Tel: 7676775624 | Mail: info@yellowandred.in

Language: EN KAN

    Follow us :


ನಮ್ಮನ್ನು ಸ್ವತಂತ್ರವಾಗಿ ಜೀವಿಸಲು ತಮ್ಮನ್ನೇ ಸಮರ್ಪಿಸಿಕೊಂಡವರನ್ನು ನೆನೆಯೋಣಾ ನ್ಯಾ ನಟರಾಜ್

Posted date: 27 Jan, 2020

Powered by:     Yellow and Red

ನಮ್ಮನ್ನು ಸ್ವತಂತ್ರವಾಗಿ ಜೀವಿಸಲು ತಮ್ಮನ್ನೇ ಸಮರ್ಪಿಸಿಕೊಂಡವರನ್ನು ನೆನೆಯೋಣಾ ನ್ಯಾ ನಟರಾಜ್

ಚನ್ನಪಟ್ಟಣ: ನಾವುಗಳು ಇಂದು ರಾಜಾರೋಷವಾಗಿ, ಸ್ವತಂತ್ರವಾಗಿ, ನಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರೆ ಅದಕ್ಕೆ ನಮ್ಮ ಸಂವಿಧಾನವೇ ಕಾರಣ. ಅಂತಹ ಸಂವಿಧಾನವನ್ನು ಬರೆದ ಡಾ ಬಿ ಆರ್ ಅಂಬೇಡ್ಕರ್ ಮತ್ತು ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹನೀಯರನ್ನು ನೆನೆಯುವ ದಿನವೇ ಗಣರಾಜ್ಯೋತ್ಸವ ದಿನ ಎಂದು ಸಿವಿಲ್ ನ್ಯಾಯಾಧೀಶರಾದ ನಟರಾಜ್ ಹೇಳಿದರು.

ಅವರು ಇಂದು ನಡೆದ ೭೧ ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.


ಗಣರಾಜ್ಯೋತ್ಸವವು ಮೊದಲನೆ ರಾಷ್ಟ್ರೀಯ ಹಬ್ಬವಾಗಿದ್ದು, ಸಂವಿಧಾನವೇ ನಮ್ಮ ಹಕ್ಕಾಗಿದೆ. ಹಕ್ಕುಗಳನ್ನು ಪ್ರತಿಪಾದಿಸಲು ನಮ್ಮ ಸಂವಿಧಾನ ಮುಖ್ಯ, ಸಂವಿಧಾನ ರಚಿಸಲು ಶ್ರಮವಹಿಸಿದ ಹಾಗೂ ಸ್ವಾತಂತ್ರ್ಯ ವೀರರಿಗೆ ನಮಿಸೋಣ, ಎಂದರು.


ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ ವಿ ಗಿರೀಶ್ ಮಾತನಾಡಿ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಬದುಕಿದ್ದೇವೆ. ಸಂವಿಧಾನದ ಆಶಯಗಳನ್ನು ಗೌರವಿಸಿ ಉಳಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ದೇಶಕ್ಕೆ ಎದುರಾಗುವ ಮಾರಕಗಳನ್ನು ತೊಲಗಿಸಿ ದೇಶ ರಕ್ಷಣೆಯಲ್ಲಿ ಎಲ್ಲರೂ‌ ತೊಡಗಿಸಿಕೊಳ್ಳಲು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಕಲ್ಪನಾ, ವಕೀಲರಾದ ಶಿವಶಂಕರ್, ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑