Tel: 7676775624 | Mail: info@yellowandred.in

Language: EN KAN

    Follow us :


ಸುದ್ದಿ ಎಫೆಕ್ಟ್ ನಕಲಿ ಬಾಬಾ ಆರೆಸ್ಟ್

Posted date: 01 Dec, 2019

Powered by:     Yellow and Red

ಸುದ್ದಿ ಎಫೆಕ್ಟ್ ನಕಲಿ ಬಾಬಾ ಆರೆಸ್ಟ್

ಶಿಕ್ಷಕಿ ಯಶೋಧಮ್ಮ ನವರ ಮನೆಯಲ್ಲಿ ಭಜನೆ ಮಾಡುತ್ತಿರುವ ಜಾದೂ ಸಾಯಿಬಾಬಾ

ಚನ್ನಪಟ್ಟಣ: ಸಾಯಿಬಾಬಾ ನ ಪುನರವತಾರ ಪ್ರೇಮಸಾಯಿ ಎಂದು ನಗರದೆಲ್ಲೆಡೆ ಓಡಾಡಿಕೊಂಡು ಅಂಧ ಭಕ್ತರಿಗೆ ಜಾದೂ ಮೂಲಕ ಭಸ್ಮ ನೀಡಿ ದೇವಾತೀಥ್ಯ ಸ್ವೀಕರಿಸಿತ್ತಿದ್ದ ಸಂತೋಷ್ ಅಲಿಯಾಸ್ ಆಲಿ (ಫಕೀರ) ನನ್ನು ಗ್ರಾಮಾಂತರ ಠಾಣೆಯ ಪೋಲೀಸರು ಬಂಧಿಸಿದ್ದು ವಿಚಾರಣೆ ನಡೆಸಿ ಭಕ್ತರ ಕೋರಿಕೆಯ ಮೇರೆಗೆ ಕಳುಹಿಸಿಕೊಟ್ಟಿದ್ದಾರೆ.


ನವೆಂಬರ್ ೨೬ ರ ಮಂಗಳವಾರ ಸುದ್ದಿ ತಿಳಿದ ತಕ್ಷಣ ಜಾದೂ ಬಾಬಾ ನ ಬೆನ್ನತ್ತಿ ಮಾಹಿತಿ ಕಲೆಹಾಕಿ *ನಗರಕ್ಕೆ ಜಾದೂ ಸಾಯಿಬಾಬಾ. ಜನಮರಳೋ ಜಾತ್ರೆ ಮರಳೋ !?* ಎಂದು ಸುದ್ದಿ ಪ್ರಕಟಿಸಲಾಗಿತ್ತು. ನಂತರ ಬಹುತೇಕ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮದಲ್ಲಿ ಸುದ್ದಿ ಭಿತ್ತರಗೊಳ್ಳುತ್ತಿದ್ದಂತೆ ಎಚ್ಚೆತ್ತ ಗ್ರಾಮಾಂತರ ಪೋಲೀಸರು ಎಸ್ಪಿ ಅನೂಪ್ ಶೆಟ್ಟಿ ಹಾಗೂ ಎಎಸ್ಪಿ ರಾಮರಾಜನ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ವಸಂತ್, ಪಿಎಸ್ಐ ಪ್ರಕಾಶ್ ಮತ್ತು ಸಿಬ್ಬಂದಿಗಳು ನಕಲಿ ಬಾಬಾ ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಯಾವುದೇ ದಾಖಲೆಗಳಿಲ್ಲದ ಕಾರಣ ಹಾಗೂ ಆತ ಯಾರಿಗೂ ಹಣದ ವಿಷಯವಾಗಿ ವಂಚಿಸಿಲ್ಲದ್ದರಿಂದ ಕೆಲವು ಭಕ್ತರ ಕೋರಿಕೆಯ ಮೇರೆಗೆ ಬಿಡುಗಡೆ ಮಾಡಿದ್ದಾರೆ.


ಈ ವಿಷಯವಾಗಿ ಮಾತನಾಡಿದ ಪ್ರೇಮಸಾಯಿ ದೇವಾಲಯದ ನಿರ್ಮಾತೃ ಡಾ ಶ್ರೀನಿವಾಸ ರವರು ಅವರ ಬಳಿ ಯಾವುದೇ ವೈಯುಕ್ತಿಕ ದಾಖಲೆಗಳಿರಲಿಲ್ಲ, ಅವರು ಮುಂದಿನ ಮೇ ೦೪ ನೇ ತಾರೀಖಿನಂದು ಮತ್ತೆ ನಗರಕ್ಕೆ ಬಂದು ತಾವು ಸತ್ಯಸಾಯಿಬಾಬಾ ನ ಪುನರವತಾರ ಎಂಬುದನ್ನು ಸಾಬೀತು ಪಡಿಸುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.


ನಕಲಿ ಬಾಬಾ ನನ್ನು ಮನೆಗೆ ಬರಮಾಡಿಕೊಂಡು ಪಾದಪೂಜೆ ಮಾಡಿ ಹಲವಾರು ಭಕ್ತರಿಗೆ ಪರಿಚಯಿಸಿಕೊಟ್ಟಿದ್ದ ಶಿಕ್ಷಕಿ ಯಶೋಧ ರವರು ನಾವು ದೇವರನ್ನು ಬಹಳವಾಗಿ ನಂಬುವವರಿದ್ದು ದೇವರ ಹೆಸರಿನಲ್ಲಿ ಬಂದ ಅವರನ್ನು ನಂಬಿದ್ದೇವೆ. ಪೋಲಿಸರ ವಿಚಾರಣೆಯಿಂದ ಅವರು ಭಿಕ್ಷುಕ ಎಂದಿದ್ದಾರೆ. ಈ ಕಾರಣದಿಂದ ಭಕ್ತಾದಿಗಳು ಅವರನ್ನು ಬಿಡಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡರು.


ಎಎಸ್ಪಿ ರಾಮರಾಜನ್ ರವರು ಅವರು ದೇವರ ಹೆಸರೇಳಿ ಭಕ್ತರನ್ನು ವಂಚಿಸಿದ್ದಾರೆ. ಬೇರೆ ಯಾವುದೇ ರೀತಿಯಲ್ಲಿ ಅವರು ಯಾರನ್ನೂ ವಂಚಿಸಿಲ್ಲ, ಭಕ್ತರ ಕೋರಿಕೆಯ ಮೇರೆಗೆ ಮುಚ್ಚಳಿಕೆ ಬರೆಸಿಕೊಂಡಿದ್ದು ಕಳುಹಿಸಿಕೊಟ್ಟಿದ್ದೇವೆ ಎಂದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑