Tel: 7676775624 | Mail: info@yellowandred.in

Language: EN KAN

    Follow us :


ಸರ್ಕಾರಿ ಶಾಲಾ ಆವರಣದಲ್ಲಿ ಅಕ್ರಮ ಮತಾಂತರಕ್ಕೆ ಪ್ರಚೋದನೆ ಮಿಷನರಿಗಳ ವಿರುದ್ಧ ಪ್ರಕರಣ ದಾಖಲು

Posted date: 15 Dec, 2019

Powered by:     Yellow and Red

ಸರ್ಕಾರಿ ಶಾಲಾ ಆವರಣದಲ್ಲಿ ಅಕ್ರಮ ಮತಾಂತರಕ್ಕೆ ಪ್ರಚೋದನೆ ಮಿಷನರಿಗಳ ವಿರುದ್ಧ ಪ್ರಕರಣ ದಾಖಲು

ರಾಮನಗರ:ಡಿ/೧೪/೨೦೧೯/ಶನಿವಾರ. ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಅಣ್ಣಹಳ್ಳಿ ಗ್ರಾಮದಲ್ಲಿರುವ ಕೆಂಗಲ್ ಹನುಮಂತಯ್ಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಯಾರ ಪೂರ್ವಾನುಮತಿ ಇಲ್ಲದೆ ಪೆಂಡಾಲ್ ಹಾಕಿ ಸಾಮೂಹಿಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಕ್ರೈಸ್ತ ಧರ್ಮದ ಮಿಷನರಿಗಳ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.


ಇದೇ ೧೨ ರ ರಾತ್ರಿ ಸುಮಾರು ೦೮:೦೦ ಯಲ್ಲಿ ೨೦೦ ರಿಂದ ೨೫೦ ಮಂದಿ ಶಾಲಾ ಆವರಣದಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಕ್ರೈಸ್ತ ಮಿಷನರಿಯೊಂದಕ್ಕೆ ಸೇರಿದರು ಎನ್ನಲಾದ ಕೆಲವು ಮಂದಿ ಧರ್ಮ ಪ್ರಚಾರ ಕರಪತ್ರಗಳನ್ನು ಹಂಚಿ ಜನರನ್ನು ಓಲೈಕೆ ಮಾಡುವ ಯತ್ನದಲ್ಲಿದ್ದರು ಎಂದು ಅಣ್ಣಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.


ವಿಷಯ ತಿಳಿದು ಧಾವಿಸಿದ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳು ಕಾರ್ಯಕ್ರಮ ಆಯೋಜಕರ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲ ಸಮಯ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ನಂತರ ಕಾರ್ಯಕ್ರಮವನ್ನು ಮೊಟಕುಗೊಂಡಿದೆ.


ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಂಟು ಮಂದಿ ವಿರುದ್ದ ಪೋಲಿಸರಿಗೆ ಸ್ಥಳೀಯರು ಮತ್ತು ಸಂಘಟಕರು ದೂರು ನೀಡಿದ್ದಾರೆ. 

ಧರ್ಮವೊಂದರ ಪ್ರಚಾರ ಕಾರ್ಯಕ್ರಮ ಆಯೋಜನೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಇಸಿಓ ಗೋವಿಂದ ಸ್ವಾಮಿ ಹಾಗೂ ಸಿ ಆರ್ ಪಿ ಚಂದ್ರು ಅವರನ್ನು ಒಳಗೊಂಡ ತಂಡವು ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ.


ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯಸ್ಥರು, ಎಸ್ ಡಿ ಎಂ ಸಿ ಸಮಿತಿಯಿಂದಾಗಲಿ ಅನುಮತಿ ಪಡೆದಿರಲಿಲ್ಲ. ಸಂಜೆ ಸಮಯದಲ್ಲಿ ಅತಿಕ್ರಮ ಪ್ರವೇಶ ಮಾಡಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ಇಲಾಖೆಯ ಉಪನಿರ್ದೇಶಕರಿಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.


ಹಿಂದೂ ಜಾಗರಣಾ ವೇದಿಕೆಯ ಹುಚ್ಚಮ್ಮನದೊಡ್ಡಿ ಯೋಗೇಶ್, ಕಡಚಿಕೊಪ್ಪ ಬಾಲಾಜಿ ಸಿಂಗ್, ಸಂಟೇನಹಳ್ಳಿ ಪ್ರಕಾಶ್ ಹಾಗೂ ಅಣ್ಣಹಳ್ಳಿ ಗ್ರಾಮದ ಮುಖಂಡರಾದ ಜಗದೀಶ್, ಬೊಮ್ಮೇಗೌಡ, ಪ್ರಕಾಶ್ ಎ.ಬಿ, ಎ.ಟಿ. ನಾಗೇಶ್, ಎ.ಪಿ ಮಹೇಶ್, ರಘು, ಲಕ್ಷ್ಮಣ್, ಮಧು ಹಾಗೂ ಸದರಿ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ ನಾಗಣ್ಣ ನವರು ಉಪಸ್ಥಿರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑