Tel: 7676775624 | Mail: info@yellowandred.in

Language: EN KAN

    Follow us :


ನಟಿಮಣಿ ಪರಾರಿ, ವಿಷ ಸೇವಿಸಿದ ಕುಟುಂಬ

Posted date: 09 Jan, 2020

Powered by:     Yellow and Red

ನಟಿಮಣಿ ಪರಾರಿ, ವಿಷ ಸೇವಿಸಿದ ಕುಟುಂಬ

ಚನ್ನಪಟ್ಟಣ: ಸಿನಿಮಾ ನಟಿಯೊಬ್ಬಳು ನಿರ್ದೇಶಕನೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಮನನೊಂದ ನಟಿಯ ಅಜ್ಜಿ ಹಾಗೂ ತಾಯಿ ವಿಷ ಸೇವಿಸಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.


ವಿಷ ಸೇವನೆಯಿಂದ ಅಜ್ಜಿ ಚೆನ್ನಮ್ಮ ಮೃತಪಟ್ಟಿದ್ದರೆ, ತಾಯಿ ಸವಿತಾ ಅವರ ಸ್ಥಿತಿ ಗಂಭೀರವಾಗಿದ್ದು ಮಂಡ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ನಟಿ ವಿಜಯಲಕ್ಷ್ಮಿ, ನಿರ್ದೇಶಕ ಆಂಜನಪ್ಪ ಎಂಬುವವರ ಜೊತೆ ಪರಾರಿಯಾದ ಹಿನ್ನೆಲೆಯಲ್ಲಿ ಮುಂಗಡ​ ನೀಡಿದ ನಿರ್ಮಾಪಕರ ಕಿರುಕಳ ಸಹಿಸಲು ಸಾಧ್ಯವಾಗದೆ ಚೆನ್ನಮ್ಮ ಹಾಗೂ ಸವಿತಾ ವಿಷ ಸೇವನೆ ಮಾಡಿದ್ದರು.


ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ವಿಜಯಲಕ್ಷ್ಮಿ ಸಾಕು ತಂದೆ ಸ್ವಾಮಿ ಹಾಗೂ ತಾಯಿ ಸವಿತಾ ಅವರೊಟ್ಟಿಗೆ ಚನ್ನಪಟ್ಟಣದಲ್ಲಿ ವಾಸವಾಗಿದ್ದರು. ಕನ್ನಡದ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು.

ತುಂಗಭದ್ರಾ ಎಂಬ ಸಿನಿಮಾದಲ್ಲಿ ವಿಜಯಲಕ್ಷ್ಮಿ ನಟನೆ ಮಾಡುತ್ತಿದ್ದರು.


೧೦ ದಿನಗಳ ಕಾಲ ರಾಯಚೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆಯಿತಿದ್ದು, ಆ ವೇಳೆ ನಟಿ ವಿಜಯಲಕ್ಷ್ಮಿ ನಿದೇರ್ಶಕ ಆಂಜನಪ್ಪ ಜೊತೆ ಇರುತ್ತಿದ್ದರು ಎಂದು ತಿಳಿದು ಬಂದಿದೆ. ಡಿ.೧೫ರಂದು ನಟಿ ವಿಜಯ ಲಕ್ಷ್ಮಿ ನಿರ್ದೇಶಕ ಆಂಜಿನಪ್ಪ ಅವರೊಂದಿಗೆ ಮನೆ ಬಿಟ್ಟು ತೆರಳಿದ್ದರು. ೧೫ ದಿನಗಳ ನಂತರ ಆಕೆ ಮನೆಗೆ ಆಗಮಿಸಿ ಅಜ್ಜಿ ಹಾಗೂ ತಾಯಿ ಜೊತೆ ಮಾತನಾಡಿ ಇನ್ನು ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ, ಆಂಜಿನಪ್ಪನ ಜೊತೆ ಓಡಾಡುವುದಿಲ್ಲ ಎಂದು ಕ್ಷಮೆ ಕೋರಿದ್ದರು. ತಂದೆ ಸ್ವಾಮಿಯವರು ಸಹ ಮಗಳಿಗೆ ಬುದ್ಧಿ ಹೇಳಿದ್ದರು.


*ಮತ್ತೆ ನಾಪತ್ತೆ:*

ಜ.೦೩ ರಂದು ಮತ್ತೆ ಆಂಜಿನಪ್ಪ ಜತೆ ಆಕೆ ಪರಾರಿಯಾಗಿದ್ದಾರೆ. ವಾರ ಕಳೆದರೂ ಇಬ್ಬರು ಎಲ್ಲಿದ್ದಾರೆ ಎಂಬ ಮಾಹಿತಿ ಕುಟುಂಬದವರಿಗೆ ದೊರೆಯದ ಹಿನ್ನೆಲೆಯಲ್ಲಿ ನಿರ್ದೇಶಕ ಆಂಜಿನಪ್ಪ ಸ್ವಗ್ರಾಮವಾದ ಕೊಪ್ಪಳ ಜಿಲ್ಲೆಯ ಹಳ್ಳಿ ಹೊಸೂರಿಗೆ ತೆರಳಿ ಕುಟುಂಬದವರು ಮಗಳ ಬಗ್ಗೆ ವಿಚಾರಿಸಿದ್ದರು. ಮಗಳು ಅಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಜರ್ಜರಿತರಾಗಿದ್ದರು.


*ನಿರ್ಮಾಪಕರ ಕಿರುಕುಳ:*

ನಟಿ ವಿಜಯಲಕ್ಷ್ಮಿ ಅವರಿಗೆ ಪ್ರೇಮಮಹಲ್, ಜವಾರಿಲವ್, ಪ್ರೊಡಕ್ಷನ್​ ನಂ ೦೧ ಚಿತ್ರಗಳ ನಿರ್ಮಾಪಕರು ಮುಂಗಡ ನೀಡಿದ್ದರು. ನಿರ್ಮಾಪಕರು ಮನೆ ಬಾಗಿಲಿಗೆ ಬಂದು ತಂದೆ ಸ್ವಾಮಿ ಹಾಗೂ ತಾಯಿಯನ್ನು ಪೀಡಿಸುತ್ತಿದ್ದರು. ಮಗಳನ್ನು ಪತ್ತೆ ಮಾಡಿ ಸಿನಿಮಾ ಚಿತ್ರೀಕರಣಕ್ಕೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಮನನೊಂದ ಚೆನ್ನಮ್ಮ ಹಾಗೂ ಸವಿತಾ ಮನೆಯಲ್ಲಿ ವಿಷ ಸೇವಿಸಿದ್ದರು. ವಿಷ ಸೇವನೆಗೂ ಮೊದಲು ನಮ್ಮ ಸಾವಿಗೆ ನಿರ್ದೇಶಕ ಆಂಜಿನಪ್ಪ ಕಾರಣ ಎಂದು ನಟಿಯ ತಾಯಿ ಸವಿತಾ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


ನಟಿ ವಿಜಯಲಕ್ಷ್ಮಿ ಶಿವರಾಜ್‌ಕುಮಾರ್ ನಟನೆಯ ಆಯುಷ್ಮಾನ್ಭವ, ಮಯೂರ್ ಪಟೇಲ್ ಅಭಿನಯದ ರಾಜೀವ ಸೇರಿದಂತೆ ಅಂದಾಜು ೧೬ ಸಿನಿಮಾಗಳಲ್ಲಿ ನಟಿಸಿದ್ದರು.


ಚನ್ನಪಟ್ಟಣ ಪೂರ್ವ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪೊಲೀಸರು ಇಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑