Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೬೩: ದೇವಾಲಯದೊಳಗೆ ಪ್ರವೇಶಿಸುವ ಮೊದಲು ಪಾದರಕ್ಷೆಗಳನ್ನು ಹೊರಗಡೆ ಏಕೆ ಬಿಡಬೇಕು ?

Posted date: 17 Oct, 2019

Powered by:     Yellow and Red

ತಾಳೆಯೋಲೆ ೬೩: ದೇವಾಲಯದೊಳಗೆ ಪ್ರವೇಶಿಸುವ ಮೊದಲು ಪಾದರಕ್ಷೆಗಳನ್ನು ಹೊರಗಡೆ ಏಕೆ ಬಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ದೇವಾಲಯದೊಳಗೆ ಪ್ರವೇಶಿಸುವ ಮೊದಲು ಪಾದರಕ್ಷೆಗಳನ್ನು ಹೊರಗಡೆ ಏಕೆ ಬಿಡಬೇಕು ?*


ಪಾದರಕ್ಷೆಗಳು ಇಲ್ಲದೆ ಪವಿತ್ರವಾದ ಸ್ಥಳಗಳೊಳಗೆ ಪ್ರವೇಶಿಸಬೇಕೆಂದು‌ ಹಿಂದೂ ಸಂಪ್ರದಾಯ ತಿಳಿಸುತ್ತದೆ. ದೇವಾಲಯದ ಪ್ರಾಂಗಣವನ್ನು ನಾವು ಪವಿತ್ರವೆಂದು ಭಾವಿಸುತ್ತೇವೆ. *ದೇವಾಲಯಗಳಲ್ಲಿ ತೀವ್ರವಾದ ಅನುಕೂಲ ಶಕ್ತಿ ವ್ಯಾಪಿಸಿರುತ್ತದೆ.* *ದೇವಾಲಯದ ನೆಲದ ಭಾಗವೂ ಆಯಸ್ಕಾಂತೀಯ ಶಕ್ತಿಯಿಂದ ಕೂಡಿರುತ್ತದೆ*. ಈ ಅಯಸ್ಕಾಂತ ಶಕ್ತಿಯು ನಮ್ಮ ಶರೀರದೊಳಗೆ ಪ್ರವಹಿಸಿದರೆ ಒಳ್ಳೆಯದಾಗುತ್ತದೆ.

ಆದ್ದರಿಂದ ಪಾದರಕ್ಷೆಗಳು ಇಲ್ಲದೆ ಶುಭ್ರವಾದ ಪಾದಗಳೊಂದಿಗೆ ದೇವಾಲಯಕ್ಕೆ ಪ್ರವೇಶಿಸಬೇಕೆಂದು ಹೇಳಲಾಗಿದೆ.


ದೇವಾಲಯದ ಆವರಣದಲ್ಲಿ ಪೂಜಾ ಬಳಕೆಯ ಹೂ ಗಿಡಗಳು ಮತ್ತು ಔಷಧೀಯ ಗುಣವುಳ್ಳ ಗಿಡಗಳು ಇರುತ್ತವೆ. ಅವುಗಳು ಅನುಕೂಲ ಶಕ್ತಿಯನ್ನು ಸೂಸುತ್ತಿರುತ್ತವೆ. ಮತ್ತು ವಿಗ್ರಹಕ್ಕೆ ಅಭಿಷೇಕ ಮಾಡಿದ ನೀರು ನೆಲದ ಮೇಲೆ ಬಿದ್ದು ಪವಿತ್ರತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ರೀತಿಯ ನೆಲದ ಮೇಲೆ ಪಾದಗಳನ್ನು ಇಡುವುದರಿಂದ ಭಕ್ತರು ಅನುಕೂಲ ಶಕ್ತಿಯ ಪ್ರಭಾವವನ್ನು ಅನುಭವಿಸುತ್ತಾರೆ.


ಪಾದರಕ್ಷೆಗಳು ಇಲ್ಲದೆ ಇರುವುದರಿಂದ ಗರ್ವ ಅಹಂಭಾವಗಳು ತೊಲಗಿ ಹೋಗಿರುತ್ತವೆ. ವ್ಯಕ್ತಿಯೊಬ್ಬನ ಮಾನಸಿಕ ವ್ಯಕ್ತಿತ್ವವು ವಿಕಾಸವನ್ನು ಹೊಂದುತ್ತದೆ. ಆಧುನಿಕ ಚಿಕಿತ್ಸೆ ತಿಳಿಸುವ ಆಯಸ್ಕಾಂತೀಯ ಚಿಕಿತ್ಸೆ ಬರಿಗಾಲಲ್ಲಿ ನಡೆಯುವ ಮೂಲಕ ದೇವಾಲಯಗಳಲ್ಲಿ ಸಹಜವಾಗಿಯೇ ಸಿಗುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑