Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೧೬: ದಕ್ಷಿಣ ದಿಕ್ಕಿನಲ್ಲಿರುವ ಹುಣಸೆ ಮರವನ್ನು ರಕ್ಷಿಸಬೇಕೆ ?

Posted date: 25 Dec, 2019

Powered by:     Yellow and Red

ತಾಳೆಯೋಲೆ ೧೧೬: ದಕ್ಷಿಣ ದಿಕ್ಕಿನಲ್ಲಿರುವ ಹುಣಸೆ ಮರವನ್ನು ರಕ್ಷಿಸಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ದಕ್ಷಿಣ ದಿಕ್ಕಿನಲ್ಲಿರುವ ಹುಣಸೆ ಮರವನ್ನು ರಕ್ಷಿಸಬೇಕೆ ?


ಹುಣಸೆ ಮರವು ಮನೆಯ ಉತ್ತರ ಅಥವಾ ದಕ್ಷಿಣ ಭಾಗದಲ್ಲಿದ್ದರೆ ಅದನ್ನು ಕಡಯದೇ ರಕ್ಷಿಸಿಕೊಳ್ಳಬೇಕೆಂದು ಹೇಳಲಾಗಿದೆ. ಹುಣಸೆ ಹಣ್ಣು ನಮ್ಮ ದಿನ ನಿತ್ಯದ ಆಹಾರದಲ್ಲಿ ಬಹಳ ಉಪಯೋಗಕರವಾಗಿದ್ದು ನಮ್ಮ ಆಹಾರದ ರುಚಿಗೆ ಸಹಾಯಕಾವಾಗಿದೆ.


ಪ್ರಾಚೀನ ಕಾಲದಲ್ಲಿ ಮನೆಯ ದೇವರಿಗೆ ದಕ್ಷಿಣ ದಕ್ಷಿಣ ದಿಕ್ಕಿನಲ್ಲಿ ಒಂದು ಗೂಡನ್ನು ನಿರ್ಮಿಸುತ್ತಿದ್ದರು. ಈ ದೇವರ ಸ್ಥಾನವನ್ನು ಮನೆಯಲ್ಲಿನ ಒಂದು ಮುಖ್ಯವಾದ ಭಾಗವನ್ನಾಗಿ ತಿಳಿಯುತ್ತಿದ್ದರು. ಈ ದೇವರ ಕ್ಷೇತ್ರಕ್ಕೆ ಒಂದು ಹುಣಸೆ ಮರ ನೆರಳನ್ನು ನೀಡುತ್ತಿರುವುದು ಆ ಕಾಲದಲ್ಲಿ ಸಹಜವಾದ ದೃಶ್ಯ. ಆ ಕಾರಣದಿಂದಾಗಿ ಈ ಭಾಗದ ಮರವನ್ನು ಅಷ್ಟು ಸುಲಭವಾಗಿ ತೆಗೆದುಹಾಕುತ್ತಿರಲಿಲ್ಲ.


ಆದ್ದರಿಂದ ದಕ್ಷಿಣ ದಿಕ್ಕಿನಲ್ಲಿರುವ ಹುಣಸೆ ಮರವನ್ನು ಬಹಳ ಪವಿತ್ರವಾಗಿ ಗತ ಕಾಲದಿಂದಲೂ ಭಾವಿಸಿಕೊಂಡು ಬಂದಿದ್ದಾರೆ. ಮನೆಗೆ ದಕ್ಷಿಣ ದಿಕ್ಕಿನಿಂದ ಬರುವ ಸೂರ್ಯಕಾಂತಿಯನ್ನು ತಡೆದು ಅಲ್ಲಿಯೇ ಬೆಳಕು ಹರಡುವ ಹಾಗೆ ಮಾಡುತ್ತಾ ತಣ್ಣನೆಯ ಗಾಳಿಯನ್ನು ನಾಲ್ಕು ದಿಕ್ಕುಗಳಿಗೂ ಹುಣಸೆ ಮರವು ನೀಡುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑