Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೦೫:ಹಸುವಿನ ಸಗಣಿಯ ಮೇಲೆ ಕಾಲಿಟ್ಟರೆ ಸಿಹಿ ಭಕ್ಷ್ಯಗಳು ಲಭಿಸುತ್ತವೆಂದು ಹೇಳಲು ಕಾರಣವೇನು ?

Posted date: 06 Dec, 2019

Powered by:     Yellow and Red

ತಾಳೆಯೋಲೆ ೧೦೫:ಹಸುವಿನ ಸಗಣಿಯ ಮೇಲೆ ಕಾಲಿಟ್ಟರೆ ಸಿಹಿ ಭಕ್ಷ್ಯಗಳು ಲಭಿಸುತ್ತವೆಂದು ಹೇಳಲು ಕಾರಣವೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಹಸುವಿನ ಸಗಣಿಯ ಮೇಲೆ ಕಾಲಿಟ್ಟರೆ ಸಿಹಿ ಭಕ್ಷ್ಯಗಳು ಲಭಿಸುತ್ತವೆಂದು ಹೇಳಲು ಕಾರಣವೇನು ?


ಭಾರತೀಯ ರೈತರಲ್ಲಿ ಈ ನಂಬಿಕೆ ಪ್ರಬಲವಾಗಿದೆ. ಹಸುವಿನ ಸಗಣಿಯು ಸಹಜವಾದ ಗೊಬ್ಬರ. ಅದನ್ನು ಹೆಚ್ಚಿನದಾಗಿ ವ್ಯವಸಾಯಕ್ಕೆ ಬಳಸಲಾಗುತ್ತದೆ. ಆದರೆ ಸಗಣಿಯನ್ನು ಮುಟ್ಟದೆ ರೈತ ತನ್ನ ಕೆಲಸವನ್ನು ನಿರ್ವಹಿಸಲಾರ. *ಒಬ್ಬ ರೈತ ತನ್ನ ಹೊಲದಲ್ಲಿ ಚನ್ನಾಗಿ ಕೆಲಸ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಕೈ ಕೆಸರಾದರೇ ಬಾಯಿ ಮೊಸರು ಎಂಬ ನಾಣ್ಣುಡಿಯಂತೆ ಈ ಮಾತಿನಲ್ಲಿರುವ ಆಂತರ್ಯ.*


ಕಷ್ಟಪಟ್ಟು ಕೆಲಸ ಮಾಡುವ ರೈತನಿಗೆ ಒಳ್ಳೆಯ ಬೆಳೆ ಲಭಿಸುತ್ತದೆ. ನಾವೆಲ್ಲರೂ ನಮ್ಮ ದಿನದ ಅಗತ್ಯತೆಗೆ ಮತ್ತು ಆಹಾರಕ್ಕಾಗಿ ಕೆಲಸಗಳನ್ನು ಮಾಡುತ್ತೇವೆ. ನಾವು "ನ್ಯಾಯವಾಗಿ ಸಂಪಾದನೆ ಮಾಡಿ ಬಂದ ಹಣದಲ್ಲಿ ಕೊಂಡು ತಿಂದ ಆಹಾರವು ಸಿಹಿ ಭಕ್ಷ್ಯಗಳಿಗಿಂತ ರುಚಿಕರವಾಗಿರುವುದು. ಅನಾಯಾಸವಾಗಿ ಬಂದ ಹಣವು ಸದುಪಯೋಗಕ್ಕೆ ಬಳಕೆಯಾಗದೇ ಖಾಯಿಲೆಗಳಿಗೆ ಅಥವಾ ಅನಗತ್ಯವಾಗಿ ದುರುಪಯೋಗವಾಗುತ್ತದೆ.*


 *ಕಷ್ಟದ ಹಣ ಮಾತ್ರ ನಮ್ಮ ದೇಹಕ್ಕೆ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿಯನ್ನು ತರುತ್ತದೆ.* ಆದ್ದರಿಂದ ಕಷ್ಟಪಟ್ಟು ಕೆಲಸ ಮಾಡುವ ಆದರ್ಶವನ್ನು ಈ ಮೇಲಿನ ಸಂಗತಿ ತಿಳಿಸುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑