Tel: 7676775624 | Mail: info@yellowandred.in

Language: EN KAN

    Follow us :


ಗಿಡ ನೆಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ ಒನ್ ಭೂಮಿ ಫೌಂಡೇಶನ್ ಕಾರ್ಯಕರ್ತರು.

Posted date: 27 Jan, 2020

Powered by:     Yellow and Red

ಗಿಡ ನೆಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ ಒನ್ ಭೂಮಿ ಫೌಂಡೇಶನ್ ಕಾರ್ಯಕರ್ತರು.

ನ್ನಪಟ್ಟಣ: ನಗರದ ಯುವಕರು ಒಡಗೂಡಿ ಪರಿಸರ ಕಾಳಜಿಯಿಂದ ಕಟ್ಟಿಕೊಂಡಿರುವ ಸಂಸ್ಥೆ *ಒನ್ ಭೂಮಿ ಫೌಂಡೇಶನ್*. ಈ ಸಂಸ್ಥೆಯ ಕಾರ್ಯಕರ್ತರು ಇಂದು ನಗರದ ಕುವೆಂಪು ನಗರ ಮತ್ತು ಮಂಜುನಾಥ ನಗರದ ೬ ನೇ ತಿರುವಿನ ಚಾನೆಲ್ ಬದಿಯಲ್ಲಿ ಗಿಡ ನೆಡುವ ಮೂಲಕ ೭೧ ನೇ ಗಣರಾಜ್ಯೋತ್ಸವವನ್ನು ಆಚರಿಸಿದರು.


*ನಾಗರೀಕರು* ಎನಿಸಿಕೊಂಡಿರುವ ಅನೇಕರು ಎಲ್ಲೆಂದರಲ್ಲಿ ಬಿಸಾಕುವ ಕಸದಿಂದ ಗಬ್ಬೆಂದು ನಾರುತ್ತಿದ್ದ ಕಸವನ್ನು ಎಕ್ಕಿ ಸ್ವಚ್ಛ ಗೊಳಿಸಿದ ನಂತರ ರಸ್ತೆ ಬದಿಯಲ್ಲಿ ಗಿಡ ನೆಟ್ಟು ಕಸ ಹಾಕುವ ಸಾರ್ವಜನಿಕರಿಗೆ ಅರಿವು ಮೂಡಿಸಿದರು.


ರಾಷ್ಟ್ರೀಯ ಹಬ್ಬಗಳನ್ನು ಕೇವಲ ಪೂಜೆ ಮತ್ತು ಭಾಷಣಕ್ಕೆ ಮೀಸಲಿಡುವ ಬದಲು ಸ್ವಚ್ಚತೆ ಮತ್ತು ಪರಿಸರ ಕಾಳಜಿಗಾಗಿ ಮೀಸಲಿಟ್ಟ ಇವರ ಕಾರ್ಯವು ಶ್ಲಾಘನೀಯವಾದದ್ದು.


ಕಾರ್ಯಕ್ರಮದಲ್ಲಿ ಒನ್ ಭೂಮಿ ಫೌಂಡೇಶನ್ ನ ಶ್ರಮ ಜೀವಿಗಳಾದ ಬೃಂದಾ, ನವನೀತ್, ಧನುಷ್, ಪ್ರೇರಣಾ, ಮೋಹಿತ್, ಕಿರಣ್ ಹುಬ್ಬಳ್ಳಿ, ಸಚಿನ್ ಮತ್ತು ಅಖಿಲ್ ಬೆಂಗಳೂರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑