Tel: 7676775624 | Mail: info@yellowandred.in

Language: EN KAN

    Follow us :


ವಿಭಿನ್ನ ನ್ಯಾಯಗಳು ಮತ್ತು ಅವ್ಯವಹಾರ ಖಂಡಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ

Posted date: 13 Dec, 2019

Powered by:     Yellow and Red

ವಿಭಿನ್ನ ನ್ಯಾಯಗಳು ಮತ್ತು ಅವ್ಯವಹಾರ ಖಂಡಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ

ಚನ್ನಪಟ್ಟಣ: ತಾಲ್ಲೂಕಿನ ಮೈಲನಾಯಕನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಉಳ್ಳವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ ನೀಡುತ್ತಿರುವುದಲ್ಲದೆ ಅವ್ಯವಹಾರಗಳು ಯಥೇಚ್ಛವಾಗಿ ನಡೆಯುತ್ತಿರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಂಡು ಅನ್ಯಾಯವಾಗಿರುವ ನಮಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡಬೇಕೆಂದು ಮೈಲನಾಯಕನಹಳ್ಳಿ ಹೊಸಹಳ್ಳಿ ಗ್ರಾಮದ ಹೆಚ್ ಕೆ ರಮೇಶ್ ಮತ್ತು ಕುಟುಂಬದ ಸದಸ್ಯರು ನಗರದ ತಾಲ್ಲೂಕು ಪಂಚಾಯತಿ ಕಛೇರಿಯ ಮುಂಭಾಗದಲ್ಲಿ ಇಂದಿನಿಂದ ಆಹೋರಾತ್ರಿ‌ ಧರಣಿ ಸತ್ಯಾಗ್ರಹ ಕುಳಿತಿದ್ದಾರೆ.


ರಮೇಶ್ ರವರು ಅವರದೇ ಜಮೀನಾದ ಸರ್ವೇ ನಂಬರ್ ೬೩೫/೬ ರ ಕೃಷಿ ಜಮೀನಿನಲ್ಲಿ ಆಗಸ್ಟ್ ೧೦ ರಂದು ಬಾಲ್ ವೈಂಡಿಂಗ್ ಮೆಷಿನ್ (ದಾರದ ತಯಾರಿಸುವ ಯಂತ್ರ) ಸಣ್ಣ ಕಾರ್ಖಾನೆಯನ್ನು ನಡೆಸುತ್ತಿದ್ದು, ಆಗಸ್ಟ್ ೧೫ ರಂದು ಪರವಾನಗಿ ನೀಡುವಂತೆ ಪಂಚಾಯತಿಗೆ ಮನವಿ ಸಲ್ಲಿಸಿದ್ದು, ಅದೇ ತಿಂಗಳ ೧೯ ರಂದು ಸ್ವತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದಾರೆ. ಡಿಸೆಂಬರ್ ೦೪ ನೇ ತಾರೀಖಿನಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಿಂಬರಹ ನೀಡಿ ೧೫/೧೦ ರಂದೇ ದಾಖಲೆ ಸಲ್ಲಿಸಲು ಹೇಳಿದ್ದು ೧೯/೧೦ ರಲ್ಲಿ ದಾಖಲೆ ಸಲ್ಲಿಸಿದ್ದೀರಿ, ೧೪/೧೧ ರಲ್ಲಿ ನಡೆದ ವಿಶೇಷ ಸಭೆಯಲ್ಲಿ ಚರ್ಚಿಸಿ ಸದರಿ ಸ್ವತ್ತು ಭೂ ಪರಿವರ್ತನೆ ಆಗದಿರುವುದರಿಂದ ಪರವಾನಗಿ ನೀಡಲಾಗದು ಎಂದು ತಿಳಿಸಿದ್ದಾರೆ.


ಇದಕ್ಕೂ ಮೊದಲು ಅದೇ ಗ್ರಾಮದ ರಾಜಣ್ಣ ಎಂಬುವವರು ಎಂ ಕೆ ದೊಡ್ಡಿ ಪೋಲಿಸರಿಗೆ ಅಕ್ರಮವಾಗಿ ಥರ್ಮಾಕೋಲ್ ಕಾರ್ಖಾನೆ ನಡೆಸುತ್ತಿದ್ದು ಜನ ಜಾನುವಾರು ಹಾಗೂ ಕೃಷಿ ಗೆ ತೊಂದರೆಯಾಗುತ್ತದೆಂದು ದೂರು ನೀಡಿದ್ದಾರೆ. ಇದನ್ನು ಅಲ್ಲಗೆಳೆಯುವ ರಮೇಶ್ ರವರು ನಾವು ದಾರದ ಕಾರ್ಖಾನೆ ಮಾತ್ರ ನಡೆಸುತ್ತಿದ್ದೇವೆ, ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕರಿಗೆ ಪರವಾನಗಿ ನೀಡಿದ್ದು ನಮಗೆ ಮಾತ್ರ ನೀಡದೇ ಅನ್ಯಾಯವೆಸಗುತ್ತಿದ್ದಾರೆ ಎನ್ನುತ್ತಾರೆ.


*ನಾನು ಜಿಲ್ಲಾ ಪಂಚಾಯತಿ ಸಭೆಯಲ್ಲಿ ಭಾಗವಹಿಸಿದ್ದೇನೆ, ಬಂದ ನಂತರ ತನಿಖೆ ನಡೆಸಿ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ.*

*ಚಂದ್ರು ಇಓ*


*ಭೂಪರಿವರ್ತನೆ ಮಾಡಿಸಿಕೊಂಡು ಹಾಗೂ ಸಂಬಂಧಿಸಿದ ಇಂಡಸ್ಟ್ರಿಯಲ್ ಇಲಾಖೆಯ ವತಿಯಿಂದ ಅನುಮತಿ ಪಡೆದು ಬಂದರೆ ಪರಿಶೀಲಿಸಿ ಪರವಾನಗಿ ಕೊಡುತ್ತೇವೆ.*

*ಹರೂರು ರಾಜಣ್ಣ, ತಾ ಪಂ ಅಧ್ಯಕ್ಷರು*


*ನಾನು ಪಂಚಾಯತಿಗೆ ಬಂದ ನಂತರ ಯಾವುದೇ ಲೈಸನ್ಸ್ ನೀಡಿಲ್ಲ, ಇಲಾಖೆಯ ನಿಯಮ ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದೇ ರೀತಿ ನಡೆದುಕೊಂಡಿದ್ದೇನೆ.*

*ಶಿಬಾ ಪಿಡಿಓ*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑