಲ್ ನ ಗಣಪತಿ ಹೈದ ರವರಿಗೆ ರಾಜ್ಯ ಮಟ್ಟದ ವೈದ್ಯಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಪ್ರಸನ್ನನಾಥ ಸ್ವಾಮೀಜಿ, ಅನ್ನದಾನೇಶ್ವರ ನಾಥ ಸ್ವಾಮೀಜಿ, ತಿರುವೆಂಕಟ ಜೀಯರ್, ಮೂರ್ತಿ ಸ್ವಾಮೀಜಿ ಸೇರಿದಂತೆ ಅನೇಕ ಮಠದ ಸ್ವಾಮಿಗಳು, ಪಾರಂಪರಿಕ ವೈದ್ಯ ಮಹಾಶಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪಾರಂಪರಿಕ ವೈದ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಶಿಕ್ಷಕಿ ಹಾಗೂ ಕವಯಿತ್ರಿ ಶೈಲಾಶ್ರೀನಿವಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑